Crazy Structure : ಜಗತ್ತಿನ ವಿಚಿತ್ರ ಕಟ್ಟಡಗಳು ನಿಮಗೆ ಗೊತ್ತಾ? ಇದು ಆಗರ್ಭ ಶ್ರೀಮಂತರ ಆಲೋಚನೆಯಿಂದ ಹುಟ್ಟಿದ್ದು!!

ನಿಮಗೆ ಭವಿಷ್ಯದಲ್ಲಿ ಕೋಟಿ ರೂಪಾಯಿಗಳು ಲಾಟರಿಯಲ್ಲಿ ದೊರೆತರೆ ನೀವು ಏನನ್ನು ಖರೀದಿಸಲು ಬಯಸುತ್ತೀರಿ? ಮನೆ? ಕಾರು? ನಿಮ್ಮೆಲ್ಲಾ ಸಾಲ ತೀರಿಸಲು ಅಥವಾ ನಿಮ್ಮ ಪ್ರೀತಿ ಪಾತ್ರರಿಗೆ ಒಳ್ಳೆಯ ಉಡುಗೊರೆ ನೀಡಲು? ಆದರೆ, ಈ ಎಲ್ಲಾ ಆಲೋಚನೆಗಳು ಮುಗಿದ ನಂತರವೂ ನಿಮ್ಮ ಬಳಿ ಸಾಕಷ್ಟು ಹಣವಿದೆ ಅಂದರೆ, ಏನು ಮಾಡುತ್ತೀರಿ? ಅಂತಹ ಆಲೋಚನೆಗಳಿಗೆ ಇಲ್ಲಿದೆ ಉತ್ತರ. ಮಿಲೇನಿಯರ್‌ ಗಳಾಗಿರುವ ಕೆಲವರು ತಮ್ಮ ಇಷ್ಟದ ರೀತಿಯಲ್ಲಿ ಕಟ್ಟಡಗಳನ್ನು (Crazy Structure) ಕಟ್ಟಿ ಆನಂದ ಪಡುತ್ತಿದ್ದಾರೆ. ಅವರ ಈ ಆಲೋಚನೆಗಳೇ, ವಿಚಿತ್ರ ಕಟ್ಟಡಗಳ (Crazy Structure) ನಿರ್ಮಾಣಕ್ಕೆ ನಾಂದಿಯಾಯಿತು.

ಅಂತಹ ಆಗರ್ಭ ಶ್ರೀಮಂತರು ತಮ್ಮ ಬಳಿಯಲ್ಲಿರುವ ಹಣವನ್ನು ಏನು ಮಾಡಬೇಕೆಂದು ತಿಳಿಯದೇ ಈ ರೀತಿಯ ವಿಚಿತ್ರ ಕಟ್ಟಡಗಳನ್ನು(Crazy Structure) ಕಟ್ಟಿದ್ದಾರೆ ಅವುಗಳು ಹೀಗಿವೆ:

