Vastu Tips: ಮನೆಯಲ್ಲಿ ಈ ವಸ್ತುಗಳನ್ನು ಇರಿಸಿದರೆ ಇರಲಿದೆ ಲಕ್ಷ್ಮೀ ದೇವಿಯ ಕೃಪೆ

Vastu Tips: ಸನಾತನ ಧರ್ಮದಲ್ಲಿ ವಾಸ್ತು ಶಾಸ್ತ್ರವನ್ನು ಪ್ರಾಚೀನ ವಿಜ್ಞಾನ ಎಂದು ಪರಿಗಣಿಸಲಾಗಿದೆ. ಇದು ನಮ್ಮ ಜೀವನದಲ್ಲಿ ಎಲ್ಲೋ ಒಂದು ದೊಡ್ಡ ಪ್ರಭಾವವನ್ನು ಹೊಂದಿದೆ. ಕಠಿಣ ಪರಿಶ್ರಮ ಮತ್ತು ಅವಿರತ ಪ್ರಯತ್ನಗಳ ಹೊರತಾಗಿಯೂ, ನಾವು ಯಾವುದೇ ಕೆಲಸದಲ್ಲಿ ಯಶಸ್ವಿಯಾಗದಿದ್ದರೆ ಇದಕ್ಕೆ ಮನೆಯ ವಾಸ್ತು ದೋಷವೇ ಕಾರಣವಾಗಿದೆ. ಮನೆಯಲ್ಲಿನ ತೊಂದರೆಗಳು, ಹಣದ ಅಭಾವ, ದೈಹಿಕ ಕಾಯಿಲೆಗಳ ವಿರುದ್ಧ ನೀವು ನಿರಂತರವಾಗಿ ಹೋರಾಡುತ್ತಿದ್ದರೆ ನೀವು ವಾಸ್ತುವಿನ ಕಡೆಗೆ ಗಮನ ನೀಡಬೇಕು. ಈ ರೀತಿ ಮಾಡುವುದರಿಂದ ಮಾತ್ರ ನೀವು ಸಮಸ್ಯೆಯಿಂದ ಪಾರಾಗಬಹುದಾಗಿದೆ.


ಸನಾತನ ಧರ್ಮದಲ್ಲಿ ಶಂಖಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ದೇವತೆಗಳ ಕೈಯಲ್ಲಿ ನೀವು ಶಂಖವನ್ನು ನೋಡಿರುತ್ತೀರಿ. ಶಂಖವು ಧನಾತ್ಮಕ ಶಕ್ತಿಯ ಸಂಕೇತವಾಗಿದೆ. ಶಂಖವನ್ನು ಊದುವ ಮನೆಗಳಲ್ಲಿ ಶಂಖದ ಶಬ್ದದಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ನಾಶವಾಗುತ್ತದೆ. ಸಾಗರದ ಮಂಥನದಿಂದ ದೊರೆತ ರತ್ನಗಳಲ್ಲಿ ಶಂಖವೂ ರತ್ನವಾಗಿ ಹೊರಹೊಮ್ಮಿತು. ಶಂಖವನ್ನು ಲಕ್ಷ್ಮೀ ದೇವಿಯ ಸಹೋದರ ಎಂದೂ ಕರೆಯಲಾಗುತ್ತದೆ. ಹೀಗಾಗಿ ಮನೆಯಲ್ಲಿ ಶಂಖವನ್ನು ತಂದಿಡುವುದರಿಂದ ಲಕ್ಷ್ಮೀ ದೇವಿಯ ಆಶೀರ್ವಾದ ಸಿಗುತ್ತದೆ. ಮನೆಯ ತೊಂದರೆಗಳು ಹಾಗೂ ಆರ್ಥಿಕ ಅಡಚಣೆಗಳು ದೂರವಾಗುತ್ತದೆ. ಈ ಕಾರಣಕ್ಕಾಗಿ ಮನೆಯಲ್ಲಿ ಶಂಖವನ್ನು ಊದಬೇಕು.


