success in business: ವ್ಯವಹಾರದಲ್ಲಿ ಪ್ರಗತಿಗಾಗಿ ಕಚೇರಿಯಲ್ಲಿ ತಂದಿಡಿ ಈ ವಿಶೇಷ ವಸ್ತು

Vaastu tips : ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಪ್ರತಿಯೊಂದು ವಸ್ತುಗಳನ್ನು ಇಡುವಾಗಲೂ ನೀವು ನೂರು ಬಾರಿ ಯೋಚಿಸಬೇಕು. ನೀವು ಸಣ್ಣ ವಿಚಾರವನ್ನು ನಿರ್ಲಕ್ಷಿಸಿದರೂ ಸಹ ವಾಸ್ತುದೋಷ ಉಂಟಾಗುತ್ತದೆ. ಇದರಿಂದ ಜೀವನದಲ್ಲಿ ನಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ. ವಾಸ್ತುದೋಷದಿಂದಾಗಿ ದೈಹಿಕ ಹಾಗೂ ಮಾನಸಿಕವಾಗಿ ನಿಮಗೆ ಸಮಸ್ಯೆಗಳು ಉಂಟಾಗುತ್ತದೆ. ವಾಸ್ತು ದೋಷ ಎನ್ನುವುದು ಕೇವಲ ಮನೆಗೆ ಮಾತ್ರ ಸೀಮಿತವಾಗಿಲ್ಲ. ಇದು ಕಚೇರಿಗಳಿಗೂ ಅನ್ವಯಿಸುತ್ತದೆ. ಹೀಗಾಗಿ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು. ಈ ಸಮಸ್ಯೆಯಿಂದ ಪಾರಾಗಲು ನೀವು ಕೆಲವೊಂದು ವಿಶೇಷ ವಸ್ತುಗಳನ್ನು ಕಚೇರಿಯಲ್ಲಿ ( success in business ) ಇಡಬೇಕು.

ಬಿದಿರು ಗಿಡ

ಇದು ಮನೆಗೆ ಎಷ್ಟು ಒಳ್ಳೆಯದು ಎಂದು ಪರಿಗಣಿಸಲ್ಪಟ್ಟಿದೆಯೋ, ಅದು ಕಚೇರಿಗು ಅಷ್ಟೇ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ವಾಸ್ತು ಪ್ರಕಾರ, ಕಚೇರಿಯಲ್ಲಿ ಮೇಜಿನ ಮೇಲೆ ಬಿದಿರಿನ ಗಿಡವನ್ನು ಇಡುವುದರಿಂದ ವ್ಯವಹಾರದಲ್ಲಿ ಪ್ರಗತಿಯ ಅವಕಾಶಗಳನ್ನು ನೀಡುತ್ತದೆ. ಅಲ್ಲದೇ ಇದನ್ನು ಬೆಳೆಸಲು ಕೂಡ ನೀವು ಹೆಚ್ಚು ಕಷ್ಟ ಪಡಬೇಕಾಗಿಲ್ಲ.

ಸ್ಫಟಿಕ ಮರ

ಸ್ಫಟಿಕ ಮರವನ್ನು ಕಚೇರಿಯಲ್ಲಿಟ್ಟರೆ ಉದ್ಯಮಿಗಳ ಸ್ಥಗಿತ ಕೆಲಸವೂ ಶುರುವಾಗುತ್ತದೆ ಎಂಬ ನಂಬಿಕೆಯಿದೆ. ಸ್ಫಟಿಕ ಮರವು ವ್ಯವಹಾರವನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಆದ್ದರಿಂದ, ನೀವು ವ್ಯವಹಾರದಲ್ಲಿ ಹಿನ್ನೆಡೆ ಅನುಭವಿಸುತ್ತಿದ್ದರೆ ಕೂಡಲೇ ಸ್ಫಟಿಕದ ಮರವನ್ನು ಕಚೇರಿಗೆ ತೆಗೆದುಕೊಂಡು ಬನ್ನಿ.

ಲಾಫಿಂಗ್​​ ಬುದ್ಧ

ಲಾಫಿಂಗ್ ಬುದ್ಧ ಮನೆಗೆ ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ ಮತ್ತು ಇದನ್ನು ಕಚೇರಿಯಲ್ಲಿ ಇಡುವುದೂ ಕೂಡ ಶುಭಕರವಾಗಿದೆ. ಲಾಫಿಂಗ್​ ಬುದ್ಧನನ್ನು ಕಚೇರಿಯಲ್ಲಿ ಇಟ್ಟರೆ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಹೀಗಾಗಿ ನೀವು ವ್ಯವಹಾರ ನಡೆಸುವ ಕೌಂಟರ್​ನಲ್ಲಿಯೇ ಲಾಫಿಂಗ್​ ಬುದ್ಧನ ಮೂರ್ತಿಯನ್ನು ತಂದಿಡುವುದು ಹೆಚ್ಚು ಸೂಕ್ತವಾಗಿದೆ.

ಇದನ್ನು ಓದಿ : Mental Health Cafe Mohali: ಯುವರ್ ಶುಗರ್ ಡ್ಯಾಡಿ; ಮಾನಸಿಕ ಆರೋಗ್ಯಕ್ಕೆಂದೇ ಮೊಹಾಲಿಯಲ್ಲೊಂದು ಕೆಫೆ

ಇದನ್ನೂ ಓದಿ : non ISI helmet : ಬೆಂಗಳೂರಿನಲ್ಲಿ ಇನ್ಮೇಲೆ ಈ ರೀತಿಯ ಹೆಲ್ಮೆಟ್​ ಧರಿಸಿದರೆ ಬೀಳುತ್ತೆ ದಂಡ

ಇದನ್ನೂ ಓದಿ : ಈ ದಿಕ್ಕಿನಲ್ಲಿ ತಲೆ ಇಟ್ಟು ಮಲಗಿದರೆ ನಿಮಗೆ ಸಿಗಲಿದೆ ಶುಭ ಲಾಭ

Vaastu tips keep these things in the office to get success in business

Comments are closed.