  1. ಇಂಡೋನೇಶ್ಯಿಯಾದಲ್ಲಿನ ಚಿಕನ್‌ ಚರ್ಚ್‌ :
    ಇಂಡೋನೇಶ್ಯಿಯಾದ ಅತಿರಂಜಿತ ಮಿಲೇನಿಯರ್ ಡೇನಿಯಲ್‌ ಅಲಮ್‌ಸ್ಜಾ ಕಾಡಿನ ಮಧ್ಯದಲ್ಲಿ ಬೃಹತ್‌ ಚರ್ಚ್‌ ಅನ್ನು ನಿರ್ಮಿಸಿದ್ದಾರೆ. ಈ ಚರ್ಚಿನ ಕ್ರೇಜಿಯಸ್ಟ್‌ ವಿಷಯವೆಂದರೆ ಅದು ಕೋಳಿಯ ಆಕಾರ ಅಥವಾ ಮಿಲೇನಿಯರ್‌ ಪ್ರಕಾರ ಪಾರಿವಾಳದ ಆಕಾರದಲ್ಲಿದೆ.
  2. ಟರ್ಕಿಯಲ್ಲಿರುವ ಅಕ್ವೇರಿಯಂ ಬೇಲಿ :
    ಮೆಹಮತ್‌ ಅಲಿ ಇವರು ಜಗತ್ತಿನಲ್ಲೇ ಅತಿರಂಜಿತ ಅಕ್ವೇರಿಯಂ ಬೇಲಿ ಹೊಂದಿರುವ ಕಟ್ಟಡದ ಮಾಲಿಕರು. ಇವರು ತಮ್ಮ ಐಷಾರಾಮಿ ಬಂಗಲೆಯ ಮೆಟಲ್‌ ಬೇಲಿಯ ಬದಲಿಗೆ ಆಕರ್ಷಕ ಜೀವಂತ ಮೀನುಗಳಿರುವ ಅಕ್ವೇರಿಯಂ ಬೇಲಿಯನ್ನು ಅಳವಡಿಸಿದ್ದಾರೆ. ಈ ಬೇಲಿ ಪ್ರವಾಸಿಗರನ್ನು ಅತಿಯಾಗಿ ಆಕರ್ಷಿಸುತ್ತದೆ.
  3. ಶೂ ಆಕಾರದಲ್ಲಿರುವ ಮನೆ:
    ಶೂ ಅಂಗಡಿಯ ಮಾಲಿಕರಾದ ಕರ್ನಲ್‌ ಮಹ್ಲೋನ್‌ ಎಂ. ಹೈನ್‌ ಅನ್ನುವ ಮಿಲೇನಿಯರ್‌ ತಮ್ಮ ವೃತ್ತಿಜೀವನದ ಬಗ್ಗೆ ಹೆಮ್ಮೆಪಟ್ಟವರು ಶೂಗಳಂತೆ ಕಾಣುವ ಮನೆಯನ್ನು ನಿರ್ಮಿಸಲು ನಿರ್ಧರಿಸಿದರು. ಅದರಂತೆ ಯಾರ್ಕ್‌ ಕಂಟ್ರಿಯ ಪೆನ್ಸಲ್ವೇನಿಯಾ ದಲ್ಲಿ ಶೂ ಆಕೃತಿಯ ಮನೆಯನ್ನು ನಿರ್ಮಿಸಿದರು. ಇದಲ್ಲದೇ ತಮ್ಮ ಸಾಕು ನಾಯಿಗೂ ಸಹ ಶೂ ಆಕಾರದ ಮನೆಯನ್ನೇ ನಿರ್ಮಿಸಿಕೊಟ್ಟರು.
  4. ಜಗತ್ತಿನ ಅತಿ ಎತ್ತರದ ಮರದ ಮನೆ:
    ರಷ್ಯಾದ ಮಾಜಿ ದರೋಡೆಕೋರರಾಗಿದ್ದ ನಿಕೋಲಾಯ್‌ ಸುತ್ಯಾಗಿನ್‌ ಆಕಸ್ಮಿಕವಾಗಿ ವಿಶ್ವದ ಅತಿ ಎತ್ತರದ ಮರದ ಮನೆ ನಿರ್ಮಿಸಿದರು. ತಮ್ಮ ಅಕ್ಕಪಕ್ಕದ ಮನೆಗಳಿಗಿಂತ ತಮ್ಮ ಮನೆ ಎತ್ತರದಲ್ಲಿರಬೇಕು ಅನ್ನುವ ಆಲೋಚನೆ ಅವರದ್ದಾಗಿತ್ತು. ಈಗ ಮರದ ಮನೆ 13 ಫ್ಲೋರ್‌ಗಳಿರುವ 144 ಫೀಟ್‌ ಎತ್ತರದ ಮನೆಯಾಗಿದೆ.
  5. ಕಡಲುಗಳ್ಳರ ಥೀಮ್‌ನ ಐಲ್ಯಾಂಡ್‌ :
    ಒಬ್ಬ ಚಿಕ್ಕ ಹುಡುಗ ಯಾವಾಗಲೂ ತಾನು ದೊಡ್ಡವನಾದ ಮೇಲೆ ಆಸ್ಟ್ರೋನಾಟ್‌, ರೇಸ್ ಕಾರ್‌ ಡ್ರೈವರ್‌, ಪೊಲೀಸ್‌ ಆಫೀಸರ್‌ ಅಥವಾ ಕಡಲುಗಳ್ಳ ಹೀಗೆಲ್ಲಾ ಯೋಚಿಸುತ್ತಿದ್ದ. ಬ್ರಿಟೀಷ್‌ ಮಿಲೇನಿಯರ್‌ನ ಈ ಬಾಲ್ಯದ ಕನಸೇ ಮುಂದೆ ಕಡಲುಗಳ್ಳರ ಥೀಮ್‌ನ ಐಲ್ಯಾಂಡ ನಿರ್ಮಿಸುವಂತೆ ಮಾಡಿತು. ಇದು ಇಂಗ್ಲಿಷ್‌ ಕಂಟ್ರಿ ಎಸ್ಟೇಟ್‌ ಒಂದು ಸರೋವರದ ಮಧ್ಯೆ ನಿರ್ಮಿಸಿದ. ಇಂಗ್ಲೀಷ್‌ ಸಿನಿಮಾ ಪೈರೆಟ್ಸ್‌ ಆಫ್‌ ದ ಕೆರೆಬಿಯನ್‌ ಅನ್ನು ಅತಿಯಾಗಿ ಮೆಚ್ಚಿಕೊಂಡ ಈ ಮಿಲೇನಿಯರ್‌ ಆ ಸಿನಿಮಾದ ಜ್ಯಾಕ್‌ ಸ್ಪೆರೋ ರೀತಿಯಲ್ಲಿಯೇ ಉಡುಪು ಧರಿಸಿ ಅಲ್ಲಿ ರಜಾ ದಿನಗಳನ್ನು ಕಳೆಯುತ್ತಾರಂತೆ.

ಇದನ್ನೂ ಓದಿ : Places to Visit in Monsoon: ಮಳೆಗಾಲದಲ್ಲಿ ಭೇಟಿ ನೀಡಬೇಕಾದ ಕರ್ನಾಟಕದ ಟಾಪ್ 5 ಪ್ರವಾಸಿ ತಾಣಗಳು: ಪ್ರಕೃತಿ ಪ್ರಿಯರನ್ನು ಕೈಬೀಸಿ ಕರೆಯುವ ಈ ಸ್ಥಳಗಳಿಗೆ ನೀವೂ ಭೇಟಿ ನೀಡಿ!

ಇದನ್ನೂ ಓದಿ : Best Places In Bangalore: ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ ಬೆಂಗಳೂರಿನ ಈ ತಾಣಗಳು

(Crazy Structure Do you know some millionaires built crazy structures)

Comments are closed.