Kitchen Tips: ಈ ವಿಧಾನದ ಮೂಲಕ ನೀವು ಅತ್ಯಂತ ಸುಲಭವಾಗಿ ಬಿಡಿಸಬಹುದು ದಾಳಿಂಬೆ ಸಿಪ್ಪೆ

Kitchen Tips: ದುಡಿಮೆಯ ಫಲ ಸಿಹಿಯಾಗಿರುತ್ತದೆ ಎಂಬ ಮಾತಿದೆ. ಆದರೆ ಹಣ್ಣನ್ನು ಸೇವಿಸಲು ನೀವು ಅಷ್ಟೇನು ಕಷ್ಟಪಡಬೇಕಿಲ್ಲ. ನಿಮಗೆ ಸಣ್ಣ ಸಣ್ಣ ಮಾರುಕಟ್ಟೆಗಳಲ್ಲಿ ಹಣ್ಣು ತಿನ್ನಲು ಸಿಕ್ಕೇ ಸಿಗುತ್ತದೆ. ಸೇಬು, ಕಿತ್ತಳೆ, ಮೂಸಂಬಿ, ದ್ರಾಕ್ಷಿ ಹೀಗೆ ನಾನಾ ಹಣ್ಣುಗಳನ್ನು ತಿನ್ನಲು ಜನರು ಇಷ್ಟ ಪಡುತ್ತಾರೆ. ಆದರೆ ದಾಳಿಂಬೆ ಹಣ್ಣನ್ನು ತಿನ್ನಲು ಹೆಚ್ಚಿನ ಜನರು ಇಷ್ಟ ಪಡುವುದಿಲ್ಲ. ಇದಕ್ಕೆ ಕಾರಣ ಅದರ ರುಚಿಯಲ್ಲ , ಬದಲಾಗಿ ಅದರ ಸಿಪ್ಪೆ..!


ಹೌದು,.! ದಾಳಿಂಬೆ ಹಣ್ಣಿನ ಸಿಪ್ಪೆ ಸುಲಿಯುವುದು ಕಷ್ಟ ಅಂತಾ ಅನೇಕರು ಈ ಹಣ್ಣನ್ನು ಸೇವನೆ ಮಾಡಲು ಹೋಗುವುದೇ ಇಲ್ಲ. ದಾಳಿಂಬೆ ಹಣ್ಣಿನ ಸಿಪ್ಪೆ ತೆಗೆಯಲು ಯಾರು ಶ್ರಮವಹಿಸ್ತಾರಪ್ಪಾ ಎಂಬ ಸೋಂಬೆರಿತನ ಅನೇಕರದ್ದು . ಇನ್ನು ಕಷ್ಟ ಪಟ್ಟು ದಾಳಿಂಬೆ ಹಣ್ಣಿನ ಸಿಪ್ಪೆ ಸುಲಿದರೂ ಸಹ ಅದರ ಬೀಜವನ್ನು ಸ್ವಲ್ಪವೂ ವ್ಯರ್ಥವಾಗದಂತೆ ಕಪ್​ಗೆ ಹಾಕುವುದು ಕೂಡ ಕಷ್ಟವೇ. ಇದೆಲ್ಲ ಆದ ಮೇಲೆ ದಾಳಿಂಬೆ ಬೀಜದ ಜೊತೆಯಲ್ಲಿ ಉಳಿಯುವ ಸಿಪ್ಪೆಯ ಚೂರು ಮತ್ತೊಂದು ರೀತಿಯಲ್ಲಿ ಕಿರಿಕಿರಿ ಉಂಟು ಮಾಡುತ್ತದೆ.


