Scrub at Home : ಮುಖದ ಮೇಲೆ ಬ್ಲಾಕ್‌ಹೆಡ್ಸ್‌, ವೈಟ್‌ಹೆಡ್ಸ್‌ ಜಾಸ್ತಿಯಾಗಿದೆಯೇ? ಹಾಗಾದರೆ ಈ ಸ್ಕ್ರಬ್‌ ಮಾಡಿಕೊಳ್ಳಿ

ಸಾಮಾನ್ಯವಾಗಿ ಡೆಡ್‌ ಸ್ಕಿನ್‌ಗಳು(dead skin) ಚರ್ಮದ ಹೊರಪದರದಲ್ಲಿ ಕಾಣಿಸಿಕೊಳ್ಳುವುದು. ದಿನನಿತ್ಯದ ಚಟುವಟಿಕೆಗಳನ್ನು ಮಾಡುವಾಗ ಹೊರಗಿನ ಚರ್ಮಗಳಿಗೆ ಈ ಸಮಸ್ಯೆ ಕಾಣಿಸುತ್ತದೆ. ಆದರೆ ಮಾಲಿನ್ಯದಿಂದಾಗಿ ಮತ್ತು ಕೆಲವು ಸೌಂದರ್ಯ ಉತ್ಪನ್ನಗಳಿಂದ ಡೆಡ್‌ ಸ್ಕಿನ್‌ಗಳು ಪೋರ್ಸ್‌ಗಳಲ್ಲಿ ಸಿಲುಕಿಕೊಂಡು ಮೊಡವೆ, ತುರಿಕೆ, ಬ್ಲಾಕ್‌ಹೆಡ್ಸ್‌ ಮತ್ತು ವೈಟ್‌ಹೆಡ್ಸ್‌ ಸಮಸ್ಯೆಗಳು ಪ್ರಾರಂಭವಾಗುತ್ತದೆ. ಅದಕ್ಕಾಗಿ ಡೆಡ್‌ ಸ್ಕಿನ್‌ಗಳನ್ನು (Scrub at Home) ತೆಗೆದು ಹಾಕುವುದು ಅವಶ್ಯಕ. ಆದರೂ ಡೆಡ್‌ ಸ್ಕಿನ್‌ಗಳನ್ನು ತೆಗದು ಹಾಕುವ ವಿಧಾನದಲ್ಲಿ ಚರ್ಮದ ಮೇಲೆ ಕಾಳಜಿವಹಿಸುವುದೂ ಅಗತ್ಯ.

ಪ್ರತಿ 30 ದಿನಗಳಿಗೆ ನಿಮ್ಮ ಚರ್ಮ ಹಳೆಯದರ ಬದಲಿಗೆ ಹೊಸ ಚರ್ಮವು ಬರುತ್ತದೆ ಎಂಬುದು ನಿಮಗೆ ಗೊತ್ತೇ? ಡೆಡ್‌ ಸ್ಕಿನ್‌ಗಳನ್ನು ತೆಗೆಯಲು ಮುಖಕ್ಕೆ ಮನೆಯಲ್ಲಿಯ ವಸ್ತುಗಳನ್ನೇ ಸ್ಕ್ರಬ್‌ ಆಗಿ ಬಳಸಬಹುದು. ನಿಮಗಿದು ತಿಳಿದಿಲ್ಲವಾದರೆ ನಾವು ನಿಮಗೆ ಕೆಲವು ಟಿಪ್ಸ್‌ ಕೊಡುತ್ತಿದ್ದೇವೆ. ನೀವೂ ಮಾಡಿ ನೋಡಿ.

