ಮಕ್ಕಳ ಭವಿಷ್ಯಕ್ಕಾಗಿ ಬಾಲ ಜೀವನ್ ವಿಮೆ ಯೋಜನೆ : ಅಂಚೆ ಇಲಾಖೆಯ ಹೊಸ ಯೋಜನೆಯಲ್ಲಿದೆ ಹಲವು ಪ್ರಯೋಜನ

ನವದೆಹಲಿ : ಭಾರತೀಯ ಅಂಚೆ ಇಲಾಖೆ ದೇಶದ ಜನತೆಗಾಗಿ ಅನೇಕ ಉತ್ತಮ ಹೂಡಿಕೆಯನ್ನು ಪರಿಚಯಿಸಿದೆ. ಅಂಚೆ ಇಲಾಖೆಯ ಉಳಿತಾಯ ಖಾತೆ, ಎಫ್‌ಡಿ, ಸೇರಿದಂತೆ ವಿವಿಧ ರೀತಿಯ ವಿಮೆ ಯೋಜನೆಯನ್ನು ಪರಿಚಯಿಸಿದೆ. ಹಾಗಾಗಿ ಹೆಚ್ಚಿನವರು ತಮ್ಮ ಮಕ್ಕಳ ಉತ್ತಮ ವಿದ್ಯಾಭ್ಯಾಸ ಹಾಗೂ ಭವಿಷ್ಯಕ್ಕಾಗಿ ಸೂಕ್ತ ಹೂಡಿಕೆಯಲ್ಲಿ ಹಣವನ್ನು ವಿನಿಯೋಗಿಸಲು ಬಯಸುತ್ತಾರೆ. ಅದಕ್ಕಾಗಿ ಅಂಚೆ ಇಲಾಖೆ ಇದೀಗ ನಮ್ಮ ಮಕ್ಕಳ ಮುಂದಿನ ಉತ್ತಮ ಭವಿಷ್ಯಕ್ಕಾಗಿ ಹೊಸ ವಿಮೆ ಯೋಜನೆಯನ್ನು ಪರಿಚಯಿಸಿದೆ. ಇದರಲ್ಲಿ ಕಡಿಮೆ ಹೂಡಿಕೆ ಮಾಡುವ ಮೂಲಕ ಉತ್ತಮ ಆದಾಯವನ್ನು ಪಡೆಯಬಹುದಾಗಿದೆ. ಈ ಯೋಜನೆಯನ್ನು ಬಾಲ ಜೀವನ್‌ ವಿಮೆ ಯೋಜನೆ (Bal Jeevan Insurance Plan) ಎಂದು ಹೆಸರಿಸಲಾಗಿದೆ.

ಬಾಲ ಜೀವನ್ ವಿಮೆ ಯೋಜನೆ ವಿವರ :
ಭಾರತೀಯ ಅಂಚೆ ಇಲಾಖೆಯಲ್ಲಿ ಗ್ರಾಹಕರು ಬಾಲ ಜೀವನ್ ವಿಮೆ ಯೋಜನೆಯಲ್ಲಿ ಹೂಡಿಕೆ ಮಾಡಲು ಒಂದಷ್ಟು ಮಾನದಂಡಗಳನ್ನು ಒಳಗೊಂಡಿರಬೇಕಾಗುತ್ತದೆ. ಅವುಗಳೆಂದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡುವವರ ಮಗು 5 ರಿಂದ 20 ವರ್ಷ ಒಳಗಿನ ವಯಸ್ಸಿನ ಮಕ್ಕಳಿಗೆ ಅಂಚೆ ಇಲಾಖೆ ಯಿಂದ ‌ಸಿಗುವ ವಿಮೆ ಇದಾಗಿರುತ್ತದೆ. ಈ ವಿಮೆ ಯೋಜನೆಯಲ್ಲಿ ಪ್ರೀಮಿಯಂ ಒಟ್ಟು ‌ಮೊತ್ತ 20,000 ದಿಂದ 3 ಲಕ್ಷ ವರೆಗೆ ಆಗಿರುತ್ತದೆ. ಈ ವಿಮೆ ಯೋಜನೆಯಲ್ಲಿ ಗರಿಷ್ಠ ಇಬ್ಬರು ಮಕ್ಕಳಿಗೆ ಒಬ್ಬ ಪೋಷಕರು ಈ ವಿಮೆ ಮಾಡಿಸಬಹುದಾಗಿದೆ. ಹಾಗೆಯೇ ಪೋಷಕರ‌ ಗರಿಷ್ಠ ವಯಸ್ಸಿನ ಮಿತಿ 45 ವರ್ಷ ಮೀರಬಾರದು.