ಆದರೆ ಸೋಶಿಯಲ್​ ಮೀಡಿಯಾದಲ್ಲಿ ನಿಮಗೆ ಎಲ್ಲದಕ್ಕೂ ಪರಿಹಾರ ಸಿಕ್ಕೇ ಸಿಗುತ್ತದೆ. ಇನ್​ಸ್ಟಾಗ್ರಾಂನಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ದಾಳಿಂಬೆ ಹಣ್ಣಿನ ಸಿಪ್ಪೆ ಸುಲಿಯಲು ಅತ್ಯಂತ ಸರಳವಾದ ಹ್ಯಾಕ್​ನ್ನು ತಿಳಿಸಿಕೊಡಲಾಗಿದೆ. ಇದಕ್ಕಾಗಿ ನೀವು ಇನ್ಯಾವುದೇ ವಿಶೇಷ ವಸ್ತುಗಳನ್ನು ಖರೀದಿ ಮಾಡಬೇಕು ಎಂದೇನಿಲ್ಲ. ಒಂದು ಕಪ್​​, ಒಂದು ಚಾಕು ಹಾಗೂ 1 ಲೋಟ ನೀರನ್ನು ಬಳಸಿ ನೀವು ಬಾಳೆಹಣ್ಣಿನ ಸಿಪ್ಪೆ ಸುಲಿದಷ್ಟು ಸುಲಭವಾಗಿ ದಾಳಿಂಬೆ ಹಣ್ಣಿನ ಸಿಪ್ಪೆ ಬಿಚ್ಚಬಹುದು.


ಇದಕ್ಕಾಗಿ ನೀವು ಮಾಡಬೇಕಾದದ್ದು ಇಷ್ಟೇ. ಮೊದಲು ದಾಳಿಂಬೆ ಹಣ್ಣಿನ ತೊಟ್ಟಿನ ಭಾಗವನ್ನು ಚಾಕುವಿನಿಂದ ಕತ್ತರಿಸಿ. ಬಳಿಕ ದಾಳಿಂಬೆ ಹಣ್ಣಿನ ಸುತ್ತಲೂ ಅಂದರೆ ನಾಲ್ಕರಿಂದ ಐದು ಕಡೆಗಳಲ್ಲಿ ಸಿಪ್ಪೆಯನ್ನು ಕತ್ತರಿಸುತ್ತಾ ಹೋಗಿ. ಬಳಿಕ ದಾಳಿಂಬೆ ಹಣ್ಣನ್ನು ಅರಳಿಸಿ ಅದನ್ನು ಕಪ್​ನ ಮೇಲೆ ಬೋರಲು ಹಾಕಿ. ಬಳಿಕ ದಾಳಿಂಬೆ ಹಣ್ಣಿನ ಸಿಪ್ಪೆಗೆ ಚಾಕುವಿನಿಂದ ಬಡಿಯಿರಿ. ಈಗ ಎಲ್ಲಾ ದಾಳಿಂಬೆ ಬೀಜವು ಕಪ್​ನಲ್ಲಿ ಬೀಳಲಿದೆ. ಇದಕ್ಕೆ ಈಗ ನೀರನ್ನು ಹಾಕಿ. ಆಗ ನಿಮಗೆ ಬೇಡವಾದ ದಾಳಿಂಬೆ ಹಣ್ಣಿನ ತಿರುಳುಗಳು ಮೇಲಕ್ಕೆ ತೇಲಲಿದೆ. ಈಗ ದಾಳಿಂಬೆ ಬೀಜವನ್ನು ನೀರಿನಿಂದ ಬೇರ್ಪಡಿಸಿ. ಬಳಿಕ ಆರಾಮಾಗಿ ತಿನ್ನಿ.

kitchen tips how to remove pomegranate seeds without mess

ಇದನ್ನು ಓದಿ : Mental Health Cafe Mohali: ಯುವರ್ ಶುಗರ್ ಡ್ಯಾಡಿ; ಮಾನಸಿಕ ಆರೋಗ್ಯಕ್ಕೆಂದೇ ಮೊಹಾಲಿಯಲ್ಲೊಂದು ಕೆಫೆ

ಇದನ್ನೂ ಓದಿ : non ISI helmet : ಬೆಂಗಳೂರಿನಲ್ಲಿ ಇನ್ಮೇಲೆ ಈ ರೀತಿಯ ಹೆಲ್ಮೆಟ್​ ಧರಿಸಿದರೆ ಬೀಳುತ್ತೆ ದಂಡ

Comments are closed.