  • ಸಕ್ಕರೆಯ ಸ್ಕ್ರಬ್‌ :
    ಸಕ್ಕರೆಯ ಸ್ಕ್ರಬ್‌ ತಯಾರಿಸಲು ಹೀಗೆ ಮಾಡಿ. 1 ಚಮಚ ಗ್ರೀನ್‌ ಟೀ, 1 ಚಮಚ ಸಕ್ಕರೆ ಮತ್ತು ಅರ್ಧ ಚಮಚ ಜೇನುತುಪ್ಪ ತೆಗದುಕೊಳ್ಳಿ. ಮೊದಲಿಗೆ ಒಂದು ಪಾತ್ರೆಯಲ್ಲಿ ನೀರು ಕಾಯಿಸಿ, ಅದಕ್ಕೆ ಗ್ರೀನ್‌ ಟೀ ಹಾಕಿ. ಅದು ಚೆನ್ನಾಗಿ ಕುದಿದ ಮೇಲೆ ಪ್ಯಾನ್‌ ಇಳಿಸಿ. ಸಂಪೂರ್ಣ ತಣ್ಣಗಾದ ಮೇಲೆ ಒಂದು ಬಾಟಲಿಯಲ್ಲಿ ಶೇಖರಿಸಿ, ಫ್ರಿಡ್ಜ್‌ನಲ್ಲಿ ಇಟ್ಟುಕೊಳ್ಳಿ. ಯಾವಾಗ ನಿಮಗೆ ಸ್ಕ್ರಬ್‌ ಮಾಡಿಕೊಳ್ಳಬೇಕೊ ಆಗ ಈ ಗ್ರೀನ್‌ ಟೀ ಜೊತೆ ಸಕ್ಕರೆ ಮತ್ತು ಜೇನುತುಪ್ಪ ಸೇರಿಸಿ ಪೇಸ್ಟ್‌ ತಯಾರಿಸಿಕೊಳ್ಳಿ. ಈ ಸ್ಕ್ರಬ್‌ ಒಣ ತ್ವಚೆಯವರಿಗೆ ಉತ್ತಮವಾಗಿದೆ.
  • ಪಪ್ಪಾಯಿಯ ಸ್ಕ್ರಬ್‌‌
    ಪಪ್ಪಾಯಿಯ ಸ್ಕ್ರಬ್‌ ತಯಾರಿಸಲು 1 ಚಮಚ ಪಪ್ಪಾಯಿಯ ರಸ ಮತ್ತು 1 ಚಮಚ ಓಟ್ಸ್‌ ತೆಗೆದುಕೊಳ್ಳಿ. ಇವೆರಡನ್ನೂ ಚೆನ್ನಾಗಿ ಮಿಕ್ಸ್‌ ಮಾಡಿ, ಪೇಸ್ಟ್‌ ರೀತಿ ತಯಾರಿಸಿ. ಈ ಸ್ಕ್ರಬ್‌ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ. ಎರಡು ನಿಮಿಷ ಬಿಡಿ, ನಂತರ ನೀರಿನಿಂದ ತೊಳೆಯಿರಿ. ನಿಮ್ಮದು ಆಯ್ಲಿ ಸ್ಕಿನ್‌ ಆಗಿರದಿದ್ದರೆ ಅದಕ್ಕೆ ಹಾಲು ಸೇರಿಸಿಕೊಳ್ಳಬಹುದು. ಆದರೆ ನೆನಪಿಡಿ ಈ ಸ್ಕ್ರಬ್‌ ಮೊಡವೆ ಅಥವಾ ಎಕ್ನಿ ಇರುವವರಿಗೆ ಸರಿ ಹೊಂದುವುದಿಲ್ಲ.
  • ಆರೆಂಜ್‌ ಸಿಪ್ಪೆಯ ಸ್ಕ್ರಬ್‌
    ಈ ಸ್ಕ್ರಬ್‌ ತಯಾರಿಸಲು ಒಂದು ಚಮಚ ಆರೆಂಜ್‌ ಸಿಪ್ಪೆಯ ಪೌಡರ್‌, ಒಂದು ಚಮಚ ಹಾಲು, ಐದು ಹನಿ ಕೊಬ್ಬರಿ ಎಣ್ಣೆ ತೆಗೆದುಕೊಳ್ಳಿ.ಮೊದಲಿಗೆ ಆರೆಂಜ್‌ ಹಣ್ಣಿನ ಸಿಪ್ಪೆ ಒಣಗಿಸಿ ಅದರ ಪೌಡರ್‌ ಮಾಡಿಕೊಳ್ಳಿ. ಒಂದು ಪಾತ್ರಗೆ ಆರೆಂಜ್‌ ಪೌಡರ್‌, ಹಾಲು ಮತ್ತು ತೆಂಗಿನ ಎಣ್ಣೆ ಸೇರಿಸಿ. ಇದನ್ನು ಮುಖಕ್ಕೆ ಹಚ್ಚಿ ಸ್ಕ್ರಬ್‌ ಮಾಡಿ. ನಂತರ ನೀರಿನಿಂದ ತೊಳೆಯಿರಿ. ನಿಮ್ಮದು ಆಯ್ಲಿ ಸ್ಕಿನ್‌ ಆಗಿದ್ದರೆ ಹಾಲಿನ ಬದಲು ಮೊಸರು ಉಪಯೋಗಿಸಿ.

ಇದನ್ನೂ ಓದಿ: Papaya Benefits : ಪಪ್ಪಾಯಿ ಎಂಬ ಮಾಜಿಕ್ ಹಣ್ಣು! ಏನೆಲ್ಲಾ ಅದ್ಭುತ ಪ್ರಯೋಜನಗಳನ್ನು ಅಡಗಿಸಿಕೊಂಡಿದೆ ಎಂಬುದು ನಿಮಗೆ ಗೊತ್ತೇ?

ಇದನ್ನೂ ಓದಿ : Watermelon : ಬೇಸಿಗೆಯ ಬಿಸಿಲಿಗೆ ತಂಪು ನೀಡುವ ಕಲ್ಲಂಗಡಿ ಹಣ್ಣಿನ ಪ್ರಯೋಜನಗಳೇನು ಎಂಬುದು ಗೊತ್ತೇ?

(Scrub at Home to remove dead skin and get glow skin)

Comments are closed.