ಅಮೇರಿಕಾ ಹುಟ್ಟುಹಾಕಿತ್ತಾ ಕೊರೊನಾ ವೈರಸ್ ! 1981ರ ‘ದಿ ಐಸ್ ಆಫ್ ಡಾರ್ಕ್ನೆಸ್’ಪುಸ್ತಕದಲ್ಲೇನಿದೆ ಗೊತ್ತಾ ?

0
  • ಅರುಣ್ ಗುಂಡ್ಮಿ

ಬೀಜಿಂಗ್ : ಕೊರೊನಾ ವೈರಸ್ ಸೋಂಕು ಚೀನಾದಲ್ಲಿ ಮರಣ ಮೃದಂಗವನ್ನು ಬಾರಿಸುತ್ತಿದೆ. ವಿಶ್ವವನ್ನೇ ತಲ್ಲಣಗೊಳಿಸಿದ್ದ ಕೊರೊನಾ ಸಾವಿರಾರು ಮಂದಿಯನ್ನು ಬಲಿ ಪಡೆದಿದೆ. ಲಕ್ಷಾಂತರ ಮಂದಿ ಇಂದಿಗೂ ಕೊರೊನಾ ಸೋಂಕಿನಿಂದ ತತ್ತರಿಸಿ ಹೋಗಿದ್ದಾರೆ. ವಿಜ್ಞಾನಕ್ಕೆ ಸವಾಲಾಗಿರೋ ಕೊರೊನಾ ತಡೆಗೆ ನಡೆಯುತ್ತಿರೋ ಸಂಶೋಧನೆಗಳು ಇನ್ನೂ ಫಲ ಕೊಟ್ಟಿಲ್ಲ. ಮಾರಕ ಕೊರೊನಾ ವೈರಸ್ ಹುಟ್ಟು ಹಾಕಿದ್ದು ದೊಡ್ಡಣ್ಣಾ ಅಮೇರಿಕಾನಾ? ಹೀಗೊಂದು ಅನುಮಾನವನ್ನು ಅಮೇರಿಕಾದ ಖ್ಯಾತ ಲೇಖಕ ಡೀನ್ ಕೋಟ್ಜ್ ಬರೆದಿರೋ ‘ದಿ ಐಸ್ ಆಫ್ ಡಾರ್ಕ್ನೆಸ್’ ಪುಸ್ತಕ ಹುಟ್ಟುಹಾಕಿದೆ.

ದೊಡ್ಡಣ್ಣ ಅಮೇರಿಕಾಕ್ಕೆ ವಿಶ್ವದಲ್ಲೇ ಸಡ್ಡು ಹೊಡೆದಿರೋದು ಚೀನಾ. ವಿಶ್ವ ಮಟ್ಟದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಅಮೇರಿಕಾಕ್ಕೆ ತಡೆಯೊಡ್ಡುತ್ತಿದ್ದು. ಆದರೆ ಚೀನಾ ಪ್ರತಿಸವಾಲು ಒಡ್ಡೋ ಮೂಲಕ ಅಮೇರಿಕಾಕ್ಕೆ ಪ್ರತೀ ಬಾರಿಯೂ ಟಾಂಗ್ ಕೊಡ್ತಿದೆ. ಹೀಗಾಗಿಯೇ ಚೀನಾ ಹೆಸರು ಕೇಳಿದ್ರೆ ಸಾಕು ಅಮೇರಿಕಾ ಉರಿದು ಬೀಳುತ್ತೆ. ಅತ್ಯಾಧುನಿಕ ತಂತ್ರಜ್ಞಾನ, ಜನಸಂಖ್ಯಾ ಬಲವನ್ನೇ ಅಸ್ತ್ರವನ್ನಾಗಿಸಿಕೊಂಡಿರೋ ಚೀನಾವನ್ನು ಬಗ್ಗು ಬಡೆಯೋದು ಅಮೇರಿಕಾ ಸೇರಿದಂತೆ ಅಭಿವೃದ್ದಿ ಹೊಂದಿರೋ ದೇಶಗಳಿಗೆ ಸುಲಭ ಸಾಧ್ಯವಲ್ಲ. ಇದನ್ನ ಅರಿತಿರೋ ದೊಡ್ಡಣ್ಣ ಕೊರೊನಾ ವೈರಸ್ ಹುಟ್ಟುಹಾಕಿ ಚೀನಾವನ್ನು ಮಟ್ಟ ಹಾಕುತ್ತಿದ್ಯಾ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಹಾಗಾದ್ರೆ ಕೊರೊನಾ ವೈರಸ್ ನ್ನು ಕೃತವಾಗಿ ಹುಟ್ಟು ಹಾಕಲಾಗಿತ್ತಾ. ಅಮೇರಿಕಾದ ಲ್ಯಾಬ್ ನಲ್ಲೇ ಕೊರೊನಾ ಸೃಷ್ಟಿಯಾಯ್ತ. ಹೀಗೆಲ್ಲಾ ಅನುಮಾನವನ್ನು ಹುಟ್ಟು ಹಾಕಿದೆ.

