Maha Shivratri 2023 : ಮಹಾ ಶಿವರಾತ್ರಿ 2023 : ನೀವು ಭೇಟಿ ನೀಡಬಹುದಾದ ದಕ್ಷಿಣ ಭಾರತದ 5 ಜನಪ್ರಿಯ ದೇವಾಲಯಗಳು

ಭಾರತವು ಹಲವಾರು ಸಂಸ್ಕೃತಿಗಳು ಮತ್ತು ಹಬ್ಬಗಳೊಂದಿಗೆ ಸಂಬಂಧಿಸಿದ ವೈವಿಧ್ಯಮಯ ದೇಶವಾಗಿದೆ. ದೇಶದ ಜನಪ್ರಿಯ ಹಬ್ಬಗಳಲ್ಲಿ ಒಂದು ಮಹಾ ಶಿವರಾತ್ರಿ (Maha Shivratri 2023). ಇದನ್ನು ಪ್ರತಿ ವರ್ಷ ಫೆಬ್ರವರಿ ಅಥವಾ ಮಾರ್ಚ್‌ ತಿಂಗಳಲ್ಲಿ ಅತ್ಯಂತ ವೈಭವ ಮತ್ತು ಭಕ್ತಿಯಿಂದ ಆಚರಿಸಲಾಗುತ್ತದೆ. ಮಹಾ ಶಿವರಾತ್ರಿಯು ತಾಂಡವ ಎಂಬ ಸ್ವರ್ಗೀಯ ನೃತ್ಯವನ್ನು ಶಿವನು ಪ್ರದರ್ಶಿಸುವ ರಾತ್ರಿಯನ್ನು ಸೂಚಿಸುತ್ತದೆ. ಚಾಂದ್ರಮಾನ ಹಿಂದೂ ಕ್ಯಾಲೆಂಡರ್‌ನ ಪ್ರತಿ ತಿಂಗಳಲ್ಲಿ, ಅಮಾವಾಸ್ಯೆಯ ಹಿಂದಿನ ದಿನದಂದು ಶಿವರಾತ್ರಿ “ಶಿವನ ರಾತ್ರಿ” ಇರುತ್ತದೆ.

ದಂತಕಥೆಗಳ ಪ್ರಕಾರ, ಮಹಾ ಶಿವರಾತ್ರಿಯು ಶಿವನು ಮೊದಲ ಬಾರಿಗೆ ತಾಂಡವ ನೃತ್ಯವನ್ನು ಮಾಡಿದ ಸಂದರ್ಭವನ್ನು ಸೂಚಿಸುತ್ತದೆ ಹಾಗೂ ಶಿವ ಮತ್ತು ಪಾರ್ವತಿದೇವಿಯ ವಿವಾಹವನ್ನು ಸಹ ಸೂಚಿಸುತ್ತದೆ. ಹಾಗಾಗಿ ಈ ದಿನದಂದು ಭಗವಾನ್‌ ಶಿವನ ದೇವಾಲಯಗಳಿಗೆ ಭೇಟಿ ನೀಡುವುದು ಮತ್ತು ದೇವರನ್ನು ಪೂಜಿಸುವುದು ಮಂಗಳಕರವೆಂದು ಪರಿಣಿಸಲಾಗಿದೆ. ಆದ್ದರಿಂದ, ಈ ಉತ್ಸವದಲ್ಲಿ ನೀವು ಭೇಟಿ ನೀಡಲೇ ಬೇಕಾದ ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯಗಳ ಪಟ್ಟಿಯನ್ನು ಈ ಕೆಳಗೆ ತಿಳಿಸಲಾಗಿದೆ. ಹಾಗಾಗಿ ಈ ಬಾರಿ ಶಿವರಾತ್ರಿಯ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸಬಹುದಾಗಿದೆ.

ಶ್ರೀಶೈಲಂನ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ :
ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ದೇವಲಾಯ ಅಥವಾ ಶ್ರೀಶೈಲಂ ದೇವಾಲಯವು ಭಗವಾನ್‌ ಶಿವ ಮತ್ತು ಪಾರ್ವತಿಗೆ ಸಮರ್ಪಿತವಾಗಿದೆ ಮತ್ತು ಇದು ಭಾರತದ ಆಂಧ್ರಪ್ರದೇಶದ ಶ್ರೀಶೈಲಂನಲ್ಲಿದೆ. ಇದನ್ನು ಸಾಮಾನ್ಯವಾಗಿ ಶ್ರೀಶೈಲಂ ದೇವಲಾಯ ಎಂದು ಕರೆಯಲಾಗುತ್ತದೆ ಮತ್ತು ಭಕ್ತಾಧಿಗಳಿಗೆ ದರ್ಶನದ ಸಮಯವು ಮುಂಜಾನೆ 4.30 ರಿಂದ 10 ಗಂಟೆವರೆಗೆ ಉಚಿತ ಪ್ರವೇಶ ಶುಲ್ಕದೊಂದಿಗೆ ಇರುತ್ತದೆ.

