Karnataka 2nd PUC results 2023 : ಗ್ರಾಮೀಣ ಪ್ರತಿಭೆ ಸಾಂಚಿತಾ ವೈ ಎಮ್‌ಗೆ ಶೇ. 96.33 ಫಲಿತಾಂಶ

ಕುಂದಾಪುರ : ಎಕ್ಸಲೆಂಟ್‌ ಪದವಿಪೂರ್ವ ಕಾಲೇಜು ಸುಣ್ಣಾರಿ ವಿದ್ಯಾರ್ಥಿನಿ ಸಾಂಚಿತಾ ವೈ ಎಮ್‌ (Sanchitha Y.M) ದ್ವಿತೀಯ ಪಿಯುಸಿ ಪರೀಕ್ಷೆಯ (Karnataka PUC results 2023) ವಿಜ್ಞಾನ ವಿಭಾಗದಲ್ಲಿ ಒಟ್ಟು 600ರಲ್ಲಿ 578 ಅಂಕ ಗಳಿಸಿ ಶೇಕಡಾ 96.33ರಷ್ಟು ಫಲಿತಾಂಶ ಪಡೆಯುವ ಮೂಲಕ ವಿಶಿಷ್ಟ ಸಾಧನೆಯನ್ನು ಮಾಡಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೆಸ್ಕೂತ್ತೂರಿನ ಮಂಜುನಾಥ್‌ ಕಾಂಚನ್‌ ಗುಡ್ರಿ (ಬಲಾಡಿ ಕಲ್ತೋಡ್ಮಿ ಮನೆ) ಮತ್ತು ಮಾಲಿನಿ ಯಡಾಡಿ ಇವರ ಪುತ್ರಿಯಾಗಿದ್ದಾಳೆ.

ಹೆಸ್ಕೂತ್ತೂರಿನ ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿರುವ ಇವರು ಎಸ್‌ಎಸ್‌ಎಲ್‌ಸಿಯಲ್ಲಿ ಕೂಡ ಒಟ್ಟು 625ರಲ್ಲಿ 615 ಗಳಿಸುವುದರೊಂದಿಗೆ ಶೇಕಡಾ 98.4ರಷ್ಟು ಅಂಕ ಪಡೆದಿರುತ್ತಾರೆ. ಈಗ NEET&CET ಪರೀಕ್ಷೆಯ ತಯಾರಿ ನಡೆಸುತ್ತಿದ್ದು, ಅದರ ಫಲಿತಾಂಶದ ಮೇರೆಗೆ ತಮ್ಮ ಮುಂದಿನ ಶೈಕ್ಷಣಿಕ ಜೀವನವನ್ನು ಮುಂದರುವರಿಸುವ ಯೋಚನೆಯಲ್ಲಿದ್ದಾರೆ. ಒಟ್ಟಾರೆ ಗ್ರಾಮೀಣ ಪ್ರದೇಶದ ಪ್ರತಿಭೆ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎನ್ನುವುದು ಹೆತ್ತವರ ಹಾಗೂ ಪಾಠ ಹೇಳಿದ ಗುರುಗಳ ಆಶಯವಾಗಿದೆ.

ಇದನ್ನೂ ಓದಿ : CBSE ಬೋರ್ಡ್ ಪರೀಕ್ಷೆ 2023 : 10 ನೇ ತರಗತಿ ಫಲಿತಾಂಶ ಶೀಘ್ರದಲ್ಲೇ ಪ್ರಕಟ

ಪಿಯುಸಿ ಪರೀಕ್ಷೆಯಲ್ಲಿ ಗ್ರಾಮೀಣ ಪ್ರತಿಭೆ ಶ್ಯಾಮಿಲಿ ಕಾಂಚನ್‌ಗೆ 95% ಫಲಿತಾಂಶ

ಕುಂದಾಪುರ : ಆರ್.ಎನ್.‌ಶೆಟ್ಟಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶ್ಯಾಮಿಲಿ ಕಾಂಚನ್‌ (Shamili Kanchan) ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ(Karnataka PUC results 2023) ಶೇಕಡಾ 95 ಅಂಕ ಪಡೆಯುವ ಮೂಲಕ ವಿಶಿಷ್ಟ ಸಾಧನೆಯನ್ನು ಮಾಡಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಲಾಡಿ ಕಲ್ತೋಡ್ಮಿ ಮನೆ ಮಂಜುನಾಥ ಕಾಂಚನ್‌ ಹಾಗೂ ಮೊಳಹಳ್ಳಿ ಕೈಲ್‌ಕೆರೆಯ ನಿವಾಸಿ ಶೋಭಾ ಮಂಜುನಾಥ ಕಾಂಚನ್‌ ಅವರ ಪುತ್ರಿಯಾಗಿದ್ದಾಳೆ.

ಯಡಾಡಿ ಮತ್ಯಾಡಿಯ ಲಿಟ್ಲ್‌ ಸ್ಟಾರ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸವನ್ನು ಪಡೆದಿರುವ ಶ್ಯಾಮಿಲಿ ಶೇಕಡಾ 81ರಷ್ಟು ಅಂಕ ಪಡೆದಿರುತ್ತಾರೆ. ಸಾಫ್ಟ್‌ವೇರ್‌ ಇಂಜಿನಿಯರ್‌ ಆಗುವ ಬಯಕೆ ಹೊಂದಿದ್ದಾರೆ. ಇನ್ನು ತಂದೆ ಮಂಜುನಾಥ ಕಾಂಚನ್‌ ಅವರು ಮಗಳನ್ನು ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಮಾಡಬೇಕೆಂಬ ಕನಸು ಕಂಡಿದ್ದು, ಮಗಳು ಇದೀಗ ತಂದೆಯ ಕನಸನ್ನು ಸಾಕಾರ ಮಾಡುವತ್ತ ದಾಪುಗಾಲು ಇರಿಸಿದ್ದಾಳೆ. ಬಸ್‌ ಸಂಪರ್ಕವೇ ಇಲ್ಲದ ಪ್ರದೇಶದಲ್ಲಿ ನೆಲೆಸಿರುವ ಶ್ಯಾಮಿಲಿ ಕಾಂಚನ್‌ ನಿತ್ಯವೂ ಮೂರು ಕಿಲೋ ಮೀಟರ್‌ ನಡೆದುಕೊಂಡು ಕಾಲೇಜಿಗೆ ತೆರಳಿದ್ದು, ಇದೀಗ ಶೈಕ್ಷಣಿಕ ಸಾಧನೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾಳೆ.

Karnataka 2nd PUC results 2023 : Rural talent Sanchitha Y.M got percentage. 96.33 results

Comments are closed.