Christmas Gifts For Children: ಮಕ್ಕಳಿಗೆ ಕ್ರಿಸ್‌ಮಸ್‌ ಗಿಫ್ಟ್‌ ಕೊಡಬೇಕಾ; ಇಲ್ಲಿದೆ ಬೆಸ್ಟ್‌ ಐಡಿಯಾಗಳು

ಕ್ರಿಸ್‌ಮಸ್‌ (Christmas 2022), ಡಿಸೆಂಬರ್‌ ತಿಂಗಳಲ್ಲಿ ಬರುವ ಫೆಸ್ಟಿವಲ್‌. ಇದು ಚಳಿಗಾಲ (Winter) ದಲ್ಲಿ ಆಚರಿಸುವ ಹಬ್ಬವಾಗಿದೆ. ಕ್ರಿಸ್‌ಮಸ್‌ ಎಂದರೆ ಮೊದಲಿಗೆ ನೆನಪಾಗುವುದು ಬಣ್ಣದ ಲೈಟ್‌ಗಳು, ಕ್ರಿಸ್‌ಮಸ್‌ ಟ್ರಿ, ಏಸುಕ್ರಿಸ್ತ್‌, ಮದರ್‌ ಮೇರಿ, ಸಾಂತಾಕ್ಲಾಸ್‌, ಗಿಫ್ಟ್‌ಗಳು. ಮಕ್ಕಳಿಗಂತೂ ಕ್ರಿಸ್‌ಮಸ್‌ ಹಬ್ಬವೆಂದರೆ ಬಹಳ ಅಚ್ಚುಮೆಚ್ಚು. ಏಕೆಂದರೆ ಆ ಸಮಯದಲ್ಲಿ ಬಗೆಬಗೆಯ ಕೇಕ್‌, ಚಾಕಲೇಟ್‌ಗಳು ತಿನ್ನಲು ಸಿಗುತ್ತವೆ ಮತ್ತು ಗಿಫ್ಟ್‌ಗಳು ಸಿಗುತ್ತವೆಂದು. ನೀವು ನಿಮ್ಮ ಮಕ್ಕಳಿಗೆ ಈ ವರ್ಷದ ಕ್ರಿಸ್‌ಮಸ್‌ನಲ್ಲಿ ಏನಾದರೂ ವಿಶೇಷ ಗಿಫ್ಟ್‌ (Christmas Gifts For Children) ಕೊಡಬೇಕು ಎಂದು ಬಯಸುತ್ತಿದ್ದರೆ, ಅದಕ್ಕೆ ಇಲ್ಲಿದೆ ಕೆಲವು ಉತ್ತಮ ಐಡಿಯಾಗಳು.

ನಿಮಗೆ ಮಕ್ಕಳಿಗೆ ನೆನಪಿನಲ್ಲಿರುವಂತಹ ಯಾವ ಗಿಫ್ಟ್‌ ಕೊಡುವುದು ಎಂಬ ಗೊಂದಲವಿದೆಯಾ? ಹಾಗಾದರೆ, ಇಲ್ಲಿ ಹೇಳಿರುವ ಕೆಲವು ಗಿಫ್ಟ್‌ ಐಡಿಯಾಗಳನ್ನು ಒಮ್ಮೆ ನೋಡಿ. ಇದು ನಿಮ್ಮ ಮಕ್ಕಳಿಗಾಗಿ ಗಿಫ್ಟ್‌ಗಳನ್ನು ಹುಡುಕಲು ಸಹಾಯ ಮಾಡುತ್ತದೆ.

ಕ್ಲೇ ಸೆಟ್‌ :
ಮಕ್ಕಳಿಗೆ ಕ್ಲೇನಲ್ಲಿ ಆಟವಾಡುವುದೆಂದರೆ ಬಹಳ ಇಷ್ಟ. ಇದು ಅವರ ಕ್ರಿಯೇಟಿವಿಟಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಕ್ರಿಸ್‌ಮಸ್‌ನ ಸಂದರ್ಭದಲ್ಲಿ ಮಕ್ಕಳಿಗೆ ಕ್ಲೇ ಸೆಟ್‌ ನೀಡಬಹುದು.

ಟೆಂಟ್‌ ಹೌಸ್‌ :
ಕ್ರಿಸ್‌ಮಸ್‌ನ ಸಂದರ್ಭದಲ್ಲಿ ಮಕ್ಕಳಗಾಗಿ ಟೆಂಟ್‌ ಹೌಸ್‌ ಅನ್ನು ಉಡುಗೊರೆಯಾಗಿ ಕೊಡಬಹುದು. ಮಕ್ಕಳು ಇದರಲ್ಲಿ ಕುಳಿತ ತಮ್ಮ ಗೆಳೆಯರ ಜೊತೆಗೆ ಆಟವಾಡಬಹುದು. ಇದನ್ನು ನಿಮ್ಮ ಮನೆಯ ಟೆರಿಸ್‌ ಮೇಲೆ ಅಥವಾ ಬಾಲ್ಕನಿಯಲ್ಲಿ ಇಡಬಹುದು.

