nagarahole national park : ನಾಗರಹೊಳೆಯಲ್ಲಿ ಹುಲಿರಾಯನ ಭರ್ಜರಿ ಬೇಟೆ : ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​

ಮೈಸೂರು : nagarahole national park : ಹುಲಿ ಬೇಟೆಗೆ ಇಳೀತು ಅಂದರೆ ಮುಗೀತು ಅಲ್ಲಿ ಗುರಿ ತಪ್ಪುವ ಮಾತೇ ಇಲ್ಲ. ಸೂಕ್ಷ್ಮ ದೃಷ್ಟಿಕೋನ, ಅತ್ಯಂತ ಚುರುಕು ಬುದ್ಧಿಯ ಮೂಲಕ ಹುಲಿ ಸಾಧಾರಣವಾಗಿ ಇಟ್ಟ ಗುರಿಯನ್ನು ತಪ್ಪುವುದಿಲ್ಲ. ಅದೇ ರೀತಿ ಇಂದು ಬೆಳಗ್ಗೆ ಮೈಸೂರಿನ ನಾಗರಹೊಳೆಯಲ್ಲಿರುವ ಕಾಕನಕೋಟೆಗೆ ಭೇಟಿ ನೀಡಿದವರಿಗೆ ಶುಕ್ರವಾರ ಬೆಳಗ್ಗೆ ಹುಲಿಯ ಬೇಟೆಯನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದೆ.

ಸಫಾರಿಗೆಂದು ತೆರಳುವವರಿಗೆ ವನ್ಯ ಪ್ರಾಣಿಗಳು ಕಣ್ಣಿಗೆ ಕಾಣಿಸುವುದೇ ಹೆಚ್ಚು. ಅಂತದ್ರಲ್ಲಿ ಶುಕ್ರವಾರ ಬೆಳಗ್ಗೆ ನಾಗರಹೊಳೆಯ ಕಾಕನ ಕೋಟೆಯಲ್ಲಿ ಹುಲಿಯೊಂದು ಆನೆ ಮರಿಯನ್ನು ಭೇಟೆಯಾಡಿದ ದೃಶ್ಯವನ್ನು ಅನೇಕರು ಕಣ್ತುಂಬಿಕೊಂಡಿದ್ದಾರೆ. ಸತ್ತು ಮಲಗಿದ್ದ ಆನೆಯನ್ನು ಹುಲಿಯು ಕಾಡಿನೊಳಕ್ಕೆ ಎಳೆದುಕೊಂಡು ಹೋಗುವ ದೃಶ್ಯವು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು ಸೋಶಿಯಲ್​ ಮೀಡಿಯಾಗಳಲ್ಲಿ ಈ ವಿಡಿಯೋ ವೈರಲ್​ ಆಗಿದೆ.


ನಿನ್ನೆ ಮುಂಜಾನೆ ಸಫಾರಿಗೆಂದು ತೆರಳಿದ್ದ ಪ್ರವಾಸಿಗರು ಈ ಅದ್ಭುತ ದೃಶ್ಯವನ್ನು ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿದಿದ್ದಾರೆ. ಆನೆ ಮರಿಯ ಮೃತದೇಹವನ್ನು ಹುಲಿಯು ಪೊದೆಯೊಳಗೆ ಎಳೆದುಕೊಂಡು ಹೋದ ಸಂಪೂರ್ಣ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ನೋಡಿದ ಅನೇಕರು ಇದನ್ನು ನೋಡುವ ಭಾಗ್ಯ ನಮಗೆ ಮಿಸ್​ ಆಯ್ತಲ್ಲಾ ಅಂತಿದ್ದಾರೆ. ಇನ್ನು ಕೆಲವರು ಆನೆಯ ಸ್ಥಿತಿಯನ್ನು ಕಂಡು ಮರುಕ ಪಟ್ಟಿದ್ದಾರೆ.

ಇದನ್ನು ಓದಿ : Saudi Arabia bans travel : ಭಾರತ ಸೇರಿ 15 ದೇಶಗಳಿಗೆ ಪ್ರಯಾಣ ನಿಷೇಧಿಸಿದ ಸೌದಿ ಅರೇಬಿಯಾ

ಇದನ್ನೂ ಓದಿ : ಸೆಹ್ವಾಗ್, ಪಂತ್, ಕೊಹ್ಲಿಯನ್ನು ರಿಜೆಕ್ಟ್ ಮಾಡಿತ್ತು ಡೆಲ್ಲಿ ಕ್ರಿಕೆಟ್ ಸಂಸ್ಥೆ !

tiger seen pulling body of baby elephant into a bush at nagarahole national park

Comments are closed.