ಸೋಮವಾರ, ಜೂನ್ 23, 2025
HomeCinemaಚಲಿಸೋ ಟ್ರೈನ್ ನಲ್ಲೇ ಪ್ರಿಯತಮಗೆ ಕಿಸ್ : ಹೊಸ ‘ಲವ್ ಸ್ಟೋರಿ’ ಬಿಚ್ಚಿಟ್ಟ ಸಾಯಿಪಲ್ಲವಿ

ಚಲಿಸೋ ಟ್ರೈನ್ ನಲ್ಲೇ ಪ್ರಿಯತಮಗೆ ಕಿಸ್ : ಹೊಸ ‘ಲವ್ ಸ್ಟೋರಿ’ ಬಿಚ್ಚಿಟ್ಟ ಸಾಯಿಪಲ್ಲವಿ

- Advertisement -

ಸಾಯಿ ಪಲ್ಲವಿ.. ದಕ್ಷಿಣ ಭಾರತ ಚಿತ್ರರಂಗದಲ್ಲೇ ಬಹುಬೇಡಿಕೆಯ ನಟಿ. ತಮಿಳು, ತೆಲುಗು, ಮಲಯಾಲಂ ಚಿತ್ರರಂಗದಲ್ಲಿ ತನ್ನದೇ ವರ್ಚಸ್ಸು, ಅಭಿಮಾನಿಗಳನ್ನು ಹೊಂದಿರೋ ಸಾಯಿ ಪಲ್ಲವಿ ಸಾಲು ಸಾಲು ಹಿಟ್ ಚಿತ್ರಗಳನ್ನೇ ಕೊಟ್ಟಿದ್ದಾರೆ. ಇದೀಗ ಸಾಯಿಪಲ್ಲವಿ ಹೊಸ ಲವ್ ಸ್ಟೋರಿಯೊಂದನ್ನು ಅಭಿಮಾನಿಗಳ ಮುಂದೆ ಬಿಚ್ಚಿಟ್ಟಿದ್ದಾರೆ.

Sai Pallavi 9

ಪ್ರೇಮಂ, ಖಾಲಿ, ಫಿದಾ, ಮಿಡಲ್ ಕ್ಲಾಸ್ ಅಬ್ಬಾಯಿ, ಮಾರಿ 2, ಪಡ್ಡಿ ಪಡ್ಡಿ ಲಚ್ಚೆ ಮನಸು, ಅತ್ರಿಯನ್ ಹಾಗೂ ಎನ್ ಜಿಕೆಯಂತ ಸಾಲು ಸಾಲು ಸೂಪರ್ ಡೂಪರ್ ಹಿಟ್ ಸಿನಿಮಾಗಳ ನಂತರ ಸಾಯಿಪಲ್ಲವಿ ತೆಲುಗು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

Sai Pallavi

ಸಿಗಂ ಸೂರ್ಯ ಜೊತೆಗೆ ಎನ್ ಜಿಕೆ ಸಿನಿಮಾ ಮಾಡಿದ್ದ ಸಾಯಿಪಲ್ಲವಿ ಇದೀಗ ಅಭಿಮಾನಿಗಳ ಮುಂದೆ ಲವ್ ಸ್ಟೋರಿ ಹೇಳೋದ್ರಲ್ಲಿ ಬ್ಯೂಸಿಯಾಗಿದ್ದಾರೆ.

Sai Pallavi 3

ಅಷ್ಟಕ್ಕೂ ನಾವಿಲ್ಲಿ ಹೇಳ ಹೊರಟಿರೋದು ಸಾಯಿ ಪಲ್ಲವಿಯ ರಿಯಲ್ ಲವ್ ಸ್ಟೋರಿ ಅಲ್ಲಾ, ಬದಲಾಗಿ ರೀಲ್ ಮೇಲಿನ ಲವ್ ಸ್ಟೋರಿ. ಲವರ್ ಬಾಯ್ ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ಕಾಂಬಿನೇಷನ್ ನಲ್ಲಿ ಬರ್ತಿರೋ ಲವ್ ಸ್ಟೋರಿ ಸಿನಿಮಾ ಸಖತ್ ಸೌಂಡ್ ಮಾಡ್ತಿದೆ.

