Mahavira Jayanti 2023: ದಿನಾಂಕ, ಶುಭ ಮುಹೂರ್ತ, ಪೂಜಾ ವಿಧಿ ಮತ್ತು ಆಚರಣೆಗಳ ಬಗ್ಗೆ ಇಲ್ಲಿದೆ ವಿವರ

(Mahavira Jayanti 2023) ಭಗವಾನ್ ಮಹಾವೀರರ ಜನ್ಮ ವಾರ್ಷಿಕೋತ್ಸವವನ್ನು ಗೌರವಿಸುವ ಸಲುವಾಗಿ ಜನರು ಮಹಾವೀರ ಜಯಂತಿಯನ್ನು ಆಚರಿಸುತ್ತಾರೆ. ಪ್ರಪಂಚದಾದ್ಯಂತ ಇರುವ ಜೈನ ಸಮುದಾಯದವರು ಈ ದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಮಹಾವೀರ್ ಅವರ ಶಾಂತಿ ಮತ್ತು ಪ್ರೀತಿಯ ಸಾರ್ವತ್ರಿಕ ಸಂದೇಶವು ಪ್ರಪಂಚದಾದ್ಯಂತದ ಜೈನರಿಗೆ ಈ ಸಾಂಸ್ಕೃತಿಕ ರಜಾದಿನವನ್ನು ಆನಂದಿಸಲು ಮತ್ತು ಆಚರಿಸಲು ಪ್ರೇರೇಪಿಸುತ್ತದೆ. ಈ ವರ್ಷ ಏಪ್ರಿಲ್ 4 ರಂದು ಜೈನ ಸಮುದಾಯದ ಪವಿತ್ರ ಹಬ್ಬವನ್ನು ಆಚರಿಸಲಾಗುತ್ತದೆ. ಮಹಾವೀರ ಜಯಂತಿಯ ಶುಭ ಮುಹೂರ್ತ, ಆಚರಿಸಬೇಕಾದ ಆಚರಣೆಗಳು ಮತ್ತು ಪೂಜೆ ವಿಧಿಗಳು ಏನೆಂಬುದನ್ನು ತಿಳಿಯೋಣ.

ಮಹಾವೀರ ಜಯಂತಿ 2023 ಶುಭ ಮುಹೂರ್ತ ;
ಮಹಾವೀರ ಜಯಂತಿಯನ್ನು ಚೈತ್ರ ಮಾಸದ ಹುಣ್ಣಿಮೆಯ ಹದಿಮೂರನೆಯ ದಿನ ಆಚರಿಸಲಾಗುತ್ತದೆ. ಅಂದರೆ ತ್ರಯೋದಶಿ ತಿಥಿಯ ಪ್ರಾರಂಭ ಮತ್ತು ಅಂತ್ಯದ ಸಮಯದಲ್ಲಿ ಆಚರಿಸಲಾಗುತ್ತದೆ.
ತ್ರಯೋದಶಿ ತಿಥಿ ಆರಂಭ: ಏಪ್ರಿಲ್ 03, 2023 ರಂದು ಬೆಳಿಗ್ಗೆ 06.24
ತ್ರಯೋದಶಿ ತಿಥಿ ಅಂತ್ಯ: ಏಪ್ರಿಲ್ 04, 2023 ರಂದು ಬೆಳಿಗ್ಗೆ 08.05

ಮಹಾವೀರ ಜಯಂತಿ 2023 ಪೂಜಾ ವಿಧಿ ;
ಈ ದಿನ ಭಗವಾನ್ ಮಹಾವೀರ ವಿಗ್ರಹಕ್ಕೆ ಬೆಳಿಗ್ಗೆ ಸ್ನಾನ ಮಾಡಲಾಗುತ್ತದೆ. ನಂತರ ತೊಟ್ಟಿಲ ಮೇಲೆ ವಿಗ್ರಹವನ್ನು ಮಲಗಿಸಿ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಒಯ್ಯಲಾಗುತ್ತದೆ. ಅಲ್ಲಿ ಆರಾಧಕರು ಹೂವು, ಅಕ್ಕಿ ಮತ್ತು ಸಿಹಿತಿಂಡಿಗಳನ್ನು ವಿಗ್ರಹಕ್ಕೆ ಅರ್ಪಿಸುತ್ತಾರೆ. ನಂತರ ಭಗವಾನ್ ಮಹಾವೀರರ ಧರ್ಮೋಪದೇಶಗಳ ಪವಿತ್ರ ಉಪದೇಶಗಳನ್ನು ಓದುವುದರ ಮೂಲಕ ಜನರು ಭಗವಾನ್‌ ಮಹಾವೀರ್‌ ನನ್ನು ಪ್ರಾರ್ಥಿಸುತ್ತಾರೆ.

