ಮುಸ್ಲಿಂರನ್ನು ಗೂಂಡಾ ಎಂದ ಸಚಿವ ಈಶ್ವರಪ್ಪ: ಶಿವಮೊಗ್ಗದಲ್ಲಿ ಸಚಿವರ ವಿರುದ್ಧ ದೂರು

ಶಿವಮೊಗ್ಗ : ಈಗಾಗಲೇ ತಾವಾಡಿದ ಮಾತಿನಿಂದ ಮುಜುಗರಕ್ಕೆ ಒಳಗಾಗಿರೋದು ಮಾತ್ರವಲ್ಲದೇ ಸರ್ಕಾರಕ್ಕೆ ಪಕ್ಷಕ್ಕೆ ಸಂಕಷ್ಟ ತಂದಿಟ್ಟಿರೋ ಬಿಜೆಪಿ ಹಿರಿಯ ಸಚಿವ ಕೆ.ಎಸ್. ಈಶ್ವರಪ್ಪ‌ (complaint against minister Eshwarappa) ಅವರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಹರ್ಷ ಕೊಲೆ ಬಳಿಕ ಉದ್ವಿಘ್ನವಾಗಿದ್ದ ಶಿವಮೊಗ್ಗದಲ್ಲಿ ಮುಸ್ಲಿಂ ರ ವಿರುದ್ಧ ಹೇಳಿಕೆ ನೀಡಿದ ಈಶ್ವರಪ್ಪ ವಿರುದ್ಧ ದೂರು ದಾಖಲಾಗಿದೆ.

ರವಿವಾರ ರಾತ್ರಿ ವೇಳೆ ಶಿವಮೊಗ್ಗದ ಭಾರತಿ ನಗರದಲ್ಲಿ ಹರ್ಷ ಎಂಬ ಭಜರಂಗದಳ ಕಾರ್ಯಕರ್ತನ ಹತ್ಯೆಯಾಗಿತ್ತು. ಹಿಂದೂ ಪರ ಕಾರ್ಯಕರ್ತನಾಗಿದ್ದ ಹರ್ಷನ ಕೊಲೆ‌ ಖಂಡಿಸಿ ಶಿವಮೊಗ್ಗದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಹರ್ಷ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಚಿತಾಗಾರಕ್ಕೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗಿತ್ತು. ಈ ವೇಳೆ ಶಿವಮೊಗ್ಗದ ಹಲವು ಬೀದಿಗಳಲ್ಲಿ ಕಲ್ಲು ತೂರಾಟ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿ ದೌರ್ಜನ್ಯ ನಡೆಸಲಾಗಿತ್ತು.

