Navaratri: ನವರಾತ್ರಿ ೪ ನೇ ದಿನ – ಬ್ರಹ್ಮಾಂಡವನ್ನೇ ಒಡಲಲ್ಲಿ ಧರಿಸಿ ನಿಂತಿದ್ದಾಳೆ ತಾಯಿ- ಕುಷ್ಮಾಂಡ ದೇವಿಗೆ ಕುಂಬಳ ಕಾಯಿಯೇ ಪ್ರಿಯ

ನವರಾತ್ರಿ: ಸುರಾಸಂಪೂರ್ಣಕಲಶಂ ರುಧಿರಾಪ್ಲುತಮೇವ ಚ |
ದಧಾನ ಹಸ್ತಪದ್ಮಾಭ್ಯಾ ಕೂಷ್ಮಾಂಡ ಶುಭದಾಸ್ತು ಮೇ ||
ಒಂದು ಕಡೆಯಲ್ಲಿ ದ್ರಾಕ್ಷಾ ರಸ ತುಂಬಿದ ಕಲಶವನ್ನು, ಇನ್ನೊಂದು ಕಡೆಯಲ್ಲಿ ರಕ್ತ ತುಂಬಿ ಹರಿಯುತ್ತಿರುವ ಕಲಶವನ್ನು ಹಾಗೂ ಕಲಶವನ್ನು ಹಿಡಿದ ಕಮಲದಂತಹ ಕೈಗಳನ್ನು ನಾನು ಪೂಜಿಸುತ್ತೇನೆ ನನಗೆ ನಿನ್ನ ಆಶೀರ್ವಾದವನ್ನು ದಯಪಾಲಿಸು ಎನ್ನುತ ಕೂಷ್ಮಾಂಡ ದೇವಿಯನ್ನು ನೆನೆಯುವ ದಿನವಿದು.

ಹೌದು ಇಂದು ನವರಾತ್ರಿಯ ನಾಲ್ಕನೇ ದಿನ. ಮೊದಲ ಮೂರು ದಿನ ಲಕ್ಷ್ಮಿ ಸ್ವರೂಪವಾದ ದೇವಿಯು ದರ್ಶನವಾದರೆ. ಇಂದು ದೇವಿಯ ಸೃಷ್ಟಿಕರ್ಮದ ಮೂಲವಾಗಿ ಆರಾಧಿಸಲ್ಪಡುತ್ತಾಳೆ. ಇಲ್ಲಿ ತಾಯಿಯ ಸೃಷ್ಟಿ ಕಾರ್ಯಕ್ಕೆ ನಿರತಳಾಗಿ ಇಡೀ ಸೃಷ್ಟಿಯನೇ ತನ್ನ ಗರ್ಭದಲ್ಲಿ ನೆಲಗೊಳಿಸಿದ್ದಾಳೆ. ಈ ಹೆಸರೇ ಹೇಳುವಂತೆ ಕೂಷ್ಮಾಂಡ (Kushmanda) ಅಂದ್ರೆ ಸಣ್ಣ ಜ್ವಾಲೆಯ ಅಂಡ( ಕೂಷ್ –ಸಣ್ಣ ಜ್ವಾಲೆ , ಅಂಡ – ಬೀಜ )ವನ್ನು ಹೊತ್ತಿರುವಳು ಎಂದರ್ಥ.

ಹೌದು ಇಡೀ ಜಗತ್ತೇ ತಾಯಿಯ ಗರ್ಭದಲ್ಲಿ ಸ್ಥಿರವಾಗಿದೆ ಎನ್ನುತ್ತೇವೆ ಪುರಾಣಗಳು ಪ್ರಕಾರ ಇಲ್ಲಿ ಶಿವನ ಪತ್ನಿಯಾಗಿ ಬಂದ ತಾಯಿ ಪಾರ್ವತಿ ತನ್ನ ಸಣ್ಣ ಮುಗುಳುನಗೆಯಿಂದ ಇಡೀ ಜಗತ್ತನ್ನು ಸೃಷ್ಟಿಸಿದಳು ಎನ್ನುವ ಕಥೆಯನ್ನು ಶಕ್ಯ ಪರಂಪರೆ ಹೇಳುತ್ತದೆ ಹೀಗಾಗಿ ತಾಯಿ ತನ್ನ ಒಡಲಲ್ಲಿ ಇಡೀ ವಿಶ್ವವನ್ನು ಹಿಡಿದು ಇಟ್ಟುಕೊಂಡಿದ್ದಾಳೆ .

