Rashmika Mandanna : ರಣಬೀರ್​ ಕಪೂರ್​ ನನ್ನನ್ನು ಮೇಡಂ ಎಂದು ಕರೆಯುವ ಏಕೈಕ ನಟ  : ರಶ್ಮಿಕಾ ಮಂದಣ್ಣ

Rashmika Mandanna : ನ್ಯಾಷನಲ್​ ಕ್ರಶ್​ ಎಂದೇ ಖ್ಯಾತಿ ಗಳಿಸಿರುವ ರಶ್ಮಿಕಾ ಮಂದಣ್ಣ ಮಿಷನ್​ ಮಜ್ನು ಸಿನಿಮಾದ ಮೂಲಕ ಬಾಲಿವುಡ್​ ಪ್ರವೇಶ ಮಾಡಲಿದ್ದಾರೆ. ಇದರ ಜೊತೆಯಲ್ಲಿ ನಟಿ ರಶ್ಮಿಕಾ ಮಂದಣ್ಣ ನಟ ರಣಬೀರ್​ ಕಪೂರ್​ ಜೊತೆಯಲ್ಲಿ ಅನಿಮಲ್​ ಸಿನಿಮಾದಲ್ಲಿಯೂ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.


ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ರಶ್ಮಿಕಾ ಮಂದಣ್ಣ ನಟ ರಣಬೀರ್​ ಕಪೂರ್​ ಜೊತೆಯಲ್ಲಿ ಕೆಲಸ ಮಾಡಿರುವ ಅನುಭವವನ್ನು ಹಂಚಿಕೊಂಡಿದ್ದಾರೆ. ರಣಬೀರ್​ ಕಪೂರ್​ ಅತ್ಯಂತ ಸರಳ ವ್ಯಕ್ತಿ ಎಂದು ನಟಿ ರಶ್ಮಿಕಾ ಹಾಡಿ ಹೊಗಳಿದ್ದಾರೆ. ಫಿಲಂ ಫೇರ್​​ನಲ್ಲಿ ಮಾತನಾಡುವ ವೇಳೆಯಲ್ಲಿ ನಟಿ ರಶ್ಮಿಕಾ ಮಂದಣ್ಣ ನನ್ನನ್ನು ಮೇಡಂ ಎಂದು ಕರೆಯುವ ಏಕೈಕ ನಟ ಎಂದರೆ ಅದು ರಣಬೀರ್​ ಕಪೂರ್​ ಎಂದು ಹೇಳಿದ್ದಾರೆ. ರಣಬೀರ್​​ರನ್ನು ಹೊಗಳಿದ ನಟಿ ರಶ್ಮಿಕಾ ನಾವು ಒಬ್ಬರಿಗೊಬ್ಬರು ಉತ್ತಮ ಸಮಯವನ್ನು ಕಳೆದಿದ್ದೇವೆ ಎಂದು ಹೇಳಿದ್ದಾರೆ .


ರಣಬೀರ್ ಕಪೂರ್​ ಅತ್ಯಂತ ಪ್ರೀತಿದಾಯಕ ಗುಣವನ್ನು ಹೊಂದಿದ್ದಾರೆ. ಮೊದಲ ಬಾರಿಗೆ ರಣಬೀರ್​ರನ್ನು ಭೇಟಿಯಾಗಿದ್ದಾಗ ನಾನು ಸಹಜವಾಗಿಯೇ ಭಯಭೀತಳಾಗಿದ್ದೆ. ಆದರೆ ಅವರು ತುಂಬಾ ಸರಳ ವ್ಯಕ್ತಿ ಎಂದು ನಾನು ಭಾವಿಸುತ್ತೇನೆ. ಅಲ್ಲದೇ ಇಡೀ ಸಿನಿಮಾ ಇಂಡಸ್ಟ್ರಿಯಲ್ಲಿಯೇ ನನ್ನನ್ನು ಮೇಡಂ ಎಂದು ಕರೆಯುವ ಏಕೈಕ ನಟನೆಂದರೆ ಅದು ರಣಬೀರ್​ ಕಪೂರ್​. ಆದರೆ ನಾನು ಅವರಿಂದ ಮೇಡಂ ಎಂದು ಕರೆಯಿಸಿಕೊಳ್ಳಲು ಇಷ್ಟ ಪಡುವುದಿಲ್ಲ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ .


ರಶ್ಮಿಕಾ ಮಂದಣ್ಣ ಹಾಗೂ ರಣಬೀರ್​ ಕಪೂರ್​ ನಟಿಸುತ್ತಿರುವ ಅನಿಮಲ್​ ಸಿನಿಮಾ ಒಂದು ಕ್ರೈಂ ಸ್ಟೋರಿಯಾಗಿದೆ. ಇದರಲ್ಲಿ ಅನಿಲ್​ ಕಪೂರ್​ ಹಾಗೂ ಬಾಬಿ ಡಿಯೋಲ್​ ಸೇರಿದಂತೆ ಪ್ರಮುಖ ತಾರಾಗಣವಿದೆ. ಮೊದಲು ಪರಿಣಿತಿ ಚೋಪ್ರಾ ಈ ಪಾತ್ರವನ್ನು ನಿರ್ವಹಿಸಲಿದ್ದರು.

ಇದನ್ನು ಓದಿ : British Tourist Raped : ಮಸಾಜ್​ ನೆಪದಲ್ಲಿ ವಿದೇಶಿ ಮಹಿಳೆ ಮೇಲೆ ಗೋವಾದಲ್ಲಿ ಅತ್ಯಾಚಾರ : ಆರೋಪಿ ಬಂಧನ

ಇದನ್ನೂ ಓದಿ : KL Rahul‌ : ಟೀಮ್ ಇಂಡಿಯಾದಿಂದ ಹೊರ ಬಿದ್ದ ಕೆ.ಎಲ್.ರಾಹುಲ್ ಬಾವುಕ ಸಂದೇಶ

Ranbir Kapoor is the only actor who calls me ma’am, says Rashmika Mandanna

Comments are closed.