Vastu Tips : ಮನೆ ಹಾಗೂ ಕಚೇರಿಗಳಲ್ಲಿ ಮೇಣದ ಬತ್ತಿ ಬೆಳಗುವ ಮುನ್ನ ನೆನಪಿನಲ್ಲಿರಲಿ ಈ ವಾಸ್ತು ಟಿಪ್ಸ್​

Vastu Tips Never light a candles : ಕ್ಯಾಂಡಲ್​ಗಳು ಬೆಳಕನ್ನು ನೀಡುವುದರ ಜೊತೆಯಲ್ಲಿ ಮನೆಯ ಅಂದವನ್ನೂ ಹೆಚ್ಚಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ವಾಸ್ತು ಶಾಸ್ತ್ರದಲ್ಲಿ ಈ ಕ್ಯಾಂಡಲ್​ಗಳನ್ನು ಬೆಳಗುವುದಕ್ಕೂ ಕೂಡ ಅನೇಕ ನಿಯಮಗಳಿವೆ. ವಾಸ್ತು ಶಾಸ್ತ್ರದ ಪ್ರಕಾರ ನೀವು ಯಾವ್ಯಾವುದೋ ದಿಕ್ಕಿನಲ್ಲಿ ಮೇಣದ ಬತ್ತಿಗಳನ್ನು ಬೆಳಗುವಂತಿಲ್ಲ. ಮನೆಯಿರಲಿ ಅಥವಾ ಕಚೇರಿಯಿರಲಿ ನೀವು ಯಾವುದೇ ಕಾರಣಕ್ಕೂ ವಾಯುವ್ಯ ದಿಕ್ಕಿನಲ್ಲಿ ಮೇಣದ ಬತ್ತಿಗಳನ್ನು ಬೆಳಗುವಂತಿಲ್ಲ.


ವಾಸ್ತು ಶಾಸ್ತ್ರ ಹೇಳುವ ಪ್ರಕಾರ ನೀವು ಕಚೇರಿಯಲ್ಲಿ ವಾಯುವ್ಯ ದಿಕ್ಕಿನಲ್ಲಿ ಮೇಣದ ಬತ್ತಿಗಳನ್ನು ಇರಿಸಿದಲ್ಲಿ ಇದು ನಿಮ್ಮ ಕಚೇರಿ ಸಿಬ್ಬಂದಿಯ ಪ್ರಾಮಾಣಿಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ. ಅಲ್ಲದೇ ಕಚೇರಿಯಲ್ಲಿ ಹೂಡಿಕೆದಾರರು ನಿಮ್ಮಿಂದ ದೂರವಾಗುವ ಸಾಧ್ಯತೆಯಿದೆ. ಇದರ ಜೊತೆ ಮಾರುಕಟ್ಟೆಗಳಲ್ಲಿ ಬೇರೆ ಬರೆ ಬಣ್ಣದ ಮೇಣದ ಬತ್ತಿಗಳು ಲಭ್ಯವಿರುತ್ತದೆ. ಬೇರೆ ಬೇರೆ ಬಣ್ಣದ ಮೇಣದ ಬತ್ತಿಗಳನ್ನು ಬೇರೆ ಬೇರೆ ದಿಕ್ಕುಗಳು ಇವೆ ಎಂದು ವಾಸ್ತು ಶಾಸ್ತ್ರ ಹೇಳಿದೆ.


ಉದಾಹರಣೆಗೆ ನೀವು ಮೇಣದ ಬತ್ತಿಯನ್ನು ಈಶಾನ್ಯ ದಿಕ್ಕಿನಲ್ಲಿ ಬೆಳಗಲು ಬಯಸಿದ್ದಲ್ಲಿ ನೀವು ಹಸಿರು ಬಣ್ಣದ ಮೇಣದ ಬತ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇದರಿಂದ ಮನೆ ಹಾಗೂ ಕಚೇರಿಗಳಲ್ಲಿ ಧನಾತ್ಮಕ ವಾತಾವರಣ ಹೆಚ್ಚಲಿದೆ. ಅಲ್ಲದೇ ಮಕ್ಕಳಿಗೆ ಅಧ್ಯಯನದಲ್ಲಿ ಹೆಚ್ಚಿನ ಗಮನ ನೀಡಲು ಸಾಧ್ಯವಾಗುತ್ತದೆ . ಮಕ್ಕಳಲ್ಲಿ ಏಕಾಗ್ರತೆ ಹೆಚ್ಚುತ್ತದೆ.

ಇದನ್ನು ಓದಿ : IND vs SA 5th T20 ಮಳೆಗೆ ಬಲಿ : 50% ಟಿಕೆಟ್ ಹಣ ವಾಪಸ್, KSCA ಮಹತ್ವದ ನಿರ್ಧಾರ

ಇದನ್ನೂ ಓದಿ : mbbs student ends life : ಖಿನ್ನತೆಯಿಂದ ಬಳಲುತ್ತಿದ್ದ ವೈದ್ಯಕೀಯ ವಿದ್ಯಾರ್ಥಿ : ಮದುವೆಯಾಗಿ ಮೂರೇ ತಿಂಗಳಿಗೆ ಆತ್ಮಹತ್ಯೆ

Vastu Tips: Never light a candles in THIS direction of office, employees will suffer

Comments are closed.