Hanuman Jayanti 2022: ಹನುಮ ಜಯಂತಿಯ ಮಹತ್ವ ಮತ್ತು ಪೂಜಾ ವಿಧಾನ

(Hanuman Jayanti 2022) ಈ ದೇಶದಲ್ಲಿ ನಾವು ಹಲವಾರು ಹಬ್ಬಗಳನ್ನು ಆಚರಿಸುತ್ತೇವೆ. ಹಿಂದೂಗಳು ಆಚರಿಸುವ ಅಂತಹ ಹಲವು ಹಬ್ಬಗಳಲ್ಲಿ ಹನುಮ ಜಯಂತಿಯೂ ಒಂದು. ಈ ದಿನದಂದು ಜನರು ಭಜರಂಗ ಬಲಿ ಎಂದು ಕರೆಯಲ್ಪಡುವ ಹನುಮಂತನನ್ನು ಪೂಜಿಸುತ್ತಾರೆ. ನಾವೆಲ್ಲರೂ ರಾಮಾಯಣದ ಕಥೆಗಳನ್ನು ಮತ್ತು ಹನುಮಂತನ ರಾಮನ ಭಕ್ತಿಯ ಕಥೆಯನ್ನು ಕೇಳಿದ್ದೇವೆ. ದ್ರೋಣಗಿರಿ ಪರ್ವತವನ್ನು ಎತ್ತುವುದರಿಂದ ಹಿಡಿದು ಲಂಕಾದಿಂದ ಸೀತೆಯನ್ನು ಮರಳಿ ಕರೆತರುವವರೆಗೆ ರಾಮನಿಗೆ ತನ್ನ ಜೀವನದುದ್ದಕ್ಕೂ ಹನುಮಂತ ಸಹಾಯ ಮಾಡಿರುವುದು ಎಲ್ಲರಿಗೂ ತಿಳಿದಿದೆ.

ಇತ್ತೀಚೆಗಷ್ಟೇ ಹನುಮಾನ ಜಯಂತಿ (Hanuman Jayanti 2022) ಆಚರಣೆಯಾಗಿತ್ತು, ಇದೇನಿದು ಮತ್ತೆ ಎಂದು ಸಾಮಾನ್ಯವಾಗಿ ಎಲ್ಲರಿಗೂ ಗೊಂದಲ ಉಂಟಾಗುತ್ತದೆ. ಆದರೆ ಅದು ಉತ್ತರ ಭಾರತೀಯ ಹನುಮಾನ್ ಜಯಂತಿ ಆಗಿದ್ದು, ಕರ್ನಾಟಕದಲ್ಲಿ ಹನುಮ ಜಯಂತಿಯನ್ನು ಮಾರ್ಗಶಿರ ಮಾಸದ ಶುಕ್ಲ ಪಕ್ಷ ತ್ರಯೋದಶಿಯಂದು ಆಚರಣೆ ಮಾಡಲಾಗುತ್ತದೆ. ಧರ್ಮ ಗ್ರಂಥಗಳ ಪ್ರಕಾರ ಇಂದು ಹನುಮ ಜನಿಸಿದ ದಿನ. ಈ ಹನುಮನನ್ನ ಶಿವನ 11ನೇ ಅವತಾರ ಎಂದು ಸಹ ನಂಬಲಾಗುತ್ತದೆ. ರಾಮನಿಗಾಗಿ ತನ್ನ ಜೀವನವನ್ನೇ ಮುಡಿಪಿಟ್ಟ ಹನುಮ, ದುಷ್ಟ ಶಕ್ತಿಗಳಿಗೆ ದು:ಸ್ವಪ್ನನಾಗಿ ಕಾಡಿದ್ದ ಎನ್ನಬಹುದು.

