Indrani Shakthi peeta: ಉಡುಪಿಯ ಶಕ್ತಿ ಪೀಠಗಳಲ್ಲೊಂದಾದ ಇಂದ್ರಾಣಿ ಶಕ್ತಿಪೀಠದ ಬಗ್ಗೆ ಒಂದಿಷ್ಟು ಮಾಹಿತಿ ನಿಮ್ಮ ಮುಂದೆ…

(Indrani Shakthi peeta) ಕರ್ನಾಟಕದ ಕರಾವಳಿ ತೀರದಲ್ಲಿರುವ ಒಂದು ಪ್ರಖ್ಯಾತ ಪ್ರವಾಸಿ ತಾಣ ಉಡುಪಿ. ಉಡುಪಿಯು ಕೇವಲ ಕಡಲ ತೀರಗಳಿಂದಾಗಿ ಮಾತ್ರವಲ್ಲದೆ ಧಾರ್ಮಿಕವಾಗಿಯೂ ಪ್ರಸಿದ್ಧಿ ಪಡೆದ ಕರ್ನಾಟಕದ ಪ್ರಮುಖ ನಗರಗಳಲ್ಲೊಂದು. ಉಡುಪಿಯು ಮೂಲತಃ ಶ್ರೀಕೃಷ್ಣ ಮಠದಿಂದಾಗೆ ದೇಶದಲ್ಲೆ ಸಾಕಷ್ಟು ಪ್ರಸಿದ್ಧಿಗಳಿಸಿದ ಧಾರ್ಮಿಕ ಕೇಂದ್ರವಾಗಿದೆ. ಉಡುಪಿಯಲ್ಲಿ ಸಾಕಷ್ಟು ಇತರೆ ದೇವಾಲಯಗಳಿದ್ದು, ಎಲ್ಲವೂ ವಿಶೇಷ ಹಾಗೂ ಮಹತ್ವವುಳ್ಳ ದೇವಾಲಯಗಳೇ ಆಗಿವೆ. ಅಂತೆಯೆ ಕರ್ನಾಟಕದಲ್ಲಿ ಉಡುಪಿಯನ್ನು ದೇವಾಲಯಗಳ ಪಟ್ಟಣ ಎಂದೆ ಕರೆಯುತ್ತಾರೆ. ಅಲ್ಲದೆ ಉಡುಪಿಯು ತನ್ನದೆ ಆದ ಕೆಲವು ವಿಶೇಷ ಶಕ್ತಿಪೀಠಗಳಿಂದಾಗಿ ಪ್ರವಾಸಿಗರ ಗಮನಸೆಳೆಯುತ್ತದೆ. ಕೆಲವು ಶಕ್ತಿಪೀಠಗಳಲ್ಲೊಂದಾಗಿದೆ ನಾನು ತಿಳಿಸಲು ಹೊರಟ ಇಂದ್ರಾಣಿ ಶಕ್ತಿಪೀಠ.

ಸಾಕಷ್ಟು ಐತಿಹಾಸಿಕ ಶ್ರೀಮಂತಿಕೆಯನ್ನು ಪಡೆದ ಸ್ಥಳ (Indrani Shakthi peeta) ಇದಾಗಿದ್ದು, ಇಲ್ಲಿರುವ ಶಕ್ತಿ ದೇವಿಯ ದೇವಾಲಯವನ್ನೆ ಇಂದ್ರಾಣಿ ಶಕ್ತಿಪೀಠ ಎಂದು ಕರೆಯುತ್ತಾರೆ. ಈ ದೇವಾಲಯವು ಸಾಕಷ್ಟು ಪುರಾತನವಾದ ದೇವಾಲಯಲಗಳಲ್ಲಿ ಒಂದಾಗಿದೆ. ಸುಮಾರು ಹನ್ನೊಂದನೇಯ ಶತಮಾನದಲ್ಲಿ ನಿರ್ಮಾಣಗೊಂಡ ದೇವಾಲಯ ಇದಾಗಿದೆ ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ. ಆದರೆ ಪ್ರಸ್ತುತ ದೇವಾಲಯವು ನವೀಕರಣಗೊಂಡಿದ್ದು, ಹೊಸ ಮಾದರಿಯಲ್ಲಿ ರಚನೆಗೊಂಡಿದೆ.

Indrani Shakthi Peeta: Here is some information about Indrani Shakthi Peetha, one of the Shakti Peethas of Udupi...

ಈ ದೇವಾಲಯವನ್ನು 1993 ರಲ್ಲಿ ಪುನರ್ ನಿರ್ಮಾಣ ಮಾಡಲಾಗಿದೆ. ನೇಪಾಳದ ಪ್ರಖ್ಯಾತ ಪಶುಪತಿನಾಥ ದೇವಾಲಯದ ಮಾಜಿ ಮುಖ್ಯ ಅರ್ಚಕರಾದ ರಾವಲ್ ಪದ್ಮನಾಭ ಶಾಸ್ತ್ರಿಯವರ ಮಾರ್ಗದರ್ಶನದಲ್ಲಿ ಈ ದೇವಾಲಯದ ನವೀನ ಮಾದರಿಯನ್ನು ನಿರ್ಮಿಸಲಾಗಿದೆ. ಇಂದ್ರಾಣಿಯನ್ನು ವೇದ-ಪುರಾಣಗಳಲ್ಲಿ ಅವಲೋಕನ ಮಾಡಿ ನೋಡಿದಾಗ, ಸಪ್ತ ಮಾತೃಕೆಯರಲ್ಲೊಬ್ಬಳಾದ ದೇವಿಯಾಗಿ ಇಂದ್ರಾಣಿ ದೇವತೆ ಕಂಡುಬರುತ್ತಾಳೆ. ತದನಂತರ ಮುಂದಿನ ಗ್ರಂಥಾದಿಗಳಲ್ಲಿ ಇಂದ್ರಾಣಿಯನ್ನು ಶಕ್ತಿಯ ದ್ಯೋತಕವಾಗಿ ವಿವರಿಸಲಾಗಿದೆ. ಪ್ರಬುದ್ಧ ಶಕ್ತಿ ಮಾತೆಯಾಗಿಯೂ, ಕೆಲವು ಕಥೆಗಳಲ್ಲಿ ಪುರಾಣದ ಪುಟಗಳಲ್ಲಿ ದುರ್ಗಾ ದೇವಿಯ ಅವತಾರವಾಗಿಯೂ ಇಂದ್ರಾಣಿಯನ್ನು ವರ್ಣಿಸಲಾಗಿದೆ.

Indrani Shakthi Peeta: Here is some information about Indrani Shakthi Peetha, one of the Shakti Peethas of Udupi...

ಪ್ರಸ್ತುತ ಇಂದ್ರಾಣಿ ದೇವಾಲಯದಲ್ಲಿ ಐದು ಶಿವಲಿಂಗಗಳಿದ್ದು ಪಂಚದುರ್ಗೆಯರನ್ನು ಅದು ಪ್ರತಿನಿಧಿಸುತ್ತದೆ. ಅಲ್ಲದೆ ಈ ಶಿವಲಿಂಗಗಳ ಹಿಂಭಾಗದಲ್ಲಿ ವನದುರ್ಗೆಯ ವಿಗ್ರಹವಿರುವುದನ್ನು ನಾವು ನೀವುಗಳು ಕಾಣಬಹುದು. ಸಾಕಷ್ಟು ವಿಶೇಷತೆಯ ದೇವಾಲಯ ಇದಾಗಿದ್ದು, ನವರಾತ್ರಿಯ ಸಂದರ್ಭದಲ್ಲಿ ಭಕ್ತ ಸಾಗರವೆ ಇಲ್ಲಿಗೆ ಹರಿದುಬರುತ್ತದೆ. ಈ ದೇವಾಲಯ ಇರುವುದು ಬೇರೆಲ್ಲೂ ಅಲ್ಲ, ನಮ್ಮ ಉಡುಪಿಯ ಸಮೀಪದ ಮಣಿಪಾಲ ಎನ್ನುವಲ್ಲಿ. ಇದೇ ಇಂದ್ರಾಣಿ ಪಂಚದುರ್ಗಾ ಪರಮೇಶ್ವರಿ ದೇವಾಲಯ.

Indrani Shakthi Peeta: Here is some information about Indrani Shakthi Peetha, one of the Shakti Peethas of Udupi...

ಇಲ್ಲಿಗೆ ತಲುಪುವ ಮಾರ್ಗ:
ಉಡುಪಿಯು ಒಂದು ಪ್ರಮುಖ ಪ್ರವಾಸಿ ಕೆಂದ್ರವಾಗಿರುವುದರಿಂದ ಕರ್ನಾಟಕದ ಪ್ರಮುಖ ನಗರಗಳಿಂದ ಸುಲಭವಾಗಿ ತಲುಪಬಹುದು. ಬೆಂಗಳೂರು, ಮಂಗಳೂರು ಮುಂತಾದ ನಗರಗಳಿಂದ ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳೆರಡೂ ಉಡುಪಿಗೆ ತೆರಳಲು ದೊರೆಯುತ್ತವೆ. ಉಡುಪಿ ನಗರ ಕೇಂದ್ರ ಭಾಗದಿಂದ ಪೂರ್ವಕ್ಕೆ ಎರಡು ಕಿ.ಮೀ ಸಾಗಿದರೆ ಕುಂಜಿಬೆಟ್ಟು ಎಂಬ ಸ್ಥಳವು ದೊರೆಯುತ್ತದೆ. ವೇದಾಚಲ ಅಂದರೆ ಇಂದಿನ ಮಣಿಪಾಲದ ಪಶ್ಚಿಮಕ್ಕೆ ಈ ಪ್ರದೇಶವಿದೆ.

ಇದನ್ನೂ ಓದಿ : Kroda Shankaranarayan: ಕ್ರೋಢಮುನಿ ತಪಸ್ಸನ್ನಾಚರಿಸಿದ ಕ್ಷೇತ್ರದ ಬಗ್ಗೆ ನಿಮಗೆಷ್ಟು ಗೊತ್ತು..?

ಇದನ್ನೂ ಓದಿ : Guddattu shri vinayaka temple: ಕಲ್ಲು ಬಂಡೆಯ ನಡುವೆ ಮೂಡಿಬಂದ ಬಲಮುರಿ ಗಣಪ

ಇಂದ್ರಾಣಿ ಪಂಚದುರ್ಗಾ ಪರಮೇಶ್ವರಿ ದೇವಾಲಯದ ಇನ್ನಷ್ಟು ಮಾಹಿತಿಗಳೊಂದಿಗೆ ಇನ್ನೊಂದು ಭಾಗದಲ್ಲಿ ನಿಮಗೆ ತಿಳಿಸುವೆ.

(Indrani Shakthi peeta) Udupi is a famous tourist destination on the coast of Karnataka. Udupi is one of the important cities of Karnataka which is famous not only for its beaches but also for its religion. Udupi is originally a religious center which has become quite famous in the country for its Sri Krishna Math.

Comments are closed.