Puttur Mahalingeshwara Temple : ಭಕ್ತರಿಗಾಗಿ ಊರೂರು ತಿರುಗುತ್ತಾನೆ ಶಿವ, ಹತ್ತೂರ ಒಡೆಯನ ದರ್ಶನ ಪಡೆದವನೇ ಧನ್ಯ

Puttur Mahalingeshwara Temple : ಈತ ಹತ್ತೂರ ಕಾಯೋ ದೈವ. ಭಕ್ತ ಪಾಲಿಗಂತು ಕರುಣಾ ಸಾಗರ. ಈತನನ್ನು ನಂಬಿದವರ ಪಾಲಿಗಂತು ಕಷ್ಟ ಕಾರ್ಪಣ್ಯಗಳ ಸುಳಿವೇ ಇಲ್ಲ. ಭಕ್ತರನ್ನು ಪೊರೆಯೋಕೆ ಅಂತನೇ ಈ ನೆಲದಲ್ಲಿ ಗಟ್ಟಿಯಾಗಿ ನೆಲೆ ನಿಂತಿದ್ದಾನೆ. ಇಷ್ಟೇ ಅಲ್ಲ ವರುಷಕ್ಕೆ ಒಂದು ಬಾರಿಯೂ ತನ್ನನ್ನು ಕಾಣಲು ಬರಲಾಗದ ಭಕ್ತರಿಗೆ ಸ್ಷತಹ ತಾನೇ ಬಂದು ದರುಶನ ನೀಡುತ್ತಾನೆ ಈ ಭಕ್ತ ಸಾಗರ. ಹೌದು, ಹಲವು ಚಮತ್ಕಾರವನ್ನು ಹೊಂದಿರುವ ಪುಣ್ಯ ಕ್ಷೇತ್ರ. ಭಕ್ತರನ್ನು ಪೊರೆಯುವುದಕ್ಕಾಗಿಯೇ ಬೋಲಾ ಶಂಕರ ನೆಲೆನಿಂತ ಪುಣ್ಯ ಕ್ಷೇತ್ರ. ಇಲ್ಲಿ ಸ್ಮಶಾನ ರೂಪಿ, ಭಕ್ತವತ್ಸಲನಾದ ಶಿವ ಮಹಾಲಿಂಗೇಶ್ವರ ರೂಪದಲ್ಲಿ ನೆಲೆನಿಂತು 10 ಊರನ್ನು ಕಾಯುತ್ತಿದ್ದಾನೆ . ಅದಕ್ಕಾಗಿಯೇ ಇಲ್ಲಿ ಶಿವನನ್ನು ಹತ್ತೂರಿನ ಒಡೆಯ ಮಹಾಲಿಂಗೇಶ್ವರ ಎಂದು ಕರೆಯುತ್ತಾರೆ . ಇಲ್ಲಿ ಇರುವ ಶಿವಲಿಂಗ ದಿನದಿಂದ ಬೆಳೆಯುತ್ತೆ ಅನ್ನೋದು ಇಲ್ಲಿನ ನಂಬಿಕೆ.

ಇನ್ನು ಈ ಊರಿಗೆ ಬರೋ ಭಕ್ತರು ದೇವರ ದರ್ಶನವನ್ನು ಪಡೆಯದೇ ಹೋಗೋದು ಕಡಿಮೆ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಇಲ್ಲಿ ʼದೇವರನ್ನು ಕೈ ಮುಗಿದ್ರೆ ತಪ್ಪು ಒಪ್ಪುಗಳನ್ನು ಸರಿ ಮಾಡುತ್ತಾನೆ ಅನ್ನೋದು ಇಲ್ಲಿಯ ಭಕ್ತರ ನಂಬಿಕೆ ಇಲ್ಲಿ ನಡೆಯುವ ಜಾತ್ರೆಯಂತು ಭಕ್ತರ ಪಾಲಿಗೆ 9 ದಿನದ ಹಬ್ಬ ಅಂತಾನೆ ಹೇಳಬಹುದು. ಪ್ರತಿ ವರ್ಷ ಎಪ್ರಿಲ್ 10 ರಂದು ಇಲ್ಲಿ ಜಾತ್ರಾ ಮಹೋತ್ಸವ ಆರಂಭವಾಗುತ್ತೆ. ಇಲ್ಲಿ ಪ್ರತಿ ದಿನವೂ ದೇವರು 10 ಊರ ಬೇರೆ ಬೇರೆ ದಿಕ್ಕಿಗೆ ಮೆರವಣಿಗೆಗೆ ಹೊರಟು ನಿಲ್ಲುತ್ತಾರೆ. ದೇವರನ್ನು 10 ಊರುಗಳಲ್ಲಿ ನಿರ್ಮಿಸಲಾದ ನೂರಾರು ಕಟ್ಟೆಗಳಲ್ಲಿ ಜನರು ಪೂಜಿಸಿ ತಮ್ಮ ಕೈಲಾದ ಸೇವೆಯನ್ನು ಮಾಡುತ್ತಾರೆ. ಇನ್ನು ಜಾತ್ರೆಯ ಸಮಯದಲ್ಲಿ ಉಲ್ಲಾಳ್ತಿ ಸೇರಿದಂತೆ ವಿವಿಧ ದೈವಗಳ ಆಗಮನದ ದೃಶ್ಯವನ್ನು ನಾವು ಕಾಣಬಹುದು. ಇಲ್ಲಿ ದೇವರ – ದೈವದ ಬೇಟಿ, ಮಾತುಕತೆ ನೋಡೋಕೆ ಎರಡು ಕಣ್ಣು ಸಾಲೋಲ್ಲ ಅನ್ನೋದು ಭಕ್ತರ ಅಂಬೋಣ. ಇನ್ನು ಪ್ರತಿ ವರ್ಷ ಎಪ್ರಿಲ್ ೧೭ ರಂದು ಇಲ್ಲಿ ದೇವರ ತೇರು ಎಳೆಯಲಾಗುತ್ತೆ. ಅದಕ್ಕಿಂತ ಮುನ್ನ ನಡೆಯುವ ಸಿಡಿ ಮದ್ದು ಪ್ರದರ್ಶನ ನೋಡುಗರ ಕಣ್ಮನ ಸೆಳೆಯುತ್ತೆ.

ಇದು ಜಾತ್ರೆಯ ದಿನವಾದ್ರೆ ಅದರ ನಂತರದ ದಿನ ನಡೆಯುವ ಅವಭ್ರತ ಸ್ನಾನ ಮತ್ತೊಂದು ವಿಶೇಷ . ಎಪ್ರಿಲ್ 18 ಮಧ್ಯಾಹ್ನ 3 ಗಂಟೆಗೆ ಆರಂಭವಾಗುವ ದೇವರ ಮೆರವಣಿಗೆ 54ಕಟ್ಟೆಗಳಲ್ಲಿ ಪೂಜೆ ಗೊಳಗೊಂಡು 14 ಕಿಮೀಟರ್ ದೂರದಲ್ಲಿರುವ ಕುಮಾರ ಧಾರ ನದಿಯಲ್ಲಿ ಅಂತ್ಯವಾಗುತ್ತೆ. ಇಲ್ಲಿ ಪ್ರತಿಯೊಂದು ಕಡೆಯೂ ಸ್ವತಹ ತಂತ್ರಿಗಳು ದೇವರನ್ನು ಹೊತ್ತು ತೆರಳುತ್ತಾರೆ ಅನ್ನೋದು ವಿಶೇಷ . ನಂತರ ವೀರ ಮಂಗಲದಲ್ಲಿ ದೇವರ ಅವಭೃತ ಸ್ನಾನ ಕೈಗೊಂಡು ತಂತ್ರಿಗಳು ಕಾಲ್ನಡಿಗೆಯ ಮೂಲಕವೇ ಮತ್ತೆ ದೇವಾಲಯಕ್ಕೆ ದೇವರ ಉತ್ಸವ ಮೂರ್ತಿಯನ್ನು ಕರೆತರುತ್ತಾರೆ . ಈ ಮೆರವಣಿಗೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚಿನ ಭಕ್ತರು ಸೇರೋದು ವಿಶೇಷ. ಇನ್ನು ಅವಭೃತ ಸ್ನಾನಕ್ಕೆ ಮತ್ತೊಂದು ಹಿನ್ನೆಲೆ ಇದೆ. ಅದೇನಂದ್ರೆ ಮೊದಲು ಅವಭೃತ ಸ್ನಾನಕ್ಕಾಗಿ ದೇವರನ್ನು ಉಪ್ಪಿನಂಗಡಿಯ ಕುಮಾರಧಾರ ನದಿಯ ಬಳಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತಂತೆ . ಆದರೆ ಒಂದು ಬಾರಿ ವೀರ ಮಂಗಲದ ಬಳಿಯ ಗರ್ಭಿಣಿ ಸ್ತ್ರೀಯೊಬ್ಬರಿಗೆ ದೇವರಿಗೆ ನೋಡುವ ಆಸೆಯಾಯಿತಂತೆ. ಆಗ ಆಕೆ ದೇವರು ವೀರ ಮಂಗಲದಲ್ಲಿ ಸ್ನಾನ ಮಾಡಿದ್ದರೆ ತಾನೂ ದರ್ಶನ ಮಾಡಬಹುದು ಎಂದು ದೇವರಿಗೆ ಬೇಡಿಕೊಂಡರಂತೆ. ಆಕೆಯ ಬೇಡಿಕೆಯನ್ನು ಆಲಿಸಿದ ಮಹಾಲಿಂಗೇಶ್ವರ ಅಂದು ವೀರಮಂಗದಲ್ಲಿ ಅವಭೃತ ಸ್ನಾನ ಮಾಡಿದ ಎಂಬ ನಂಬಿಕೆ ಇದೆ. ಇಂದಿಗೂ ಅವರ ಕುಟುಂಬ ವೀರ ಮಂಗಲದಲ್ಲಿ ಮೊಸರು ಅವಲಕ್ಕಿ ಸೇವೆಯನ್ನು ಅರ್ಪಿಸುತ್ತಾರೆ. ಇದನ್ನೂ ಓದಿ : Shivalinga : ಚೂರಾದ ಶಿವಲಿಂಗ ಮತ್ತೆ ಒಂದಾಗುತ್ತೆ, ಸಿಡಿಲಿನಿಂದ ಕಾಪಾಡ್ತಾನೆ ಶಿವ

ಇನ್ನು ದೇವಾಲಯದ ಪೌರಾಣಿಕ ಹಿನ್ನೆಲೆಯನ್ನು ಹೇಳೋದಾದ್ರೆ. ಇದು ಕಾಶಿಯಿಂದ ಬಂದು ನೆಲೆ ನಿಂತ ಲಿಂಗವಾಗಿದೆ . ಸುಮಾರು ವರ್ಷದ ೮ನೇ ಶತಮಾನದಲ್ಲಿ ಕಾಶಿಯಿಂದ ಮೂವರು ಭ್ರಾಹ್ಮಣರು ಉಪ್ಪಿನಂಗಡಿಯ ಬಳಿ ಬಂದಿದ್ದರಂತೆ. ಅವರ ಬಳಿಯಲ್ಲಿ ಅವರು ನಿತ್ಯ ಪೂಜಿಸುತ್ತಿದ್ದ ಶಿವಲಿಂಗ ಇತ್ತೆಂದು ಮೂವರಲ್ಲಿ ಒಬ್ಬರು ಶಿವಲಿಂಗದ ಸಮೇತರಾಗಿ ಪುತ್ತೂರಿಗೆ ಬಂದರಂತೆ . ಆಗ ಅಲ್ಲಿ ಬಂಗ ರಾಜ ಆಡಳಿತ ನಡೆಸುತ್ತಿದ್ದನಂತೆ. ಭ್ರಾಹ್ಮಣನು ರಾಜನಲ್ಲಿ ದೇವರ ಪೂಜೆಗಾಗಿ ಸಲಕರಣೆಯನ್ನು ಕೇಳಲು ರಾಜನಿದ್ದಲ್ಲಿಗೆ ಹೋಗಿದ್ದಾನೆ. ಆದರೆ ಅಲ್ಲಿ ರಾಜನು ಆತನ ತಂಗಿಯ ಹೆರಿಗೆಯ ಗಾಬರಿಯಲ್ಲಿದ್ದ. ಆಗ ಆ ಭ್ರಾಹ್ಮಣನ ತೇಜಸ್ಸು ಕಂಡು ತಂಗಿಯ ಹೆರಿಗೆ ಬೇಗ ಆಗಲಿ ಎಂದು ಕೇಳಿಕೊಂಡಿದ್ದಾನೆ . ಅಂತೆಯೇ ಆಗಿದೆ ಕೂಡಾ. ಅದಾದ ನಂತರ ರಾಜ ಪೂಜೆಗೆ ಸಕಲ ಸಲಕರಣೆಯನ್ನು ನೀಡಿದ್ದಾನೆ. ಆದರೆ ಅಂದು ಭ್ರಾಹ್ಮಣನು