ಫ್ಯಾಂಟಮ್ ಗೆ ಶ್ರದ್ಧಾ ಶ್ರೀನಾಥ್ ನಾಯಕಿ

0

ಇತ್ತೀಚಿಗೆ ಸಾಕಷ್ಟು ಸದ್ದು ಮಾಡ್ತಿರೋ ವಿಷಯ ಫ್ಯಾಂಟಮ್… ಫ್ಯಾಂಟಮ್… ಫ್ಯಾಂಟಮ್… ಹೌದು, ಚಂದನವನದಲ್ಲಿ ಸಾಕಷ್ಟು ಸದ್ದು ಮಾಡ್ತಿರೋ ಫ್ಯಾಂಟಮ್ ಸಿನಿಮಾ.

ಕಿಚ್ಚ ಸುದೀಪ್ ಚಿತ್ರದಲ್ಲಿ ತನ್ನ ಕ್ಯಾರೆಕ್ಟರ್ ಹೆಸರು ಮತ್ತು ಲುಕ್ ಬಗ್ಗೆ ವಿಷಯ ರಿವೀಲ್ ಮಾಡಿದ್ದು, ಎಲ್ಲಾ ಕಡೆ ಬಾರೀ ಸುದ್ದಿಯಾಗಿತ್ತು.

ಇದೀಗ ಹೊಸ ಸುದ್ದಿ ಅಂದರೆ ಕಿಚ್ಚನಿಗೆ ನಾಯಕಿಯಾಗಿ ಯಾರು ಆಯ್ಕೆಯಾಗ್ತಾರೆ ಎಂಬ ಕುತೂಹಲಕ್ಕೆ ತೆರೆಬಿದ್ದಿದ್ದು, ಕನ್ನಡದ ಹುಡುಗಿ ಶ್ರದ್ಧಾ ಶ್ರೀನಾಥ್ ಆಯ್ಕೆಯಾಗಿದ್ದಾರೆ.

ತೆಲುಗು ತಮಿಳು ಪ್ರಾಜೆಕ್ಟ್ ಗಳಲ್ಲಿ ಬ್ಯೂಸಿಯಾಗಿರೋ ಶ್ರದ್ಧಾ ಶ್ರೀನಾಥ್, ಸದ್ಯಕ್ಕೆ ಸತೀನ್ ನಿನಾಸಂ ಅಭಿನಯದ ಗೋದ್ರಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ತೆರೆಗೆ ಬರಲು ರೆಡಿಯಾಗಿ ನಿಂತಿದೆ.


ಫ್ಯಾಂಟಮ್ ಸಿನಿಮಾಕ್ಕೆ ನಾಯಕಿಯಾಗಿ ಕಿಚ್ಚನ ಜೊತೆಯಾಗಿ ಮೊದಲ ಬಾರಿ ತೆರೆ ಹಂಚಿಕೊಳೇಳಲಿರೋ ಖುಷಿಯಲ್ಲಿದ್ದಾರೆ ಶ್ರದ್ಧಾ.

ಚಂದನವನದಲ್ಲಿ ಭರವಸೆಯ ನಾಯಕಿಯರಲ್ಲೊಬ್ಬರಾದ ಶ್ರದ್ಧಾ ಈ ಚಿತ್ರಕ್ಕೆ ಆಯ್ಕೆಯಾಗಿರೋದು ಕಿಚ್ಚನ ಅಭಿಮಾನಿಗಳಲ್ಲಿ ಸಹ ಸಾಕಷ್ಟು ಖುಷಿತಂದಿದೆ.

ಕಿಚ್ಚನ ಜೊತೆ ಸ್ಕ್ರೀನ್ ಮೇಲೆ ಶ್ರದ್ದಾ ಶ್ರೀನಿವಾಸ್ ಕೆಮಿಸ್ಟ್ರೀ ಲೆ ನೋಡಲು ಅಭಿಮಾನಿಗಳು ಕಾತುರತೆಯಿಂದ ಕಾಯ್ತಿದ್ದಾರೆ.

ನಟಿ ಶ್ರದ್ದಾ ಶ್ರೀನಾಥ್

ಪ್ಯಾಂಟಮ್ ಬೆಡಗಿ ಶ್ರದ್ದಾ ಶ್ರೀನಾಥ್

ಚಿತ್ರಗಳು : ಶ್ರದ್ದಾ ಶ್ರೀನಾಥ್ ಇನ್ಸ್ಟಾಗ್ರಾಮ್ ಪೇಜ್

Leave A Reply

Your email address will not be published.