Siddaramaiah Secret meeting : ಹೈಕಮಾಂಡ್ ಗೂ ಕ್ಯಾರೇ ಎನ್ನದ ಸಿದ್ಧರಾಮಯ್ಯ: ವರಿಷ್ಠರ ಭೇಟಿ ಬಳಿಕ ಅಪ್ತರೊಂದಿಗೆ ರಹಸ್ಯ ಮೀಟಿಂಗ್

ಬೆಂಗಳೂರು :Siddaramaiah Secret meeting : ಸದ್ಯ ರಾಜ್ಯ ಕಾಂಗ್ರೆಸ್ ಯಾತ್ರೆಯ ಮೇಲೆ ಯಾತ್ರೆ ಮಾಡೋ ಮೂಲಕ ಮತದಾರರನ್ನು ಸೆಳೆಯೋ ಸರ್ಕಸ್ ನಲ್ಲಿದೆ. ಅದರಲ್ಲೂ ಕೇಂದ್ರದಲ್ಲಿ ಕಾಂಗ್ರೆಸ್ ಚುಕ್ಕಾಣಿ ಖರ್ಗೆ ಕೈಸೇರಿರೋದು ರಾಜ್ಯ ಕಾಂಗ್ರೆಸ್ ಗೆ ಮತ್ತಷ್ಟು ಬಲಬಂದಿದೆ. ಈ ಮಧ್ಯೆ ರಾಜ್ಯ ರಾಜ್ಯ ಕಾಂಗ್ರೆಸ್ ನಲ್ಲಿ ಒಮ್ಮತ ಮೂಡಿಸಲು ಖರ್ಗೆ ಹಾಗೂ ಕೈಪಡೆ ಸರ್ಕಸ್ ನಡೆಸಿದೆ. ಆದರೆ ಸಿದ್ಧರಾಮಯ್ಯ ಅವರು ಮಾತ್ರ ಕಾಂಗ್ರೆಸ್ ನ ಬಣ ರಾಜಕೀಯವನ್ನು ಜೀವಂತವಾಗಿ ಇಡೋ ಪ್ರಯತ್ನ ಮಾಡುತ್ತಿದ್ದು, ಸಿದ್ಧು ನಡೆಸಿದ ರಹಸ್ಯ ಸಭೆ ಇದಕ್ಕೆ ಸಾಕ್ಷಿ

ಹೌದು, ಕಾಂಗ್ರೆಸ್ ನಲ್ಲಿ ಈಗ ಹೋದಲ್ಲಿ ಬಂದಲ್ಲಿ ಒಗ್ಗಟ್ಟಿನ ಮಂತ್ರ ಬೋಧಿಸಲಾಗುತ್ತಿದೆ. ಖರ್ಗೆ ಅಭಿನಂದನಾ ಸಮಾರಂಭದಿಂದ ಆರಂಭಿಸಿ ದೆಹಲಿಯಲ್ಲಿ ನಡೆದ ವರಿಷ್ಠರ ಸಭೆಯಲ್ಲೂ ರಾಜ್ಯ ಕಾಂಗ್ರೆಸ್ ನಲ್ಲಿ ಒಗ್ಗಟ್ಟು ಮೂಡಬೇಕೆಂಬ ಸಂಗತಿಯೇ ಪ್ರಸ್ತಾಪವಾಗಿದೆ. ಅಷ್ಟೇ ಅಲ್ಲ ಖರ್ಗೆ ರಾಜ್ಯದಲ್ಲಿ ಕಾಂಗ್ರೆಸ್ ನಡೆಸಲು ಉದ್ದೇಶಿಸಿರುವ ಯಾತ್ರೆಯ ಸ್ವರೂಪದ ಬಗ್ಗೆ ಯೂ ಸ್ಪಷ್ಟ ಸೂಚನೆ ನೀಡಿದ್ದಾರಂತೆ.

ಯಾವುದೇ ಯಾತ್ರೆ ಇರಲಿ ಸಿದ್ಧು,ಡಿಕೆಶಿ ಒಂದೇ ಬಸ್ ನಲ್ಲಿ ತೆರಳಬೇಕೆಂದು ಖರ್ಗೆ ಸೂಚಿಸಿದ್ದಾರಂತೆ. ಆದರೆ ಇದ್ಯಾವುದಕ್ಕೂ ರಾಜ್ಯ ಕಾಂಗ್ರೆಸ್ ನ ಹಿರಿಯ ನಾಯಕ ಹಾಗೂ ಮಾಜಿಸಿಎಂ ಸಿದ್ಧರಾಮಯ್ಯ ಮಾತ್ರ ಕ್ಯಾರೇ ಎಂದಿಲ್ಲ. ವರಿಷ್ಠರ ಸಭೆ ಮುಗಿಸಿ ಬಂದ ಸಿದ್ಧರಾಮಯ್ಯನವರು ಮತ್ತೇ ತಮ್ಮದೇ ಶೈಲಿಯಲ್ಲಿ ರಾಜಕಾರಣ ನಡೆಸಿದ್ದಾರೆ. ಬಸ್ ಯಾತ್ರೆಯಲ್ಲಿ ಡಿಕೆಶಿ ಜೊತೆಗೆ ಹೋಗಬೇಕೆಂದು ಹೈಕಮಾಂಡ್ ಸೂಚಿಸಿದ ಬೆನ್ನಲ್ಲೇ ಸಿದ್ಧು, ತಮ್ಮ ಆಪ್ತರೊಂದಿಗೆ ರಹಸ್ಯ ಸ್ಥಳದಲ್ಲಿ ಮೀಟಿಂಗ್ ನಡೆಸಿದ್ದಾರೆ.

ಸಿದ್ಧರಾಮೋತ್ಸವದಲ್ಲೂ ಕಾಣಿಸಿಕೊಂಡಿದ್ದ ತಮ್ಮ ಆಪ್ತ ನಾಯಕರ ಜೊತೆ ಸಿದ್ಧರಾಮಯ್ಯನವರು ರಹಸ್ಯ ಸಭೆ ನಡೆಸಿದ್ದು, ಸ್ಟ್ರಾಟಜಿ ಬದಲಾವಣೆ ಬಗ್ಗೆ ಸಮಾಲೋಚನೆ ನಡೆಸಿದ್ದಾರಂತೆ. ಖಾಸಗಿ ಸ್ಥಳವೊಂದರಲ್ಲಿ ಆಪ್ತ ರಾದ ಭೈರತಿ ಸುರೇಶ್, ಬಸವರಾಜ ರಾಯರೆಡ್ಡಿ, ಬಿಎಲ್ ಶಂಕರ್ ಸೇರಿ ಕೆಲವರೊಂದಿಗೆ ಮಾತುಕತೆ ನಡೆಸಿದ ಸಿದ್ಧರಾಮಯ್ಯ ಅವರು ಜನವರಿ 3 ರಿಂದ ನಡೆಯಬೇಕಿರುವ ಬಸ್ ಯಾತ್ರೆಯನ್ನು ಹೇಗೆ ತಮ್ಮ ನಿಯಂತ್ರಣಕ್ಕೆ ಪಡೆಯಬೇಕೆಂಬ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಹೈಕಮಾಂಡ್ ಒಟ್ಟಾಗಿ ಯಾತ್ರೆಗೆ ಹೋಗುವಂತೆ ಸೂಚಿಸಿದ್ದು, ಪ್ರತ್ಯೇಕವಾಗಿ ಯಾತ್ರೆ ನಡೆಸಿದಲ್ಲಿ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಲಿದೆ ಎಂದಿತ್ತು. ಅಲ್ಲದೇ ಪಕ್ಷದ ವರಿಷ್ಠರ ಪ್ರತಿಷ್ಠೆಗೆ ಪಕ್ಷದ ಹಿತ ಬಲಿಯಾಗಬಾರದೆಂದು ಎಚ್ಚರಿಸಿದೆ.

ಆದರೆ ಇದರ ಮಧ್ಯೆಯೂ ಸಿದ್ಧರಾಮಯ್ಯ ಹೈಕಮಾಂಡ್ ಗೆ ಸೆಡ್ಡು ಹೊಡೆದಿದ್ದು, ಪ್ರತ್ಯೇಕವಾಗಿ ಸಭೆ ನಡೆಸಿ ತಮ್ಮ ಪ್ರಾಬಲ್ಯವನ್ನು ಹೈಕಮಾಂಡ್ ಗೆ ತೋರುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಸಿದ್ಧು ಪ್ರತ್ಯೇಕ ಮೀಟಿಂಗ್ ಸಾಕಷ್ಟು ಕುತೂಹಲ ಮೂಡಿಸಿದ್ದು ಕೈಪಾಳಯದ ಜಗಳ ಎಂದು ಕೊನೆಯಾಗುತ್ತೆ ಎಂದು ಅಭಿಮಾನಿ ಗಳು ಕಾಯ್ತಿದ್ದಾರೆ.

ಇದನ್ನೂ ಓದಿ : Bhagat Singh Koshyari : ಛತ್ರಪತಿ ಶಿವಾಜಿ ಬಗ್ಗೆ ಮಹಾರಾಷ್ಟ್ರ ಗವರ್ನರ್ ವಿವಾದಾತ್ಮಕ ಹೇಳಿಕೆ : ಇಂದು ಪುಣೆ ಬಂದ್

ಇದನ್ನೂ ಓದಿ : Chairman Fight BJP : ಬಿಜೆಪಿಯಲ್ಲಿ ಸಭಾಪತಿ ಹುದ್ದೆ ಫೈಟ್: ಹೊರಟ್ಟಿ ಬದಲು ಮಲ್ಕಾಪುರೆ ಬೆಂಬಲಕ್ಕೆ‌ ನಿಂತ ಹಿರಿಯರು

Siddaramaiah Secret meeting called after High Command with followers

Comments are closed.