ಉದ್ವಿಗ್ನಗೊಂಡ ಶಿವಮೊಗ್ಗವನ್ನು ಪೊಲೀಸರು ಕೊನೆಗೂ ಹಿಡಿತಕ್ಕೆ ತಂದಿದ್ದರು. ಈ ಮಧ್ಯೆ ಹರ್ಷ ಕೊಲೆ ಪ್ರಕರಣದ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ್ದ ಬಿಜೆಪಿಯ ಹಿರಿಯ ಸಚಿವ ಡಿಕೆಶಿ ಮಾತಿನಿಂದ ಕುಮ್ಮಕ್ಕಿಂದ ಈ ಕೃತ್ಯ ನಡೆದಿದೆ.‌ಡಿಕೆಶಿ ಮಾತಿನಿಂದ ಬಲ ಪಡೆದ ಮುಸ್ಲಿಂ ಗೂಂಡಾಗಳು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಈಗ ಇದೇ ಮಾತಿನಿಂದ ಈಶ್ವರಪ್ಪ ಸಂಕಷ್ಟಕ್ಕೆ ಸಿಲುಕಿದ್ದು, ಈಶ್ವರಪ್ಪನವರ ಈ ಹೇಳಿಕೆ ವಿರುದ್ಧ ಶಿವಮೊಗ್ಗದ ಮುಸ್ಲಿಂ ನಾಯಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಹರ್ಷ ಮೃತದೇಹ ಮೆರವಣಿಗೆ ವೇಳೆ ಗಲಾಟೆ,ದೊಂಬಿ ನಡೆದಿದೆ. ಈ ವೇಳೆ ನಮ್ಮ ಆಸ್ತಿ ಪಾಸ್ತಿ ಹಾಗೂ ಅಂಗಡಿ ಮುಂಗಟ್ಟುಗಳಿಗೆ ಹಾನಿಯಾಗಿದೆ. ಅಷ್ಟೇ ಅಲ್ಲ ಈಶ್ವರಪ್ಪನವರು ನಮ್ಮ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಮುಸ್ಲಿಂ ಮುಖಂಡರು ಆರೋಪಿಸಿದ್ದಾರೆ. ಗೂಂಡಾ ಮುಸ್ಲಿಂರೆಂದು ಈಶ್ವರಪ್ಪ ನವರು ಹೇಳಿಕೆ ಕೊಟ್ಟಿದ್ದಾರೆ. ಇದು ಸರಿಯಲ್ಲ. ಕೆಲ ಮುಸ್ಲಿಂ ಗೂಂಡಾಗಳೆಂದು ಈಶ್ವರಪ್ಪ ನವರು ಹೇಳಿಕೆ ನೀಡಿದ್ದರೇ ನಾವು ಪ್ರಶ್ನೆ ಮಾಡುತ್ತಿರಲಿಲ್ಲ. ಆದರೆ ಈಶ್ವರಪ್ಪ ನವರು ಗೂಂಡಾ ಮುಸ್ಲಿಂರೆಂದು ಹೇಳಿದ್ದಾರೆ.

ಇದರಿಂದ ನಮಗೆ ಇನ್ನೂ ಆತಂಕ ಎದುರಾಗಿದೆ. ಇನ್ನು ಈಶ್ವರಪ್ಪ ನವರ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಹೋದರೇ ಪೊಲೀಸರು ದೂರು ಪಡೆಯುತ್ತಿಲ್ಲ. ಬದಲಾಗಿ ದೂರಿನಲ್ಲಿ ಈಶ್ವರಪ್ಪ ಹೆಸರು ತೆಗೆಯುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಮುಸ್ಲಿಂ ಮುಖಂಡರಾದ ನಾಸೀರ್ ಅಹ್ಮದ್, ರಿಯಾಜ್ ಸೇರಿದಂತೆ ಹಲವರು ಆರೋಪಿಸಿದ್ದಾರೆ. ಇದರಿಂದ ಮತ್ತೊಮ್ಮೆ ಈಶ್ವರಪ್ಪ ಸಂಕಷ್ಟಕ್ಕೆ ಸಿಲುಕಿದ್ದು, ಬಿಜೆಪಿ ಪಕ್ಷ ಹಾಗೂ ಸರ್ಕಾರದ ಮಟ್ಟದಲ್ಲಿ ಈಶ್ವರಪ್ಪನವರಿಂದ ಮತ್ತೆ ಮುಜುಗರ ಎದುರಿಸುವಂತಾಗಿದೆ.

ಇದನ್ನೂ ಓದಿ : ಹರ್ಷ ಕೊಲೆ ಪ್ರಕರಣ NIA ತನಿಖೆ : ಬಿಜೆಪಿ ನಾಯಕರ ಆಗ್ರಹಕ್ಕೆ ಮಣಿಯುತ್ತಾ ರಾಜ್ಯ ಸರಕಾರ

ಇದನ್ನೂ ಓದಿ : ಶಿವಮೊಗ್ಗ ಹರ್ಷ ಹತ್ಯೆ ಪ್ರಕರಣ : 6 ಮಂದಿ ಅರೆಸ್ಟ್‌, ಫೆ. 25ರ ವರೆಗೆ ಶಾಲೆ, ಕಾಲೇಜಿಗೆ ರಜೆ ವಿಸ್ತರಣೆ

(After Harsha Murder in Shivamogga says Muslim Goonda statement complaint against the minister KS Eshwarappa)

Comments are closed.