ನವರಾತ್ರಿ 8ನೇ ದಿನ- ಶುಭ್ರ ಬಿಳುಪಿನಲ್ಲಿ ಮಹಾಗೌರಿ ದರ್ಶನ, ಈಕೆಯನ್ನು ಪೂಜಿಸಿದ್ರೆ ಅಭಿವೃದ್ಧಿ

ಮಹಾಗೌರಿ (Mahagauri) ಶಿವೆಯನ್ನು ಸಾಮಾನ್ಯವಾಗಿ ಕರೆಯುವ ಹೆಸರು. ಹೆಸರಿಗೆ ತಕ್ಕಂತಿದೆ ಆಕೆಯ ರೂಪ ಲಾವಣ್ಯ. ನವರಾತ್ರಿ 8 ದಿವಸ . ಜಗಜ್ಜನನಿ ಮಹಾದೇವಿಯನ್ನು ಗೌರಿ ಎಂಬ ಹೆಸರಿನಿಂದ […]

Navratri 2025 day 8 Who is Maa Mahagauri

ಮಹಾಗೌರಿ (Mahagauri) ಶಿವೆಯನ್ನು ಸಾಮಾನ್ಯವಾಗಿ ಕರೆಯುವ ಹೆಸರು. ಹೆಸರಿಗೆ ತಕ್ಕಂತಿದೆ ಆಕೆಯ ರೂಪ ಲಾವಣ್ಯ. ನವರಾತ್ರಿ 8 ದಿವಸ . ಜಗಜ್ಜನನಿ ಮಹಾದೇವಿಯನ್ನು ಗೌರಿ ಎಂಬ ಹೆಸರಿನಿಂದ ಕರೆಯುತ್ತಾರೆ.

ಗೌರಿ ಅಂದರೆ ಬಿಳುಪು ಎಂದರ್ಥ ಶುಭ್ರ ತೇಜಸ್ಸಿನಲ್ಲಿ ನಳನಳಿಸುತ್ತಾ ಇರುವ ತಾಯಿ ಈಕೆ . ಚಂದ್ರನ ಬೆಳದಿಂಗಳನ್ನು ಮೀರಿಸೋ ಬಣ್ಣ. ಮುತ್ತಿಗಿಂತ ಬಿಳಿಯಾದ ಸೀರೆಯನ್ನು ಧರಿಸಿಕೊಂಡು, ವೃಷಭದ ಮೇಲೆ ಕುಳಿತು ದರ್ಶನ ನೀಡುತ್ತಾಳೆ ದುರ್ಗಾದೇವಿ.

ನವರಾತ್ರಿಯಲ್ಲಿ ಬರುವ ವಿವಿಧರೂಪಗಳ ಪೈಕಿ ಮಹಾಗೌರಿ ಸೌಮ್ಯ ರೂಪ ಎಂದರೆ ತಪ್ಪಾಗಲಾರದು. ಜೊತೆಗೆ ಈಕೆ ನೀಡುವ ಫಲಗಳ ಕೂಡಾ ಅಷ್ಟೇ ಶ್ರೇಷ್ಠ ಎನ್ನುತ್ತವೆ ಶಾಸ್ತ್ರಗಳು.

ತಾಯಿಯ ಬಣ್ಣವು ಸಂಪೂರ್ಣ ಶುಭ್ರ ಬಿಳಿ ಬಣ್ಣದಾಗಿದೆ. ವೃಷಭದಿಂದ ಹಿಡಿದು ಧರಿಸಿರುವ ಆಭರಣ, ಬಟ್ಟೆ ಹೂವು ಹೀಗೆ ಎಲ್ಲವೂ ಶ್ವೇತ ವರ್ಣ . ಇದು ಮನುಷ್ಯನ ಶುಭ್ರ ಮನಸ್ಸಿನ ಸಂಕೇತ .ಇಲ್ಲಿ ಮನಸ್ಸಿನ ಕಲ್ಮಶ ಕಳೆದು ಚಿತ್ತದಲ್ಲಿ ಹರ್ಷವನ್ನು ಉಂಟು ಮಾಡುತ್ತಾಳೆ ಎಂದು ನಂಬಲಾಗುತ್ತೆ .

ಇನ್ನು ಈ ರೂಪದ ಕಥೆಯನ್ನು ಹೇಳೋದಾದ್ರೆ, ಪಾರ್ವತಿ ದೇವಿ ಶಿವನ ಕುರಿತು ಕಠೋರ ತಪ್ಪಸ್ಸು ಆಚರಿಸಿಕೊಂಡು ಸಾವಿರಾರು ವರ್ಷ ಕಳೆದಳಂತೆ. ಆಕೆಯ ಮೈ ಕೊಳೆ ಧೂಳಿನಿಂದ ತುಂಬಿ ಹೋಯಿತಂತೆ.

ಆಗ ಪರಶಿವನು ದೇವಿಗಂಗೆಯನ್ನು ಕಳುಹಿಸಿ ದೇವಿಯ ಮೇಲೆ ಗಂಗೆಯನ್ನು ಪ್ರವಹಿಸುವಂತೆ ಮಾಡಿದನಂತೆ. ಯಾವಾಗ ಗಂಗೆಯು ಮೈತೊಳೆದಳೋ ದೇವಿ ಪಾರ್ವತಿ ಹೊಳೆಯುವ ಗೌರಿಯಾಗಿ ಬದಳಾದಳಂತೆ ಅದರಿಂದ ಆಕೆಯನ್ನು ಮಹಾ ಗೌರಿ ಎಂಬ ಹೆಸರಿನಿಂದ ಕರೆಯುತ್ತಾರೆ .

ಕಾಳಿ ಕತ್ತಲಿನ ಗಾಡಾಂಧಕಾರದ ಸಂಕೇತವಾದ್ರೆ, ನಂತರದ ದಿನ ಪೂಜಿಸ್ಪಡುವ ಗೌರಿ ಸಂಪೂರ್ಣ ಬೆಳಕಿನ ಪುಂಜವಾಗಿ ಕಾಣಿಸಿಕೊಳ್ಳುತ್ತಾಳೆ. ಇನ್ನು ಈಕೆ ಒಂದು ಕೈಯಲ್ಲಿ ಅಭಯ ಮುದ್ರೆ, ಇನ್ನೊಂದು ಕೈಲ್ಲಿ ವರ ಮುದ್ರೆ , ಹಾಗೂ ಉಳಿದ ಎರಡು ಕೈಗಳಲ್ಲಿ ತ್ರಿಶೂಲ ಹಾಗೂ ಢಮರು ಧರಿಸಿ ಶುಭ್ರವಾಗಿ ಕಾಣಿಸಿಕೊಳ್ಳುತ್ತಾಳೆ.

ಇದನ್ನೂ ಓದಿ : Navaratri: ನವರಾತ್ರಿ ೪ ನೇ ದಿನ – ಬ್ರಹ್ಮಾಂಡವನ್ನೇ ಒಡಲಲ್ಲಿ ಧರಿಸಿ ನಿಂತಿದ್ದಾಳೆ ತಾಯಿ- ಕುಷ್ಮಾಂಡ ದೇವಿಗೆ ಕುಂಬಳ ಕಾಯಿಯೇ ಪ್ರಿಯ

ಇದೇ ಅವತಾರದ ಕುರಿತು ಮತ್ತೊಂದು ಕಥೆ ಇದೆ. ಶಿವೆ ಶಿವನಿಗಾಗಿ ತಪಸ್ಸು ಮಾಡುತ್ತಿದಾಗ, ಹಸಿವೆಯಿಂದ ಆಹಾರಕ್ಕಾಗಿ ಅಲೆದಾಡುತ್ತಿದ್ದ ಸಿಂಹವೊಂದು ಅಲ್ಲಿಗೆ ಬಂದಿತಂತೆ. ಅಲ್ಲಿ ತಪ್ಪಸ್ಸಿನಲ್ಲಿ ನಿರತಳಾದ ಪಾರ್ವತಿಯನ್ನು ನೋಡಿದ ಸಿಂಹವು ಹಸಿವನ್ನು ಮರೆತು ತಾಯಿ ಮುಂದೆ ನಿಂತು ಬಿಟ್ಟಿತಂತೆ .