ಇನ್ನು ಕೂಷ್ಮಾಂಡ ಅನ್ನೋ ಹೆಸರಿಗೆ ಸಂಸ್ಕೃತದಲ್ಲಿ ಬೇರೆ ಅರ್ಥವೂ ಕೂಡ ಇದೆ . ಕೂಷ್ಮಾಂಡ ಅಂದ್ರೆ ಕುಂಬಳಕಾಯಿ ಅಂತ ನಾವು ಅರ್ಥವಿದೆ. ಇಲ್ಲಿ ಬ್ರಹ್ಮಾಂಡದ ಉಪಮೇ ಆಗಿ ಕುಂಬಳಕಾಯಿಯನ್ನು ಬಳಸಲಾಗಿದೆ. ಇನ್ನು ಭಾರತದ ಆಯುರ್ವೇದದ ಪ್ರಕಾರ ಈ ಕುಂಬಳಕಾಯಿ ಅತ್ಯಂತ ಹೆಚ್ಚು ಔಷಧಿಯ ಗುಣವನ್ನು ಹೊಂದಿರುವ ತರಕಾರಿ.

ಇದನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ, ಹೆಚ್ಚಿನ ರೋಗಗಳು ನಾಶವಾಗುತ್ತವೆ, ಉತ್ತಮ ಆರೋಗ್ಯ ಲಭಿಸುತ್ತದೆ ಅಂತಾನೂ ನಂಬಲಾಗುತ್ತೆ. ಇನ್ನು ಹೊಸ ಮನೆಗಳಲ್ಲಿ ದೃಷ್ಟಿಯಾಗದಂತೆ ಕುಂಬಳಕಾಯಿಯನ್ನು ಬಾಗಿಲಿಗೆ ಕಟ್ಟುವ ಸಂಪ್ರದಾಯವಿದೆ.

ಇದನ್ನೂ ಓದಿ : ನವರಾತ್ರಿಯಲ್ಲಿ ದೇವಿಯ ನೈವೇದ್ಯ, ಉಪವಾಸ ಎರಡಕ್ಕೂ ಬೆಸ್ಟ್‌ ಸಬ್ಬಕ್ಕಿ ಪಾಯಸ

ಕೂಷ್ಮಾಂಡ ದೇವಿಯ ರೂಪ- ವಿಶೇಷ

ಇಲ್ಲಿ ಕೂಷ್ಮಾಂಡ ದೇವಿಯು ಸಿಂಹರೂಢಿನಿಯಾಗಿ ಕಾಣಿಸಿಕೊಳ್ಳುತ್ತಾಳೆ. ಈಕೆ ಎಂಟು ಭುಜಗಳನ್ನು ಹೊಂದಿದ್ದು, ಒಂದು ಕೈಯಲ್ಲಿ ಕಮಂಡಲ ಹಾಗೂ ಒಂದು ಕೈಯಲ್ಲಿ ಅಮೃತದ ಕಲಶವಿದೆ. ಉಳಿದ ಆರು ಕೈಗಳಲ್ಲಿ ವಿವಿಧ ಆಯುಧಗಳನ್ನು ಹಿಡಿದು ನಿಂತಿದ್ದಾಳೆ. ತಾಯಿ ಕೂಷ್ಮಾಂಡ ದೇವಿಯು ಸೂರ್ಯನಿಗೆ ಅಧಿಪತಿಯಾಗಿದ್ದು, ಸೂರ್ಯಾ ಎಲ್ಲಾ ಜೀವ ರಾಶಿಗಳ ಪ್ರಾಣ ಶಕ್ತಿ. ಹೀಗಾಗಿ ಈಕೆಯನ್ನು ಆರಾಧಿಸಿದರೆ, ಭಯ ರೋಗಗಳು ದೂರವಾಗಿ ಉತ್ತಮ ಜೀವನ ಪ್ರಾಪ್ತಿಯಾಗುತ್ತೆ..

