ಮಾಂತ್ರಿಕರ ಅನೇಕ ಮನೆಗಳನ್ನು ಹೊಕ್ಕು ಬಂದ ನಾನು ಅವರ ಅನೇಕ ವಿದ್ಯೆಗಳನ್ನು ಕಣ್ಣಾರೆ ಕಂಡಿದ್ದೇನೆ.. ಎಲ್ಲವೂ ಕಪಟ ಮತ್ತು ಕಣ್ಣು ಕಟ್ಟು… ಮಾಂತ್ರಿಕರ ಮೇಲಿನ ನಂಬಿಕೆ ಹಳೆಯವು ಅವರಿಗೂ ಈ ಕಪಟತನ ನಿಲ್ಲುವುದಿಲ್ಲ… ನನ್ನ ಮುಂದೆ ಅನೇಕ ಮಾಂತ್ರಿಕರು ಮಾತಾಡಿದ್ದಾರೆ… ಅವರೆಲ್ಲರಿಗೂ ಒಂದಲ್ಲಾ ಒಂದು ರೀತಿಯ ಮ್ಯಾಜಿಕ್ ಗೊತ್ತೇ ಇತ್ತು.. ಇದೇ ಮೋಡಿಯನ್ನು ಅವರು ತಮ್ಮ ಹೊಟ್ಟೆ ಪಾಡಿಗಾಗಿ ಬಳಸುತ್ತಾರೆ… ಜನರನ್ನು ಹೆದರಿಸಲೆಂದೇ ಈ ವಿದ್ಯೆ ಬಳಕೆಯಾಗುತ್ತಿದೆ… ಅಂದಹಾಗೆ ಸ್ನೇಹಿತರೇ ಬೆಂಕಿ ಇಟ್ಟರು ಬಟ್ಟೆ ಸುಡುವುದಿಲ್ಲ.. ಅಂದ್ರೆ ನೀವು ಮಾಂತ್ರಿಕನನ್ನು ನಂಬಿಯೇ ನಂಬ್ತೀರಾ ಅದು ಹೇಗೆ ಮಾಡ್ತಾರೆ ಗೊತ್ತಾ.. ಈ ಮ್ಯಾಜಿಕ್ ಬಾನಾಮತಿ ಪ್ರಯೋಗದಲ್ಲಿ ತುಂಬಾ ಬಳಕೆಯಾಗುತ್ತದೆ.. ಬೆಂಕಿ ಇಟ್ಟರು ಬಟ್ಟೆ ಸುಡುವುದಿಲ್ಲ ಯಾಕೆ ಗೊತ್ತಾ?
ದಯವಿಟ್ಟು ಟ್ರಿಕ್ಕುಗಳನ್ನು ಮನೆಯಲ್ಲಿ ಹಿರಿಯರ ಸಲಹೆ ಇಲ್ಲದೆ ಪ್ರಯತ್ನಿಸಬೇಡಿ…
ಎರಡು ಮೂರು ಕೋಳಿ ಮೊಟ್ಟೆಯನ್ನು ತಂದು ಒಂದು ಪಿಂಗಾಣಿ ತಟ್ಟೆ ಯೊಳಕ್ಕೆ ಅವುಗಳನ್ನು ಹೊಡೆದು ಬಿಳಿ ದ್ರವವನ್ನು ಮಾತ್ರ ಹಾಕಿಕೊಳ್ಳಬೇಕು.. ನಂತರ ಆ ಬಿಳಿ ದ್ರವವುಳ್ಳ ತಟ್ಟೆಯೊಳಕ್ಕೆ ನಿಮ್ಮ ಕರವಸ್ತ್ರ ಅಂದ್ರೆ ಕರ್ಚೀಫ್ ಎದ್ದ ಬೇಕು… ನಂತರ ಅದನ್ನು ತಣ್ಣನೆಯ ಜಾಗದಲ್ಲಿ ಅಂದ್ರೆ ಬಿಸಿಲು ಬೀಳದ ಸ್ಥಳದಲ್ಲಿ ಒಣಗಿಸಬೇಕು… ಕರ್ಚೀಫ್ ಪೂರ್ಣವಾಗಿ ಒಣಗಿ ಗರಿಯಾದ ಮೇಲೆ ಅದನ್ನು ಮೋಡಿ ಪ್ರದರ್ಶಿಸುವ ದಿನ ನಿಮ್ಮ ಜೇಬಿಂದ ಹೊರತೆಗೆದು ಅದಕ್ಕೆ ಬೆಂಕಿ ಇಟ್ಟರೂ ಬೆಂಕಿ ಹೊತ್ತಿ ಕೊಳ್ಳುವುದಿಲ್ಲ… ಕೆಂಡ ಹಾಕಿದರೂ ಬಟ್ಟೆ ಸುಡುವುದಿಲ್ಲ… ಇದನ್ನು ಮಾಡಿ ತೋರಿಸಿದರೆ ಎಂತಹ ಭಕ್ತನು ನಿಮಗೆ ದೈವಶಕ್ತಿ ಇದೆ ಎಂದು ನಂಬದೇ ಇರಲಾರ..
ನೀರು ಚಿಮುಕಿಸಿದರೆ ಜೋಳ ಅರಳುತ್ತೆ..!
ಜೋಳವನ್ನು ತೆಗೆದುಕೊಂಡು ಒಂದು ಬಟ್ಟೆಯಲ್ಲಿ ಗಂಟು ಕಟ್ಟಿ ಅದನ್ನು ಸುಣ್ಣದ ಬಟ್ಟಿಯ ನೆಲದಲ್ಲಿ ಹುಲಿಡಬೇಕು ಮರುದಿನ ಪಟ್ಟಿಯೂ ಆದ ಮೇಲೆ ಈ ಜೋಳದ ಕಾಳಿನ ಗಂಟನ್ನ ಹೊರತೆಗೆದುಕೊಂಡು ಸ್ವಲ್ಪ ಜೋಳವನ್ನು ಮೋಡಿ ಮಾಡುವ ಸ್ಥಳಕ್ಕೆ ತರಬೇಕು.. ಜೋಳ ಇರೋ ತಟ್ಟೆಗೆ ಪೂಜೆ ಸಲ್ಲಿಸುವ ನಾಟಕವಾಡಿ ನೀರು ಚಿಮುಕಿಸಿದರೆ ಸಾಕು ಜೋಳ ಅರಳುತ್ತೆ…
ಕೈಯಲ್ಲಿ ಮುಟ್ಟಿದರೆ ಸಾಕು ತೆಂಗಿನಕಾಯಿ ಹೋಳಾಗುತ್ತದೆ ..!
ಚೆನ್ನಾಗಿ ಬಲಿತ ತೆಂಗಿನ ಕಾಯಿಯನ್ನು ಏಳೆಂಟು ದಿನ ಸುಣ್ಣದ ರಾಡಿಯಲ್ಲಿ ನೆನೆ ಹಾಕಬೇಕು ನಂತರ ಅದನ್ನು ಬಿಸಿಲಿನಲ್ಲಿ ಒಣಗಿಸಬೇಕು.. ಈ ರೀತಿ ಸಿದ್ಧವಾಗಿಟ್ಟುಕೊಂಡ ತೆಂಗಿನಕಾಯಿಯನ್ನು ಭಕ್ತನ ಎದುರು ಕೂತು ಪೂಜೆ ಮಾಡುವ ನೆಪ ಮಾಡಿ ಕಾಯಿಯ ಮೇಲೆ ನೀರು ಚಿಮುಕಿಸಿದರೆ ಸಾಕು ತೆಂಗಿನಕಾಯಿ ನಾಲ್ಕಾರು ಚೂರುಗಳಾಗಿ ಸಿಡಿಯುತ್ತವೆ..
ನಿಂಬೆ ಹಣ್ಣು ಕುಣಿಯುತ್ತೆ ಅಂದ್ರೆ ನಂಬ್ತೀರಾ..?
ನಂಬಲೇಬೇಕು ಓದುಗರೇ.. ಅದಕ್ಕೂ ವಿಜ್ಞಾನದಲ್ಲಿ ದಾರಿಯಿದೆ.. ಒಂದು ಪಕ್ವವಾದ ನಿಂಬೆಹಣ್ಣನ್ನು ತೆಗೆದುಕೊಂಡು ಅದಕ್ಕೆ ಒಂದು ಸೂಕ್ಷ್ಮವಾದ ರಂಧ್ರವನ್ನು ತೆಗೆದು ನಿಂಬೆ ಹಣ್ಣಿನೊಳಗೆ ತಿರುಳು ಮತ್ತು ರಸವನ್ನು ಸಾಧ್ಯವಾಗುವಷ್ಟು ತೆಗೆಯಬೇಕು… ನಂತರ ಆ ರಂಧ್ರದ ಮೂಲಕ ಪರಾಜವನ್ನು ತುಂಬಿ ರಂಧ್ರವನ್ನು ಮೇಣದಿಂದಲೇ ಅಥವಾ ಅಂಟಿನಿಂದಲೂ ಮುಚ್ಚಬೇಕು… ಇಂತಹ ನಿಂಬೆಹಣ್ಣನ್ನು ಒಳ್ಳೆಯ ಬಿಸಿಲಿನಲ್ಲಿ ಇಟ್ಟರೆ ನಿಂಬೆಹಣ್ಣು ಕುಣಿಯಲಾರಂಭಿಸುತ್ತದೆ. ಇದೇ ರೀತಿ ಸಾಕಷ್ಟು ಕೌತುಕಗಳು ವಿಜ್ಞಾನದ ಮೂಲಕ ಸಾಧ್ಯವಿವೆ ನೀರನ್ನು ಹಾಲು ಮಾಡಬಹುದು… ಉಂಗುಷ್ಠ ವಿಲ್ಲದ ಮರದ ಪಾದುಕೆ ತೊಟ್ಟು ನಡೆಯಬಹುದು… ಬೇವಿನ ಸೊಪ್ಪಿನಲ್ಲಿ ಚೇಳು ಹಾವುಗಳನ್ನು ಸೃಷ್ಟಿಸುವಂತೆ ಮಾಡಿ ಕಣ್ಣುಕಟ್ಟು ವಿದ್ಯೆಯನ್ನು ಪ್ರದರ್ಶಿಸಬಹುದು… ನೀವು ಯಾರಾದ್ರೂ ಮೋಡಿ ವಿದ್ಯೆ ಆಟ ನೋಡಿದ್ದರೆ ಬೇವಿನ ಸೊಪ್ಪನ್ನು ಗಡಿಗೆಯಲ್ಲಿ ಹಾಕಿ ಚೇಳು ಮಾಡಿರುವುದನ್ನು ನೋಡಿಯೇ ಇರುತ್ತೀರಿ… ಎಲ್ಲವೂ ಕಣ್ಣುಕಟ್ಟು ವಿದ್ಯೆ… ಇನ್ನಾದರೂ ಮಾಂತ್ರಿಕರ ಮೇಲಿನ ನಂಬಿಕೆ ಬಿಡಿ… ಆಗಲೇ ಈ ಲೇಖನವನ್ನ ನೀವು ಓದಿದ್ದಕ್ಕೂ ನಾನು ಬರೆದಿದ್ದಕ್ಕೂ ಸಾರ್ಥಕ…
ಧನ್ಯವಾದಗಳು..
- ಕೆ.ಆರ್.ಬಾಬು
===========ಮುಗಿಯಿತು=======