ಎನಿಮಲ್‌ ಟಾಯ್‌ಗಳು:
ನಿಮ್ಮ ಮಕ್ಕಳಿಗೆ ಪ್ರಾಣಿಗಳ ಆಟಿಕೆ (ಎನಿಮಲ್‌ ಟಾಯ್‌) ಗಳನ್ನು ಗಿಫ್ಟ್‌ ನ ರೂಪದಲ್ಲಿ ಕೊಡಬಹುದು. ಅದು ಅವರ ವಿದ್ಯಾಭ್ಯಾಸಕ್ಕೂ ಅನುಕೂಲವಾಗುತ್ತದೆ. ಮತ್ತು ಮಕ್ಕಳು ಪ್ರಾಣಿಗಳ ಬಗ್ಗೆ ತಿಳಿದುಕೊಳ್ಳಲು ಸಹಾಯವಾಗುತ್ತದೆ.

ವಾಟರ್‌ ಬಾಟಲ್‌ ಮತ್ತು ಲಂಚ್‌ ಬಾಕ್ಸ್‌ :
ಮಕ್ಕಳು ಸ್ಕೂಲ್‌, ಕೋಚಿಂಗ್‌ ಕ್ಲಾಸ್‌ ಅಥವಾ ಪ್ಲೇಗ್ರೌಂಡ್‌ಗಳಿಗೆ ಹೋಗುವ ಸಮಯದಲ್ಲಿ ವಾಟರ್‌ ಬಾಟಲ್‌ಗಳನ್ನು ತೆಗೆದುಕೊಂಡು ಹೋಗುತ್ತಾರೆ. ಅದಕ್ಕಾಗಿ ಈ ಕ್ರಿಸ್‌ಮಸ್‌ನಲ್ಲಿ ಅವರಿಷ್ಟದ ಬಣ್ಣದ ವಾಟರ್‌ ಬಾಟಲ್‌ಗಳನ್ನು ನೀಡಬಹುದು. ಅದರ ಜೊತೆಗೆ ವಿವಿಧ ವಿನ್ಯಾಸದ ಲಂಚ್‌ ಬಾಕ್ಸ್‌ಗಳನ್ನು ಗಿಫ್ಟ್‌ ಆಗಿ ಕೊಡಬಹುದು. ಇದು ಮಕ್ಕಳನ್ನು ಆಕರ್ಷಿಸುತ್ತದೆ.

ಹೊರಾಂಗಣ ಅಥವಾ ಒಳಾಂಗಣ ಆಟಕೆಗಳು :
ಮಕ್ಕಳಿಗೆ ಆಟವಾಡುವುದೆಂದರೆ ಬಹಳ ಇಷ್ಟ. ಅದಕ್ಕಾಗಿ ಅವರಿಷ್ಟದ ಒಳಾಂಗಣ ಅಥವಾ ಹೊರಾಂಗಣ ಆಟದ ಆಟಿಕೆಗಳನ್ನು ಕೊಡಬಹುದು. ಉದಾಹರಣೆಗೆ ಕ್ರಿಕೆಟ್‌ ಕಿಟ್‌, ಫುಟ್‌ಬಾಲ್‌, ಸ್ಕೇಟಿಂಗ್‌, ಬ್ಯಾಡ್ಮಿಂಟನ್‌ ಅಥವಾ ಹಾಕಿ ಕಿಟ್‌ಗಳನ್ನು ಕೊಡಬಹುದು. ಒಳಾಂಗಣ ಆಟದಲ್ಲಿ ಆಸಕ್ತಿಯಿದ್ದರೆ ಅವರಿಗೆ ಕೇರಮ್‌ ಬೋರ್ಡ್‌, ಚೆಸ್‌ ಅಥವಾ ಬೋರ್ಡ್‌ ಗೇಮ್‌ಗಳನ್ನು ಕೊಡಬಹುದು. ಇದರಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ವಿಕಸನ ಎರಡೂ ಆಗುವುದು.

ಇದನ್ನೂ ಓದಿ : Twitter Accounts : ಖಾತೆಗಳ ಪರಿಶೀಲನೆಗಾಗಿ 3 ಬಣ್ಣಗಳನ್ನು ಪ್ರಾರಂಭಿಸಿದ ಎಲಾನ್‌ ಮಸ್ಕ್‌: ಇನ್ನು ಈ ಬಣ್ಣಗಳಲ್ಲಿ ಖಾತೆಗಳನ್ನು ಪರಿಶೀಲಿಸಲಿದೆ ಟ್ವಿಟರ್‌..

ಇದನ್ನೂ ಓದಿ : The Kashmiri Files selected: ಸ್ವಿಟ್ಜರ್ಲೆಂಡ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ: ದಿ ಕಾಶ್ಮೀರಿ ಫೈಲ್ಸ್‌ ಆಯ್ಕೆ

(Christmas Gifts For Children these ideas can help you to choose the right gift for your kid)

Comments are closed.