Navaratri: ಇಂದಿನಿಂದ ನವರಾತ್ರಿ ಸಂಭ್ರಮ – ಶೈಲಪುತ್ರಿಯಾಗಿ ದೇವಿಯನ್ನು ಆರಾಧಿಸುವುದು ಹೇಗೆ ?

Navaratri: ನವರಾತ್ರಿ ತಾಯಿಗೆ ತಾಯಿ ಅಂತ ಅನ್ನಿಸಿಕೊಂಡಿರುವ ಜಗನ್ಮಾತೆಯನ್ನು ಆರಾಧಿಸುವ ದಿನಗಳಿವು. ಹತ್ತು ದಿನ ಸಂಭ್ರಮದಿಂದ ಆಚರಿಸಲ್ಪಡುವ ಈ ಹಬ್ಬದಲ್ಲಿ ಪ್ರತಿ ದಿನಕ್ಕೂ ಅದರದೇ ಆದ ಮಹತ್ವವಿದೆ. […]

Navratri celebration from today How to worship Goddess as Shailaputri

Navaratri: ನವರಾತ್ರಿ ತಾಯಿಗೆ ತಾಯಿ ಅಂತ ಅನ್ನಿಸಿಕೊಂಡಿರುವ ಜಗನ್ಮಾತೆಯನ್ನು ಆರಾಧಿಸುವ ದಿನಗಳಿವು. ಹತ್ತು ದಿನ ಸಂಭ್ರಮದಿಂದ ಆಚರಿಸಲ್ಪಡುವ ಈ ಹಬ್ಬದಲ್ಲಿ ಪ್ರತಿ ದಿನಕ್ಕೂ ಅದರದೇ ಆದ ಮಹತ್ವವಿದೆ. ನವರಾತ್ರಿಯಲ್ಲಿ ಪ್ರತಿದಿನವೂ ದೇವಿಯ ಒಂದೊಂದು ರೂಪದಲ್ಲಿ ಆರಾಧಿಸಲ್ಪಡುತ್ತಾಳೆ. ಅದರಲ್ಲೂ ಶಕ್ತಿ ಸಾಧಕರಿಗೆ ಅಂತೂ ಈ ದಿನಗಳು ಅತ್ಯಂತ ಮಹತ್ವವನ್ನು ಪಡೆದಿವೆ.

ಮೊದಲದ ದಿನವಾದ ಇಂಧು ಶೈಲ ಪುತ್ರಿ(Shailaputri) ಎಂಬ ಹೆಸರಿನಿಂದ ಪೂಜಿಸಲ್ಪಡುವ ತಾಯಿಯು ಕೊನೆಯ ದಿನ ಸಿದ್ದಿ ರಾತ್ರಿ ಆಗಿ ದರ್ಶನ ನೀಡುತ್ತಾಳೆ ಇಲ್ಲಿ ತಾಯಿ ಜಗನ್ಮಾತೆಯ ಸಂಪೂರ್ಣ ಜೀವನದ ಚಿತ್ರಣ ಸಿಗುತ್ತದೆ. ಇಂದು ತಾಯಿ ಕುಮಾರಿ ಅಥವಾ ಪುಟಾಣಿ ಹುಡುಗಿಯ ರೂಪದಲ್ಲಿ ಪೂಜಿಸಲ್ಪಡುತ್ತಾಳೆ, ಹಲವು ಕಡೆಗಳಲ್ಲಿ ಬಾಲ ತ್ರಿಪುರ ಸುಂದರಿಯ ರೂಪದಲ್ಲಿ ಈಕೆಯನ್ನು ಆರಾಧಿಸಲಾಗುತ್ತದೆ. ಪುಟ್ಟ ಮಕ್ಕಳಿಗೆ ಮಕ್ಕಳನ್ನು ಕರೆದು ಪಾದ ಪೂಜೆ ಮಾಡಿ ಬಾಗಿನ ಕೊಡುವ ಪದ್ಧತಿಯು ಹಲವು ಕಡೆಗಳಲ್ಲಿವೆ. ಇದು ಶಿವನನ್ನು ಮದುವೆಯಾಗುವ ಮುನ್ನ ಇರುವ ರೂಪವಾಗಿದೆ .

