K.L Rahul- Athiya Wedding: ಸದ್ದಿಲ್ಲದೇ ಹಸೆಮಣೆ ಏರಲು ಸಜ್ಜಾದ ಕ್ರಿಕೆಟಿಗ ಕೆ.ಎಲ್.ರಾಹುಲ್ – ನಟಿ ಅಥಿಯಾ ಶೆಟ್ಟಿ; ಜ.23ಕ್ಕೆ ಅದ್ಧೂರಿ ಕಲ್ಯಾಣ

ಮುಂಬೈ: K.L Rahul- Athiya Wedding: ಟೀಂ ಇಂಡಿಯಾ ಕ್ರಿಕೆಟಿಗರು ಹಾಗೂ ಬಾಲಿವುಡ್ ನಟಿಯರಿಗೆ ಅದೇನೋ ಮೊದಲಿನಿಂದಲೂ ಅವಿನಾಭಾವ ಸಂಬಂಧ. ಬಿಟೌನ್ ನಟಿಯರು ಹೆಚ್ಚಾಗಿ ಕ್ರಿಕೆಟಿಗರಿಂದ ಆಕರ್ಷಣೆಗೆ ಒಳಗಾಗೋದು, ಅವರ ಮಧ್ಯೆ ಪ್ರೀತಿ ಅರಳಿ ಮದುವೆ ತನಕ ಹೋಗೋದು, ಆಮೇಲೆ ಬ್ರೇಕ್ ಅಪ್ ಆಗೋದು ಇವೆಲ್ಲಾ ನಡೀತಲೇ ಬಂದಿದೆ. ಅದ್ರಲ್ಲಿ ಎಲ್ಲೋ ಕೊಹ್ಲಿ- ಅನುಷ್ಕಾರಂಥ ಒಂದೋ ಎರಡೋ ಜೋಡಿ ಒಟ್ಟಿಗೆ ಸಂಸಾರ ಸಾಗಿಸಿಕೊಂಡು ಹೋಗುತ್ತಿದ್ದಾರೆ. ಈ ನಡುವೆ ಮತ್ತೊಂದು ಜೋಡಿ ಹಸೆಮಣೆ ಏರಲು ಸಜ್ಜಾಗಿ ನಿಂತಿದೆ. ಅದುವೇ ಕೆ.ಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿ.

ಕ್ರಿಕೆಟಿಗ ಕೆ.ಎಲ್.ರಾಹುಲ್ ಮತ್ತು ನಟ ಸುನೀಲ್ ಶೆಟ್ಟಿ ಪುತ್ರಿಯಾದ ನಟಿ ಅಥಿಯಾ ಶೆಟ್ಟಿ ನಡುವೆ ಪ್ರೀತಿ ಬೆಳೆದಿದ್ದು, ಇಬ್ಬರೂ ಕೈ-ಕೈ ಹಿಡಿದುಕೊಂಡು ಓಡಾಡೋದು, ಅವರಿಬ್ಬರ ಡೇಟಿಂಗ್ ವಿಚಾರ ಎಲ್ಲಾ ಮಾಧ್ಯಮಗಳಲ್ಲೂ ಸುದ್ದಿ ಆಗಿತ್ತು. ಆದ್ರೆ ಇವರಿಬ್ಬರು ಮಾತ್ರ ಈ ವಿಚಾರವನ್ನು ನಿರಾಕರಿಸುತ್ತಲೇ ಬಂದಿದ್ದಾರೆ. ಈ ನಡುವೆ ಇದೀಗ ಹೊಸ ಸುದ್ದಿಯೊಂದು ತಿಳಿದುಬಂದಿದ್ದು, ಮುಂದಿನ ತಿಂಗಳು ಈ ಜೋಡಿ ಹಸೆಮಣೆ ಏರಲು ಸಜ್ಜಾಗಿದೆ ಎನ್ನಲಾಗುತ್ತಿದೆ. ತಮ್ಮ ಬಹುದಿನಗಳ ಪ್ರೀತಿಗೆ ಅಧಿಕೃತ ಮುದ್ರೆ ಒತ್ತಲು ಈ ಜೋಡಿಹಕ್ಕಿಗಳು ತೀರ್ಮಾನಿಸಿದ್ದು, ಜನವರಿ 23ಕ್ಕೆ ಮ್ಯಾರೇಜ್ ಡೇಟ್ ಫಿಕ್ಸ್ ಆಗಿದೆ ಎಂದು ತಿಳಿದುಬಂದಿದೆ. ಈಗಾಗಲೇ ಮದುವೆ ಆಮಂತ್ರಣ ಪತ್ರಿಕೆ ಕೂಡಾ ರೆಡಿ ಆಗಿದ್ದು, ಶೀಘ್ರದಲ್ಲೇ ತಮ್ಮ ಮದುವೆಯನ್ನು ಮಾಧ್ಯಮಗಳ ಮುಂದೆ ಅಧಿಕೃತವಾಗಿ ಅನೌನ್ಸ್ ಮಾಡಲಿದ್ದಾರಂತೆ.

ಇದನ್ನೂ ಓದಿ: Rashmika Instagram: ಇನ್ ಸ್ಟಾಗ್ರಾಂ ಖಾತೆಯಲ್ಲಿ ರಶ್ಮಿಕಾ ಮಂದಣ್ಣ ಹೆಸರೇ ಉಲ್ಟಾ ಆಗೋಯ್ತು; ಏನಿದರ ಸೀಕ್ರೆಟ್?