ತಾಯಿ ತಪಸ್ಸನ್ನು ಮುಗಿಸಿ ನೋಡಿದಾಗ ತನ್ನ ಪಕ್ಕದಲ್ಲಿ ಕೃಷವಾಗಿ ಕುಳಿತ ಸಿಂಹವನ್ನು ನೋಡಿ ತಾಯಿಗೆ ಕನಿಕರಗೊಂಡು ತನ್ನ ವಾಹನವಾಗುವಂತೆ ಅಭಯ ನೀಡಿದಳು ಎಂಬ ಕಥೆಯು ನಮಗೆ ಸಿಗುತ್ತದೆ.

ಮಹಾಗೌರಿ ಪೂಜಿಸುವ ವಿಧಾನ :

ಎಲ್ಲಾ ನವರಾತ್ರಿಯ ಆಚರಣೆಯಂತೆ ಇಲ್ಲಿಯೂ ಕೂಡಾ ಸಾಮಾನ್ಯ ರೀತಿ ಪೂಜೆ ನಡೆಸಲಾಗುತ್ತೆ. ಈ ದಿನ ನವಿಲು ಅಥವಾ ನೇರಳೆ ಬಣ್ಣದ ಸೀರೆಯನ್ನು ಬಾಗಿನ ನೀಡಬೇಕು.

ಇಂದು ಮಹಾ ಗೌರಿಗೆ ತೆಂಗಿನ ಕಾಯಿಯಿಂದ ಮಾಡಿದ ಖಾದ್ಯ ಎಂದರೆ ಶ್ರೇಷ್ಠ. ಕೊಬ್ಬರಿ ಮೀಠಾಯ ಸೇರಿದಂತೆ ತೆಂಗಿನ ಕಾಯಿಂದ ಮಾಡಿ ಸಿಹಿ ದೇವರಿಗೆ ಅರ್ಪಿಸಬೇಕು. ಇನ್ನು ಇಂದು ಶಾರದ ಪೂಜೆಗೂ ವಿಶೇಷ ಮಹತ್ವವಿದೆ.

ಇದನ್ನೂ ಓದಿ : ನವರಾತ್ರಿ ೬ ನೇ ದಿನ – ಜ್ಞಾನಚಕ್ರ( third eye) ದಲ್ಲಿ ನೆಲೆ ನಿಂತಿದ್ದಾಳೆ ಕಾತ್ಯಾಯಿನಿ- ಪೂಜಿಸಿದ್ರೆ ಮಾಂಗಲ್ಯ ಭಾಗ್ಯ ಪ್ರಾಪ್ತಿ

ಸರಸ್ವತಿ ಮಾತೆಯನ್ನು ಪೂಜಿಸುವವರು , ಹಾಲು ಮತ್ತು ಮೂಲಂಗಿಯನ್ನು ದಾನ ಮಾಡುವುದು ಶ್ರೇಷ್ಠ. ಇನ್ನು ತಾಯಿ ಈ ರೂಪದಲ್ಲಿ ರಾಹು ಗ್ರಹದ ಅಧಿಪತಿಯಾಗಿದ್ದು ಈಕೆಯನ್ನು ಪೂಜಿಸಿದ್ರೆ ರಾಹು ದೋಷ ನಿವಾರಣೆ ಆಗುತ್ತೆ ಅನ್ನೋ ನಂಬಿಕೆ ಇದೆ.

ಇನ್ನು ತಾಯಿ ಗೌರಿಯ ರೂಪವು ಶಿವನ ಶಿವೆಯಾಗಿರುವ ರೂಪವಾಗಿದ್ದು, ಈಕೆಯನ್ನು ಪೂಜಿಸಿದ್ರೆ ಸಾಂಸರಿಕ ಜೀವನದ ತೊಂದರೆ ದೂರವಾಗಿ ಸತಿ ಪತಿಗಳ ನಡುವೆ ಸಾಮರಸ್ಯ ಏರ್ಪಡುತ್ತೆ. ಜೊತೆಗೆ ಮದುವೆಯಾಗದವರಿಗೂ ಕಂಕಣ ಭಾಗ್ಯ ಲಭಿಸುತ್ತೆ ಅಂತ ನಂಬಲಾಗುತ್ತೆ.

Scroll to Top