ಈ ರೂಪದ ಹಿನ್ನಲೆಯ ಕಥೆಯನ್ನು ಹೇಳೋದಾದ್ರೆ , ಸತಿ ದೇವಿಯು ದಕ್ಷ ಯಜ್ಞದಲ್ಲಿ ದೇಹವನ್ನು ತ್ಯಾಗ ಮಾಡಿದ ನಂತರ ಶಿವ ವೈರಾಗ್ಯದಲ್ಲಿ ದಕ್ಷಿಣಭಿ ಮುಖವಾಗಿ ತಪಸ್ಸಿನಲ್ಲಿ ನಿರತನಾದನಂತೆ. ಅದೇ ವೇಳೆಗೆ ತಾರಕಾಸುರ ಎಂಬ ರಾಕ್ಷಸ ತಪಸ್ಸು ಮಾಡಿ ಬ್ರಹ್ಮದೇವನಿಂದ ಶಿವ ಪಾರ್ವತಿಯ ಪುತ್ರನಿಂದಲೇ ತನ್ನ ವಧೆಯಾಗಬೇಕು ಎಂದು ವರ ಪಡೆದುಕೊಂಡನಂತೆ .

ಸತಿ ದೇವಿಯು ಸತ್ತಿದ್ದಾಳೆ. ಹೀಗಾಗಿ ತನ್ನ ವಧೆ ಸಾಧ್ಯವಿಲ್ಲ ಎಂದು ತಿಳಿದು ಸಾಮಾನ್ಯನ ಜನರಲ್ಲಿ ಭಯ ಹುಟ್ಟಿಸಲು ಆರಂಭಿಸಿದನಂತೆ. ಇದರಿಂದ ಬೇಸರಗೊಂಡ ದೇವತೆಗಳು ಜಗಜ್ಜನನಿಗೆ ಮತ್ತೆ ದೇಹವನ್ನು ಧರಿಸಿ ಬಂದು ಶಿವನನ್ನು ವಿವಾಹವಾಗುವಂತೆ ಕೇಳಿದರಂತೆ. ಅದನ್ನು ಆಲಿಸಿದ ಜಗಜ್ಜನನಿ ಪರ್ವತರಾಜನ ಮಗಳಾಗಿ ಜನಿಸಿದಳು ಎಂದು ಹೇಳಲಾಗುತ್ತದೆ. ಹೀಗಾಗಿ ಇಂದು ಹಿಮವಂತನ ಮಗಳಾಗಿ ಶೈಲ ಪುತ್ರಿಯಾಗಿ ಈ ದಿನ ಪೂಜಿಸಲ್ಪಡುತ್ತಾಳೆ.

ತಾಯಿಯ ರೂಪ

ತಾಯಿಯ ರೂಪ ಕುರಿತು ಹೇಳೋದಾದ್ರೆ ಇಂದು ತಾಯಿ ಗೂಳಿಯ ಮೇಲೆ ಕುಳಿತ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾಳೆ ಮನೋಕಾರಕನಾದ ಚಂದ್ರನನ್ನು ಶಿರದ ಮೇಲೆ ಧರಿಸಿ ಹಾಗೂ ತಮೋಕಾರಕನಾದ ತ್ರಿಶೂಲವನ್ನು ಕೈಯಲ್ಲಿ ಹಿಡಿದು ಕುಳಿತಿರುತ್ತಾಳೆ ತಾಯಿ. ಇದರ ಅರ್ಥ ಮನಸ್ಸು ಹಾಗೂ ದೇಹದ ಆಸೆಯನ್ನು ನಿಗ್ರಹಿಸಿ ನಿಂತಿದ್ದಾಳೆ ಎಂದರ್ಥ. ಈ ದಿನ ತಾಯಿಗೆ ಮಲ್ಲಿಗೆ ಹೂ ಅಂದ್ರೆ ತುಂಬಾ ಇಷ್ಟ. ಮಲ್ಲಿಗೆಯಿಂದ ದೇವಿಯನ್ನು ಅಲಂಕಾರ ಮಾಡಿ ಆರಾಧಿಸಿದ್ರೆ ಎಲ್ಲ ಇಷ್ಟಾರ್ಥಗಳು ಈಡೇರುತ್ತವೆ ಅನ್ನುವ ನಂಬಿಕೆ ಇದೆ.