ಲೇಖಕ ಡೀನ್ ಕೋಟ್ಜ್ ಇಂದಿಗೆ ಸರಿ ಸುಮಾರು 40 ವರ್ಷಗಳ ಹಿಂದೆ ಅಂದ್ರೆ, 1981 ರಲ್ಲಿ ಬರೆದಿರೋ ತನ್ನ ಕಾಲ್ಪನಿಕ ಮಹಾಕಾವ್ಯ ‘ದಿ ಐಸ್ ಆಫ್ ಡಾರ್ಕ್ನೆಸ್’ ಸಂಪೂರ್ಣವಾಗಿ ಚೀನಾದ ಮಿಲಿಟರಿ ಲ್ಯಾಬ್ ಸುತ್ತಲೂ ಸುತ್ತುತ್ತದೆ. ಶತ್ರುಗಳು ದಾಳಿ ಮಾಡಿದ ಸಂದರ್ಭದಲ್ಲಿ ಚೀನಾ ತನ್ನ ಅತ್ಯಾಧುನಿಕ ಲ್ಯಾಬ್ ನಲ್ಲಿ ವೈರಸ್ ವೊಂದನ್ನು ಸಿದ್ದಪಡಿಸುತ್ತೆ. ಚೀನಾದ ವುಹಾನ್ ನಗರದಲ್ಲಿರೋ ಲ್ಯಾಬ್ ನಲ್ಲಿ ಈ ವೈರಸ್ ಹುಟ್ಟಿಕೊಂಡಿತ್ತು. ಹೀಗಾಗಿಯೇ ಕೃತಕ ವೈರಸ್ ಅನ್ನು ವುಹಾನ್ – 400 ಅಂತಾ ಡೀನ್ ಕೋಟ್ಜ್ ಕರೆದಿದ್ದ. ಈ ವೈರಸ್ ಪ್ಲೇಗ್ ನಂತೆ ಹರಡಿ ಶತ್ರುಗಳನ್ನು ನಾಶ ಮಾಡುತ್ತದೆ. ಈ ವೈರಸ್ ಲಕ್ಷಾಂತರ ಜನರನ್ನು ಬಲಿ ಪಡೆಯುತ್ತೆ ಅಂತಾ ಡೀನ್ ಕೋಟ್ಜ್ ‘ದಿ ಐಸ್ ಆಫ್ ಡಾರ್ಕ್ನೆಸ್’ ಕಾಲ್ಪನಿಕ ಮಹಾಕಾವ್ಯದ 39ನೇ ಪುಟದಲ್ಲಿ ಉಲ್ಲೇಖಿಸಿದ್ದ.

‘ದಿ ಐಸ್ ಆಫ್ ಡಾರ್ಕ್ನೆಸ್’ ಲೇಖಕ ಡೀನ್ ಕೊರ್ಟ್ಜ್

ವಿಪರ್ಯಾಸವೆಂದ್ರೆ ‘ದಿ ಐಸ್ ಆಫ್ ಡಾರ್ಕ್ನೆಸ್’ ಕಾದಂಬರಿಯಲ್ಲಿ ಬರುವ ವುಹಾನ್ ನಗರದಲ್ಲಿಯೇ ಇದೀಗ ಮಾರಕ ಕೊರೊನಾ ವೈರಸ್ ಪತ್ತೆಯಾಗಿದೆ. ವುಹಾನ್ – 400 ನಂತೆಯೇ ಇದೀಗ ಕೊರೊನಾ ರುದ್ರನರ್ತನವಾಡುತ್ತಿದೆ. ವುಹಾನ್ ನಗರದಲ್ಲಿ ಸಾವಿರಾರು ಮಂದಿ ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿ ಹೋಗಿದ್ದಾರೆ. ಡೀನ್ ಕೊರ್ಟ್ಜ್ ತನ್ನ ಕಾದಂಬರಿಯಲ್ಲಿ ವುಹಾನ್ -400 ವೈರಸ್ ಅನ್ನೇ ಕೊರೊನಾ ಅಂತಾ ಕರೆಯಲಾಗುತ್ತಿದೆ. 40 ವರ್ಷಗಳ ಹಿಂದೆಯೇ ಈ ಸೋಂಕನ್ನು ಲೇಖಕ ನಿಷ್ಪಾಪ ಶಸ್ತ್ರಾಸ್ತ್ರ ಅಂತಾ ಪರಿಗಣಿಸಿದ್ದ. ಈ ವೈರಸ್ ಮನುಕುಲವನ್ನೇ ಸಂಪೂರ್ಣವಾಗಿ ನಾಶ ಮಾಡುತ್ತೆ ಅಂತಾನೂ ಹೇಳಿದ್ದ. ಆದ್ರೀಗ ಚೀನಾ ದೇಶದ ಚಿತ್ರಣವೂ ಕೂಡ ಅದೇ ಹಾದಿಯಲ್ಲೇ ಸಾಗುತ್ತಿದೆ. ವಿಪರ್ಯಾಸವೆಂದ್ರೆ ವುಹಾನ್ ಪ್ರಾಂತ್ಯದಲ್ಲಿಯೇ ಕೊರೊನಾ ವೈರಸ್ ಕೂಡ ಪತ್ತೆಯಾಗಿತ್ತು.

ಚೀನಾದ ವುಹಾನ್, ಹುಬೈ, ಹೆನಾನ್, ಹುನಾನ್ ಪ್ರಾಂತ್ಯಗಳು ಅಕ್ಷರಶಃ ಕೊರೊನಾ ವೈರಸ್ ಸೋಂಕಿನಿಂದ ತತ್ತರಿಸಿ ಹೋಗಿದ್ದು, ಲಕ್ಷಾಂತರ ಮಂದಿ ಈ ಸೋಂಕಿಗೆ ತುತ್ತಾಗಿದ್ದಾರೆ. ವಿಜ್ಞಾನದಲ್ಲಿ ಎಷ್ಟೇ ಅನ್ವೇಷಣೆಗಳು ವಿಶ್ವದಾದ್ಯಂತ ನಡೆಯುತ್ತಿದ್ರೂ ಕೂಡ ಇದುವರೆಗೂ ಕೊರೊನಾ (ಕೊವಿದ್ -19) ವೈರಸ್ ಸೋಂಕನ್ನು ಇಂದಿಗೂ ಮಟ್ಟಹಾಕೋದಕ್ಕೆ ಸಾಧ್ಯವಾಗಿಲ್ಲ.

