ಮಹಾ ಶಿವರಾತ್ರಿ: ಶಿವನ ಅನುಗ್ರಹ ಪಡೆಯಲು ಈ 5 ಶಕ್ತಿಶಾಲಿ ಸ್ತೋತ್ರಗಳನ್ನು ಪಠಿಸಿ
Maha Shivaratri 2026 Shiva Stotras: ಮಹಾ ಶಿವರಾತ್ರಿಯು ಅಧ್ಯಾತ್ಮಿಕವಾಗಿ ಅತ್ಯಂತ ಮಹತ್ವದ ದಿನ. ಈ ದಿನ ಶಿವನನ್ನು ಸ್ತುತಿಸುವುದರಿಂದ ಮನಸ್ಸಿಗೆ ಶಾಂತಿ ಮತ್ತು ಜೀವನದಲ್ಲಿ ಸಕಾರಾತ್ಮಕತೆ ಲಭಿಸುತ್ತದೆ ಎಂಬ ನಂಬಿಕೆಯಿದೆ. ನೀವು ಪಠಿಸಬಹುದಾದ ಪ್ರಮುಖ ಸ್ತೋತ್ರಗಳನ್ನು ನಾವಿಲ್ಲಿ ನೀಡಿದ್ದೇವೆ. ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹಾಗೂ ಪೂಜಾ ಸಂದರ್ಭಗಳಲ್ಲಿ ನೀವು ಈ ಸ್ತೋತ್ರಗಳನ್ನು ಪಠಿಸಬಹುದು.
ಶಿವ ಪಂಚಾಕ್ಷರಿ ಸ್ತೋತ್ರ
ಇದು ಶಿವನ ಐದು ಅಕ್ಷರಗಳಾದ ‘ನ-ಮ-ಶಿ-ವಾ-ಯ’ ಎಂಬ ಮಂತ್ರದ ಮಹಿಮೆಯನ್ನು ಸಾರುತ್ತದೆ. ಇದನ್ನು ಪಠಿಸುವುದರಿಂದ ಪಂಚಭೂತಗಳ ದೋಷಗಳು ನಿವಾರಣೆಯಾಗುತ್ತವೆ.
ನಾಗೇಂದ್ರಹಾರಾಯ ತ್ರಿಲೋಚನಾಯ ಭಸ್ಮಾಂಗರಾಗಾಯ ಮಹೇಶ್ವರಾಯ
ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರ
ಭಾರತದ ಪ್ರಮುಖ ಹನ್ನೆರಡು ಜ್ಯೋತಿರ್ಲಿಂಗಗಳನ್ನು ಸ್ಮರಿಸುವ ಈ ಸ್ತೋತ್ರವನ್ನು ಪಠಿಸುವುದರಿಂದ ಕಾಶಿ, ರಾಮೇಶ್ವರಂ ಸೇರಿದಂತೆ ಎಲ್ಲಾ ಪುಣ್ಯಕ್ಷೇತ್ರಗಳ ದರ್ಶನ ಮಾಡಿದ ಪುಣ್ಯ ಲಭಿಸುತ್ತದೆ.
ಲಿಂಗಾಷ್ಟಕಂ
ಶಿವಲಿಂಗದ ಮಹತ್ವವನ್ನು ವಿವರಿಸುವ ಎಂಟು ಶ್ಲೋಕಗಳ ಈ ಸ್ತೋತ್ರವು ಭಕ್ತರಲ್ಲಿ ಅತ್ಯಂತ ಜನಪ್ರಿಯ. ಇದನ್ನು ನಿತ್ಯವೂ ಪಠಿಸುವುದರಿಂದ ಅಷ್ಟೈಶ್ವರ್ಯಗಳು ಸಿದ್ಧಿಸುತ್ತವೆ ಎಂಬ ನಂಬಿಕೆಯಿದೆ.
ಬ್ರಹ್ಮಮುರಾರಿ ಸುರಾರ್ಚಿತ ಲಿಂಗಂ ನಿರ್ಮಲಭಾಸಿತ ಶೋಭಿತ ಲಿಂಗಂ ಈ ರೀತಿಯಾಗಿ ಮುಂದುವರೆಯುತ್ತದೆ.
ಬಿಲ್ವಾಷ್ಟಕಂ
ಶಿವನಿಗೆ ಅತ್ಯಂತ ಪ್ರಿಯವಾದ ಬಿಲ್ವಪತ್ರೆಯನ್ನು ಅರ್ಪಿಸುವಾಗ ಈ ಸ್ತೋತ್ರವನ್ನು ಹೇಳಲಾಗುತ್ತದೆ. ಒಂದು ಬಿಲ್ವಪತ್ರೆಯನ್ನು ಭಕ್ತಿಯಿಂದ ಅರ್ಪಿಸಿದರೆ ಮೂರು ಜನ್ಮಗಳ ಪಾಪಗಳು ನಾಶವಾಗುತ್ತವೆ ಎನ್ನಲಾಗುತ್ತದೆ.
ಮಹಾಮೃತ್ಯುಂಜಯ ಮಂತ್ರ
ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಈ ಮಂತ್ರವು ರಾಮಬಾಣ. ಭಯ ಮತ್ತು ಅಕಾಲಿಕ ಮೃತ್ಯುವಿನ ಭೀತಿಯಿಂದ ಇದು ರಕ್ಷಿಸುತ್ತದೆ.
ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಮ್ |
ಉರ್ವಾರುಕಮಿವ ಬಂಧನಾನ್ ಮೃತ್ಯೋರ್ಮುಕ್ಷೀಯ ಮಾಮೃತಾತ್ ||
Maha Shivratri 2026 : ಮಹಾಶಿವರಾತ್ರಿಯನ್ನು ಏಕೆ ಆಚರಿಸುತ್ತಾರೆ ?
ಪಠಿಸುವ ವಿಧಾನ:
ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಶುಚಿಯಾಗಿರಿ.
ಶಿವಲಿಂಗ ಅಥವಾ ಶಿವನ ಫೋಟೋದ ಮುಂದೆ ದೀಪ ಹಚ್ಚಿ.
ಶಾಂತವಾಗಿ ಕುಳಿತು ಕಣ್ಣು ಮುಚ್ಚಿ ಭಕ್ತಿಯಿಂದ ಈ ಸ್ತೋತ್ರಗಳನ್ನು ಪಠಿಸಿ.
ಉಪವಾಸವಿದ್ದು ರಾತ್ರಿಯ ಜಾಗರಣೆಯ ಸಮಯದಲ್ಲಿ ಈ ಸ್ತೋತ್ರಗಳನ್ನು ಕೇಳುವುದು ಅಥವಾ ಪಠಿಸುವುದು ವಿಶೇಷ ಫಲ ನೀಡುತ್ತದೆ.



