ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಸಮಯದಲ್ಲಿ ಬದಲಾವಣೆ

0

ಧರ್ಮಸ್ಥಳ : ರಾಜ್ಯದ ಪ್ರಮುಖ ಪುಣ್ಯಕ್ಷೇತ್ರಗಳಲ್ಲೊಂದಾಗಿರೋ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿರುವ ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರದ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಕ್ತರ ಅನುಕೂಲಕ್ಕೆ ದೇವರ ದರ್ಶನದ ಅವಧಿಯನ್ನು ಆಡಳಿತ ಮಂಡಳಿ ವಿಸ್ತರಣೆ ಮಾಡಿದೆ.

ಇಷ್ಟು ದಿನ ಬೆಳಗ್ಗೆ 6.30ರಿಂದ 11.30ರ ವರೆಗೆ, ಮಧ್ಯಾಹ್ನ 12.30 ರಿಂದ 2.30ರವರೆಗೆ ಹಾಗೂ ಮಧ್ಯಾಹ್ನ 2.30 ರಿಂದ 4 ಗಂಟೆಯವರೆಗೆ ದೇವಳದ ಬಾಗಿಲು ಬಂದ್ ಮಾಡಲಾಗುತ್ತಿತ್ತು. ನಂತರ ಸಂಜೆ 4.30ರಿಂದ 8.30ರ ವರೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿತ್ತು. ಆದ್ರೀಗ ಭಕ್ತರ ಸಂಖ್ಯೆ ಹೆಚ್ಚಳದ ಹಿನ್ನೆಲೆಯಲ್ಲಿ ಬೆಳಗ್ಗೆ 6.30ರಿಂದ ಮಧ್ಯಾಹ್ನ 2.30ರವರೆಗೆ ಹಾಗೂ ಸಂಜೆ 5 ಗಂಟೆಯಿಂದ ರಾತ್ರಿ 8.30ರ ವರೆಗೆ ಭಕ್ತರು ಮಂಜುನಾಥನ ದರ್ಶನ ಪಡೆಯಬಹುದು.

ಆದರೆ ಭಾನುವಾರ, ಸೋಮವಾರ ಮತ್ತು ವಿಶೇಷ ದಿನಗಳಂದು ಬೆಳಗ್ಗೆ 6.30ರಿಂದ ಮಧ್ಯಾಹ್ನ 4 ಗಂಟೆಯವರೆಗೆ ಹಾಗೂ ಸಂಜೆ 5.30 ರಿಂದ 9 ಗಂಟೆಯ ವರೆಗೂ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರ ಅನುಕೂಲಕ್ಕೆ ದೇವರ ದರ್ಶನದ ಅವಧಿಯನ್ನು ಹೆಚ್ಚಿಸಲಾಗಿದ್ದು, ಭಕ್ತರು ಸಹಕರಿಸುವಂತೆ ಆಡಳಿತ ಮಂಡಳಿ ವಿನಂತಿಸಿಕೊಂಡಿದೆ.

Leave A Reply

Your email address will not be published.