Athirappilly Falls: ಭಾರತದ “ನಯಾಗರ ಜಲಪಾತ” ಆದಿರಪ್ಪಳ್ಳಿ; ಬಾಹುಬಲಿ ಸಿನಿಮಾದಲ್ಲಿ ಇರೋದು ಇದೇ ಜಲಪಾತ!

ಪ್ರಭಾಸ್ ಹಾಗೂ ಅನುಷ್ಕಾ ಅಭಿನಯದ ಬಾಹುಬಲಿ (Bahubali Film) ಸಿನಿಮಾ ನೋಡಿದವರಿಗೆ ಈ ಜಲಪಾತವನ್ನು ನೋಡಿರುವ ನೆನಪು ಇರಬಹುದು. ಈ ಜಲಪಾತವನ್ನು ಆದಿರಪ್ಪಳ್ಳಿ ಜಲಪಾತ (Athirappilly Falls) ಎನ್ನುತ್ತಾರೆ. ಇದು “ಭಾರತದ ನಯಾಗರ ಜಲಪಾತ” (India’s Niagara) ಎಂದೇ ಖ್ಯಾತಿ ಪಡೆದಿದೆ. ಮಣಿರತ್ನಂ ನಿರ್ದೇಶನದ ಗುರು ಸಿನಿಮಾ ಶೂಟಿಂಗ್ ಕೂಡ ಆಗಿದ್ದು ಇಲ್ಲೇ. ಇಡೀಇದೇ ಜಲಪಾತದಲ್ಲಿ ಬರ್‌ ಸೋರೇ ಮೇಘಾ ಮೇಘಾ ಹಾಡಿಗೆ ಐಶ್ವರ್ಯ ರೈ ಡ್ಯಾನ್ಸ್‌ ಮಾಡುತ್ತಿರುವ ದೃಶ್ಯವನ್ನು ನೀವು ಸಿನಿಮಾದಲ್ಲಿ ಕಾಣಬಹುದು.

ಈ ಜಲಪಾತ ಎಲ್ಲಿದೆ?
ಇದು ಕೇರಳದ ತ್ರಿಶ್ಶೂರ್ ಜಿಲ್ಲೆಯ ಚಾಲಕುಡಿ ನದಿಯ ದಡದಲ್ಲಿ ಸಮುದ್ರ ಮಟ್ಟಕ್ಕಿಂತ 1000 ಅಡಿ ಎತ್ತರದಲ್ಲಿದೆ. ಕೇರಳದ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದ್ದು,. ಇದು ಕೇರಳದ ದೊಡ್ಡ ಜಲಪಾತವಾಗಿದೆ.

ತಲುಪುವುದು ಹೇಗೆ?
ನೀವು ವಿಮಾನದಲ್ಲಿ ಬರುತ್ತಿದ್ದರೆ, ಅತಿರಪ್ಪಳ್ಳಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ. 45 ಕಿಲೋಮೀಟರ್ ಅಥವಾ 1 ಗಂಟೆ 15 ನಿಮಿಷ ಗಳಲ್ಲಿ ಇಲ್ಲಿಗೆ ತಲುಪಲು ಸಾಧ್ಯ. ನೀವು ರೈಲಿನಲ್ಲಿ ಹೋಗುವ ವರಾಗಿದ್ದರೆ ಹತ್ತಿರದ ನಿಲ್ದಾಣವೆಂದರೆ ಚಾಲಕುಡಿ ಮತ್ತು ಅಂಗಮಾಲಿ. (ಕೆಲವೇ ಕೆಲವು ರೈಲುಗಳು ಇಲ್ಲಿ ನಿಲ್ಲುತ್ತವೆ) ಮತ್ತು ನೀವು ಪ್ರಮುಖ ನಿಲ್ದಾಣಗಳಾದ ಆಲುವಾ ಅಥವಾ ಎರ್ನಾಕುಲಂ ನಿಲ್ದಾಣಗಳಲ್ಲಿಯೂ ಇಳಿಯಬಹುದು.

ಪ್ರಮುಖ ಆಕರ್ಷಣೆ
ವಜಚಲ್ ಜಲಪಾತ, ಚಾರ್ಪಾ ಜಲಪಾತ, ಅನಕ್ಕಾಯಂ, ಶೋಲಾಯಾರ್ ಅಣೆಕಟ್ಟು, ವಾಲ್ಪಾರೈ ಮತ್ತು ಮಲಯಾತೂರ್ ವನ್ಯಜೀವಿ ಅಭಯಾರಣ್ಯ, ಕೊಂಡಾನಂದ ಆನೆಗಳ ತರಬೇತಿ ಶಿಬಿರವು ಭೇಟಿ ನೀಡಲು ಯೋಗ್ಯವಾದ ಸ್ಥಳಗಳಾಗಿವೆ. ನಿಸರ್ಗ ವೀಕ್ಷಣೆ ಜೊತೆಗೆ, ವನ್ಯಜೀವಿ ಗಳನ್ನೂ ಇಲ್ಲಿ ಕಣ್ ತುಂಬಿಕೊಳ್ಳಬಹುದಾಗಿದೆ.
ಇಷ್ಟೇ ಅಲ್ಲದೆ, ಇಲ್ಲಿ ನದಿ ರಾಫ್ಟಿಂಗ್, ಟ್ರೆಕ್ಕಿಂಗ್ ಮುಂತಾದ ಸಾಹಸ ಚಟುವಟಿಕೆಗಳು ಇವೆ.
ಒಂದು ವೇಳೆ ನೀವು ಹೈ ಬಜೆಟ್ ಹೊಂದಿದ್ದರೆ, ಟ್ರೀ ಹೌಸ್ ನಲ್ಲಿ ಉಳಿದು ನಿಸರ್ಗ ಸೌಂದರ್ಯ ಆಸ್ವಾದಿಸ ಬಹುದು.

ಯಾವಾಗ ಭೇಟಿ ನೀಡ್ಬೇಕು?
ಜೂನ್ ನಿಂದ ಒಕ್ಟೋಬರ್ ವರೆಗೆ ಯಾವಾಗ ಬೇಕಾದರೂ ( ಬೆಳಗ್ಗೆ8- ಸಂಜೆ 6) ಭೇಟಿ ನೀಡಬೇಕು. ಮಳೆಗಾಲ ಮುಗಿದ ಮೇಲೆ ಇಲ್ಲಿಗೆ ಭೇಟಿ ನೀಡಿ ಪ್ರಯೋಜನ ಇಲ್ಲ.

ಇದನ್ನೂ ಓದಿ: Perfume City : ಒಂದಾನೊಂದು ಕಾಲದಲ್ಲಿ ಭಾರತದ ಈ ನಗರದ ಚರಂಡಿಯಲ್ಲೂ ಸುಗಂಧ ದ್ರವ್ಯ ಹರಿಯುತ್ತಿತ್ತಂತೆ!

(Athirappilly Falls Kerala tourist place timing and iamges you must visit)

Comments are closed.