Modi’s Night Journey :ಮೋದಿ ಯಾಕೆ ರಾತ್ರಿ ಹೊತ್ತು ಹೆಚ್ಚು ಪ್ರಯಾಣಿಸುತ್ತಾರೆ?

ಪ್ರಧಾನಿ ನರೇಂದ್ರ ಮೋದಿ (PM Narendra Modi) ಕಳೆದ ಹದಿನೈದು ದಿನಗಳಿಂದ ಬಿಡುವಿಲ್ಲದ ವಿದೇಶ ಪ್ರವಾಸ ವೇಳಾಪಟ್ಟಿಯನ್ನು(Foreign Travel Schedule)ಹೊಂದಿದ್ದಾರೆ. ಈ ತಿಂಗಳ ಆರಂಭದಲ್ಲಿ, ಅವರು ಬುದ್ಧ ಜಯಂತಿಗಾಗಿ ನೇಪಾಳಕ್ಕೆ ಹೋಗುವ ಮೊದಲು ಮೂರು ದಿನಗಳ ಕಾಲ ಜರ್ಮನಿ (Germany), ಡೆನ್ಮಾರ್ಕ್( Denmark) ಮತ್ತು ಫ್ರಾನ್ಸ್‌ಗೆ (France) ಪ್ರಯಾಣಿಸಿದರು. ಇನ್ನೂ ಮುಖ್ಯವಾಗಿ ಮುಂದಿನ ವಾರ ಮತ್ತೊಂದು ಮಹತ್ವದ ಭೇಟಿಗಾಗಿ ಜಪಾನ್‌ಗೆ (Japan) ಹಿಂತಿರುಗುತ್ತಾರೆ, ಈ ತಿಂಗಳು ತಮ್ಮ ತೀವ್ರವಾದ ವೇಳಾಪಟ್ಟಿಯನ್ನು ಮುಂದುವರೆಸುತ್ತಾರೆ. ಈ ವೇಳಾಪಟ್ಟಿಯನ್ನು ಗಮನಿಸಿದರೆ ಅವರ ವೇಳಾಪಟ್ಟಿಯಲ್ಲಿ ಒಂದು ಮಾದರಿ ಇದೆ. ಅವರು ಸಾಮಾನ್ಯವಾಗಿ ಸಮಯವನ್ನು ಉಳಿಸಲು ರಾತ್ರಿಯಲ್ಲಿ ಪ್ರಯಾಣಿಸುತ್ತಾರೆ (Modi’s Night Journey).

ಪ್ರಧಾನಿ ನರೇಂದ್ರ ಮೋದಿ ಅವರು ಜರ್ಮನಿ ಮತ್ತು ಡೆನ್ಮಾರ್ಕ್‌ನಲ್ಲಿ ಕೇವಲ ಒಂದು ರಾತ್ರಿ ಕಳೆದಿದ್ದಾರೆ. ಅಂತೆಯೇ, ಜಪಾನ್ ಭೇಟಿಯ ಸಮಯದಲ್ಲಿ, ಅವರು ಕೇವಲ ಒಂದು ರಾತ್ರಿಯನ್ನು ಕಳೆಯುತ್ತಾರೆ ಮತ್ತು ರಾತ್ರಿಯಲ್ಲಿ ಹಿಂತಿರುಗುತ್ತಾರೆ ಎಂದು ANI ವರದಿ ಮಾಡಿದೆ.

• ಈ ತಿಂಗಳು ಐದು ದೇಶಗಳಿಗೆ ಭೇಟಿ ನೀಡಲಿದ್ದಾರೆ
• ಮೋದಿ ಶೀಘ್ರದಲ್ಲೇ ಜಪಾನ್‌ನ ಟೋಕಿಯೊಗೆ ಭೇಟಿ ನೀಡಲಿದ್ದಾರೆ
• ಅವರು ಮೇ 22 ರಂದು ರಾತ್ರಿ ಹೊರಡಲಿದ್ದು, ಮೇ 23 ರಂದು ಟೋಕಿಯೊಗೆ ಮುಂಜಾನೆ ಆಗಮಿಸಲಿದ್ದಾರೆ