ಮಹಾವೀರ ಜಯಂತಿ 2023 ರ ಆಚರಣೆಗಳು:
30 ನೇ ವಯಸ್ಸಿನಲ್ಲಿಯೇ ತಮ್ಮ ವೈಭೋಗವನ್ನು ತ್ಯಜಿಸಿ ತಪಸ್ವಿಯಾಗಿ ತಮ್ಮ ಜೀವನವನ್ನು ಕಳೆದು, ಅಹಿಂಸೆಯ ಮೌಲ್ಯವನ್ನು ಜನರಿಗೆ ತಿಳಿಸಿಕೊಡುವ ಕೆಲಸ ಮಾಡಿದರು. ಪ್ರತಿಯೊಬ್ಬ ಜನರಿಗೂ ಪ್ರೀತಿಯನ್ನು ಉಧಾರ ಮನೋಭಾವದಿಂದ ನೀಡುತ್ತಿದ್ದರು. ಮಹಾವೀರರ ಜನ್ಮದಿನದ ಶುಭ ಗಳಿಗೆಯಂದು ಜೈನ ಸಮುದಾಯದವರು ದೇವಸ್ಥಾನಕ್ಕೆ ಹೋಗಿ ಭಗವಾನ್ ಮಹಾವೀರನ ವಿಗ್ರಹಗಳಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಈ ದಿನವನ್ನು ಆಚರಿಸುತ್ತಾರೆ. ಇದಲ್ಲದೇ ಈ ದಿನದಂದು ಜನರು ಅಗತ್ಯವಿರುವವರಿಗೆ ಬಟ್ಟೆ, ಆಹಾರ ಮತ್ತು ಹಣವನ್ನು ದಾನ ಮಾಡುತ್ತಾರೆ.

ಇದನ್ನೂ ಓದಿ : ಪಿಎಂ ಮೋದಿಯೊಂದಿಗೆ ಗೋಲ್‌ಗಪ್ಪ ಸವಿದ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ : ವಿಡಿಯೋ ಸಖತ್‌ ವೈರಲ್

ಮಹಾವೀರ ಜಯಂತಿ 2023 ಇತಿಹಾಸ ಮತ್ತು ಮಹತ್ವ:
ಮಹಾವೀರರು ತಮ್ಮ 30 ನೇ ವಯಸ್ಸಿನಲ್ಲಿ ಆಧ್ಯಾತ್ಮಿಕ ಮಾರ್ಗವನ್ನು ಅನುಸರಿಸಲು ತಮ್ಮ ಸಿಂಹಾಸನವನ್ನು ಮತ್ತು ಅವರ ಎಲ್ಲಾ ಭೌತಿಕ ಸಂಪತ್ತನ್ನು ತ್ಯಜಿಸಿದರು. 12 ವರ್ಷಗಳ ವನವಾಸದಲ್ಲಿ ತಪಸ್ವಿಯಾಗಿ, ಎಲ್ಲಾ ಲೌಕಿಕ ಭೋಗಗಳಿಂದ ದೂರವಿದ್ದರು. ಸುಮಾರು 12 ವರ್ಷಗಳ ಕಾಲ ‘ಕೇವಲ ಜ್ಞಾನ’ ಅಥವಾ ಸರ್ವಜ್ಞತೆಯನ್ನು ಪಡೆಯುವ ಸಲುವಾಗಿ ಮೊದಲು ಧ್ಯಾನ ಮತ್ತು ಕಠಿಣ ಜೀವನವನ್ನು ನಡೆಸಿದರು. ಆದ್ದರಿಂದ ಇವರು ಋಷಿ ವರ್ಧಮಾನ ಎಂದೂ ಕರೆಯಲ್ಪಟ್ಟರು ಮತ್ತು ಅಹಿಂಸೆಯನ್ನು ಬೋಧಿಸಿದರು. ಮಹಾವೀರ ಜಯಂತಿಯು ನಮ್ಮ ದೈನಂದಿನ ಜೀವನದಲ್ಲಿ ಎಲ್ಲಾ ಐಹಿಕ ಜೀವಿಗಳ ಕಡೆಗೆ ಅಹಿಂಸೆ ಮತ್ತು ದಯೆಯ ಪರಿಕಲ್ಪನೆಯನ್ನು ಪರಿಚಯಿಸುತ್ತದೆ.

Mahavira Jayanti 2023: Date, Auspicious Day, Pooja Ritual and Celebrations Details Here

Comments are closed.