ಬಟ್ಟೆ ತುಂಡು..ಮೂತ್ರ ಅಂಟಿದ ಮಣ್ಣು..ತಲೆಗೂದಲು.. ಋತುಸ್ರಾವವಾದ ಬಟ್ಟೆ.. ಭಾನಾಮತಿ ಪ್ರಯೋಗಕ್ಕೆ ಇವು ಸಾಕಂತೆ..! ಭಾಗ – 20

0

ಬಾಬಾ ಲೀಲಾಜಾಲವಾಗಿ ಭಾನಾಮತಿಯ ಬಗ್ಗೆ ವಿವರಿಸುತ್ತಿದ್ದ.. ಇಷ್ಟೊತ್ತು ಅವನು ಭಾನಾಮತಿಯನ್ನು ವಶೀಕರಣ ಮಾಡಿಕೊಳ್ಳೋದು ಹೇಗೆ ಅಂತ ಹೇಳಿದ್ದ… ಇನ್ನು ಅದನ್ನು ಮಾಡುವ ವಿಧಾನಗಳು ಕ್ರೂರ ಮತ್ತು ಘನ ಘೋರ ಅಂದಿದ್ದ… ಸುಮಾರು ಎರಡು ಗಂಟೆ ಹೊತ್ತು ಆತ ವಿವರಿಸಿದ್ದ.. ಅಷ್ಟರಲ್ಲಿ ಎಂಟಕ್ಕೂ ಹೆಚ್ಚು ಬಾರಿ ಚಹಾ ಕುಡಿದಿದ್ದ… ಬಾಬಾ ಚಹಾ ಕುಡಿಯುವ ರೀತಿ ನೋಡಿ ದಿನಕ್ಕೆ ಏನಿಲ್ಲ ಅಂದ್ರು ಸರಿ ಸುಮಾರು ನಲವತ್ತು ಕಪ್ ಟೀ ಕುಡಿಯಬಹುದು ಅಂದುಕೊಂಡ್ವಿ … ಟೀ ಕುಡಿಯುತ್ತಾ ಕುಡಿಯುತ್ತಲೇ ಭಾನಾಮತಿ ಮಾಡುವ ವಿಧಾನಗಳನ್ನು ವಿವರಿಸೋಕೆ ಶುರು ಮಾಡಿದ…ಅದರ ವಿವರ ಕೊಡುವ ಮುನ್ನವೇ ಅವನ ಬಾಯಿಂದ ಹೊರಬಿದ್ದಿತ್ತು ಗಂಡೆದೆಯವರನ್ನು ಒಂದು ನಿಮಿಷ ನಡುಗಿಸಿ ನೀರಾಗಿಸಿ ಬಿಡುತ್ತೇ ಅನ್ನೋ ಪದ. Nigooda Mantrikaru

Nigooda Mantrikaru Kollegala Mantrikaranadu KR BABU

ಹೀಗಾಗಿ ನಮಗೆ ಮತ್ತಷ್ಟು ಕ್ಯೂರಿಯಾಸಿಟಿ ಜಾಸ್ತಿಯಾಯ್ತು… ಅವನ ಮುಂದೆ ನಾವು ಏನನ್ನು ಬರೆದು ಕೊಳ್ಳುವಂತಿರಲಿಲ್ಲ… ಎಲ್ಲವನ್ನೂ ಮೈಂಡ್ನಲ್ಲಿ ರೆಕಾರ್ಡ್ ಮಾಡಿಕೊಳ್ಳಬೇಕಿತ್ತು…ಯಾರ ಮೇಲೆ ಬಾನಾಮತಿ ಪ್ರಯೋಗ ಮಾಡ್ಬೇಕು ಅಂತಹ ವ್ಯಕ್ತಿಯ ಬಟ್ಟೆ ತುಂಡು ಅಥವಾ ಅವನ ಮೂತ್ರ ಅಂಟಿದ ಮಣ್ಣು, ಅಥವಾ ತಲೆಗೂದಲು.. ಇಲ್ಲವಾದ್ರೆ ವೀರ್ಯ ಅಥವಾ ಋತುಸ್ರಾವವಾದ ಬಟ್ಟೆ ಬೇಕಾಗುತ್ತಂತೆ… ಈ ರೀತಿ ಸಂಗ್ರಹಿಸಿದ ವಸ್ತುವನ್ನ ಬಸರಿ ಮರದಿಂದ ಮಾಡಿದ ಬೊಂಬೆಯೊಂದಕ್ಕೆ ಕಟ್ಟಲಾಗುತ್ತದಂತೆ… ನೀವು ಹಿಂದಿಯ ಕಾಶ್ಮೋರ ಅನ್ನೋ ಸಿನಿಮಾವನ್ನು ನೋಡಿದ್ರೆ ಆ ಬಸರಿ ಮರದ ಬೊಂಬೆಯನ್ನು ನೋಡಿರ್ತೀರಾ… ಇಲ್ಲವಾದರೆ ಆ ಬೊಂಬೆಯ ಚಿತ್ರವನ್ನು ನಾವು ಕೊಟ್ಟಿದ್ದೀವಿ ಗಮನಿಸಿ.

Nigooda Mantrikaru Kollegala Mantrikaranadu KR BABU

ಈ ಬೊಂಬೆಯನ್ನು ಬಸರಿ ಮರ ಅನ್ನುವ ಮರದ ಕೊಂಬೆಯಿಂದ ಮಾಡಲಾಗುತ್ತೆ… ಅಮಾವಾಸ್ಯೆ ಅಥವಾ ಹುಣ್ಣಿಮೆಯ ರಾತ್ರಿ ಈ ಬೊಂಬೆಯನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಮೊದಲು ನೆಲದ ಮೇಲೆ ಅರಿಶಿನ ಕುಂಕುಮ ರಂಗೋಲಿ ಇದ್ದಿಲ ಮಸಿ ಬಳಸಿ ಮಂಡಲವನ್ನು ರಚಿಸಿಕೊಳ್ತಾರಂತೆ… ಚತುಷ್ಕೋನ ರೀತಿಯ ಮಂಡಲದಲ್ಲಿ ಎಂಟು ವೃತ್ತಗಳನ್ನು ಹಾಕಲಾಗುತ್ತದಂತೆ… ಈ ಮಂಡಲದ ಮಧ್ಯೆ ಕೇಂದ್ರದಲ್ಲಿ ಬಾನಾಮತಿ ಪ್ರಯೋಗ (Nigooda Mantrikaru) ಮಾಡುವ ವ್ಯಕ್ತಿಯ ವಸ್ತುವನ್ನು ಸಂಗ್ರಹಿಸಿ ಅದಕ್ಕೆ ವಿಧಿವತ್ತಾಗಿ ಪೂಜೆ ಮಾಡಲಾಗುತ್ತದೆ.. ನಂತರ ಒಂದು ಕೋಳಿ ಇಲ್ಲವೇ ಕುರಿಯನ್ನು ಬಲಿ ಕೊಟ್ಟು ಆ ಬೊಂಬೆಗೆ ಭಾನಾಮತಿ ಶಕ್ತಿಯನ್ನು ಆವಾಹನೆ ಮಾಡಲಾಗುತ್ತದಂತೆ… ನಂತರ ಉದ್ದನೆಯ ಸೂಜಿ ಅಥವಾ ದಬ್ಬಳದಿಂದ ವ್ಯಕ್ತಿಯ ಯಾವ ಭಾಗಕ್ಕೆ ಊನ ಮಾಡಬೇಕೆಂದು ಉದ್ದೇಶಿಸಿದೆಯೋ ಬೊಂಬೆಯ ಆ ಭಾಗಕ್ಕೆ ದಬ್ಬಳ ಅಥವಾ ಸೂಜಿಯಿಂದ ಚುಚ್ಚಲಾಗುತ್ತದಂತೆ.

Nigooda Mantrikaru Kollegala Mantrikaranadu KR BABU

ಆ ನಂತರ ಸೂಜಿ ಚುಚ್ಚಿದ ಬೊಂಬೆಯನ್ನು ಒಂದು ನಿಗೂಢ ಸ್ಥಳದಲ್ಲಿ ಗುಂಡಿ ತೆಗೆದು ಮುಚ್ಚಿ ಬಿಡಲಾಗುತ್ತದೆ… ಈ ಪೂಜಾ ವಿಧಾನ ಮುಗಿದ ಬೆನ್ನಲ್ಲೇ ಭಾನಾಮತಿ ಪ್ರಯೋಗವಾದ ವ್ಯಕ್ತಿಯನ್ನು ನೋವು ಕಾಡಲಾರಂಭಿಸುತ್ತದೆ… ಅದು ದಿನೇ ದಿನೆ ಉಲ್ಬಣವಾಗುತ್ತಂತೆ. ಬಸರಿ ಮರದಿಂದ ಮಾಡಿದ ಬೊಂಬೆ ಅದ್ಯಾವ ರೀತಿ ಮಣ್ಣಲ್ಲಿ ಕೊಳೆಯುತ್ತಾ ಹೋಗುತ್ತದೆಯೋ ಅದೇ ರೀತಿ ಭಾನಾಮತಿ ಪ್ರಯೋಗವಾದ ವ್ಯಕ್ತಿಯ ಒಂದೊಂದೇ ಅಂಗಾಂಗಗಳು ಕೊಳೆಯುತ್ತಾ ಹೋಗುತ್ತದೆ… ಒಂದೊಂದು ಬಗೆಯ ಕೇಡು ಮಾಡೋಕೆ ಒಂದೊಂದು ಬಗೆಯ ಗೊಂಬೆ ಮಾಡಲಾಗುತ್ತದಂತೆ… ಇದೇ ರೀತಿ ಸುಮಾರು 64 ಕ್ಷುದ್ರ ವಿದ್ಯೆಗಳಿಗೆ 64 ರೀತಿಯ ಗೊಂಬೆಗಳಿರುತ್ತವೆ ಎನ್ನುತ್ತಾನೆ ಬೀದರ್ ನ ಆ ಮಾಂತ್ರಿಕ ಬಾಬಾ. ಅಲ್ಲಿಯವರೆಗೂ ಹೂತಿರುವ ಬೊಂಬೆ ನಿಶ್ಚಿತ ಸ್ಥಳದಲ್ಲೇ ಹುದುಗಿರುತ್ತದೋ ಅಲ್ಲಿಯವರೆಗೂ ಭಾನಾಮತಿ ಪ್ರಯೋಗವಾದ ವ್ಯಕ್ತಿಗೆ ಕಾಟ ತಪ್ಪದು… ಈ ಕಾಟ ನಿಲ್ಲಬೇಕೆಂದರೆ ಹೂತಿರುವ ಬೊಂಬೆಯನ್ನು ಪತ್ತೆ ಹಚ್ಚಿ ಅದನ್ನು ಹೊರ ತೆಗೆದು ಸುಟ್ಟು ನಾಶಪಡಿಸಬೇಕು… ಇಲ್ಲವೇ ಭಾನಾಮತಿಗೆ ವಿರುದ್ಧವಾದ ಮತ್ತೊಂದು ಶಕ್ತಿಯನ್ನ ಆವಾಹನೆ ಮಾಡ್ಬೇಕಂತೆ.. ಆ ಶಕ್ತಿ ಯಾವುದು ಅಂತ ಮುಂದೆ ತಿಳಿಸ್ತೀನಿ. ಅಂದಹಾಗೆ ಈ ಬಸರಿ ಮರದ ಬೊಂಬೆಯನ್ನು ಬಳಸಿಕೊಂಡು ಘನಘೋರ ಶಕ್ತಿ ತುಂಬಿ ಮೂರು ರೀತಿಯ ಕೆಡುಕುಗಳನ್ನು ಉಂಟು ಮಾಡಬಹುದು ಅಂತಾನೆ ಬಾಬಾ… ಆ ಬಗ್ಗೆ ಮುಂದಿನ ಸಂಚಿಕೆಯಲ್ಲಿ ತಿಳಿಸ್ತೀನಿ.

(ಮುಂದುವರಿಯುತ್ತದೆ…)

  • ಕೆ.ಆರ್.ಬಾಬು

ಇದನ್ನೂ ಓದಿ : ಮನೆ ಮೇಲೆ ಕಲ್ಲು ಬೀಳೋದು. ಕೈ ಮೇಲೆ ಬರೆ ಮೂಡೋದು ಭಾನಮತಿ ಕಾಟವಾ? ಭಾಗ-21

ಇದನ್ನೂ ಓದಿ : ಅಣ್ಣವ್ರ ಹುಟ್ಟೂರು ಸಿಂಗಾನಲ್ಲೂರಿನಲ್ಲೊಬ್ಬ ಕಪ‍ಟಿ , ಜಡೆ ಬಿಚ್ಚಿ ನಿಂತ್ರೆ ಮೈಮೇಲೆ ಬರ್ತಾಳೆ ಚೌಡಿ !!ಭಾಗ-13

Nigooda Mantrikaru Kollegala Mantrikaranadu KR BABU

Leave A Reply

Your email address will not be published.