Coronavirus : ದೇಶದಲ್ಲಿ ಮೂರು ತಿಂಗಳ ಬಳಿಕ ದೈನಂದಿನ ಕೋವಿಡ್ ಪ್ರಕರಣದಲ್ಲಿ ಗಣನೀಯ ಏರಿಕೆ

Coronavirus : ಬರೋಬ್ಬರಿ 103 ದಿನಗಳ ಬಳಿಕ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ 8000ಕ್ಕೂ ಅಧಿಕ ದೈನಂದಿನ ಪ್ರಕರಣಗಳು ವರದಿಯಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟು ಕೋವಿಡ್​ ಸಂಖ್ಯೆ 4,32,13,435ಕ್ಕೆ ಏರಿಕೆ ಕಂಡಿದೆ. ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 40,370ಕ್ಕೆ ಏರಿಕೆ ಕಂಡಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ.


ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 8,329 ಹೊಸ ಕೋವಿಡ್​ ಪ್ರಕರಣಗಳು ವರದಿಯಾಗಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 10 ಮಂದಿ ಕೋವಿಡ್​ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದಲ್ಲಿ ಕೋವಿಡ್​ ಸೋಂಕಿನಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 5,24,757ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಒಟ್ಟು ಪ್ರಕರಣಗಳಲ್ಲಿ 0.09 ಪ್ರತಿಶತ ಸಕ್ರಿಯ ಪ್ರಕರಣಗಳು ಇವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧಿಕೃತ ದಾಖಲೆಗಳು ಹೇಳಿವೆ. ದೇಶದಲ್ಲಿ ರಿಕವರಿ ಪ್ರಮಾಣವು 98.69 ಪ್ರತಿಶತದಷ್ಟು ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ.


ಇತ್ತ ಮಹಾರಾಷ್ಟ್ರದಲ್ಲಿ 3,081 ಹೊಸ ಕೋವಿಡ್ -19 ಪ್ರಕರಣಗಳು ಕಂಡುಬಂದಿದ್ದು, 1,956 ಸೋಂಕುಗಳು ಕೇವಲ ಮುಂಬೈ ನಗರವೊಂದರಲ್ಲೇ ವರದಿಯಾಗಿದೆ. ಜನವರಿ 23ರ ಬಳಿಕ ಮುಂಬೈನಲ್ಲಿ ಇದೇ ಮೊದಲ ಬಾರಿಗೆ 1956 ಕೋವಿಡ್​ ದೈನಂದಿನ ಪ್ರಕರಣಗಳು ವರದಿಯಾಗಿದೆ. ಶುಕ್ರವಾರ ನಡೆಸಲಾದ ಒಟ್ಟು ಕೋವಿಡ್​ ಪರೀಕ್ಷೆಗಳಲ್ಲಿ 12.74 ಪ್ರತಿಶತ ಮಾದರಿಗಳು ಪಾಸಿಟಿವ್​ ವರದಿಯನ್ನು ಪಡೆದಿವೆ.

ಇದನ್ನು ಓದಿ : KL Rahul‌ : ಟೀಮ್ ಇಂಡಿಯಾದಿಂದ ಹೊರ ಬಿದ್ದ ಕೆ.ಎಲ್.ರಾಹುಲ್ ಬಾವುಕ ಸಂದೇಶ

ಇದನ್ನೂ ಓದಿ : Fastest Ball in Cricket History : ಶೋಯೆಬ್ ಅಖ್ತರ್ ವಿಶ್ವದಾಖಲೆ ಉಡೀಸ್ ಮಾಡಿದನಾ ಜಮ್ಮು ಎಕ್ಸ್‌ಪ್ರೆಸ್

Coronavirus News Live: India reports 8,329 fresh Covid-19 cases, 10 deaths in 24 hours; active cases at 40,370

Comments are closed.