ಶನಿವಾರ, ಏಪ್ರಿಲ್ 26, 2025
HomeNationalMaha Shivratri : ಪಾರ್ವತಿಯನ್ನು ಶಿವ ವರಿಸಿದ ದಿನ : ಹೀಗೆ ಪೂಜೆ ಮಾಡಿದ್ರೆ ಒಲಿತಾನೆ...

Maha Shivratri : ಪಾರ್ವತಿಯನ್ನು ಶಿವ ವರಿಸಿದ ದಿನ : ಹೀಗೆ ಪೂಜೆ ಮಾಡಿದ್ರೆ ಒಲಿತಾನೆ ಶಿವ

ಭಕ್ತರ ಪಾಲಿನ ಬೋಲಾ ಶಂಕರ ಅನ್ನೋ ಹೆಸರಿನಿಂದಲೇ ಕರೆಸಿಕೊಳ್ಳೋ ಪರಮಾತ್ಮನ ಪೂಜೆಗೂ ವಿಶೇಷ ವಸ್ತುಗಳ ಅಗತ್ಯವಿಲ್ಲ. ಶಿವನಿಗೆ ಒಂದು ಬಿಲ್ವಪತ್ರೆಯನ್ನು ಸಮರ್ಪಿಸಿದ್ರೆ , ಕೋಟಿ ಜನ್ಮಗಳ ಪಾಪ ಕಳೆದು ಹೋಗುತ್ತೆ ಅನ್ನೋ ನಂಬಿಕೆ ನಮ್ಮ ಪುರಾಣದಲ್ಲಿದೆ.

- Advertisement -

Maha Shivratri : ಮಹಾಶಿವರಾತ್ರಿ, ಶಿವನ ಆರಾಧನೆಗೆ ಶ್ರೇಷ್ಠವಾದ ದಿನ. ಇಂದು ಶಿವ ಪಾರ್ವತಿ ಪರಿಣಯದ ದಿನ . ಇದನ್ನ ಶಿವ- ಹಾಗೂ ಶಕಿಯ ಸಂಕೇತಾಗಿ ಪೂಜೆ ಮಾಡಲಾಗುತ್ತೆ. ಅದರಲ್ಲೂ ಶಿವರಾಧನೆ ಹಾಗೂ ಶಿವ ಸಾಧನೆ ಗೆ ಈ ದಿನ ಪ್ರಶಸ್ತವಾದ ದಿನ ಅನ್ನೋ ನಂಬಿಕೆ ಭಾರತೀಯ ಪರಂಪರೆಯಲ್ಲಿದೆ . ಶಿವರಾತ್ರಿ ಶಕ್ತಿ ಸಾದನೆ ಶ್ರೇಷ್ಠವಾದ ದಿನ ಅಂತ ನಂಬಲಾಗುತ್ತೆ. ಅದರಲ್ಲೂ ಸಾಧನೆಗೆ ಬಯಸುವವರು ಇಂದು ವಿಶೇಷವಾಗಿ ಶಿವನ ಆರಾಧನೆಯನ್ನು ಮಾಡುತ್ತಾರೆ ಅನ್ನೋದೇ ವಿಶೇಷ.

ಅದರಲ್ಲೂ ಈ ದಿನಕ್ಕೆ ಮತ್ತಷ್ಟು ಶೋಭೆ ನೀಡೋಕೆ ಅಂತಾನೆ ಮಹಾಕುಂಭ ಉತ್ಸವವೂ ನಡೆಯುತ್ತೆ . ಕುಂಭ ಮೇಳದ ಕೊನೆಯ ದಿನವಾದ ಇಂದು ಕೋಟ್ಯಾಂತರ ಸಂಖ್ಯೆಯಲ್ಲಿ ಭಕ್ತರು ಪ್ರಯಾಗ್ ರಾಜ್ ಗೆ ಆಗಮಿಸುತ್ತಿದ್ದಾರೆ. ಮುಂಜಾನೆಯಿಂದಲೇ ಜಮಾಯಿಸುತ್ತಿರವ ಭಕ್ತಗಣ ತ್ರಿವೇಣಿ ಸಂಗಮದಲ್ಲಿ ಮಿಂದು ಕೃತಾರ್ಥರಾಗುತ್ತಿದ್ದಾರೆ. ಮತ್ತೊಂದೆಡೆ ಕುಂಭಮೇಳದಲ್ಲಿ ನೆಲೆಸಿರೋ ಯೋಗಿಗಳ ದಂಡು ಮೋಕ್ಷ ಸಾಧನೆಗಾಗಿ ಅವರದೇ ಆದ ರೀತಿಯಲ್ಲಿ ಶಿವನ ಆರಾಧನೆಯಲ್ಲಿ ತೊಡಗಿರೋದು ಭಕ್ತರನ್ನು ಭಕ್ತಿ ಗಂಗೆಯಲ್ಲಿ ಮೀಯುವಂತೆ ಮಾಡಿದೆ.