ಸನಾತನ ಧರ್ಮದಲ್ಲಿ ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸುವಾಗ ತೆಂಗಿನ ಕಾಯಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ತೆಂಗಿನಕಾಯಿಯು ಲಕ್ಷ್ಮೀಗೆ ಅತ್ಯಂತ ಪ್ರಿಯಾಗಿದ್ದರಿಂದ ತೆಂಗಿನಕಾಯಿಯ ನೇವೈದ್ಯವು ಲಕ್ಷ್ಮೀ ದೇವಿಯನ್ನು ಮೆಚ್ಚಿಸುತ್ತದೆ. ಇದರಿಂದ ಮನೆಯಲ್ಲಿ ಸಮೃದ್ಧಿ ಹೆಚ್ಚುತ್ತದೆ. ಹಣಕಾಸಿನ ಅಡೆತಡೆಗಳನ್ನು ದೂರ ಮಾಡುತ್ತದೆ. ಹೀಗಾಗಿ ಮನೆಯಲ್ಲಿ ತೆಂಗಿನ ಕಾಯಿಯನ್ನು ಇಡುವುದು ಶುಭಕರ ಎಂದು ಪರಿಗಣಿಸಲಾಗಿದೆ.

ಲಕ್ಷ್ಮೀ ದೇವಿ ಹಾಗೂ ಕುಬೇರನ ನಡುವೆ ಪರಸ್ಪರ ಪೂರಕ ಅಂಶಗಳಿವೆ. ಏಕೆಂದರೆ ಇವರಿಬ್ಬರೂ ಸಂಪತ್ತಿನ ದೇವತೆಗಳು. ಇಬ್ಬರೂ ವೈಭವ ಹಾಗೂ ಐಶ್ವರ್ಯದ ಅಧಿಪತಿಗಳಾಗಿದ್ದಾರೆ. ಲಕ್ಷ್ಮೀ ಹಾಗೂ ಕುಬೇರನ ಚಿತ್ರಗಳನ್ನು ದೇವರ ಕೋಣೆಯಲ್ಲಿ ಇರಿಸುವುದರಿಂದ ಮನೆಯಲ್ಲಿನ ತೊಂದರೆಗಳು ಹಾಗೂ ವ್ಯಾಪಾರದಲ್ಲಿನ ನಷ್ಟವನ್ನು ಬಗೆಹರಿಸಬಹುದಾಗಿದೆ. ಲಕ್ಷ್ಮೀ ಹಾಗೂ ಕುಬೇರನನ್ನು ನಿತ್ಯ ಪೂಜೆ ಮಾಡುವುದರಿಂದ ಮನೆಯಲ್ಲಿ ಹಣದ ಹರಿವು ಹೆಚ್ಚುತ್ತದೆ. ಆರ್ಥಿಕ ತೊಂದರೆಗಳು ದೂರಾಗುತ್ತದೆ.


ಇನ್ನು ಮನೆಯಲ್ಲಿ ವಿಘ್ನ ನಿವಾರಕ ಗಣಪತಿಯನ್ನು ಆರಾಧಿಸುವುದರಿಂದ ಮನೆಯಲ್ಲಿನ ಬಡತನ ನಾಶವಾಗಿ ಶಾಂತಿ ನೆಮ್ಮದಿ ನೆಲೆಸುತ್ತದೆ. ಗಣೇಶನನ್ನು ವಿಘ್ನ ನಿವಾರಕ ಎಂದು ಕರೆಯಲಾಗುತ್ತದೆ. ಅದಕ್ಕಾಗಿಯೇ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನ ಓಡಿಸಿ ಸಕಾರಾತ್ಮಕ ಶಕ್ತಿಯನ್ನು ತರಲು ಗಣೇಶನ ವಿಗ್ರಹವನ್ನು ಮನೆಯಲ್ಲಿ ಇರಿಸಬೇಕು.

ಇದನ್ನು ಓದಿ : vastu tips for evening : ಸೂರ್ಯ ಮುಳುಗಿದ ಬಳಿಕ ಎಂದಿಗೂ ಈ ಕೆಲಸಗಳನ್ನು ಮಾಡಬೇಡಿ

ಇದನ್ನೂ ಓದಿ : Vastu Tips : ಸ್ನಾನ ಮಾಡಿದ ಬಳಿಕ ಮಾಡಲೇಬೇಡಿ ಈ ತಪ್ಪು: ಇದರಿಂದ ಉಂಟಾಗುತ್ತದೆ ಆರ್ಥಿಕ ನಷ್ಟ

vastu tips bring these vastu things in home all the problems will go away will be get peace and money

Comments are closed.