yoga best medicine : ಯೋಗದಿಂದ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ

  • ಅಂಚನ್ ಗೀತಾ

yoga best medicine : ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನ ಡಯೆಟ್, ಉಪವಾಸ, ವಾಕಿಂಗ್ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸರ್ಕಸ್ ಮಾಡ್ತಾ ಇರ್ತಾರೆ. ಆದರೆ ಮಾನಸಿಕವಾಗಿ ಒತ್ತಡ ಹೆಚ್ಚಾಗುತ್ತನೆ ಇರುತ್ತೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವತ್ತ ಗಮನಹರಿಸುವುದಿಲ್ಲ.

ಆದರೆ ಕರೋನಾ ಸಾಂಕ್ರಾಮಿಕ ಎಲ್ಲರಿಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದಕ್ಕಾಗಿ, ಆರೋಗ್ಯ ಪೂರ್ಣ ಜೀವನ ಶೈಲಿ ಅಳವಡಿಸಿಕೊಳ್ಳಲು ಎಚ್ಚರಿಕೆಯ ಕರೆಗಂಟೆಯಂತೆ ಬಂದಿದೆ. ಫಿಟ್ ನೆಸ್ ಆಗಿರೋದಕ್ಕೆ ಕೇವಲ ಸುಂದರವಾದ ದೇಹ ಹೊಂದಿರೊದು ಮತ್ತು ಸಿಕ್ಸ್ ಪ್ಯಾಕ್, ಆಬ್ಸ್ ನ್ನು ಪಡೆಯುವುದಷ್ಟೆ ಅಲ್ಲ. ಫಿಟ್ನೆಸ್ ಎಂಬುದು ಮನಸ್ಸು ದೇಹ ಮತ್ತು ಆತ್ಮಗಳ ಸಂಯೋಜನೆ, ಇದಕ್ಕೆ ಯೋಗ ಮಾಡೋದು ಸೂಕ್ತ ಅನ್ನುತ್ತಾರೆ ವೈದ್ಯರು.

ಸುಮಾರು 4,000 ವರ್ಷ ಹಿಂದಿನ ಪದ್ಧತಿಯಾದ ಯೋಗದ ಜೊತೆ ಧ್ಯಾನ ಮಾಡುವುದರಿಂದಲೂ ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಯೋಗದಿಂದ ಉತ್ತಮ ಆರೋಗ್ಯ ಕಾಪಡಿಕೊಳ್ಳಬಹುದು. ಯೋಗ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಯೋಗದಿಂದ ಸ್ನಾಯುಸೆಳೆತ, ಕೀಲು ನೋವು ಪರಿಹಾರ ವಾಗಲಿದ್ದು ಸದೃಢ ಸ್ನಾಯುಗಳನ್ನು ಹೊಂದಬಹುದಾಗಿದೆ.

ಉಸಿರಾಟದ ಸಮಸ್ಯೆ ತಡೆಯಬಹುದು. ಯೋಗಾಸನ ಮಾಡುವಾಗ ಶ್ವಾಸ ಬಹಳ ಮುಖ್ಯವಾಗುತ್ತದೆ. ಪ್ರಾಣಾಯಾಮ, ಅನುಲೋಮ, ವಿಲೋಮಗಳನ್ನು ಸಹಜವಾಗಿಯೇ ಮಾಡುವುದರಿಂದ ಉತ್ತಮ ಶ್ವಾಸವನ್ನೂ ಹೊಂದಬಹುದಾಗಿದೆ. ದೈಹಿಕವಾಗಿ ಸಕ್ರಿಯವಾಗಿ ಮಾಡುವ ಯೋಗ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಹಾಗೂ ಖಿನ್ನತೆಯ ಲಕ್ಷಣಗಳಿಗೂ ಪರಿಹಾರವಾಗಬಲ್ಲದು.

ಪ್ರತಿನಿತ್ಯ ಮುಂಜಾನೆ ಅಥವಾ ಸಂಜೆ ವೇಳೆ ಯೋಗವನ್ನು ಮಾಡೋದ್ರಿಂದ ಉತ್ತಮ ಆರೋಗ್ಯ ನಮ್ಮದಾಗಿಸಿಕೊಳ್ಳಬಹುದು. ಅಷ್ಟೆ ಅಲ್ಲ ಕರೋನಾದಂತಹ ಸಂಧರ್ಭದಲ್ಲಿ ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳಬೇಕು. ಹೀಗಾಗಿ ಮುಂಜಾನೆ ಎದ್ದಾಕ್ಷಣ ಯೋಗ, ಬಳಿಕ ಉತ್ತಮ ಆಹಾರ , ಫ್ರೋಟ್ಸ್,ನಟ್ಸ್,ಓಟ್ಸ್,ಜ್ಯೂಸ್ , ಹಸಿರು ತರಕಾರಿಗಳನ್ನು ಯಥೇಚ್ಚವಾಗಿ ಬಳಸಿದ್ರೆ ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳಬಹುದು.

ವೈದ್ಯರ ಸಲಹೆ ಪ್ರಕಾರ ಕರೋನಾದಂತಹ ಟೈಮ್ ನಲ್ಲಿ ಫಿಟ್ ನೆಸ್ ಗೆ ಯೋಗ, ಒಳ್ಳೆ ಆಹಾರ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು. ಅಷ್ಟೆಅಲ್ಲ ಯಥೇಚ್ಚವಾಗಿ ನೀರನ್ನು ಕೂಡಿಬೇಕು. ಇವೆಲ್ಲದರ ಜೊತೆಗೆ ಯೋಗ. ಹೀಗೆ ಮಾಡೊದ್ರಿಂದ ಶರೀರವನ್ನು ಸಧೃಢವಾಗಿಡೋದ್ರ ಜೊತೆಗೆ ಕರೋನಾದಂತಹ ಸಾಂಕ್ರಾಮಿಕ ರೋಗದಿಂದ ನಮ್ಮನ್ನು ದೂರ ಇಡಬಹುದು. ಆದ್ರೆ ಎಣ್ಣೆ ಪದಾರ್ಥಗಳಿಂದ ದೂರ ಇದ್ದಷ್ಟು ಆರೋಗ್ಯದ ರಕ್ಷಣೆ ಮಾಡಬಹುದು ಅನ್ನುತ್ತಾರೆ ವೈದ್ಯರು.

ಇದನ್ನೂ ಓದಿ : Halu Rameshwara Temple : ಪುರಾಣ ಪ್ರಸಿದ್ಧ ತಾಣ ಹಾಲು ರಾಮೇಶ್ವರ

ಇದನ್ನೂ ಓದಿ : ವಿಶೇಷ ಚೇತನ ಕಲಾವಿದೆಗೆ ಫ್ಲೈಟ್ ಏರಲು ಅವಕಾಶ ನಿರಾಕರಣೆ : ಬೆಂಗಳೂರು ಏರ್ಪೋರ್ಟ್ ನಲ್ಲಿ ಅಮಾನವೀಯ ಘಟನೆ

yoga best medicine for health and beauty

Comments are closed.