ಶಿವ- ಶಕ್ತಿ ಪರಿಯಣದ ದಿನ (Maha Shivratri)

ಹೌದು ಶಿವರಾತ್ರಿ ಶಿವ ಶಕ್ತಿ ಒಂದಾದ ದಿನ ಅಂತ ನಂಬಲಾಗುತ್ತೆ. ಸತಿ ಅಗ್ನಿಯಲ್ಲಿ ದಹಿಸಿದ ನಂತರ ತಪೋಮಗ್ನನಾಗಿದ್ದ ಶಿವನನ್ನು ಒಲಿಸಲು ಮತ್ತೆ ಸತಿ, ಪಾರ್ವತಿಯಾಗಿ ಜನ್ಮ ಪಡೆದಳು ಅನ್ನೋ ನಂಬಿಕೆ ನಮ್ಮ ಪುರಾಣದಲ್ಲಿ ಇದೆ. ಅದಕ್ಕಾಗಿಯೇ ಸಾವಿರಾರು ವರ್ಷಗಳ ಕಾಲ ತಪ್ಪಸ್ಸನ್ನೂ ಆಚರಿದ್ದಳು. ಇದೇ ರೂಪವನ್ನು ನವರಾತ್ರೆಯಲ್ಲಿ ಬ್ರಹ್ಮಚಾರಿಣಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಇದಕ್ಕೊಲಿದ ಶಿವ, ಪಾರ್ವತಿಯನ್ನು ವಿವಾಹವಾದ ಹಾಗೂ ಇವರ ಸಮ್ಮಿಲನದಿಂದ ಜನಿಸಿದ ಕಾರ್ತೀಕೇಯ ರಾಕ್ಷಸ ಸಂಹಾರಕ್ಕೆ ಕಾರಣನಾದ ಅಂದ ನಂಬಿಕೆ ಇದೆ . ಹೀಗೆ ಪಾರ್ವತಿಯು ಶಿವನ್ನು ವರಿಸಿದ ದಿನವನ್ನು ಶಿವರಾತ್ರಿ ಅಂತ ಕರೆಯಲಾಗುತ್ತೆ.

ಇದನ್ನೂ ಓದಿ : ಅಂಗಾರಕ ಸಂಕಷ್ಟ ಚತುರ್ಥಿಯಂದು ಶುಭಫಲಕ್ಕಾಗಿ ಗಣೇಶನಿಗೆ ಅರ್ಪಿಸಿ ಕಡಲೆ

ಇನ್ನು ಈ ದಿನ ಆದ್ಯಾತ್ಮ ಸಾಧಕರ ಪಾಲಿಗೆ ವಿಶೇಷ ದಿನ ಅಂತ ನಂಬಲಾಗುತ್ತೆ. ಮೋಕ್ಷ ಸಾಧನೆಗೆ ಹೊರಟವರಿಗೆ ಶಿವ ಈ ದಿನ ಸುಲಭವಾಗಿ ಒಲಿಯುತ್ತಾನೆ ಅನ್ನೋ ನಂಬಿಕೆ ಇದೆ. ಹೀಗಾಗಿ ಋಷಿ ಮುನಿಗಳು ಈ ದಿನ ವಿಶೇಷವಾಗಿ ಅವರದೇ ರೀತಿಯಲ್ಲಿ ಪೂಜೆ ಸಲ್ಲಿಸುತ್ತಾರೆ.

ಉಪವಾಸ ಜಾಗರಣೆ :

ಇನ್ನು ಈ ಹಬ್ಬದ ಮತ್ತೊಂದು ವಿಶೇಷ ಅಂದರೆ ಉಪವಾಸ, ಜಾಗರಣೆ . ಉಳಿದ ಹಬ್ಬದಲ್ಲಿ ಊಟ ಉಪಚಾರಗಳೇ ಮುಖ್ಯವಾದರೆ , ಶಿವರಾತ್ರಿಗೆ ಉಪವಾಸ ಶ್ರೇಷ್ಠವಾಗಿರುತ್ತೆ. ಶಿವರಾತ್ರಿ ವೃತ ಮಾಡುವವರು .ಶಿವರಾತ್ರೆಯ ಮುಂಜಾನೆಯಿಂದ ಮಾರನೇದಿನ ಮುಂಜಾನೆವರೆಗೆ ಉಪವಾಸ ಮಾಡುತ್ತಾರೆ . ಇನ್ನು ಪೂರ್ಣ ಉಪವಾಸ ಸಾಧ್ಯವಾಗದಿದ್ದಲ್ಲಿ ಸಾಬುದಾನ ( ಸಾಬಕ್ಕಿ), ರವೆ ಫಲಾಹಾವನ್ನು ಸೇವಿಸಲಾಗುತ್ತೆ.

