ರಣಜಿ ಟ್ರೋಫಿ ಮನೀಶ್ ಪಾಂಡೆಗೆ ಡಬಲ್ ಧಮಾಕ, 20ನೇ ಶತಕ, 6 ಸಾವಿರ ರನ್ ಗಡಿ ದಾಟಿದ ಪಾಂಡೆ

ಬೆಂಗಳೂರು: ಕರ್ನಾಟಕ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್ ಮನೀಶ್ ಪಾಂಡೆ (Manish Pandey), ರಣಜಿ ಟ್ರೋಫಿಯಲ್ಲಿ (Ranji Trophy 2022-23) 20ನೇ ಶತಕ ಬಾರಿಸಿದ್ದಾರೆ. ಅಷ್ಟೇ ಅಲ್ಲ, ರಣಜಿ ಟ್ರೋಫಿಯಲ್ಲಿ 6 ಸಾವಿರ ರನ್’ಗಳ (Karnataka Vs Rajasthan Ranji match) ಗಡಿ ದಾಟಿದ್ದಾರೆ.

ಬೆಂಗಳೂರಿನ ಹೊರವಲಯದ ಆಲೂರಿನಲ್ಲಿರುವ KSCA ಮೈದಾನದಲ್ಲಿ ನಡೆಯುತ್ತಿರುವ ರಾಜಸ್ಥಾನ ವಿರುದ್ಧದ (Karnataka Vs Rajasthan Ranji match) ಪಂದ್ಯದಲ್ಲಿ 33 ವರ್ಷದ ಮನೀಶ್ ಪಾಂಡೆ ಅಮೋಘ ಶತಕ ಬಾರಿಸಿದರು. 2ನೇ ದಿನದಂತ್ಯಕ್ಕೆ ಅಜೇಯ 75 ರನ್ ಗಳಿಸಿದ್ದ ಪಾಂಡೆ, 3ನೇ ದಿನದಾಟದಲ್ಲಿ ಭರ್ಜರಿ ಶತಕ ಸಿಡಿಸಿದರು. ಇದು ರಣಜಿ ಟ್ರೋಫಿಯಲ್ಲಿ ಮನೀಶ್ ಪಾಂಡೆ ಗಳಿಸಿದ 20ನೇ ಶತಕ.

ತಮ್ಮ ಶತಕದಾಟದ ವೇಳೆ ಮನೀಶ್ ಪಾಂಡೆ ರಣಜಿ ವೃತ್ತಿಜೀವನದಲ್ಲಿ 6 ಸಾವಿರ ರನ್ ಕಲೆ ಹಾಕಿದ ಸಾಧನೆ ಮಾಡಿದರು. ಈ ಮೈಲುಗಲ್ಲು ನೆಟ್ಟ ಕರ್ನಾಟಕದ 3ನೇ ಆಟಗಾರ ಮನೀಶ್ ಪಾಂಡೆ. ಇದಕ್ಕೂ ಮೊದಲು ದಿಗ್ಗಜರಾದ ಬ್ರಿಜೇಶ್ ಪಟೇಲ್ ಮತ್ತು ರಾಬಿನ್ ಉತ್ತಪ್ಪ ಕರ್ನಾಟಕ ಪರ ರಣಜಿ ಟ್ರೋಫಿಯಲ್ಲಿ 6 ಸಾವಿರಕ್ಕೂ ಹೆಚ್ಚು ರನ್ ಕಲೆ ಹಾಕಿದ್ದರು.

ರಣಜಿ ಟ್ರೋಫಿಯಲ್ಲಿ ಕರ್ನಾಟಕ ಪರ ಅತ್ಯಂತ ವೇಗವಾಗಿ 6 ಸಾವಿರ ರನ್ ಗಳಿಸಿದ ದಾಖಲೆಯನ್ನೂ ಮನೀಶ್ ಪಾಂಡೆ ಬರೆದಿದ್ದಾರೆ. ಪಾಂಡೆ ತಮ್ಮ 82ನೇ ಪಂದ್ಯದ 131ನೇ ಇನ್ನಿಂಗ್ಸ್’ನಲ್ಲಿ ಈ ಸಾಧನೆ ಮಾಡಿದರೆ, ಬ್ರಿಜೇಶ್ ಪಟೇಲ್ 92ನೇ ಪಂದ್ಯದ 131ನೇ ಇನ್ನಿಂಗ್ಸ್’ನಲ್ಲಿ 6 ಸಾವಿರ ರನ್ ಕಲೆ ಹಾಕಿದ್ದರು. ರಾಬಿನ್ ಉತ್ತಪ್ಪ 88ನೇ ಪಂದ್ಯದ 147ನೇ ರಣಜಿ ಇನ್ನಿಂಗ್ಸ್’ನಲ್ಲಿ 6 ಸಾವಿರ ರನ್’ಗಳ ಗಡಿ ತಲುಪಿದ್ದರು.

ಇದನ್ನೂ ಓದಿ : Prithvi Shaw : ರಣಜಿ ತ್ರಿಶತಕವೀರ ಪೃಥ್ವಿ ಶಾಗೆ ಟೀಮ್ ಇಂಡಿಯಾದಲ್ಲಿ ಏಕಿಲ್ಲ ಸ್ಥಾನ? ಅಸಲಿ ಗುಟ್ಟು ಇಲ್ಲಿ ರಟ್ಟು!

ಇದನ್ನೂ ಓದಿ : Virat Kohli vs Sachin Tendulkar : ದಿಗ್ಗಜರಲ್ಲಿ ಯಾರು ಗ್ರೇಟ್? “45 ಶತಕಗಳು ಸುಮ್ ಸುಮ್ನೆ ಬರಲ್ಲ”; ದಾದಾ ಬಿಗ್ ಸ್ಟೇಟ್ಮೆಂಟ್

ಇದನ್ನೂ ಓದಿ : Exclusive Virat Kohli: ಭಾರತ ತಂಡದ ಜೊತೆ ಕೋಲ್ಕತ್ತಾಗೆ ಕಿಂಗ್ ಕೊಹ್ಲಿ ಬರಲಿಲ್ಲ.. ಅವಸರವಸರವಾಗಿ ಮುಂಬೈಗೆ ತೆರಳಿದ ವಿರಾಟ್, ಕಾರಣ ಏನು ಗೊತ್ತಾ?

ಮನೀಶ್ ಪಾಂಡೆ ಅವರ ಅಮೋಘ ಶತಕ, ಶತಕವಂಚಿತ ಶ್ರೇಯಸ್ ಗೋಪಾಲ್ ಅವರ 95 ರನ್’ಗಳ ನೆರವಿನಿಂದ ರಾಜಸ್ಥಾನ ವಿರುದ್ಧ ಕರ್ನಾಟಕ ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ 445 ರನ್ ಗಳಿಸಿ 316 ರನ್’ಗಳ ಬೃಹತ್ ಮುನ್ನಡೆ ಸಂಪಾದಿಸಿತು. ಇದಕ್ಕೂ ಮೊದಲು ರಾಜಸ್ಥಾನ ತಂಡದ ತನ್ನ ಮೊದಲ ಇನ್ನಿಂಗ್ಸ್’ನಲ್ಲಿ ಕೇವಲ 129 ರನ್ನಿಗೆ ಆಲೌಟಾಗಿತ್ತು.

Karnataka Vs Rajasthan Ranji match: Ranji trophy double bang for Manish Pandey, 20th century, Pandey crossed the 6 thousand run mark

Comments are closed.