Sai Pallavi 2

ಖ್ಯಾತ ನಿರ್ದೇಶಕ ಶೇಖರ್ ಕಮ್ಮುಲಾ ನಿರ್ದೇಶನದಲ್ಲಿ ಮೂಡಿಬರ್ತಿರೋ ಲವ್ ಸ್ಟೋರಿ ಚಿತ್ರೀಕರಣ ಮುಗಿಸಿದ್ದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

Sai Pallavi 4

ಈ ಹಿಂದೆ ಸಾಯಿ ಪಲ್ಲವಿ ಜೊತೆ ಫಿದಾ ಸಿನಿಮಾ ಮಾಡಿದ್ದ ಶೇಖರ್ ಕಮ್ಮುಲಾ ಇದೀಗ ಎರಡನೇ ಬಾರಿಗೆ ಸಾಯಿಪಲ್ಲವಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ತೆಲುಗು ಚಿತ್ರರಂಗದಲ್ಲಿಯೇ ಧೂಳೆಬ್ಬಿಸಿರೋ ಫಿದಾ ಸಿನಿಮಾದ ನಂತರ ಲವ್ ಸ್ಟೋರಿ ತೆರೆಗೆ ಬರ್ತಿದೆ. ಪ್ರೇಮಿಗಳ ದಿನಾಚರಣೆಯಂದು ಬಿಡುಗಡೆಯಾಗಿರೋ ಚಿತ್ರದ ಟೀಸರ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸುತ್ತಿದೆ.

Sai Pallavi 1

ಕೇವಲ 1.06 ನಿಮಿಷದ ಸಣ್ಣ ಟೀಸರ್ ಬಿಡುಗಡೆಯಾದ ನಾಲ್ಕೈ ನಾಲ್ಕು ದಿನಕ್ಕೆ ಬರೋಬ್ಬರಿ 42 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಚಿತ್ರದ ಟೀಸರ್ ನೋಡಿರೋ ಅಭಿಮಾನಿಗಳು ಚಿತ್ರವನ್ನು ಬಿಡುಗಡೆ ಮಾಡುವಂತೆ ದುಂಬಾಲು ಬಿದ್ದಿದ್ದಾರೆ.

Sai Pallavi 5

ಸಾಯಿಪಲ್ಲವಿ ಹಾಗೂ ನಾಗಚೈತನ್ಯ ಡಿಫ್ರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಕ್ಯೂಟ್ ಲವ್ ಸ್ಟೋರಿ ಪ್ರೇಕ್ಷಕರಿ ಇಷ್ಟವಾದಂತಿದೆ. ಚಲಿಸೋ ಮೆಟ್ರೋ ಟ್ರೈನ್ ನಲ್ಲೇ ಸಾಯಿಪಲ್ಲವಿ ನಾಗಚೈತನ್ಯಗೆ ಕಿಸ್ ಮಾಡಿದ್ದಾರೆ.

Sai Pallavi 8

ಟೀಸರ್ ಸಾಕಷ್ಟು ಕುತೂಹಲವನ್ನು ಹುಟ್ಟು ಹಾಕಿದ್ದು, ಅಭಿಮಾನಿಗಳು ಲವ್ ಸ್ಟೋರಿ ಬಿಡುಗಡೆಗಾಗಿ ಕಾದು ಕುಳಿತಿದ್ದಾರೆ. ಆದರೆ ಚಿತ್ರತಂಡ ಸಿನಿಮಾ ಯಾವಾಗ ಬಿಡುಗಡೆಯಾಗುತ್ತೆ ಅನ್ನೋ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ.

ಲವ್ ಸ್ಟೋರಿ ಚಿತ್ರದ ಟೀಸರ್ ನೋಡಲು ಕ್ಲಿಕ್ ಮಾಡಿ

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular