karijenshwara temple : ಶಿವ-ಪಾರ್ವತಿ ಧರೆಗಿಳಿದು ಬಂದ ಪವಿತ್ರ ಸ್ಥಳ ಕಾರಿಂಜೇಶ್ವರ

ಮಂಗಳೂರು :ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾವಳ ಮುಡೂರು ಗ್ರಾಮದಲ್ಲಿ ಸಮುದ್ರ ಮಟ್ಟದಿಂದ ಸುಮಾರು ಒಂದು ಸಾವಿರ ಅಡಿಗೂ ಮಿಕ್ಕಿ ಎತ್ತರದಲ್ಲಿರುವುದೇ ಶಿವ ಪಾರ್ವತಿಯರ ಮಿಲನದ ಆಕರ್ಷಣೀಯ ಆರಾಧನಾ ತಾಣ ಮಹತೋಭಾರ ಕಾರಿಂಜೇಶ್ವರ ದೇವಸ್ಥಾನ(karijenshwara temple). ತಾಲೂಕು ಕೇಂದ್ರ ಬಿ.ಸಿ. ರೋಡಿನಿಂದ 15 ಕಿ.ಮೀ ದೂರ ಇರುವ ಈ ಕ್ಷೇತ್ರಕ್ಕೆ ಬಂಟ್ವಾಳ-ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ಮುಂದೆ ಸಾಗಿದಾಗ ವಗ್ಗದಲ್ಲಿ ದೇಗುಲದ ಮಹಾಧ್ವಾರ ಕೈಬೀಸಿ ಸ್ವಾಗತಿಸುತ್ತದೆ. ಇದರೊಳಗಡಿಯಿಟ್ಟು ಕೇವಲ 2.4 ಕಿ.ಮೀ ಅಂತರ ಇಕ್ಕೆಲಗಳ ಕಾನನದ ನಡುವೆ ತಂಗಾಳೀಗೆ ಮೈಯೊಡ್ಡಿ ಸಾಗಿದರೆ ಮೇಲೆ ಕಾಣುವುದೇ ಕಾರಿಂಜ ಗಿರಿ.

ಮಾತೃ ಶಕ್ತಿಯ ಕೇಂದ್ರವಾಗಿ ಪಾರ್ವತಿ ದೇವಿ ಮತ್ತು ಪಿತೃ ಶಕ್ತಿಯ ಸಂಕೇತವಾಗಿ ಪರಮೇಶ್ವರ ಧರೆಗೆ ಇಳಿದ ಕ್ಷೇತ್ರವೆಂದೇ ಪ್ರಸಿದ್ದಿ ಪಡೆದಿರುವ ಇಲ್ಲಿ ಪರಮೇಶ್ವರ ಗಿರಿಯ ತುದಿಯಲ್ಲಿದ್ದರೆ, ಪಾರ್ವತಿ ದೇವಿ ಗಿರಿಯ ಮಧ್ಯಭಾಗದಲ್ಲಿ ಅಂದರೆ ಪರಮೇಶ್ವರನ ಗರ್ಭಗುಡಿಗಿಂತ ಸುಮಾರು ನೂರೈವತ್ತು ಅಡಿಗಳಷ್ಟು ಕೆಳಗೆ ನೆಲೆಯಾಗಿದ್ದಾಳೆ. ತೀರ್ಥಸ್ನಾನಾದಿ ಸಂಭ್ರಮ, ಶಿವಪಾರ್ವತಿಯರ ಮಿಲನದ ವೈಭವ, ಬಂಡೆಕಲ್ಲುಗಳ ಮೇಲಿನ ಪಯಣ‌ ಹೀಗೆ ನೂರಾರು ವೈವಿಧ್ಯತೆಗಳ ಸಂಗಮವಾಗಿ ಕಾರಿಂಜ ಇಂದು ನಾಡಿನ ಐತಿಹಾಸಿಕ ಹಿನ್ನಲೆಯ ಆಕರ್ಷಣೀಯ ಆರಾದನಾ ಕೇಂದ್ರವಾಗಿದೆ.

ಇಲ್ಲಿನ ಇನ್ನೊಂದು ಪ್ರಮುಖ ಆಕರ್ಷಣೆ ವಾನರ ನೈವೇದ್ಯ ಭಕ್ಷಣೆ. ದೇವರಿಗೆ ಪೂಜೆಯಾದ ಬಳಿಕ ಇಲ್ಲಿ ವಾಸ್ತವ್ಯ ಇರುವ ವಾನರಿಗೆ ಮೂರು ಸೇರು ಅಕ್ಕಿಯ ನೈವೇದ್ಯವನ್ನು ದೊಡ್ಡದಾದ ಬಂಡೆಕಲ್ಲಿನ ಮೇಲೆ ಹಾಕಲಾಗುತ್ತದೆ. ಪೂಜೆಯಾಗುವ ಹೊತ್ತಿಗೆ ಅವುಗಳ ಗುಂಪು ಬಂದು ನೈವೇದ್ಯವನ್ನು ಸ್ವೀಕರಿಸುವ ಸೊಗಸನ್ನು ಕಾಣಬಹುದು

ಇದನ್ನು ಓದಿ : ಇಡಗುಂಜಿ : ಬಾಲರೂಪದಲ್ಲಿ ನೆಲೆ ನಿಂತಿದ್ದಾನೆ ಗಣೇಶ : ಕಡ್ಲೇಕಾಳಿನ ಪ್ರಸಾದವೇ ಈತನಿಗೆ ಪ್ರಿಯ

ಇದನ್ನೂ ಓದಿ : Varadahalli Sridhara Swami Ashram : ಪಾಪವಿನಾಶಿ ತೀರ್ಥ : ಭಕ್ತರ ಪಾಲಿಸುವ ಶ್ರೀಕ್ಷೇತ್ರ : ಭಕ್ತರ ಪಾಲಿಗೆ ಕಾಮಧೇನು ವರದಹಳ್ಳಿ ಶ್ರೀಧರಾಶ್ರಮ

ಇದನ್ನೂ ಓದಿ : Nagaraja temple : ನಾಗದೋಷ, ಕಾಳಸರ್ಪ ದೋಷವನ್ನುನಿವಾರಣೆ ಮಾಡ್ತಾನೆ ನಾಗರಾಜ : ಇಲ್ಲಿ ಭಕ್ತರನ್ನು ಕಾಯುತ್ತೆ 30 ಸಾವಿರ ಸರ್ಪಗಳು

ಇದನ್ನೂ ಓದಿ : Sahasra lingeshwara Temple : ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರನ ವೈಭವದ ಬಗ್ಗೆ ಇಲ್ಲಿದೆ ಮಾಹಿತಿ

know about famous karijenshwara temple

Comments are closed.