Walnut Benefits During Pregnancy: ಪ್ರಗ್ನೆನ್ಸಿ ಮತ್ತು ವಾಲ್ನಟ್‌; ನಿಮ್ಮ ಮಗುವಿನ ಬೆಳವಣಿಗೆಗೆ ಇದು ಸೂಪರ್‌ ಫುಡ್‌

ಮಹಿಳೆಯರ ಜೀವನದಲ್ಲಿ ಗರ್ಭಾವಸ್ಥೆಯ (Pregnancy) ಸಮಯ ಬಂದೇ ಬರುತ್ತದೆ. ಮಹಿಳೆಯರು ಆ ಸಮಯವನ್ನು ಖಂಡಿತವಾಗಿಯೂ ಆನಂದಿಸುತ್ತಾರೆ ಜೊತೆಗೆ ಅಷ್ಟೇ ಕಠಿಣ ಪರಿಸ್ಥಿಗಳನ್ನು ಎದುರಿಸುತ್ತಾರೆ. ಗರ್ಭಾವಸ್ಥೆಯ ಸಮಯದಲ್ಲಿ ತಾಯಿ ತನ್ನ ಆರೋಗ್ಯದ (Health) ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾಳೆ. ವೈದ್ಯರು ಕೂಡ ಗರ್ಭಿಣಿಯರಿಗೆ ಆರೋಗ್ಯಕರ ಆಹಾರ ಸೇವಿಸುವಂತೆ ಸಲಹೆ ನೀಡುತ್ತಾರೆ. ಏಕೆಂದರೆ ತಾಯಿ ಏನು ತಿಂದರೂ ಅದು ಮಗುವಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಗರ್ಭಾವಸ್ಥೆಯಲ್ಲಿ, ತಾಯಿ ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ (Walnut Benefits During Pregnancy).

(Walnut Benefits During Pregnancy) ಗರ್ಭಾವಸ್ಥೆಯಲ್ಲಿ ವಾಲ್ನಟ್ಸ್‌ ತಿನ್ನುವುದರಿಂದ ಆಗುವ ಪ್ರಯೊಜನಗಳೇನು?

ಗರ್ಭಾವಸ್ಥೆ ಸಮಯದಲ್ಲಿ ವೈದ್ಯರು ಹಣ್ಣು, ಜ್ಯೂಸ್‌ ಮತ್ತು ಹಸಿರು ತರಕಾರಿಗಳನ್ನು ತಿನ್ನಲು ಹೇಳುತ್ತಾರೆ. ಅದರ ಜೊತೆಗೆ ಡ್ರೈ ಫ್ರೂಟ್‌ಗಳು ಮಗುವಿನ ಬೆಳವಣಿಗೆಗೆ ಬಹಳ ಲಾಭದಾಯಕವಾಗಿದೆ. ಆದರೆ ಎಲ್ಲಾ ಡ್ರೈ ಫ್ರೂಟ್ಸ್‌ಗಳು ಉತ್ತಮವಲ್ಲ. ಅವುಗಳಲ್ಲಿ ಕೆಲವು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತವೆ. ಪ್ರೆಗ್ನೆನ್ಸಿ ಸಮಯದಲ್ಲಿ ವಾಲ್ನಟ್‌ (ಅಕ್ರೋಟ್‌) ತಿನ್ನುವುದರಿಂದ ಬಹಳಷ್ಟು ಪ್ರಯೋಜನಗಳಿವೆ. ಅಕ್ರೋಟ್‌ನಲ್ಲಿ ಕಾಪರ್‌, ವಿಟಮಿನ್‌–B ಕಾಂಪ್ಲೆಕ್ಸ್‌ ಮತ್ತು ರೈಬೋಪ್ಲೋವಿನ್‌ನಂತಹ ಅನೇಕ ಪೋಷಕಾಂಶಗಳಿವೆ. ಅವು ಮಗುವಿನ ಬೆಳವಣಿಗೆಗೆ ಬಹಳ ಲಾಭದಾಯಕವಾಗಿದೆ. ಆದರೆ ಎಚ್ಚರವಿರಲಿ, ಕೆಲವರಗಿ ಡ್ರೈ ಫ್ರೂಟ್‌ಗಳಿಂದ ಅಲರ್ಜಿಯ ಸಮಸ್ಯೆಯಿರುತ್ತದೆ. ಅವರು ವೈದ್ಯರ ಸಲಹೆ ಪಡೆಯುವುದು ಉತ್ತಮ.

ಮಕ್ಕಳ ಮೂಳೆಗಳನ್ನು ಗಟ್ಟಿಯಾಗಿಸುತ್ತದೆ:
ವಾಲ್ನಟ್‌ನಲ್ಲಿ ವಿಟಮಿನ್‌–E ಇರುತ್ತದೆ. ಅದು ದೇಹದ ಕೋಶಗಳ ಅಭಿವೃದ್ಧಿಗೆ ಸಹಕಾರಿಯಾಗಿದೆ. ಆರೋಗ್ಯವಂತ ಮಗು ಹುಟ್ಟುವುದು ಅತಿ ಮುಖ್ಯವಾಗಿದೆ. ಅದಕ್ಕಾಗಿಯೇ ಗರ್ಭಾವಸ್ಥೆಯಲ್ಲಿ ಉತ್ತಮ ಡಯಟ್‌ ಅನ್ನು ರೂಢಿಸಿಕೊಳ್ಳುವುದು ಅಗತ್ಯವಾಗಿದೆ. ನೆನಪಿಡಿ ಆಹಾರದ ಜೊತೆಗೆ ಉತ್ತಮ ನಿದ್ದೆ ಮತ್ತು ವ್ಯಾಯಾಮದ ಅವಶ್ಯಕತೆಯಿದೆ.

ಇದನ್ನೂ ಓದಿ : Cinnamon Health Tips:ಆರೋಗ್ಯ ಸಮಸ್ಯೆಗಳಿಗೆ ದಾಲ್ಚಿನ್ನಿ ರಾಮಬಾಣ

ಇದನ್ನೂ ಓದಿ : Morning Dizziness:ಮುಂಜಾನೆ ಎದ್ದ ತಕ್ಷಣ ತಲೆ ಸುತ್ತು ಕಾಣಿಸುತ್ತಿದ್ಯಾ ? ಹಾಗಾದ್ರೆ ನಿರ್ಲಕ್ಣ್ಯ ಬೇಡಾ, ಈ ಸಮಸ್ಯೆಯ ಸಂಕೇತ ಆಗಿರಬಹುದು

ಇದನ್ನೂ ಓದಿ : Brown Sugar Health Tips:ಕಂದು ಸಕ್ಕರೆಯ ಟೀ ಎಂದಾದ್ರು ಕುಡಿದಿದ್ರಾ ?

(Walnut Benefits During Pregnancy it is very beneficial for your baby)

Comments are closed.