ನಾಳೆ ಈ ವರ್ಷದ ಕೊನೆಯ ಸೂರ್ಯ ಗ್ರಹಣ: ಆ ಸಮಯದಲ್ಲಿ ಏನು ಮಾಡಬೇಕು? ಮತ್ತು ಏನು ಮಾಡಬಾರದು?

Surya Grahan September 21: ಈ ವರ್ಷದ ಕೊನೆಯ ಸೂರ್ಯಗ್ರಹಣ ಸೆಪ್ಟೆಂಬರ್ 21 ರಂದು ಸಂಭವಿಸಲಿದೆ. ಹಿಂದೂ ಧರ್ಮದಲ್ಲಿ, ಸೂರ್ಯಗ್ರಹಣವನ್ನು ಶುಭ ಘಟನೆ ಎಂದು ಪರಿಗಣಿಸಲಾಗುವುದಿಲ್ಲ.

ಅದರಲ್ಲೂ ಈ ಸೂರ್ಯ ಗ್ರಹಣವು ಮಹಾಲಯ ಅಮಾವಾಸ್ಯೆಯೆಂದೇ ಸಂಭವಿಸಲಿದೆ. ಆದ್ದರಿಂದ ಜನರಲ್ಲಿ ಹೆಚ್ಚಿನ ಗೊಂದಲಗಳು ಸೃಷ್ಟಿಯಾಗಿವೆ. ಗ್ರಹಣದ ಸಮಯದಲ್ಲಿ ಕೆಲವು ನಿಯಮಗಳನ್ನು ಪಾಲಿಸುವುದರಿಂದ ಅದರ ಅಶುಭ ಪರಿಣಾಮಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ನಂಬಲಾಗಿದೆ.

ಸೂರ್ಯಗ್ರಹಣದ ಸಮಯದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ತಿಳಿಯುವುದರಿಂದ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ.

ಸೂರ್ಯಗ್ರಹಣದ ಸಮಯ

ಈ ವರ್ಷದ ಕೊನೆಯ ಸೂರ್ಯಗ್ರಹಣವು ಭಾರತೀಯ ಕಾಲಮಾನ ರಾತ್ರಿ 11:00 ಗಂಟೆಗೆ ಪ್ರಾರಂಭವಾಗಿ ಬೆಳಿಗ್ಗೆ 3:23 ಕ್ಕೆ ಕೊನೆಗೊಳ್ಳುತ್ತದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ.

ಅಂದರೆ ಸೂತಕ ಅವಧಿಯು ದೇಶದಲ್ಲಿ ಮಾನ್ಯವಾಗಿರುವುದಿಲ್ಲ. ಆದರೂ ಕೆಲವು ನಿಯಮಗಳನ್ನು ಪಾಲಿಸುವುದರಿಂದ ಗ್ರಹಣದಿಂದಾಗುವ ಅಶುಭ ಪರಿಣಾಮಗಳಿಂದ ದೂರವಿರಬಹುದು.

ಇದನ್ನೂ ಓದಿ: ಮಹಾಲಯ ಅಮಾವಾಸ್ಯೆಯಂದೇ ಸೂರ್ಯಗ್ರಹಣ: ಯಾವ ರಾಶಿಯವರಿಗೆ ಶುಭ, ಯಾವ ರಾಶಿಯವರಿಗೆ ಅಶುಭ?

ಸೂರ್ಯಗ್ರಹಣದ ಸಮಯದಲ್ಲಿ ಏನು ಮಾಡಬೇಕು?

  • ಹಿಂದೂ ಧರ್ಮವು ಗ್ರಹಣವು ವಾತಾವರಣದಲ್ಲಿ ‌ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆಯಿಂದೆ. ಈ ನಕಾರಾತ್ಮಕ * ಶಕ್ತಿಯ ಪರಿಣಾಮದಿಂದ ರಕ್ಷಿಸಿಕೊಳ್ಳಲು, ಆಹಾರ ಮತ್ತು ಪಾನೀಯಗಳಿಗೆ ತುಳಸಿ ಎಲೆಗಳನ್ನು ಸೇರಿಸಿ.
  • ಗ್ರಹಣದ ಮೊದಲು, ಗ್ರಹಣದ ಸಮಯದಲ್ಲಿ ಹಾಗೂ ಗ್ರಹಣ ಮೋಕ್ಷದ ನಂತರ ಸ್ನಾನ ಮಾಡಬೇಕು.
  • ಸೂರ್ಯಗ್ರಹಣದ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಿ.
  • ಗ್ರಹಣದ ಸಮಯದಲ್ಲಿ ಸಾಧ್ಯವಾದಷ್ಟು ಮಂತ್ರಗಳನ್ನು ಪಠಿಸಿ ಮತ್ತು ದೇವರನ್ನು ಧ್ಯಾನಿಸಿ.

ಸೂರ್ಯಗ್ರಹಣದ ಸಮಯದಲ್ಲಿ ಏನು ಮಾಡಬಾರದು?

  • ಗ್ರಹಣದ ಸಮಯದಲ್ಲಿ ಸೂರ್ಯನನ್ನು ಬರಿಗಣ್ಣಿನಿಂದ ನೋಡಬಾರದು. ಏಕೆಂದರೆ ಸೂರ್ಯನಿಂದ ಬರುವ ಕಿರಣಗಳು ಕಣ್ಣುಗಳಿಗೆ ಹಾನಿಕಾರಕವಾಗಬಹುದು.
  • ಗ್ರಹಣದ ಸಮಯದಲ್ಲಿ ಅಡುಗೆ ಮಾಡುವುದು ಮತ್ತು ಆಹಾರವನ್ನು ತಿನ್ನುವುದನ್ನು ನಿಷೇಧಿಸಲಾಗಿದೆ.
  • ಗ್ರಹಣದ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು.
  • ದೇವರು ವಿಗ್ರಹ ಮತ್ತು ಫೋಟೋಗಳನ್ನು ಮುಟ್ಟಬಾರದು.

ಇದನ್ನೂ ಓದಿ: ಸೂರ್ಯಾಸ್ತದ ನಂತರ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ದಾನ ಮಾಡಬೇಡಿ

ಗರ್ಭಿಣಿಯರು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶಗಳೇನು?

ಗ್ರಹಣದ ಸಮಯದಲ್ಲಿ, ಗರ್ಭಿಣಿಯರು ತಿನ್ನುವುದನ್ನು ಅಥವಾ ಮಲಗುವುದನ್ನು ಮಾಡಬಾರದು. ಚಾಕುಗಳು, ಕತ್ತರಿಗಳು ಮತ್ತು ಸೂಜಿಗಳಂತಹ ಚೂಪಾದ ಮತ್ತು ಹರಿತವಾದ ವಸ್ತುಗಳನ್ನು ಬಳಕೆ ಮಾಡಬಾರದು. ದೇವರ ಧ್ಯಾನ ಮಾಡುವುದು ಉತ್ತಮ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

(Surya Grahan September 21 what to do and what not to do)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories