ಹನುಮಂತ ಲಂಕೆಗೆ ಹಾರಿದ್ದು ಪವಾಡ. ಶ್ರೀಕೃಷ್ಣ ದ್ರೌಪದಿಗೆ ಸೀರೆ ಕೊಟ್ಟಿದ್ದು ಪವಾಡವೇ. ಪವಾಡವಿಲ್ಲದೇ ಜಗವಿಲ್ಲ..! ಭಾಗ – 5

0

21 ನೇ ಶತಮಾನದಲ್ಲಿ ಪವಾಡ, ಭೂತ, ಪ್ರೇತ, ಮೋಡಿ, ಮಾಟ, ಮಂತ್ರ, ತಂತ್ರ ಎಲ್ಲವೂ ಢೋಂಗಿಯೇ. ಅದೆಲ್ಲಾ ಜನರ ಮೂಢ ನಂಬಿಕೆಗಳು. ಈ ಮೂಢನಂಬಿಕೆಯೇ ಮಾಟಗಾರರ ಮೂಲ ಬಂಡವಾಳ.

ಬೆದರಿ ಬಂದವರನ್ನು ಮನುಷ್ಯನ ಬುರುಡೆ, ಮೂಳೆ, ಕೈಬೆರಳು, ಕೊಳೆತ ಶವ, ಕೆಂಪು ಕಣ್ಣುಗಳಲ್ಲಿ ಹೊಳೆಯುವ ಕಾಳಿಕಾದೇವಿ, ಮಸಣ ರುದ್ರಿ ಇಂತಹ ಹತ್ತು ಹಲವುಗಳನ್ನು ತಮ್ಮ ಕಣ್ಣ ಮುಂದೆ ಇರಿಸಿಕೊಂಡು ವಿಕಾರವಾದ ಮನುಷ್ಯನ ತಲೆ ಬುರುಡೆ ಹಿಡಿದು ಓಂ ಪಟ್ ಅಂತ ಮಂತ್ರ ಉಚ್ಚರಿಸಿದರೆ ಯಾವ ಮನುಷ್ಯ ತಾನೇ ಹೆದರೋದಿಲ್ಲ ಹೇಳಿ..?

ಹಾಗೊಂದು ವೇಳೆ ಯಾವನಾದರೂ ಮೊಂಡ ಈ ಮಾಟಗಾರರ ಮುಂದೆ ಕೂತು ‘ಅದೇನಾಗುತ್ತೋ ಆಗಲಿ, ಅದ್ಯಾವ ದೆವ್ವ ಬರುತ್ತೋ ಬರ್ಲಿ, ರಕ್ತಕಾರಿ ಸತ್ತರೆ ಸಾಯ್ತಿನಿ, ಮಾಡು ಪವಾಡ’ ಅಂತ ಪಟ್ಟು ಹಿಡಿದು ಕೂತರೆ ಅವನ ಮುಂದೆ ಮಾಟಗಾರನ ಆಟ ನಡೆಯೋದಿಲ್ಲ. ಈ ದಿನ ನಿಮ್ಮ ಕಾರ್ಯ ಫಲಿಸುವುದಿಲ್ಲ ಮುಂದಿನ ಅಮಾವಾಸ್ಯೆಗೂ ಹುಣ್ಣಿಮೆಗೂ ಬನ್ನಿ ಅಂತ ಹೇಳಿ ಸಾಗಹಾಕಿ ಬಿಡ್ತಾನೆ.

ಹೀಗೆ ಜನ ಪವಾಡಗಳನ್ನು ಒಪ್ಪುವಷ್ಟು ಮಟ್ಟದಲ್ಲಿ ಒಪ್ಪುದವರೂ ಇದ್ದಾರೆ. ಮುಸ್ಲಿಂ ಬಾಬಾಗಳ ಮೇಲೆ ಅಪಾರವಾದ ನಂಬಿಕೆ ಇದೆ. ಹಾಗೆ ಪವಾಡವನ್ನು ನಂಬೋದೇ ಆದ್ರೆ ಹನುಮಂತ ಲಂಕೆಗೆ ಹಾರಿದ್ದು ಪವಾಡ. ಪವಾಡವಿಲ್ಲದೇ ರಾಮಾಯಣವಿಲ್ಲ. ದ್ರೌಪದಿಗೆ ಶ್ರೀಕೃಷ್ಣ ಪರಮಾತ್ಮ ಸೀರೆ ಕೊಟ್ಟಿದ್ದು ಪವಾಡ. ಪವಾಡವಿಲ್ಲದೇ ಮಹಾಭಾರತವು ಇಲ್ಲ. ಇಲ್ಲಿ ಎಲ್ಲವೂ ಪವಾಡ. ಭೂಮಿ ಇರುವುದೇ ಒಂದು ಪವಾಡ. ದಿನಕ್ಕೊಂದು ಪವಾಡ ನಮ್ಮ ನಿಮ್ಮ ನಡುವೆ ಘಟಿಸುತ್ತಲೇ ಇರುತ್ತದೆ. ಹಾಗೆ ಘಟಿಸುವ ಪವಾಡಕ್ಕೆ ಒಂದಲ್ಲ ಒಂದು ವೈಜ್ಞಾನಿಕ ಕಾರಣವೂ ಇದ್ದೇ ಇರುತ್ತದೆ. ಅಂದು ಸಿದ್ಧರು, ಯೋಗಿ ಗುರುಗಳು. ಇಂದು ಬಾಬಾಗಳು ಮತ್ತು ಮಾಂತ್ರಿಕರು.

ಈ ಪವಾಡಗಳ ಹಿಂದೆ ಮನಸ್ಥಿತಿ, ತಂತ್ರವಿದ್ಯೆ, ವಿಜ್ಞಾನಗಳ ಜೊತೆಗೆ ಯೋಗ ಶಕ್ತಿ ಮತ್ತು ವೈದ್ಯ ಶಕ್ತಿಗಳಿವೆ. ಇಲ್ಲಿಗೆ ಮಾಂತ್ರಿಕ ಶಕ್ತಿಯ ಪವಾಡ ಪುರುಷರ ಇತಿಹಾಸ ಮುಗಿದಿದ್ದು ಮುಂದೆ ಮಾಂತ್ರಿಕರ ನಿಗೂಢ ಪೂಜೆ, ಮೋಡಿಗಾರರ ಕಣ್ಣುಕಟ್ಟು ವಿದ್ಯೆ, ದೆವ್ವ ಭೂತ ಪ್ರೇತಗಳ ಅಸಲಿಯತ್ತು, ವಾಮಾಚಾರ, ಭಾನುಮತಿ, ಮತ್ತು ಇವುಗಳಿಗೆಲ್ಲಾ ಇರುವ ವೈಜ್ಞಾನಿಕ ಕಾರಣ, ಆಗದವರು ಮಾಡುವ ಕುಚೇಷ್ಟೆಗಳನ್ನು ಈ ನಮ್ಮ ಜನ ಅದಕ್ಕೆ ರೆಕ್ಕೆ ಪುಕ್ಕ ಕಟ್ಟಿರುವ ಇಂದಿಗೂ ಕಟ್ಟುತ್ತಲೇ ಇರುವ ಕಥೆಗಳ ಬಗ್ಗೆ ತಿಳಿಯೋಣ. ಇನ್ನು ಮುಂದೆ ಹೆಜ್ಜೆ ಹೆಜ್ಜೆಗೂ ನಿಗೂಢ, ಕೌತುಕ, ಆಶ್ಚರ್ಯವಿದೆ .

(ಮುಂದುವರಿಯುವುದು..)

  • ಕೆ.ಆರ್.ಬಾಬು
Leave A Reply

Your email address will not be published.