ಯಾವ ಬಣ್ಣದ ಲಾಫಿಂಗ್ ಬುದ್ಧ ಪ್ರತಿಮೆಯನ್ನು ಮನೆಯಲ್ಲಿ ಇಡುವುದು ಹೆಚ್ಚು ಶುಭ : ಫೆಂಗ್‌ಶೂಯಿ ನಿಯಮ ತಿಳಿಯಿರಿ
ಮಾರುಕಟ್ಟೆಯಲ್ಲಿ ವಿವಿಧ ಬಣ್ಣದ ಲಾಫಿಂಗ್ ಬುದ್ಧ ಪ್ರತಿಮೆ ದೊರೆಯುತ್ತದೆ. ಅವುಗಳಲ್ಲಿ ಪ್ರತಿಯೊಂದು ಬಣ್ಣದ ಪ್ರತಿಮೆಗೂ ಅದರದೇ ಆದ ವೈಶಿಷ್ಟ್ಯವಿದೆ.

ಭಾರತದ ವಾಸ್ತು ಶಾಸ್ತ್ರದಂತೆ ಚೀನಿ ವಾಸ್ತು ಶಾಸ್ತ್ರವಾದ ಫೆಂಗ್‌ಶೂಯಿ ಕೂಡಾ ಜಗತ್ತಿನಲ್ಲಿ ಬಹಳ ಜನಪ್ರಿಯವಾಗಿದೆ. ಫೆಂಗ್‌ಶೂಯಿ ವಾಸ್ತು ಶಾಸ್ತ್ರವು ಸರಳವಾಗಿದ್ದು ಪ್ರಕೃತಿಗೆ ಹತ್ತಿರವಾಗಿದೆ. ಫೆಂಗ್‌ಶೂಯಿ ವಾಸ್ತು ಶಾಸ್ತ್ರದಲ್ಲಿ, ಮನೆಯಲ್ಲಿ ಸುಖ ಸಮೃದ್ಧಿ ಹಾಗೂ ಸಂಪತ್ತು ತುಂಬಿರಲು ಕೆಲವೊಂದು ವಸ್ತುಗಳನ್ನು ಇಟ್ಟುಕೊಳ್ಳಲು ಸೂಚಿಸಲಾಗಿದೆ. ಅವುಗಳಲ್ಲಿ ಲಾಫಿಂಗ್ ಬುದ್ಧ ಪ್ರತಿಮೆಯೂ ಒಂದು. ಇದನ್ನು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಇಟ್ಟುಕೊಳ್ಳುವುದರಿಂದ ಸಕಾರಾತ್ಮಕ ಶಕ್ತಿ ಬರುತ್ತದೆ ಎಂದು ನಂಬಲಾಗಿದೆ. ಆದರೆ ಮಾರುಕಟ್ಟೆಯಲ್ಲಿ ವಿವಿಧ ಬಣ್ಣದ ಲಾಫಿಂಗ್ ಬುದ್ಧ ಪ್ರತಿಮೆ ದೊರೆಯುತ್ತದೆ. ಅವುಗಳಲ್ಲಿ ಪ್ರತಿಯೊಂದು ಬಣ್ಣದ ಪ್ರತಿಮೆಗೂ ಅದರದೇ ಆದ ವೈಶಿಷ್ಟ್ಯವಿದೆ. ನಮ್ಮ ಅವಶ್ಯಕತೆಗೆ ಅನುಗುಣವಾಗಿ ಬಣ್ಣಗಳನ್ನು ಆಯ್ದುಕೊಳ್ಳಬೇಕು ಎಂದು ಫೆಂಗ್‌ಶೂಯಿ ಹೇಳುತ್ತದೆ. ಹಾಗಾದರೆ ವಿವಿಧ ಬಣ್ಣದ ಲಾಫಿಂಗ್ ಬುದ್ಧ ಪ್ರತಿಮೆಯ ವೈಶಿಷ್ಟ್ಯವೇನು ಎಂದಿ ತಿಳದುಕೊಳ್ಳೋಣ.