ಇದನ್ನೂ ಓದಿ : Fastag Balance Check : ಸುಲಭ ವಿಧಾನಗಳ ಮೂಲಕ ಚೆಕ್‌ ಮಾಡಿ ಫಾಸ್ಟ್‌ಟ್ಯಾಗ್ ಬ್ಯಾಲೆನ್ಸ್‌

ಇದನ್ನೂ ಓದಿ : ಕೇಂದ್ರ ಸರಕಾರಿ ನೌಕರರಿಗೆ ಗುಡ್ ನ್ಯೂಸ್ : 10 ದಿನಗಳಲ್ಲಿ ಡಿಎ ಹೆಚ್ಚಳ ಸಾಧ್ಯತೆ

ಇದನ್ನೂ ಓದಿ : ಹಿರಿಯ ನಾಗರಿಕರ ಗಮನಕ್ಕೆ : ಎಫ್‌ಡಿ ಬಡ್ಡಿದರವನ್ನು ಶೇ. 8.20ಕ್ಕೆ ಹೆಚ್ಚಿಸಿದ ಬಜಾಜ್ ಫೈನಾನ್ಸ್

ಈ ವಿಮೆ ಯೋಜನೆಯಲ್ಲಿ ಪ್ರೀಮಿಯಂ ಕಟ್ಟುವ ನಡುವೆ ಪೋಷಕ ಮರಣ ಹೊಂದಿದಲ್ಲಿ ವಿಮೆ ಸ್ಥಗಿತಗೊಳ್ಳುವುದಿಲ್ಲ. ಮೆಚ್ಯುರಿಟ್ ಅವಧಿ ಮುಗಿದ ನಂತರ ಬೋನಸ್ ಮತ್ತು ಬಡ್ಡಿ ಸೇರಿ ಒಟ್ಟು ವಿಮೆಯ ಮೊತ್ತ ಸಿಗುತ್ತದೆ. ವಿಮೆ ಮಾಡಿಸಲು ಮಕ್ಕಳಿಗೆ ಮೆಡಿಕಲ್ ಸರ್ಟಿಫಿಕೇಟ್ ನ‌ ಅಗತ್ಯವಿಲ್ಲ. ಆದರೆ ವಿಮೆ ಪ್ರಾರಂಭಿಸುವ ಸಮಯದಲ್ಲಿ ಮಗು ಆರೋಗ್ಯವಂತರಾಗಿರಬೇಕು. 20 ವರ್ಷಗಳ ಅವಧಿ ಮುಗಿದ ನಂತರ ಪೂರ್ಣ ಬೋನಸ್ ಮೊತ್ತ‌ ದೊ೦ದಿಗೆ ಪೋಷಕರ ಖಾತೆಗೆ ಒಟ್ಟು ಮೊತ್ತ‌ ಸಿಗುತ್ತದೆ. ಭಾರತೀಯ ಅಂಚೆ ಇಲಾಖೆಯ ಎಲ್ಲಾ ವಿಮೆ‌ ಮತ್ತು Money back policy ಇತರೆ ಎಲ್ಲಾ ರೀತಿಯ ‌ವಿಮೆಗಿ೦ತ ಹೆಚ್ಚು‌ ಲಾಭದಾಯಕವಾಗಿರುತ್ತದೆ.

Bal Jeevan Insurance Plan for Children’s Future: There are many benefits in the new scheme of the Department of Posts

Comments are closed.