ತಂಜಾವೂರು ಬೃಹದೇಶ್ವರ ದೇವಸ್ಥಾನ :
ಇದು ತಮಿಳುನಾಡಿನ ತಂಜಾವೂರಿನಲ್ಲಿ ಕಾವೇರಿ ನದಿಯ ದಕ್ಷಿಣ ದಂಡೆಯಲ್ಲಿರುವ ಶೈವ ಹಿಂದೂ ದೇವಾಲಯವಾಗಿದೆ. ಇದನ್ನು ಸಾಮಾನ್ಯವಾಗಿ ತಂಜೈ ಕೋವಿಲ್‌ ಮತ್ತು ಪೆರುವುಡೈಯಾರ್‌ ಕೋವಿಲ್‌ ಎಂದು ಕರೆಯಲಾಗುತ್ತದೆ. ಇದನ್ನು ಚೋಳ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿದೆ. ಇದು ದಕ್ಷಿಣ ಭಾರತದ ಅತಿ ಎತ್ತರದ ಪಿರಮಿಡ್‌ ದೇವಾಲಯವಾಗಿದೆ.

ಕರ್ನಾಟಕದ ಮುರ್ಡೇಶ್ವರ ದೇವಸ್ಥಾನ :
ಮುರುಡೇಶ್ವರ ದೇವಾಲಯವು ಪ್ರಪಂಚದ ಎರಡನೇ ಅತಿ ಎತ್ತರದ ಶಿವನ ಪ್ರತಿಮೆ ಎಂದು ಪ್ರಸಿದ್ಧವಾಗಿದೆ. ಮುರುಡೇಶ್ವರವು ಕರಾವಳಿ ಕರ್ನಾಟಕದ ಉತ್ತರ ಕೆನರಾ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿರುವ ಒಂದು ದೇವಾಲಯ ಪಟ್ಟಣವಾಗಿದೆ ಮತ್ತು ಇದು ಪ್ರಮುಖ ಮಂಗಳೂರು, ಕಾರವಾರ ಹೆದ್ದಾರಿಯಲ್ಲಿದೆ. ಶಿವರಾತ್ರಿಯಂದು ಇಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತಾಧಿಗಳು ದೂರದ ಊರಿನಿಂದ ಬಂದು ಭಾಗಿ ಆಗುತ್ತಾರೆ.

ಹಂಪಿಯ ವಿರೂಪಾಕ್ಷ ದೇವಸ್ಥಾನ :
ಇದು ಕರ್ನಾಟಕದ ವಿಜಯನಗರ ಜಿಲ್ಲೆಯ ಹಂಪಿಯಲ್ಲಿದೆ. ಇದು ಒಂಬತ್ತು ಹಂತದ ಪೂರ್ವ ಗೇಟ್‌ವೇಗಳೊಂದಿಗೆ ಸೂಕ್ಷ್ಮವಾಗಿ ಕೆತ್ತಿದ ಕಂಬಗಳಿಂದ ವಿಸ್ಯಾಸಗೊಳಿಸಲಾಗಿದೆ ಮತ್ತು ಅಲಂಕರಿಸಲ್ಪಟ್ಟಿದೆ. ದೇವಾಲಯವು ಗೇಟ್ವೇಗಳು, ಪ್ರಾಂಗಣಗಳು, ಸ್ತಂಭಗಳ ಕ್ಲೋಸ್ಟರ್‌ಗಳು ಮತ್ತು ಸಣ್ಣ ದೇವಾಲಯಗಳಿಂದ ಅವೃತವಾಗಿದೆ.

ಇದನ್ನೂ ಓದಿ : Maha Shivaratri 2023: ಮಹಾಶಿವರಾತ್ರಿಯ ಹಿನ್ನಲೆ, ಹಬ್ಬದ ಆಚರಣೆ ಏಕೆ ಮಾಡುತ್ತಾರೆ ಗೊತ್ತಾ?

ಕೇರಳದ ವಡಕ್ಕುನಾಥನ್‌ ದೇವಸ್ಥಾನ :
ಇದು ಕೇರಳದ ತ್ರಿಶೂರ್‌ ನಗರದಲ್ಲಿ ಶಿವನಿಗೆ ಅರ್ಪಿತವಾದ ದಕ್ಷಿಣ ಭಾರತದ ಪುರಾತನ ದೇವಾಲಯವಾಗಿದೆ. ಈ ದೇವಾಲಯವು ವಾಸ್ತುಶಿಲ್ಪದ ಶೈಲಿಗೆ ಒಂದು ಶ್ರೇಷ್ಠ ಉದಾಹರಣೆಯಾಗಿದೆ ಮತ್ತು ದೇವಾಲಯದ ನಾಲ್ಕು ಬದಿಗಳಲ್ಲಿ ಒಂದೊಂದು ಸ್ಮಾರಕ ಗೋಪುರವನ್ನು ಹೊಂದಿದೆ.

Maha Shivratri 2023 : 5 Popular Temples in South India You Can Visit

Comments are closed.