ಚಿನ್ನದ ಲಾಫಿಂಗ್ ಬುದ್ಧ
ಕುಟುಂಬದ ಸದಸ್ಯರೆಲ್ಲರೂ ಸಂತೋಷದಿಂದ ಮತ್ತು ಚೆನ್ನಾಗಿ ಇರಬೆಕೆಂಬುದು ನಿಮ್ಮ ಆಸೆಯಾಗಿದ್ದರೆ, ನಿಮ್ಮ ಮನೆಯಲ್ಲಿ ಚಿನ್ನದ ಬಣ್ಣದ ಲಾಫಿಂಗ್ ಬುದ್ಧ ಪ್ರತಿಮೆಯನ್ನು ಇಟ್ಟುಕೊಳ್ಳಿ. ಅದು ಮನೆಗೆ ಸಮೃದ್ಧಿಯನ್ನು ತರುತ್ತದೆ. ಇದನ್ನು ಸ್ವಲ್ಪ ಎತ್ತರದ ಜಾಗದಲ್ಲಿಡಿ.
ಹಳದಿ ಲಾಫಿಂಗ್ ಬುದ್ಧ
ಸಂತೋಷ, ಸಮೃದ್ಧಿ ಮತ್ತು ಸಕಾರಾತ್ಮಕತೆಯನ್ನು ತರಲು, ನಿಮ್ಮ ಮನೆಯಲ್ಲಿ ಹಳದಿ ಲಾಫಿಂಗ್ ಬುದ್ಧನನ್ನು ಇಟ್ಟುಕೊಳ್ಳಿ. ವಾಸ್ತು ಪ್ರಕಾರ, ಇದು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಈ ಬಣ್ಣದ ಲಾಫಿಂಗ್ ಬುದ್ಧನನ್ನು ಆಗ್ನೇಯ ದಿಕ್ಕಿನಲ್ಲಿ ಅಥವಾ ಮುಖ್ಯ ಬಾಗಿಲಿನ ಮುಂದೆ ಇಡಬೇಕು. ಇದು ಸಂಪತ್ತು ಮತ್ತು ಸಂತೋಷವನ್ನು ಆಕರ್ಷಿಸುತ್ತದೆ.
ಕಪ್ಪು ಲಾಫಿಂಗ್ ಬುದ್ಧ
ಫೆಂಗ್ ಶೂಯಿ ಮತ್ತು ವಾಸ್ತು ಎರಡರಲ್ಲೂ ಕಪ್ಪು ಬಣ್ಣವನ್ನು ಅಶುಭವೆಂದು ಪರಿಗಣಿಸಲಾಗಿದ್ದರೂ, ಕೈಯಲ್ಲಿ ಹಣದ ಕಟ್ಟು ಹಿಡಿದುಕೊಂಡಿರುವ ಕಪ್ಪು ಬಣ್ಣದ ಲಾಫಿಂಗ್ ಬುದ್ಧ ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಇದು ಸಂಪತ್ತು ಮತ್ತು ಅದೃಷ್ಟವನ್ನು ತರುತ್ತದೆ. ವಾಸ್ತುವಿನಲ್ಲಿ, ಕಪ್ಪು ಬಣ್ಣವು ನೀರಿನ ಅಂಶ ಮತ್ತು ಉತ್ತರ ದಿಕ್ಕಿನೊಂದಿಗೆ ಸಂಬಂಧಿಸಿದೆ. ಆದ್ದರಿಂದ, ಯಾವಾಗಲೂ ಈ ದಿಕ್ಕಿನಲ್ಲಿ ಕಪ್ಪು ಬಣ್ಣದ ಲಾಫಿಂಗ್ ಬುದ್ಧನನ್ನು ಇಡಬೇಕು.
ಇದನ್ನೂ ಓದಿ : ಚಾತುರ್ಮಾಸ 2026: ಜುಲೈ 25 ರಿಂದ ಯೋಗನಿದ್ರೆಗೆ ಶ್ರೀಹರಿ : ದೀಪಾವಳಿವರೆಗೆ ಈ 5 ರಾಶಿಯವರ ಸಕಲ ಇಷ್ಟಾರ್ಥ ಸಿದ್ಧಿ
ಕೆಂಪು ಲಾಫಿಂಗ್ ಬುದ್ಧ
ಕೆಂಪು ಬಣ್ಣದ ಲಾಫಿಂಗ್ ಬುದ್ಧನನ್ನು ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ನೀವು ಅದನ್ನು ಪ್ರತಿದಿನ ನೋಡಿದರೆ, ಅದರ ಶಕ್ತಿಯು ನಿಮ್ಮೊಳಗೆ ವರ್ಗಾವಣೆಯಾಗುತ್ತದೆ. ನೀವು ಎಂದಿಗೂ ಸೋಮಾರಿಗಳಾಗುವುದಿಲ್ಲ. ನಿಮ್ಮಲ್ಲಿ ಸದಾ ಉತ್ಸಾಹ ತುಂಬಿರುತ್ತದೆ. ನಿಮ್ಮ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ. ಈ ನಗುವ ಬುದ್ಧನನ್ನು ನಿಮ್ಮ ಕಚೇರಿಯ ಮೇಜಿನ ಮೇಲೆ ಇರಿಸಿ. ಶೀಘ್ರದಲ್ಲೇ ಯಶಸ್ಸು ಸಿಗುತ್ತದೆ.
ಬಿಳಿ ಲಾಫಿಂಗ್ ಬುದ್ಧ
ಬಿಳಿ ಲಾಫಿಂಗ್ ಬುದ್ಧನನ್ನು ಫೆಂಗ್ ಶೂಯಿಯಲ್ಲಿ ಬಹಳ ಮಹತ್ವದೆಂದು ಪರಿಗಣಿಸಲಾಗಿದೆ. ಇದು ಶಾಂತಿ ಮತ್ತು ಸಕಾರಾತ್ಮಕತೆಯ ಸಂಕೇತವಾಗಿದೆ. ಬಿಳಿ ಲಾಫಿಂಗ್ ಬುದ್ಧ ಪ್ರತಿಮೆಯನ್ನು ನಿಮ್ಮ ಮನೆಯ ಪ್ರವೇಶದ್ವಾರದಲ್ಲಿ ಇರಿಸಿದರೆ, ನಕಾರಾತ್ಮಕತೆಯು ನಿಮ್ಮ ಮನೆಯೊಳಗೆ ಪ್ರವೇಶಿಸುವುದಿಲ್ಲ. ನೀವು ಅದನ್ನು ನಿಮ್ಮ ಆಫೀಸಿನ ಮೇಜಿನ ಮೇಲೆ ಇರಿಸಿದರೆ, ಕೆಲಸದ ಒತ್ತಡವನ್ನು ನಿವಾರಿಸುತ್ತದೆ ಎಂಬ ನಂಬಿಕೆಯಿದೆ.
ನೀವು ನಿಮ್ಮ ಮನೆಯಲ್ಲಿ ಅಥವಾ ಕಚೇರಿಯಲ್ಲಿ ಯಾವುದೇ ಬಣ್ಣದ ಲಾಫಿಂಗ್ ಬುದ್ಧ ಪ್ರತಿಮೆಯನ್ನು ಇಟ್ಟುಕೊಳ್ಳಬಹುದು, ಆದರೆ ಫೆಂಗ್‌ಶೂಯಿಯಲ್ಲಿ ಹೇಳಿದ ದಿಕ್ಕಿನಲ್ಲೇ ಇಡುವುದು ಉತ್ತಮ.