ದೇವರ ಲಿಂಗವನ್ನು ಪೀಠದಲ್ಲಿ ಇಟ್ಟು ಪೂಜಿಸುವ ಬದಲು ನೆಲದಲ್ಲಿ ಇಟ್ಟು ಪೂಜಿಸಿದ್ದಾರೆ. ಆದರೆ ಪೂಜೆಯ ನಂತರ ಆ ಶಿವಲಿಂಗ ಭೂಮಿಯಿಂದ ಮೇಲೇಳಲಿಲ್ಲ. ಆದ ರಾಜ ತನ್ನ ಸೇನಾ ಬಲ ಹಾಗೂ ಆನೆಯನ್ನು ಬಳಸಿ ಶಿವಲಿಂಗ ವನ್ನು ಎತ್ತಲು ಯತ್ನಿಸಿದನಂತೆ ಆದರೆ ಆನೆಯೇ ಸಿಡಿದು ಚೂರಾಗಿ ಹಲವು ಸ್ಥಳದಲ್ಲಿ ಬಿತ್ತೆಂದು. ಅದೇ ಇಂದು ಕೊಂಬೆಟ್ಟು, ಕರಿಯಾಲ, ಬೆರಿಪದವು ತಲೆಯಾಡಿ ಆಯಿತು ಜನರ ನಂಬಿಕೆ. ಇದನ್ನೂ ಓದಿ : Shri Kshetra Kamalashile: ಕುಬ್ಜಾ ನದಿ ಹಾಗೂ ನಾಗತೀರ್ಥಗಳ ಸಂಗಮ ಕ್ಷೇತ್ರವಾದ ಈ ಕ್ಷೇತ್ರದ ಬಗ್ಗೆ ನೀವು ತಿಳಿಯಲೇ ಬೇಕು

ಅಂದ ಹಾಗೆ ಈ ಅದ್ಬುತವಾದ ದೇವಾಲಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪುತ್ತೂರು ತಾಲೋಕಿನ ಹತ್ತೂರ ಒಡೆಯ ಮಹಾತೋಭಾರ ಮಹಾಲಿಗೇಶ್ವರನ (Puttur Mahalingeshwara Temple) ಆಲಯ. ಇಲ್ಲಿಗೆ ಪುತ್ತೂರು ಅಂತ ಹೆಸರು ಬರೋಕೂ ಒಂದು ಕಾರಣವಿದೆ. ಇಲ್ಲಿಯ ಪುಷ್ಕರಣಿಯಲ್ಲಿ ಮುತ್ತನ್ನು ಬೆಳೆಯಲಾಗುತ್ತಿತ್ತಂತೆ. ಹೀಗಾಗಿ ಇದನ್ನು ಮುತ್ತುರು ಅನ್ನಲಾಗುತ್ತಿತ್ತು. ಅದೇ ಮುಂದೆ ಪುತ್ತೂರಾಯಿತು ಎಂಬ ನಂಬಿಕೆ ಇದೆ. ಇನ್ನು ಈ ದೇವಾಲಯ ಪುತ್ತೂರಿನ ಬಸ್ ನಿಲ್ದಾಣದಿಂದ ಕೆಲವೂ ಅಡಿಗಳ ದೂರದಲ್ಲಿದೆ. ಪುತ್ತೂರು ಬಸ್ ನಿಲ್ದಾಣಕ್ಕೆ ಬಂದ್ರೆ ನಡೆದುಕೊಂಡೇ ದೇವರ ದರ್ಶನ ಪಡೆಯಬಹುದು. ಇಲ್ಲಿ ಭಕ್ತರಿಗಾಗಿ ಅನ್ನಸಂತರ್ಪಣೆಯು ನಡೆಯುತ್ತಿರುತ್ತೆ. ಹೀಗಾಗಿ ಇಲ್ಲಿ ಭಕ್ತರು ಹಸಿವಿನ ಹಂಗಿಲ್ಲದೆ ದೇವರ ದರ್ಶನ ಪಡೆಯಬಹುದಾಗಿದೆ. ಹೀಗಾಗಿ ನೀವು ಕೂಡಾ ಇಲ್ಲಿಗೆ ಒಂದು ಬಾರಿ ಬೇಟಿ ನೀಡಿ.

Comments are closed.