ಈ ನಡುವಲ್ಲೇ ಡೀನ್ ಕೋಟ್ಜ್ ಬರೆದಿರೋ ಪುಸ್ತಕವನ್ನೇ ಆಧಾರವಾಗಿಟ್ಟುಕೊಂಡು ಅಮೇರಿಕಾ ಕೊರೊನಾ ವೈರಸ್ ಸಿದ್ದಪಡಿಸಿದ್ಯಾ ಅನ್ನೋ ಅನುಮಾನ ಕಾಡುತ್ತಿದೆ. ಕೊರೊನಾ ವೈರಸ್ ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರೋ ಬೆನ್ನಲ್ಲೇ 40 ವರ್ಷಗಳ ಹಿಂದಿನ ಮಹಾಕಾವ್ಯ ಸದ್ದು ಮಾಡುತ್ತಿದೆ. ಡೀನ್ ಕೋಟ್ಜ್ ತನ್ನ ಪುಸ್ತಕದಲ್ಲಿ ಸಾವಯವ ಶಸ್ತ್ರಾಸ್ತ್ರವಾಗಿ ಕೃತಕ ವೈರಸ್ ಸಿದ್ದಪಡಿಸಬಹುದು ಅಂತಾ ಹೇಳಿದ್ದ. ಹೀಗಾಗಿ ಅಮೇರಿಕಾ ವುವಾನ್ -400 ವೈರಸ್ ನ್ನೇ ಅಸ್ತ್ರಸ್ತ್ರವನ್ನಾಗಿಟ್ಟುಕೊಂಡು ಕೊರೊನಾ ವೈರಸ್ ಸಿದ್ದಪಡಿಸಿದ್ಯಾ, ತನ್ನ ಲ್ಯಾಬ್ ನಲ್ಲಿ ಸಿದ್ದ ಪಡಿಸಿದ ವೈರಸ್ ಅನ್ನು ಚೀನಾ ದೇಶದಲ್ಲಿ ಬಿಟ್ಟಿದ್ಯಾ ಅನ್ನೋದು ಸದ್ಯದ ಅನುಮಾನ.

ಆದ್ರೆ ಇನ್ನೊಂದೆಡೆ ಚೀನಾವೇ ಶತ್ರುಗಳ ಸಂಹಾರಕ್ಕಾಗಿ ತಾನೇ ಸಾವಯವ ಶಸ್ತ್ರಾಸ್ತ್ರವಾಗಿ ಕೊರೊನಾ ವೈರಸ್ ನ್ನು ಹುಟ್ಟುಹಾಕಿತ್ತು. ಆದರೆ ವೈರಸ್ ಶತ್ರು ರಾಷ್ಟ್ರಗಳ ಮೇಲೆ ದಾಳಿ ನಡೆಸೋ ಮೊದಲೇ ಚೀನಾದಲ್ಲಿ ವೈರಸ್ ಹರಡಿರಬಹುದು ಅಂತಾನೂ ಹೇಳಲಾಗುತ್ತಿದೆ. ಇದೆಲ್ಲದರ ನಡುವಲ್ಲೇ ಕಾಂಗ್ರೆಸ್ ಹಿರಿಯ ಮುಖಂಡ ಮನೀಶ್ ತಿವಾರಿ ಇದೇ ವಿಚಾರವಾಗಿ ಟ್ವೀಟ್ ಮಾಡಿದ್ದಾರೆ. ತನ್ನ ಟ್ವೀಟ್ ನಲ್ಲಿ ಕಾದಂಬರಿಯಲ್ಲಿ ಬರುವ ವುಹಾನ್-400 ವೈರಸ್ ಇದೀಗ ಕೊರೊನಾ ಸೃಷ್ಟಿಗೆ ಕಾರಣವಾಯ್ತಾ ಅಂತಾ ಪ್ರಶ್ನಿಸಿದ್ದಾರೆ. ಮಾತ್ರವಲ್ಲ ಡೀನ್ ಕೋಟ್ಜ್ ಬರೆದಿರೋ ದಿ ಐಸ್ ಆಫ್ ಡಾರ್ಕ್ನೆಸ್ ಪುಸ್ತಕವನ್ನು ಓದಿ ಅಂತಾ ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ವಿಶ್ವದ ಖ್ಯಾತ ಲೇಖಕ ಡೀನ್ ಕೋಟ್ಜ್ ಬರೆದಿರೋ ‘ದಿ ಐಸ್ ಆಫ್ ಡಾರ್ಕ್ನೆಸ್’ ಕಾಲ್ಪನಿಕ ಮಹಾಕಾವ್ಯ ಇದೀಗ ವಿಶ್ವಮಟ್ಟದಲ್ಲಿ ಭಾರೀ ಚರ್ಚೆಯಾಗುತ್ತಿರೋದು ಮಾತ್ರ ಸುಳ್ಳಲ್ಲ.

Leave A Reply

Your email address will not be published.