ರೈತನ ಮಗಳು ಈಗ ಐಎಎಸ್ ಅಧಿಕಾರಿ: ಯುಪಿಎಸ್‌ಸಿಯಲ್ಲಿ ಮಿಂಚಿದ ಅನಿತಾ ಡಿಯೋರಾ!
Rajasthans Anita Deora IAS | UPSC Results 2026: ಕಠಿಣ ಪರಿಶ್ರಮ ಮತ್ತು ಛಲವಿದ್ದರೆ ಎಂತಹ ಗುರಿಯನ್ನಾದರೂ ತಲುಪಬಹುದು ಎಂಬುದಕ್ಕೆ ರಾಜಸ್ಥಾನದ ಭೋಪಾಲ್‌ಗಢದ ಅನಿತಾ ಡಿಯೋರಾ ಸಾಕ್ಷಿಯಾಗಿದ್ದಾರೆ. ಇಂದು ಪ್ರಕಟವಾದ 2025ರ ಯುಪಿಎಸ್‌ಸಿ (UPSC) ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶದಲ್ಲಿ ಅನಿತಾ 644ನೇ ರ್ಯಾಂಕ್ ಪಡೆಯುವ ಮೂಲಕ ಐಎಎಸ್ (IAS) ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.
ಹೊಲದಲ್ಲಿ ಕೆಲಸ ಮಾಡುತ್ತಲೇ ಮಗಳ ಓದಿಗೆ ಆಸರೆಯಾದ ತಾಯಿ
ಅನಿತಾ ಅವರ ತಂದೆ ಒಬ್ಬ ಸಾಮಾನ್ಯ ರೈತ. ಮಗಳ ಶಿಕ್ಷಣಕ್ಕಾಗಿ ಅವರ ತಾಯಿ ನೀಡಿದ ಬೆಂಬಲ ನಿಜಕ್ಕೂ ಶ್ಲಾಘನೀಯ. ತಾಯಿ ಸ್ವತಃ ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರೂ, ಮಗಳ ಓದಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡಿದ್ದರು. ಅಷ್ಟೇ ಅಲ್ಲದೆ, ಹೆಚ್ಚಿನ ವ್ಯಾಸಂಗಕ್ಕಾಗಿ ಅನಿತಾ ಅವರನ್ನು ದೆಹಲಿಗೆ ಕಳುಹಿಸಿ ಆರ್ಥಿಕವಾಗಿ ಬೆನ್ನೆಲುಬಾಗಿ ನಿಂತಿದ್ದರು.
12ನೇ ತರಗತಿಯಲ್ಲೇ ಚಿಗುರಿತ್ತು ಐಎಎಸ್ ಕನಸು
ಭೋಪಾಲ್‌ಗಢದ ಸೈನಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಅನಿತಾ, 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಇಡೀ ಬ್ಲಾಕ್ ಮಟ್ಟಕ್ಕೆ ಟಾಪ್ ಬಂದಿದ್ದರು. ಅಂದೇ ಅವರು ನಾಗರಿಕ ಸೇವೆಗೆ ಸೇರಬೇಕೆಂದು ನಿರ್ಧರಿಸಿದ್ದರು. ಅವರ ಕುಟುಂಬದಲ್ಲಿ ಈಗಾಗಲೇ ನಿವೃತ್ತ ಐಎಎಸ್ ಅಧಿಕಾರಿ ಚೇತನ್ ದೇವದಾ ಅವರಂತಹ ಸಾಧಕರಿದ್ದು, ಅವರ ಮಾರ್ಗದರ್ಶನವೂ ಅನಿಲಾಗೆ ದೊರೆತಿತ್ತು.
ಭೀಕರ ಅಪಘಾತ-ಕಾರಿನ ಏರ್‌ಬ್ಯಾಗ್ ಬ್ಲಾಸ್ಟ್ ..? ಮ್ಯಾಕ್ಸ್ ಇನ್ಪೋಟೆಕ್ ಸಂಸ್ಥಾಪಕ ಮುಕೇಶ್ ಶೆಟ್ಟಿ ಸಾವು
ಯುಪಿಎಸ್‌ಸಿ 2025ರ ಫಲಿತಾಂಶದ ಮುಖ್ಯಾಂಶಗಳು:
-
ಈ ಬಾರಿ ಒಟ್ಟು 958 ಅಭ್ಯರ್ಥಿಗಳನ್ನು ಐಎಎಸ್, ಐಎಫ್‌ಎಸ್ ಮತ್ತು ಐಪಿಎಸ್‌ನಂತಹ ಉನ್ನತ ಸೇವೆಗಳಿಗೆ ಶಿಫಾರಸು ಮಾಡಲಾಗಿದೆ.
-
ಅನಿತಾ ಅವರ ಈ ಯಶಸ್ಸು ಕೇವಲ ಅವರ ಕುಟುಂಬಕ್ಕೆ ಮಾತ್ರವಲ್ಲದೆ, ಇಡೀ ಜೋಧಪುರ ಜಿಲ್ಲೆಗೆ ಹೆಮ್ಮೆ ತಂದಿದೆ.
-
ಜನವರಿ 2026 ರಲ್ಲಿ ನಡೆದ ವ್ಯಕ್ತಿತ್ವ ಪರೀಕ್ಷೆಯ (Personality Test) ನಂತರ ಈ ಅಂತಿಮ ಪಟ್ಟಿ ಬಿಡುಗಡೆಯಾಗಿದೆ.
ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಅನಿತಾ ಅವರ ಸಾಧನೆ ಈಗ ದೊಡ್ಡ ಪ್ರೇರಣೆಯಾಗಿದೆ. “ಕನಸು ಕಾಣುವ ಧೈರ್ಯವಿದ್ದರೆ, ಅದನ್ನು ನನಸು ಮಾಡುವ ದಾರಿ ತಾನಾಗಿಯೇ ಹುಡುಕಿಕೊಂಡು ಬರುತ್ತದೆ” ಎಂಬ ಮಾತನ್ನು ಅನಿತಾ ನಿಜವಾಗಿಸಿದ್ದಾರೆ.
[youtube https://www.youtube.com/watch?v=BF3S77yo5RA]