ಇನ್ನು ನವರಾತ್ರಿ 10 ದಿನಕ್ಕೆ ಮತ್ತೊಂದು ಮಹತ್ವವಿದೆ ಅದೇನೆಂದರೆ ಶಿವ ಪಾರ್ವತಿಯನ್ನು ವಿವಾಹವಾದ ನಂತರ ವರ್ಷಕ್ಕೆ ಒಂದು ಬಾರಿ ಅಂದರೆ 10 ದಿನ ಮಾತ್ರ ತಾಯಿ ಮನೆಗೆ ಬರಲು ಅನುಮತಿ ನೀಡಿದನಂತೆ . ಹೀಗಾಗಿ ತವರಾದ ಭೂಮಿಗೆ ಅಂದ್ರೆ ಭೂಲೋಕಕ್ಕೆ ತಾಯಿ ಈ ಹತ್ತು ದಿನ ಬಂದಿರುತ್ತಾಳೆ ಎನ್ನುವ ನಂಬಿಕೆ ಇದೆ.

ಇದನ್ನೂ ಓದಿ: ನಾಳೆ ಈ ವರ್ಷದ ಕೊನೆಯ ಸೂರ್ಯ ಗ್ರಹಣ: ಆ ಸಮಯದಲ್ಲಿ ಏನು ಮಾಡಬೇಕು? ಮತ್ತು ಏನು ಮಾಡಬಾರದು?

ನವರಾತ್ರಿ ಆಚರಣೆ

ನವರಾತ್ರಿ ಹಬ್ಬವನ್ನು ಒಬ್ಬರು ಒಂದೊಂದು ರೀತಿಯಲ್ಲಿ ಆಚರಿಸುತ್ತಾರೆ ಯೋಗಿ ಸಾಧಕರು ಯಂತ್ರದಲ್ಲಿ ತಾಯಿಯನ್ನು ಪ್ರತಿಷ್ಠಾಪಿಸಿ ಪೂಜಿಸಿ ಶಕ್ತಿ ಪಡೆದುಕೊಂಡರೆ, ಸಾಮಾನ್ಯ ಭಕ್ತರು ಬಿಂಬ ರೂಪದಲ್ಲಿ ತಾಯಿಯನ್ನು ಪೂಜಿಸಿ ಅಲಂಕಾರ ಮಾಡಿ ಬಾಲಕುಮಾರಿಯರಿಗೆ ಬಾಗಿನ ಮನ ನೀಡುವ ಪದ್ಧತಿ ಇದೆ. ಈ ವೇಳೆ ತಾಯಿಯು ಮಕ್ಕಳ ರೂಪದಲ್ಲಿ ಬಂದು ಬಾಗಿನ ಸ್ವೀಕರಿಸುತ್ತಾಳೆ ಎಂಬ ನಂಬಿಕೆ ನಮ್ಮಲ್ಲಿದೆ. ಹೀಗಾಗಿ ಈಹಬ್ಬದಲ್ಲಿ ಮಕ್ಕಳಿಗೆ ಬಹಳ ಮಹತ್ವವಿದೆ.

ಇದನ್ನೂ ಓದಿ:ಭಾರತದಲ್ಲಿ ಗೋಚರಿಸುತ್ತಾ ವರ್ಷದ ಕೊನೆಯ ಸೂರ್ಯಗ್ರಹಣ ?

ಕೆಲವು ಕಡೆಗಳಲ್ಲಿ ಜಗನ್ಮಾತೆಯನ್ನು ದೇವಿಯ ಮೂರು ಪ್ರಮುಖ ರೂಪದಲ್ಲಿ ಆರಾಧಿಸಲ್ಪಿಸಲಾಗುತ್ತದೆ. ಮೊದಲ ಮೂರು ದಿನ ಲಕ್ಷ್ಮೀ ಅಂದ್ರೆ ಸಮೃದ್ಧಿಯಾಗಿ ಪೂಜಿಸಲ್ಪಟ್ಟರೆ ಮಧ್ಯದ ಮೂರು ದಿನ ಸರಸ್ವತಿ ರೂಪದಲ್ಲಿ ಅಂದರೆ ವಿದ್ಯಾ ಅಧಿದೇವತೆಯಾ ಪೂಜಿಸಲಾಗುತ್ತೆ ಹಾಗೂ ಕೊನೆಯ ಮೂರು ದಿನಗಳಲ್ಲಿ ಶಕ್ತಿ ಸ್ವರೂಪಿಣಿ ಪಾರ್ವತಿಯಾಗಿ ಪೂಜಿಸಲ್ಪಡುತ್ತಾಳೆ ಈ ವೇಳೆ ಉಪವಾಸ, ಸಪ್ತಶತಿ ಪಾರಾಯಣ ಮಾಡುವ ಪದ್ಧತಿ ಕೂಡಾ ಇದೆ

Scroll to Top