Virat Kohli fan boy in Mumbai Indians: ಮುಂಬೈ ತಂಡದಲ್ಲಿ ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ, ಆತ ಕ್ರಿಕೆಟರ್ ಆಗಿದ್ದೇ ಕಿಂಗ್ ಕೊಹ್ಲಿಯಿಂದ..!

ಬೆಂಗಳೂರು : ಕ್ರಿಕೆಟ್ ಜಗತ್ತಿನ “ಕಿಂಗ್” ಖ್ಯಾತಿಯ ವಿರಾಟ್ ಕೊಹ್ಲಿ (Virat Kohli) ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ವಿರಾಟ್ ಕೊಹ್ಲಿ ಅವರನ್ನು ಪ್ರೀತಿಸುವ, ಆರಾಧಿಸುವ ಕೋಟ್ಯಂತರ (Virat Kohli fan boy in Mumbai Indians) ಜನ ಕ್ರಿಕೆಟ್ ಜಗತ್ತಿನಲ್ಲಿದ್ದಾರೆ. ಇನ್ನು ಯುವ ಕ್ರಿಕೆಟಿಗರ ಪಾಲಿಗಂತೂ ವಿರಾಟ್ ಕೊಹ್ಲಿ ಅತೀ ದೊಡ್ಡ ಇನ್ಸ್’ಪಿರೇಷನ್. ಕೊಹ್ಲಿ ಕಾರಣದಿಂದ ಬ್ಯಾಟ್ ಹಿಡಿದ ಹುಡುಗರಿಗಂತೂ ಲೆಕ್ಕವೇ ಇಲ್ಲ.

ಐಪಿಎಲ್’ನಲ್ಲಿ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದಲ್ಲೂ ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿಯೊಬ್ಬನಿದ್ದಾನೆ. ಆತ ಕ್ರಿಕೆಟರ್ ಆಗಿದ್ದೇ ವಿರಾಟ್ ಕೊಹ್ಲಿ ಕಾರಣಕ್ಕೆ. 2019ರಲ್ಲಿ ಆತ ವಿರಾಟ್ ಕೊಹ್ಲಿ ಬಗ್ಗೆ ಸ್ಟೇಟ್ಮೆಂಟ್ ಒಂದನ್ನು ಕೊಟ್ಟಿದ್ದ. “ನನ್ನ ರೂಮ್’ನಲ್ಲಿ ವಿರಾಟ್ ಕೊಹ್ಲಿಯವರ ಪೋಸ್ಟರ್’ಗಳಿವೆ. ನಾನು ಅವರನ್ನು ಭೇಟಿ ಮಾಡಬೇಕು ಮತ್ತು ನಾನು ಕ್ರಿಕೆಟಿಗನಾಗಿದ್ದೇ ನಿಮ್ಮಿಂದ ಅಂತ ಅವರಿಗೆ ಹೇಳಬೇಕು” ಎಂದು 2019ರಲ್ಲಿ ಆ ಯುವಕ ಹೇಳಿದ್ದ. ಅಂದ ಹಾಗೆ ಆತನ ಹೆಸರು ತಿಲಕ್ ವರ್ಮಾ.

ತೆಲಂಗಾಣದ ಹೈದರಾಬಾದ್’ನವರಾದ ತಿಲಕ್ ವರ್ಮಾ (Tilak Verma) ಭಾನುವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ (Royal Challengers Bangalore) ವಿರುದ್ಧ ಸಿಡಿಲಬ್ಬರ 84 ರನ್ ಸಿಡಿಸಿದ್ದರು. ಮುಂಬೈ ಇಂಡಿಯನ್ಸ್ 48 ರನ್ನಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ತಂಡಕ್ಕೆ ಆಸರೆಯಾಗಿದ್ದ 20 ವರ್ಷದ ಎಡಗೈ ಬ್ಯಾಟ್ಸ್’ಮನ್ ತಿಲಕ್ ವರ್ಮಾ 46 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್’ಗಳ ನೆರವಿನಿಂದ ಸ್ಫೋಟಕ 84 ರನ್ ಸಿಡಿಸಿದ್ದರು. ಆದರೆ ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸಿಸ್ ಅಬ್ಬರದಿಂದಾಗಿ ಆರ್’ಸಿಬಿ ತಂಡ 8 ವಿಕೆಟ್’ಗಳ ಭರ್ಜರಿ ಗೆಲುವು ದಾಖಲಿಸಿತ್ತು.

ಇದನ್ನೂ ಓದಿ : ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ ಭರ್ಜರಿ ಗೆಲುವು : ಸಂಭ್ರಮಿಸಿದ ವಿರಾಟ್ ಕೊಹ್ಲಿ ಟೀಮ್‌

ಪಂದ್ಯದ ನಂತರ ತಿಲಕ್ ವರ್ಮಾ ತಮ್ಮ ಆರಾಧ್ಯ ದೈವ ವಿರಾಟ್ ಕೊಹ್ಲಿ ಅವರನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಭೇಟಿ ಮಾಡಿದ್ದಾರೆ. ಈ ವೇಳೆ ಯುವ ಆಟಗಾರನಿಗೆ ವಿರಾಟ್ ಕೊಹ್ಲಿ ಕೆಲ ಬ್ಯಾಟಿಂಗ್ ಪಾಠಗಳನ್ನು ಹೇಳಿಕೊಟ್ಟಿದ್ದು, ಆ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂದ್ಯ ಗೆದ್ದ ನಂತರ ಮಾತನಾಡಿದ್ದ ವಿರಾಟ್ ಕೊಹ್ಲಿ, ಮುಂಬೈ ಇಂಡಿಯನ್ಸ್’ನ ಯುವ ಆಟಗಾರನ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಳೆದ ವರ್ಷ ಐಪಿಎಲ್’ಗೆ ಪದಾರ್ಪಣೆ ಮಾಡಿದ್ದ ತಿಲಕ್ ವರ್ಮಾ ಚೊಚ್ಚಲ ಆವೃತ್ತಿಯಲ್ಲೇ 390ಕ್ಕೂ ಹೆಚ್ಚು ರನ್ ಗಳಿಸಿ ಮಿಂಚಿದ್ದರು.

Virat Kohli fan boy in Mumbai Indians: Big fan of Virat Kohli in Mumbai team, he is a cricketer because of King Kohli..!

Comments are closed.