ಅವರ ಜಪಾನ್ ಭೇಟಿಯು ಭಿನ್ನವಾಗಿರುವುದಿಲ್ಲ. ಅವರು ಮೇ 22 ರಂದು ರಾತ್ರಿ ಹೊರಟು , ಮೇ 23 ರಂದು ಮುಂಜಾನೆ ಟೋಕಿಯೊಗೆ ಆಗಮಿಸುತ್ತಾರೆ
ನಂತರ ಉದ್ಯಮಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಇನ್ನೂ   ಮೋದಿ ಮರುದಿನ ಕ್ವಾಡ್ ಸಭೆಯಲ್ಲಿ ಭಾಗವಹಿಸಿ,ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಿ ಅನಂತರ ಅದೇ ರಾತ್ರಿ ಭಾರತಕ್ಕೆ ಹಿಂತಿರುಗುತ್ತಾರೆ.ಪ್ರಧಾನಿಯವರು ತಮ್ಮ ಇತ್ತೀಚಿನ ಭೇಟಿಗಳಲ್ಲಿ ಜರ್ಮನಿ ಮತ್ತು ಡೆನ್ಮಾರ್ಕ್‌ನಲ್ಲಿ ಕೇವಲ ಒಂದು ರಾತ್ರಿಯನ್ನು ಕಳೆದರು. ಅಂತೆಯೇ, ಜಪಾನ್ ಭೇಟಿಯ ಸಮಯದಲ್ಲಿ, ಅವರು ಕೇವಲ ಒಂದು ರಾತ್ರಿಯನ್ನು ಕಳೆದು ಮತ್ತೆ ಹಿಂತಿರುಗುತ್ತಿದ್ದರು.  ಒಟ್ಟಾರೆಯಾಗಿ, ಪ್ರಧಾನಿ ಮೋದಿ ಈ ತಿಂಗಳು ಐದು ದೇಶಗಳಿಗೆ ಭೇಟಿ ನೀಡಲಿದ್ದು, ಈ ದೇಶಗಳಲ್ಲಿ ಒಟ್ಟು ಮೂರು ರಾತ್ರಿಗಳನ್ನು ಮಾತ್ರ ಕಳೆಯಲಿದ್ದಾರೆ. ಸಮಯವನ್ನು ಉಳಿಸುವ ಉದ್ದೇಶದಿಂದ ಅವರು ವಿಮಾನದಲ್ಲಿ ನಾಲ್ಕು ರಾತ್ರಿಗಳನ್ನು ಕಳೆಯುತ್ತಿದ್ದರು.

ಮೂಲಗಳ ಪ್ರಕಾರ ಅವರು ಮೊದಲಿನಿಂದಲೂ ಹಣ ಮತ್ತು ಸಮಯವನ್ನುಉಳಿಸುವುದು ಅಭ್ಯಾಸ. ಸಾಮಾನ್ಯ ಜನರಿಗೆ ಪ್ರಯಾಣಿಸುವಾಗಲೂ ಕೂಡ ಉಳಿತಾಯದ ಬಗ್ಗೆ ಹೆಚ್ಚು ಗಮನ ಬಿತ್ತು. ಮೊದಲು ಅವರು ಆಗಾಗ್ಗೆವಿಮಾನದಲ್ಲಿ ಪ್ರಯಾಣಿಸುವಾಗ ನಿಲ್ದಾಣಗಳಲ್ಲಿ ಮಲಗುತ್ತಿದ್ದರು ಎಂದು ಮೂಲಗಳು ತಿಳಿಸಿವೆ.ಇನ್ನೂ ಈಗಲೂ ಈ ಅಭ್ಯಾಸವನ್ನು ಬಿಡಲಿಲ್ಲ.

ಪಿಟಿಐನ ಹಿಂದಿನ ವರದಿಯ ಪ್ರಕಾರ, ಅವರು ವಿಮಾನದಲ್ಲಿ ಗಮ್ಯಸ್ಥಾನದಸಮಯದ ಅನುಗುಣವಾಗಿ ನಿದ್ರಿಸುತ್ತಿದ್ದರು. ಆದರೆ ಬೆಳಗ್ಗೆ ಹೊತ್ತಲ್ಲಿ ನಿದ್ರಿಸುತ್ತಿರುವ ಇಲ್ಲ. ಹಾಗೂ ಮೋದಿ ವಿದೇಶಕ್ಕೆ ಪ್ರಯಾಣಿಸುವಾಗ ಕೂಡ ಅವರು ಮೊದಲಿಗೆ ಆ ದೇಶದ  ವಾತಾವರಣತಕ್ಕಂತೆ  ಹಾಗೂ ಸಮಯಕ್ಕೆ ಅನುಗುಣವಾಗಿ ಆಹಾರ ಮತ್ತು ನಿದ್ರೆಯನ್ನು  ಮಾಡುತ್ತಾರೆ.

ಇದನ್ನು ಓದಿ : Kiara Advani : ‘ಮದುವೆಯಾಗದೆಯೂ ಖುಷಿಯಾಗಿರಬಹುದು’ : ವಿವಾಹದ ಬಗ್ಗೆ ಕೇಳಿದ ಪ್ರಶ್ನೆಗೆ ನಟಿ ಕಿಯಾರಾ ಖಡಕ್​ ಉತ್ತರ

ಇದನ್ನು ಓದಿ :WhatsApp Tips And Tricks : WhatsApp ನ ಈ ಸಿಕ್ರೇಟ್‌ ಫೀಚರ್‌ಗಳು ನಿಮಗೆ ಗೊತ್ತಾ?

(Modi’s Night Journey Why Prime Minister Narendra Modi always fly at night)

Comments are closed.