ಇನ್ನು ಕುಂಡಲಿನಿ ಯೋಗದ ಪ್ರಕಾರ ಈಕೆ ಅನಾಹತ ಚಕ್ರದಲ್ಲಿ ಇಕೆ ವಾಸಮಾಡುತ್ತಾಳೆ. ಈ ಚಕ್ರವು ಹೃದಯದ ಬಳಿಯಲ್ಲಿ ಸ್ಥಿತವಾಗಿದ್ದು, ಹೃದಯದ ಮುದ್ರೆಯಲ್ಲಿ ಈಕೆಯನ್ನು ಪೂಜಿಸಿದರೆ ದೀರ್ಘಾಯುಷ್ಯ ಹಾಗೂ ರೋಗ ಹಾಗೂ ಭಯದಿಂದ ಮುಕ್ತಿ ಹೊಂದಬಹುದಾಗಿದೆ.

ಇನ್ನು ಕೆಲವು ಕಡೆಗಳಲ್ಲಿ ಈ ರೂಪಗಳನ್ನು ಸರಸ್ವತಿ ಸ್ವರೂಪಗಳೆಂದು ಪೂಜಿಸಲಾಗುತ್ತದೆ. ಮೊದಲ ಮೂರು ದಿನ ಲಕ್ಷ್ಮಿ ರೂಪವಾಗಿದ್ದರೆ, ಮಧ್ಯದ ಮೂರು ದಿನ ಸರಸ್ವತಿ ಸ್ವರೂಪಳಾಗಿರುತ್ತಾಳೆ ಎಂದು ಕೆಲವರು ನಂಬುತ್ತಾರೆ. ಈ ವೇಳೆ ಸರಸ್ವತಿ ಸ್ವರೂಪವನ್ನು ಆಹ್ವಾನಿಸಿ ಆರಾಧಿಸುವ ಪದ್ಧತಿ ಇದೆ.

ಇದನ್ನೂ ಓದಿ : ಚಂದ್ರಘಂಟೇಯಾಗಿ ಪೂಜಿತಳಾಗುತ್ತಾಳೆ ತಾಯಿ : ನೀಲಿ ಬಣ್ಣದ ವಸ್ತ್ರ ಪೂಜೆಗೆ ಶ್ರೇಷ್ಠ

ಆರಾಧನಾ ಕ್ರಮ

ಕೂಷ್ಮಾಂಡ ದೇವಿಯನ್ನು ವಿವಿಧ ರೀತಿಯಲ್ಲಿ ಆರಾಧಿಸುವ ಪದ್ಧತಿ ನಮ್ಮಲ್ಲಿದೆ. ದೀಪದ ಧೂಪವನ್ನು ಬೆಳಗಿ ತಾಯಿಗೆ ನೈವೇದ್ಯವನ್ನು ಮಾಡಬೇಕು. ಕುಂಬಳಕಾಯಿಂದ ತಯಾರಿಸಿದ ಖಾದ್ಯ ಇಂದು ಶ್ರೇಷ್ಠ. ಇನ್ನು ಕೆಲವು ಕಡೆ ಮಾಲ್ಪೋವವನ್ನು ತಾಯಿಗೆ ನೈವೇದ್ಯವಾಗಿ ಸಲ್ಲಿಸುವ ರೂಢಿ ಇದೆ. ಈ ದಿನ ಮೊಸರನ್ನು ನೈವೇದ್ಯವಾಗಿ ಸಲ್ಲಿಸುವುದು ಕೂಡ ಶ್ರೇಷ್ಠ ಅಂತ ನಂಬಲಾಗುತ್ತದೆ.

ಇಂದು ಮಕ್ಕಳ ಅಪೇಕ್ಷೆ ಮಾಡುವವರು ಅಥವಾ ಸಂತಾನ ಹೀನರು ಕುಷ್ಮಾಂಡ ದೇವಿಯನ್ನು ವಿಶೇಷವಾಗಿ ಪೂಜಿಸಬೇಕು. ಕೂಷ್ಮಾಂಡ ದೇವಿಯು ಗರ್ಭದಲ್ಲಿ ಇಡೀ ಬ್ರಹ್ಮಾಂಡವನ್ನು ಹೊಂದಿದ್ದಾಳೆ ಎನ್ನುವ ಕಾರಣಕ್ಕೆ ಈಕೆಯನ್ನು ಬೇಡಿದ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

Vandana kommunje | ವಂದನಾ ಕೊಮ್ಮುಂಜೆ

Vandana Kommunje Senior Content Writer. Working in more than 10 Years in Kannada Famous News Channesl. Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories