ಸ್ಲಿಮ್ ಆಂಡ್ ಬ್ಯೂಟಿಫುಲ್ ಆಗಿರಲು ಸುಲಭ ಉಪಾಯ

0
  • ಅಂಚನ್ ಗೀತಾ

ಇತ್ತೀಚಿನ ದಿನಗಳಲ್ಲಿ ಸೌಂದರ್ಯಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ. ಯಾಕಂದ್ರೆ ಇದು ಫ್ಯಾಷನ್ ಜಗತ್ತು. ಇಲ್ಲಿ ಫ್ಯಾಷನೇಬಲ್ ಆಗಿದ್ರೆನೆ ವ್ಯಾಲ್ಯೂ ಹೆಚ್ಚು. ಆದ್ರೆ ಕೆಲವೊಂದು ಮಹಿಳೆಯರು, ಪುರುಷರು ಲುಕ್ ಆಗಿ ಕಾಣಿಸಿಕೊಳ್ಳೊದಕ್ಕಾಗಿ ಬ್ಯೂಟಿ ಪಾರ್ಲರ್ ಮೊರೆ ಹೋಗ್ತಾರೆ.

ಅಷ್ಟೆ ಯಾಕೆ ಜಿಮ್ ಗೆ ಹೋಗಿ ಬಾಡಿ ಮೈಂಟೈನ್ ಮಾಡ್ತಾರೆ. ಆದ್ರೆ ಕೆಲವರಿಗೆ ಜಿಮ್ ಗೆ ಹೋಗಿ ಟೈಮ್ ಸ್ಪೆಂಡ್ ಮಾಡೋವಷ್ಟು ಸಮಯದ ಅಭಾವ. ಹಾಗಿದ್ರು ಕೂಡ ಬಹಳಷ್ಟು ಜನ ಬಾಡಿ ಮೈಂಟೈನ್ ಮಾಡಲು ಹರಸಹಾಸ ಪಡ್ತಾರೆ. ಹಾಗಾದ್ರೆ ಮನೆಯಲ್ಲಿರೋ ನೀರನ್ನೆ ಬಳಸಿ ಬಾಡಿ ಮೈಂಟೈನ್ ಹೇಗ್ ಮಾಡೋದು ಅಂತಿರಾ, ಇಲ್ಲಿದೆ ಟಿಪ್ಸ್ ನೋಡಿ.

ಮುಖ್ಯವಾಗಿ ಬಿಸಿ ನೀರನ್ನೆ ಬಳಸಿ
ಮುಂಜಾನೆ ಎದ್ದಾಕ್ಷಣ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಬಿಸಿ ನೀರು ಕೂಡಿಯೋದು ರೂಢಿಸಿಕೊಳ್ಳಿ. ಹೀಗೆ ಮಾಡೋದ್ರಿಂದ ಜೀರ್ಣಕ್ರಿಯೆ ಹೆಚ್ಚಾಗಿ ದೇಹದಲ್ಲಿರೋ ಬೊಜ್ಜಿನಾಂಶ ಕಮ್ಮಿಯಾಗುತ್ತದೆ.

ತಣ್ಣೀರು ಬಳಸೊದನ್ನ ಕಮ್ಮಿ ಮಾಡಿ
ತಣ್ಣೀರು ಕುಡಿದಾಗ ಬೇಗ ಸಾಕು ಅನಿಸುತ್ತದೆ, ಅದೇ ನೀವು ಬಿಸಿ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ, ಆಗ ನೀರು ಕುಡಿಯುವುದು ಸಾಕೆಂದು ಅನಿಸುವುದೇ ಇಲ್ಲ.

ನಿಂಬೆರಸ ಮತ್ತು ಜೇನುತುಪ್ಪ
ಉಗುರು ಬೆಚ್ಚಗಿನ ನೀರಿಗೆ ನಿಂಬೆರಸ ಮತ್ತು ಜೇನುತುಪ್ಪ ಬೆರಸಿ ಕುಡಿಯೋದ್ರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ..ಇದು ದೇಹದಲ್ಲಿನ ಕೊಬ್ಬಿನಾಂಶವನ್ನು ಕಡಿಮೆ ಮಾಡುತ್ತದೆ.

ನೀರಿಗೆ ಅರಶಿನ ಹಾಕಿ ಕುಡಿಯಿರಿ
ಖಾಲಿ ಬಿಸಿ ನೀರು ಕುಡಿಯೋದು ಬೋರು ಅನಿಸಿದಾಗ ನೀರಿಗೆ ಅರಶಿನ ಪುಡಿ ಹಾಕಿ ಬಳಸಿ. ಹೀಗೆ ಮಾಡೋದ್ರಿಂದ ತ್ವಚೆಯ ಕಾಂತಿ ಹೆಚ್ಚೋದ್ರ ಜೊತೆಗೆ ಆರೋಗ್ಯವಾಗಿರ್ತಿರಾ.

ನೀವೂ ಆಫೀಸಿಗೆ ಹೋಗೋರಾದ್ರೆ ನೀರಿನ ಜೊತೆ ಪುದಿನ ಎಲೆ, ನಿಂಬೆ ಹಣ್ಣಿನ ತುಂಡು. ಸೌತೆಕಾಯಿ ತುಂಡು ಹಾಕಿ ನೀರನ್ನು ಕುಡಿಯಿರಿ. ಅಲ್ಲದೆ ನೀರಿನ ಜೊತೆ ಲವಂಗ ಹಾಕಿ ಕೂಡ ಕುಡಿಯಬಹುದು.

ಹೀಗೆ ಪ್ರತಿನಿತ್ಯ ನೀರನ್ನು ಹೆಚ್ಚಾಗಿ ಕುಡಿಯೋದ್ರ ಜೊತೆಗೆ ತರಕಾರಿಗಳನ್ನು ಸೇರಿಸಿ ಕುಡಿಯೋದ್ರಿಂದ ರೋಗನಿರೋಧಕ ಶಕ್ತಿ ಹೆಚ್ಚುವುದರ ಜೊತೆಗೆ ತ್ವಚೆಯ ಸೌಂದರ್ಯ ಇಮ್ಮಡಿಗೊಳ್ಳುತ್ತದೆ.

ಮುಖದಲ್ಲಿ ಯಾವುದೇ ರೀತಿಯಲ್ಲಿ ನೆರಿಗೆ ಬಿಳಲ್ಲ. ಅಲ್ಲದೆ ದೇಹದ ಬೊಜ್ಜಿನಾಂಶ ಕಡಿಮೆಯಾಗುತ್ತಾ ಹೋಗುತ್ತದೆ. ಹಾಗಾದ್ರೆ ನೀವೂ ಒಮ್ಮೆ ಇದನ್ನ ಟ್ರೈ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ.

ಇದನ್ನೂ ಓದಿ : ಆರೋಗ್ಯದ ಸಮಸ್ಯೆಗೆ ತೆಂಗಿನಕಾಯಿಯ ಹಾಲು ರಾಮಬಾಣ

ದನ್ನೂ ಓದಿ : ಆರೋಗ್ಯದ ಜೊತೆಗೆ ಅಂದವನ್ನೂ ಹೆಚ್ಚಿಸುತ್ತೆ ಈ ಮೊಟ್ಟೆ

( An easy idea to be slim and beautiful )

Leave A Reply

Your email address will not be published.