Leopard attack : ಕೆ.ಆರ್.ನಗರದಲ್ಲಿ ಚಿರತೆ ದಾಳಿ : ಸತತ 2 ಗಂಟೆ ಕಾರ್ಯಾಚರಣೆ ಬಳಿಕ ಚೀತಾ ಸೆರೆ

ಮೈಸೂರು : (Leopard attack)ಕೆ.ಆರ್.ನಗರದ ಜನರು ಅಕ್ಷರಶಃ ಇಂದು ಭಯಭೀತರಾಗಿದ್ದರು. ಚಿರತೆಯೊಂದು ನಗರಕ್ಕೆ ಎಂಟ್ರಿ ಕೊಟ್ಟಿದ್ದು, ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿದೆ. ಚಿರತೆ ದಾಳಿಯಿಂದ ಭಯಭೀತರಾಗಿರುವ ಜನರು ಮನೆಯಿಂದ ಹೊರಗೆ ಬರಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿತ್ತು. ಅಂತಿಮವಾಗಿ ಎರಡು ಗಂಟೆಗಳ ಕಾರ್ಯಾಚರಣೆಯ ಬಳಿಕ ಚಿರತೆಯನ್ನು ಸೆರೆ(Leopard attack) ಹಿಡಿಯಲಾಗಿದೆ.

ಇಂದು ಬೆಳಗ್ಗೆಇದ್ದಕ್ಕಿದ್ದಂತೆ ಜನರ ಮೇಲೆ ಚಿರತೆ ಏಕಾಏಕಿ ದಾಳಿ(Leopard attack) ನಡೆಸಿದ್ದು ಜನರಲ್ಲಿ ಆತಂಕವನ್ನು ಸೃಷ್ಠಿ ಮಾಡಿತ್ತು. ಕಳೆದೊಂದು ವಾರದಿಂದಲೂ ಕೆ.ಆರ್‌.ಪೇಟೆಯ ಸುತ್ತ ಓಡಾಡುತ್ತಿತ್ತು. ಕೆ.ಆರ್‌ ಪೇಟೆಯಿಂದ ಮುಳ್ಳೂರಿಗೆ ಹೋಗುವ ರಸ್ತೆಯಲ್ಲಿ ಕಂಡ ಕಂಡವರ ಮೇಳೆ ಚಿರತೆ ದಾಳಿ ನಡೆಸುತ್ತಿತ್ತು .

ಇದನ್ನೂ ಓದಿ : ವಿಧಾನಸಭಾ ಚುನಾವಣೆ 2023 : ಕಾಪು ಕ್ಷೇತ್ರದಲ್ಲಿ ಪ್ರಮೋದ್ ಮಧ್ವರಾಜ್ Vs ರಾಜಶೇಖರ ಕೋಟ್ಯಾನ್ ಫೈಟ್

ಇದನ್ನೂ ಓದಿ : Police age limit: ಪೊಲೀಸ್ ಕಾನ್‍ಸ್ಟೇಬಲ್ ನೇಮಕಾತಿ ವಯೋಮಿತಿ 2 ವರ್ಷ ಹೆಚ್ಚಳ ಮಾಡಿದ ರಾಜ್ಯ ಸರ್ಕಾರ

ರಸ್ತೆಯಲ್ಲಿ ಬೈಕ್‌ ನಲ್ಲಿ ಹೋಗುತ್ತಿದ್ದ ಸವಾರನ ಮೇಲೆ ಚಿರತೆ ದಾಳಿ ನಡೆಸಲು ಯತ್ನಿಸಿತ್ತು. ಇದೇ ವೇಳೆ ನಾಯಿಯೊಂದು ಚಿರತೆ ಬಾಯಿಯಿಂದ ಸ್ವಲ್ಪದರಲ್ಲೇ ಮಿಸ್‌ ಆಗಿತ್ತು. ಈ ರೀತಿಯಾಗಿ ನಾಯಿಯ ಮೇಲೆ ಬೈಕ್‌ ಸವಾರನ ಚಿರತೆ ದಾಳಿ ,ಅಡಿದ ದೃಶ್ಯ ಸ್ಥಳೀಯರ ಮೊಬೈಲ್‌ ನಲ್ಲಿ ಸೆರೆಹಿಡಿದಿದ್ದಾರೆ . ಗುರುವಾರ ರಾತ್ರಿಯೇ ಕೆ. ಆರ್‌ ನಗರಕ್ಕೆ ಬಂದಿದ್ದ ಚಿರತೆ ರಸ್ತೆಯಲ್ಲಿ ಅನಾಯಾಸವಾಗಿ ಓಡಾಡುತ್ತಿತ್ತು.ಇದರ ಕುರಿತು ಭಯಭೀತರಾಗಿರುವ ಜನರು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿರತೆಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿದ್ದಾರೆ.

ಸತತ ಎರಡು ಗಂಟೆ ಕಾರ್ಯಾಚರಣೆ ವೇಳೆಯ ನಂತರ ಅಟ್ಟಹಾಸ ಮೆರೆದಿದ್ದ ಚಿರತೆಯನ್ನು ಹಿಡಿಯುವಲ್ಲಿ ಯಶಸ್ವಿಯಾಯಿತು. ಅರವಳಿಕೆ ಚುಚ್ಚು ಮದ್ದು ನೀಡುವ ಮೂಲಕ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾದರು. ಅರವಳಿಕೆ ಚುಚ್ಚು ಮದ್ದು ನೀಡುತ್ತಿದ್ದಂತೆ ಪ್ರಜ್ಞೆ ತಪ್ಪಿದ ಚಿರತೆಯನ್ನು ಸ್ಥಳದಲ್ಲೇ ಆರೈಕೆ ಮಾಡಲಾಯ್ತು. ನಂತರ ಚಿರತೆಯನ್ನು ಬೋನಿನಲ್ಲಿ ಚಿರತೆಯನ್ನು ಬಂದಿಸಿದರು. ನಂತರ ಸೆರೆ ಹಿಡಿದ ಚಿರತೆಯನ್ನು ದೂರದ ಅರಣ್ಯ ಪ್ರದೇಶಕ್ಕೆ ಬಿಡಲು ಕೊಂಡೊಯ್ಯಲಾಯಿತು. ಚಿರತೆ ಸೆರೆ ಹಿಡಿದ ಸುದ್ದಿ ಕೇಳಿ ಜನರು ನೀರಾಳರಾದರು ಮತ್ತು ಅರಣ್ಯ ಅಧಿಕಾರಿಗಳಿಗೆ ಧನ್ಯವಾದ ಸಮರ್ಪಿಸಿದ್ದಾರೆ.

(Leopard attack) People of KR Nagar were literally scared today. A leopard has entered the city and attacked everyone it found. Fear of leopard attacks made people afraid to come out of their homes. Finally, after two hours of operation, the leopard was captured

Comments are closed.