ಹನುಮ ಜಯಂತಿ 2022: ಪೂಜಾ ವಿಧಿ
ಅಲ್ಲದೇ ಈ ದಿನ ತುಪ್ಪದಲ್ಲಿ ಅಥವಾ ಸಾಸಿವೆ ಎಣ್ಣೆಯಲ್ಲಿ ದೀಪಗಳನ್ನು ಹಚ್ಚಿ, ಇಷ್ಟಾರ್ಥ ಈಡೇರಿಸುವಂತೆ ಬೇಡಿಕೊಳ್ಳುತ್ತಾರೆ. ವಿಶೇಷವಾಗಿ ಹನುಮ ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡಿಸುತ್ತಾರೆ. ಮತ್ತೊಂದು ಮುಖ್ಯವಾದ ವಿಚಾರ ಎಂದರೆ ಈ ದಿನ ಹನುಮಾನ್ ಚಾಲೀಸ್ ಜೊತೆಗೆ ಜಾತಕದಲ್ಲಿ ಶನಿ ದೋಷ ಇದ್ದರೆ, ಸುಂದರಕಾಂಡವನ್ನು ಸಹ ಪಠಿಸಬೇಕು ಎಂದು ಹಿರಿಯರು ಹೇಳುತ್ತಾರೆ. ಹನುಮ ಜಯಂತಿಯಂದು ಮಲ್ಲಿಗೆ ಎಣ್ಣೆ ಹಾಗೂ ತುಪ್ಪದಲ್ಲಿ ಕುಂಕುಮವನ್ನು ಮಿಶ್ರಣ ಮಾಡಿ ಹನುಮನಿಗೆ ಹಚ್ಚಿದರೆ, ನಿಮ್ಮ ಕಷ್ಟಗಳನ್ನು ನಿವಾರಿಸುತ್ತಾನೆ ಎಂದು ನಂಬಲಾಗಿದೆ. ಹಾಗೆಯೇ ಮನೆಯಲ್ಲಿ ಸುಖ-ಶಾಂತಿ, ನೆಮ್ಮದಿ ನೆಲೆಸಿರುವಂತೆ ನೋಡಿಕೊಳ್ಳುತ್ತಾನೆ ಎನ್ನುತ್ತಾರೆ.

ಇದನ್ನೂ ಓದಿ : KamalaShile kshethra part-2: ಕಮಲಶಿಲೆ ದೇವಾಲಯದ ಪ್ರಾಮುಖ್ಯತೆ ಹಾಗೂ ಅಚರಣೆಗಳ ವಿವರ ನಿಮಗಾಗಿ..

ಇದನ್ನೂ ಓದಿ : Marikanu Temple: ಹಾಲಾಡಿ ಮಾರಿಕಾನು ದೇವಸ್ಥಾನದ ಜೀರ್ಣೋದ್ಧಾರ: ಮುಷ್ಠಿ ಕಾಣಿಕೆ ಸಮರ್ಪಣೆ

ಹನುಮ ಜಯಂತಿ 2022: ಮಹತ್ವ
ಹಿಂದೂ ನಂಬಿಕೆಯ ಪ್ರಕಾರ, ಹನುಮ ದೇವರು ಶಕ್ತಿ, ಧೈರ್ಯ, ಪರಿಶ್ರಮ ಮತ್ತು ಭಕ್ತಿಯ ಸಂಕೇತವಾಗಿದೆ. ಹನುಮಂತನು ರಾಮನ ಮೇಲೆ ಅತಿಯಾದ ಶ್ರದ್ಧೆ ಹಾಗೂ ಭಕ್ತಿ ಹೊಂದಿದ್ದರು. ಅತ್ಯಂತ ಕಷ್ಟದ ಸಮಯದಲ್ಲಿಯೂ ತನ್ನ ರಾಮನನ್ನು ಬಿಟ್ಟು ಕೊಡಲಿಲ್ಲ. ರಾವಣನು ಸೀತೆಯನ್ನು ಅಪಹರಿಸಿದ ನಂತರ ಲಂಕೆಯಿಂದ ಸೀತೆಯನ್ನು ಮರಳಿ ಕರೆತರುವಲ್ಲಿ ಅವನು ಪ್ರಮುಖ ಪಾತ್ರ ವಹಿಸಿದನು. ಭಗವಾನ್ ಹನುಮಂತನಿಂದ ನಾವು ತಾಳ್ಮೆಯ ಬಗ್ಗೆ ಕಲಿಯುತ್ತೇವೆ. ನಮ್ಮ ದಾರಿಯಲ್ಲಿ ಬರುವ ಎಲ್ಲಾ ತೊಂದರೆಗಳು ಮತ್ತು ಅಡೆತಡೆಗಳನ್ನು ಜಯಿಸುವುದನ್ನು ಅವನು ನಮಗೆ ಕಲಿಸುತ್ತಾನೆ ಮತ್ತು ನಮ್ಮ ಗುರಿಗಳನ್ನು ಮುಟ್ಟಲು ನಮಗೆ ಮಾರ್ಗದರ್ಶನ ನೀಡುತ್ತಾನೆ.

(Hanuman Jayanti 2022) We celebrate many festivals in this country. Hanuman Jayanti is one of the many such festivals celebrated by Hindus. On this day people worship Lord Hanuman known as Bajranga Bali. We have all heard the stories of Ramayana and Hanuman’s devotion to Rama.

Comments are closed.