Sneakers Designs : ಬಣ್ಣ ಬಣ್ಣದ ಸ್ನೀಕರ್ಸ್‌ ಎಂದರೆ ನಿಮಗೆ ಇಷ್ಟನಾ? ಖರೀದಿಸುವ ಮೊದಲು ಇದನ್ನೊಮ್ಮೆ ಓದಿ !!

ಸ್ನೀಕರ್‌ (Sneakers Designs)ಗಳು ಸ್ಪೋರ್ಟಿ ಮತ್ತು ಕ್ಯಾಶುಯಲ್‌ನಿಂದ ಬೋಲ್ಡ್‌ ಪ್ರಿಂಟ್‌ಗಳು ಮತ್ತು ಆಕರ್ಷಕ ವಿನ್ಯಾಸಗಳಲ್ಲಿ ದೊರೆಯುತ್ತವೆ. ಇದು ವ್ಯಾಪಕ ಶ್ರೇಣಿಯ ಶೈಲಿಗಳನ್ನು ಸಂಯೋಜಿಸುವ ಸಾಮರ್ಥ್ಯವನ್ನೂ ಹೊಂದಿದೆ. ಬಣ್ಣಗಳ ಸ್ಪ್ಲಾಶ್‌ ಒಂದು ಕಡೆಯಾದರೆ, ಮತ್ತೊಂದೆಡ ಬಟ್ಟೆ ಅಥವಾ ಇತರ ಪರಿಕರಗಳೊಂದಿಗೆ ನಿಮ್ಮ ಶೂಗಳ ಗೊಂದಲವನ್ನೂ ಯಾವಾಗಲೂ ನಿವಾರಿಸುತ್ತದೆ. ಸ್ನೀಕರ್ಸ್‌ ಗಳ ಮೇಲಿರುವ ಜ್ಯಾಮಿತಿ ಪ್ರಿಂಟ್‌ಗಳು ಈ ಋತುವಿನ ಅತ್ಯಂತ ಜನಪ್ರಿಯ ಶೈಲಿಗಳಲ್ಲಿ ಒಂದಾಗಿದೆ. ನಿಮಗೆ ತಿಳಿದುರುವಂತೆ ನೇರ ಅಥವಾ ಬಾಗಿದ ರೇಖೆಗಳಿಂದ ಮಾಡಲ್ಪಟ್ಟ ವಿನ್ಯಾಸಗಳು ಜ್ಯಾಮಿತಿಯ ಆಕಾರಗಳನ್ನು ಉಂಟುಮಾಡುತ್ತದೆ.

ಸ್ನೀಕರ್ಸ್‌(Sneakers Designs)ಗಳ ಮೇಲಿರುವ ಜನಪ್ರಿಯ ವಿನ್ಯಾಸಗಳು:

  • ಶುಗರ್‌ ಸ್ಕಲ್ ಎಂಬುದು ಮೆಕ್ಸಿಕೋದ ಡೆಡ್‌ ಹಬ್ಬಕ್ಕೆ ಸಂಬಂಧಿಸಿದ ಮಾನವ ತಲೆಬುರುಡೆಯ ಚಿತ್ರವಾಗಿದೆ. ಇದನ್ನು ಎದ್ದು ಕಾಣುವಂತೆ ಗಾಢ ಬಣ್ಣಗಳಲ್ಲಿ ಚಿತ್ರಿಸಲಾಗುತ್ತದೆ.
  • ಕೋಯಿ ಮೀನಿನ ಅದ್ಭುತ ಮತ್ತು ಸೊಗಸಾದ ಬಣ್ಣಗಳಿಂದ ಕೂಡಿದ ಸ್ನೀಕರ್ಸ್‌ಗಳು ಪ್ರಸಿದ್ಧವಾಗಿದೆ. ಅಂತಹ ಚಿತ್ರಗಳ ಸ್ನೀಕರ್ಸ್‌ಗಳನ್ನು ಆಯ್ದುಕೊಳ್ಳುವುದರಿಂದ ಎಂತಹ ಜನಸಂದಣಿಯಲ್ಲಿಯೂ ಅದ್ಭುತವಾಗಿ ಎದ್ದು ಕಾಣುತ್ತದೆ.
  • ನೀವು ಬಣ್ಣವನ್ನು ಆನಂದಿಸುತ್ತೀರಿ ಆದರೂ ಕೆಲವು ಸೃಜನಶೀಲ ವಿನ್ಯಾಸದ ಸ್ಪೂರ್ತಿಯ ಅಗತ್ಯವಿದೆ ಎಂದೆನಿಸಿದರೆ, ರೇಂಬೋ ಪೇಂಟ್‌ ಸ್ಪ್ಲಾಟರ್‌ಗಳು ನಿಮಗಾಗಿಯೇ ಇದೆ.
  • ಸರಳ ವಿನ್ಯಾಸಗಳ ಸ್ಪಾಟರ್ಡ್‌ ಡ್ರಾಯಿಂಗ್‌ಗಳು ಹೆಚ್ಚು ರೋಮಾಂಚಕ ಮತ್ತು ಮನರಂಜಿತವಾಗಿ ಕಾಣಿಸುತ್ತದೆ ಮತ್ತು ನಿಮ್ಮನ್ನು ಬಹಳ ಬೇಗ ಆಕರ್ಷಿಸುತ್ತದೆ.
  • ಚಿಟ್ಟೆ ಪ್ರಿಂಟ್‌ ಇರುವ ಸ್ನೀಕರ್ಸ್‌ಗಳು ಬಹಳ ಸುಂದರವಾಗಿರುತ್ತವೆ. ಹಿಮ್ಮಡಿಯ ಮೇಲೆ ಇದ್ದರಂತೂ ಇನ್ನೂ ಚೆಂದ. ಇವುಗಳನ್ನು ನಿಮ್ಮ ಕಲೆಕ್ಷನ್‌ಗೆ ಸೇರಿಸಿಕೊಳ್ಳಬಹುದು.
  • ಕಪ್ಪು ಮತ್ತು ಬಿಳಿಯ ಮಿಶ್ರಣವು ಯಾವಾಗಲೂ ಸ್ಟೈಲ್‌ ಆಗಿಯೇ ಕಾಣಿಸುತ್ತದೆ. ಮತ್ತು ಇದು ಎಲ್ಲದಕ್ಕೂ ಸೂಟ್‌ ಆಗುತ್ತದೆ.

ಆಸಕ್ತಿ ಇರುವವರು ಇಂತಹ ಚಿತ್ರಗಳನ್ನು ಸ್ನೀಕರ್ಸ್‌ಗಳ ಮೇಲೆ ನೀವೇ ರಚಿಸಿಕೊಳ್ಳಬಹುದು, ಇಲ್ಲವೇ ಅಂಗಡಿಯಿಂದಲೂ ಖರೀದಿಸಬಹುದು.

ಇದನ್ನೂ ಓದಿ : Wet Hair Mistakes : ನೀವೂ ಈ ತಪ್ಪುಗಳನ್ನು ಮಾಡುತ್ತೀರಾ?ಇದರಿಂದ ಕೂದಲಿಗೆ ಸಮಸ್ಯೆಯಾಗಬಹುದು ಹುಷಾರ್‌!

ಇದನ್ನೂ ಓದಿ : Summer Sarees: ನಿಮಗೆ ಸೀರೆ ಇಷ್ಟವೇ? ಹಾಗಾದರೆ ಸ್ಟೈಲಿಶ್‌ ಆಗಿ ಕಾಣಿಸುವಂತಹ 5 ವಿಧದ ಸೀರೆಗಳ ಪರಿಚಯ ಇಲ್ಲಿದೆ

(Sneakers Designs here are some colorful designs you can choose from)

Comments are closed.