ಇದನ್ನೂ ಓದಿ : ನೀರಿನ ನಡುವೆಯೇ ಗುಹಾಂತರನಾಗಿ ನಿಂತಿದ್ದಾನೆ ಮೂಡಗಲ್ಲು ಶ್ರೀ ಕೇಶವ ನಾಥೇಶ್ವರ- ಇವನ ದರ್ಶನಕ್ಕೆ ಬಂದ್ರೆ ಇಲ್ಲಿ ಕಚ್ಚಲ್ಲ ಹಾವು

ಇದರ ಜೋತೆಗೆ ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡೋದು ಜಾಗರಣೆ . ಶಿವರಾತ್ರಿಯಂದು ಕುಟುಂಬದದ ಸದಸ್ಯರೆಲ್ಲರೂ ರಾತ್ರಿ ಪೂರಾ ಎಚ್ಚರವಿದ್ದು ಶಿವನ ನಾಮಸ್ಮರಣೆಯಲ್ಲಿ ಕಾಲಕಳೆಯುತ್ತಾರೆ. ಮಕ್ಕಳು ಮರಿ ಎನ್ನದೆ ಶಿವನ ಹಾಡುಗಳನ್ನು ಹಾಡಿ ಸಂಭ್ರಮಿಸುವ ರೂಡಿ ಮೊದಲಿಂದಲೇ ನಡೆದು ಬಂದಿದೆ . ಅದರಲ್ಲೂ ಹಳ್ಳಿ ಕಡೆಗಳಲ್ಲಿ ಇಂದು ಕಳ್ಳತನ ಮಾಡಿದವರಿಗೆ ಪಾಪ ತಟ್ಟಲ್ಲ ಅನ್ನೋ ಮಾತು ರೂಡಿಯಲ್ಲಿದೆ. ಇದಕ್ಕೆ ಕಾರಣ ಜಾಗರಣೆಯಿಂದಾಗಿ ಇಂದು ಕಳ್ಳತನ ಸಾಧ್ಯವಿಲ್ಲ ಅನ್ನೋದು ಹಿರಿಯರ ನಂಬಿಕೆ .

ಬಿಲ್ಮಕ್ಕೆ ಒಲಿಯುತ್ತಾನೆ ಶಿವ

ಇನ್ನು ಭಕ್ತರ ಪಾಲಿನ ಬೋಲಾ ಶಂಕರ ಅನ್ನೋ ಹೆಸರಿನಿಂದಲೇ ಕರೆಸಿಕೊಳ್ಳೋ ಪರಮಾತ್ಮನ ಪೂಜೆಗೂ ವಿಶೇಷ ವಸ್ತುಗಳ ಅಗತ್ಯವಿಲ್ಲ. ಶಿವನಿಗೆ ಒಂದು ಬಿಲ್ವಪತ್ರೆಯನ್ನು ಸಮರ್ಪಿಸಿದ್ರೆ , ಕೋಟಿ ಜನ್ಮಗಳ ಪಾಪ ಕಳೆದು ಹೋಗುತ್ತೆ ಅನ್ನೋ ನಂಬಿಕೆ ನಮ್ಮ ಪುರಾಣದಲ್ಲಿದೆ. ಹೀಗಾಗಿ ಶಿವ ಪೂಜೆಗೆ, ಶಿವ ಪ್ರಿಯ ಬಿಲ್ವ ಪತ್ರೆ ಬೇಲದ ಹಣ್ಣು , ಹಾಲಿನ ಪಾಯಸವನ್ನು ಭಕ್ತರು ಸಮರ್ಪಿಸಿ ಕೃತಾರ್ಥರಾಗುತ್ತಾರೆ.

Maha Shivratri 2025 day Shiva married Parvati If you worship like this, Shiva will be worshipped.


.

Vandana kommunje | ವಂದನಾ ಕೊಮ್ಮುಂಜೆ
Vandana Kommunje Senior Content Writer. Working in more than 10 Years in Kannada Famous News Channesl. Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular