MahaShivratri Fasting : ಮಹಾಶಿವರಾತ್ರಿಯ ಉಪವಾಸಕ್ಕೆ ಸುಲಭ ಉಪಹಾರಗಳು

ಹಿಂದೂಗಳ ಪ್ರಮುಖ ಹಬ್ಬ (Festival) ಗಳಲ್ಲಿ ಮಹಾಶಿವರಾತ್ರಿ (MahaShivratri 2023) ಯು ಒಂದು. ಆ ದಿನ ಶಿವನ ಭಕ್ತಾದಿಗಳು ಉಪವಾಸ ವೃತ (Fasting) ಕೈಗೊಳ್ಳುತ್ತಾರೆ. ಶಿವ ಧ್ಯಾನ ಮಾಡುತ್ತಾ ಜಾಗರಣೆ ಮಾಡುತ್ತಾರೆ. ಈ ವರ್ಷ ಮಹಾಶಿವರಾತ್ರಿಯನ್ನು ಇದೇ ಫೆಬ್ರವರಿ 18 ರಂದು ಆಚರಿಸಲಾಗುವುದು. ಇದರಲ್ಲಿ ಉಪವಾಸ ವೃತವನ್ನು (MahaShivratri Fasting) ನಡೆಸುವುದು ಸಾಮಾನ್ಯ. ಹಾಗಾಗಿ ಉಪವಾಸಕ್ಕೆ ಮೀಸಲಿಟ್ಟ ಕೆಲವು ಆಹಾರ (Food) ಗಳನ್ನು ಸೇವಿಸುವುದು ರೂಢಿಯಲ್ಲಿದೆ. ಸಾಬಕ್ಕಿಯ ಕಿಚಡಿ, ಥಂಡಾಯಿ, ಸ್ಮೂಥಿ, ಮಿಶ್ರ ಹಣ್ಣುಗಳು, ಲಸ್ಸಿ ಹೀಗೆ ದೇಹಕ್ಕೆ ಶಕ್ತಿ ಒದಗಿಸುವ ಹಾಗೂ ಜಡವಲ್ಲದ ಆಹಾರಗಳನ್ನು ಸೇವಿಸುತ್ತಾರೆ. ನಿಮಗೆ ಉಪವಾಸ ವೃತ ಆಚರಿಸಲು ಸಹಾಯಮಾಡುವ ಕೆಲವು ರೆಸಿಪಿಗಳು ಇಲ್ಲಿವೆ.

ಸಾಬಕ್ಕಿಯ ಕಿಚಡಿ :
ಶಿವರಾತ್ರಿಯಲ್ಲಿ ಸಾಮಾನ್ಯವಾಗಿ ಉಪಹಾರವಾಗಿ ಸಾಬಕ್ಕಿಯ ಕಿಚಡಿಯನ್ನು ಸೇವಿಸುತ್ತಾರೆ. ಇದು ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ, ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಕಾಯ್ದುಕೊಳ್ಳುತ್ತದೆ. ಸಾಬಕ್ಕಿ ಕಿಚಡಿಯನ್ನು ಹೀಗೆ ತಯಾರಿಸಿ:

ಬೇಕಾಗುವ ಸಾಮಗ್ರಿಗಳು :
ಒಂದು ಕಪ್‌ ಸಾಬಕ್ಕಿ
3 ಚಮಚ ತುಪ್ಪ
1 ಚಮಚ ಜೀರಿಗೆ
2 ಬೇಯಿಸಿದ ಆಲೂಗಡ್ಡೆ
1 ಚಮಚ ಶೇಂಗಾ ಬೀಜ
1 ಚಮಚ ಕತ್ತರಿಸಿದ ಹಸಿರು ಮೆಣಸಿನಕಾಯಿ
ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ
ರುಚಿಗೆ ತಕ್ಕಷ್ಟು ಕಲ್ಲುಪ್ಪು
ಲಿಂಬು ರಸ

ತಯಾರಿಸುವುದು ಹೇಗೆ?
ಮೊದಲಿಗೆ ಸಾಬಕ್ಕಿಯನ್ನು ನಾಲ್ಕು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ನಂತರ ನೀರನ್ನು ಸೋಸಿಕೊಳ್ಳಿ, ಅದಕ್ಕೆ ಕಲ್ಲುಪ್ಪು ಮತ್ತು ಲಿಂಬುರಸ ಸೇರಿಸಿ. ಒಂದು ಪಾತ್ರೆಯಲ್ಲಿ ತುಪ್ಪ, ಜೀರಿಗೆ, ಶೇಂಗಾ ಬೀಜ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ ಒಗ್ಗರಣೆ ಮಾಡಿಕೊಳ್ಳಿ. ಅದಕ್ಕೆ ಸಾಬಕ್ಕಿಯನ್ನು ಸೇರಿಸಿ. 4 ರಿಂದ 5 ನಿಮಿಷಗಳ ವರೆಗೆ ಸಣ್ಣ ಉರಿಯಲ್ಲಿ ಬೇಯಿಸಿ. ಮೇಲಿನಿಂದ ಕೊತ್ತಂಬರಿ ಸೊಪ್ಪು ಸೇರಿಸಿ. ಬಿಸಿಯಿರುವಾಗಲೇ ಸೇವಿಸಿ.

ಇದನ್ನೂ ಓದಿ : MahaShivratri 2023 : ಶಿವನ ಆರಾಧನೆಯ ಮಹಾಶಿವರಾತ್ರಿ ಯಾವಾಗ? ದಿನ, ಮಹತ್ವ, ಮತ್ತು ಪೂಜಾ ವಿಧಿ

ಸವತೆಕಾಯಿ ಲಸ್ಸಿ:
ದೇಹಕ್ಕೆ ತಂಪು ನೀಡುವ ಮೊಸರನಿಂದ ತಯಾರಿಸುವ ಸವತೆಕಾಯಿ ಲಸ್ಸಿಯನ್ನು ಮಹಾಶಿವರಾತ್ರಿಯ ಉಪವಾಸ ವೃತ ಆಚರಣೆಯಲ್ಲಿ ಸೇರಿಸಿಕೊಳ್ಳಬಹುದು. ಇದು ಎಸಿಡಿಟಿಯನ್ನು ನಿಯಂತ್ರಿಸುತ್ತದೆ. ಸವತೆಕಾಯಿ ಲಸ್ಸಿಯನ್ನು ಹೀಗೆ ತಯಾರಿಸಿ:

ಒಂದು ಕಪ್‌ ಮೊಸರಿಗೆ, ಅರ್ಧ ಸವತೆಕಾಯಿ, ಸ್ವಲ್ಪ ಪುದಿನಾ ಅಥವಾ ಕೊತ್ತಂಬರಿ ಸೊಪ್ಪು, ಒಂದು ಚಮಚ ಜೀರಿಗೆ ಪುಡಿ, ಮತ್ತು ರುಚಿಗೆ ತಕ್ಕಷ್ಟು ಕಲ್ಲುಪ್ಪು ಇವೆಲ್ಲವನ್ನು ಮಿಕ್ಸಿ ಜಾರ್‌ಗೆ ಹಾಕಿ, ಜ್ಯೂಸ್‌ ತಯಾರಿಸಿ. ಇದಕ್ಕೆ ಮೇಲಿನಿಂದ ಪುದಿನ ಎಲೆಗಳನ್ನು ಸೇರಿಸಿ ತಂಪಾಗಿರುವಾಗಲೇ ಸೇವಿಸಿ.

ಬೇಯಿಸಿದ ಗೆಣಸು :
ಕೆಲವು ಪ್ರದೇಶದ ಜನರು ಶಿವರಾತ್ರಿಯ ವೃತಾಚರಣೆಯಲ್ಲಿ ಗೆಣಸನ್ನು ಸೇವಿಸುತ್ತಾರೆ. ಅದಕ್ಕೆ ಹೀಗೆ ಮಾಡಿ. ಗೆಣಸನ್ನು ಚೆನ್ನಾಗಿ ತೊಳೆದು ಬೇಯಿಸಿ. ಆರಿದ ನಂತರ ಚೌಕಾಕರದಲ್ಲಿ ಕತ್ತರಿಸಿ. ಅದಕ್ಕೆ ಕಲ್ಲುಪ್ಪು, ಜೀರಿಗೆ ಮತ್ತು ಕಾಳು ಮೆಣಸಿನ ಪುಡಿ ಸೇರಿಸಿ. ಬೇಕಿದ್ದರೆ ಮೇಲಿನಿಂದ ಸ್ವಲ್ಪ ಲಿಂಬು ರಸ ಸೇರಿಸಿಕೊಳ್ಳಿ. ಗೆಣಸು, ಗ್ಯಾಸ್ಟ್ರಿಕ್‌ ಉತ್ಪತ್ತಿ ಮಾಡುವುದರಿಂದ ಜೀರಿಗೆ ಮತ್ತು ಕಾಳು ಮೆಣಸು ಅದನ್ನು ಹೋಗಲಾಡಿಸುತ್ತದೆ.

ಇದನ್ನೂ ಓದಿ : Maha Shivratri 2023 : ಮಹಾ ಶಿವರಾತ್ರಿ 2023 : ನೀವು ಭೇಟಿ ನೀಡಬಹುದಾದ ದಕ್ಷಿಣ ಭಾರತದ 5 ಜನಪ್ರಿಯ ದೇವಾಲಯಗಳು

(MahaShivratri Fasting. These delicious recipes to keep you full and nourished)

Comments are closed.