ಅಂದಹಾಗೆ ಈ ಮದುವೆ ಮುಂಬೈನ ಲೋಖವಾಂಡದ ಸುನೀಲ್ ಶೆಟ್ಟಿ ಮನೆಯಲ್ಲಿಯೇ ನಡೆಯಲಿದೆಯಂತೆ. ಜನವರಿ 21ರಿಂದ 23ರವರೆಗೆ ಅಂದರೆ 3 ದಿನಗಳ ಕಾಲ ಈ ಅದ್ಧೂರಿ ಕಲ್ಯಾಣ ನಡೆಯಲಿದೆ ಎನ್ನಲಾಗುತ್ತಿದೆ. ಇನ್ನು ಬಿಸಿಸಿಐ ಕೂಡಾ ಕೆ.ಎಲ್.ರಾಹುಲ್ ಗೆ ಜನವರಿಯಲ್ಲಿ ರಜೆಗೆ ಅನುಮತಿ ನೀಡಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಮದುವೆ ಮುಗಿಸಿ ನ್ಯೂಜಿಲೆಂಡ್ ಟೂರ್ ನಂತರ ರಾಹುಲ್ ಮತ್ತೆ ಕರ್ತವ್ಯಕ್ಕೆ ಹಾಜರಾಗಲಿದ್ದಾರಂತೆ. ಆದ್ರೆ ಈ ಬಗ್ಗೆ ಇಬ್ಬರ ಕುಟುಂಬದಿಂದಲೂ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ.

ನಟ ಸುನೀಲ್ ಶೆಟ್ಟಿ ಇತ್ತೀಚೆಗೆ ಮಾಧ್ಯಮಗಳ ಮುಂದೆ ಮಗಳ ಆಯ್ಕೆಯೇ ನನ್ನ ಆಯ್ಕೆ ಎಂದಿದ್ದರು. ಅತ್ತ ಕೆ.ಎಲ್.ರಾಹುಲ್ ಮತ್ತು ಅಥಿಯಾ ಶೆಟ್ಟಿ ಮದುವೆ ಗಾಸಿಪ್ ಗಳು ವೈರಲ್ ಆಗುತ್ತಿದ್ದಂತೆ ಇನ್ನು 3 ತಿಂಗಳಲ್ಲಿ ನಡೆಯುವ ಆ ಮದುವೆಗೆ ನನ್ನನ್ನೂ ಆಹ್ವಾನಿಸುತ್ತೀರೆಂದು ನಂಬಿಕೆ ಇದೆ ಎಂದು ಅಥಿಯಾ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಈ ಬೆನ್ನಲ್ಲೇ ಮದುವೆ ದಿನಾಂಕ ಫೈನಲ್ ಮಾಡಲು ಕೆ.ಎಲ್.ರಾಹುಲ್ ಪೋಷಕರು ಸುನೀಲ್ ಶೆಟ್ಟಿಯನ್ನು ಭೇಟಿ ಮಾಡಿದ್ದರು ಎಂಬ ವದಂತಿಗಳೂ ಹಬ್ಬಿದ್ದವು. ಇದೀಗ ಎರಡೂ ಕುಟುಂಬಗಳು ಸೇರಿ ಮದುವೆ ಬಳಿಕ ಜೊತೆಗಿರಲು ನವಜೋಡಿಗೆ ಮುಂಬೈನಲ್ಲಿ ಹೊಸ ಫ್ಲ್ಯಾಟ್ ಖರೀದಿಸಿದ್ದಾರೆ ಎಂದೂ ಹೇಳಲಾಗ್ತಿದೆ. ಒಟ್ನಲ್ಲಿ ಇವರಿಬ್ಬರ ಪ್ರೀತಿಗೆ ರೆಕ್ಕೆಪುಕ್ಕಗಳು ಬಂದಿದ್ದು, ಈ ಬಾರಿ ಮದುವೆ ಪಕ್ಕಾ ನಡೆಯಲಿದೆ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ: The Kashmiri Files selected: ಸ್ವಿಟ್ಜರ್ಲೆಂಡ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ: ದಿ ಕಾಶ್ಮೀರಿ ಫೈಲ್ಸ್‌ ಆಯ್ಕೆ

ಅಂದಹಾಗೆ ಅಥಿಯಾ ಶೆಟ್ಟಿ 2015ರಲ್ಲಿ ರಿಲೀಸ್ ಆದ ಹೀರೋ ಸಿನಿಮಾದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದರು. ಬಳಿಕ ಮುಬಾರಕ್, ನವಾಬ್ ಜಾದೆ ಹಾಗೂ ಮೋತಿಚೂರ್ ಚಕ್ನಚೂರ್ ಸಿನಿಮಾಗಳಲ್ಲಿ ನಟಿಸಿದ್ದರೂ ಚಿತ್ರರಂಗದಲ್ಲಿ ಯಶಸ್ಸು ಕಂಡಿಲ್ಲ. 2019ರ ಬಳಿಕ ಯಾವುದೇ ಸಿನಿಮಾದಲ್ಲೂ ಅವರು ನಟಿಸಿಲ್ಲ.

K.L Rahul- Athiya Wedding: cricketer KL Rahul and actress Athiya Shetty to tie knot on January 23rd

Comments are closed.