ಕುಂಭ ಸಂಕ್ರಮಣ 2026: ಕುಂಭ ರಾಶಿಗೆ ಸೂರ್ಯನ ಪ್ರವೇಶ; ನಿಮ್ಮ ರಾಶಿಯ ಫಲಾಫಲ ಇಲ್ಲಿದೆ!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಜನಾದ ಸೂರ್ಯನು ಫೆಬ್ರವರಿ 13 ರಂದು ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶ ಮಾಡಿದ್ದಾನೆ ಸಂಜೆ 4:14 ಕ್ಕೆ ನಡೆದಈ ಸಂಕ್ರಮಣ ಪ್ರಕ್ರಿಯೆಯು ಮುಂದಿನ ಒಂದು ತಿಂಗಳ ಕಾಲ ಅಂದರೆ ಮಾರ್ಚ್ 15 ರವರೆಗೆ ಮುಂದುವರಿಯಲಿದೆ. ಈ ಕುಂಭ ಸಂಕ್ರಮಣವು ದ್ವಾದಶ ರಾಶಿಗಳ ಮೇಲೆ ಬೀರುವ ಪ್ರಭಾವದ ಸಂಕ್ಷಿಪ್ತ ನೋಟ ಇಲ್ಲಿದೆ:
ಶುಭ ಫಲ ಪಡೆಯುವ ರಾಶಿಗಳು:
- ಮೇಷ: ಆರ್ಥಿಕ ಪ್ರಗತಿ ಮತ್ತು ಉತ್ತಮ ಆರೋಗ್ಯ ನಿಮ್ಮದಾಗಲಿದೆ. ಹಿಡಿದ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ.
- ವೃಷಭ: ಉದ್ಯೋಗದಲ್ಲಿ ಬಡ್ತಿ, ವ್ಯಾಪಾರದಲ್ಲಿ ಲಾಭ ಮತ್ತು ಹಳೆಯ ಬಾಕಿ ವಸೂಲಿಯಾಗುವ ಸಾಧ್ಯತೆ ಇದೆ.
- ಮಿಥುನ: ಅದೃಷ್ಟ ಒಲಿಯಲಿದೆ. ತಂದೆ-ತಾಯಿಯ ಆಶೀರ್ವಾದದೊಂದಿಗೆ ದೂರದ ಪ್ರಯಾಣದ ಯೋಗವಿದೆ.
- ಕನ್ಯಾ: ಅತ್ಯಂತ ಅದೃಷ್ಟದ ಸಮಯ. ಆರೋಗ್ಯ ಸುಧಾರಿಸಲಿದೆ, ವಿಶೇಷವಾಗಿ ಔಷಧ ವ್ಯಾಪಾರಿಗಳಿಗೆ ಉತ್ತಮ ಲಾಭ.
- ಧನುಸ್ಸು: ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗಲಿದೆ. ಸಮಾಜದಲ್ಲಿ ಗೌರವ ಪ್ರಾಪ್ತಿಯಾಗಲಿದೆ.
- ಮಕರ: ಕುಟುಂಬದ ಸಮಸ್ಯೆಗಳು ಬಗೆಹರಿಯಲಿವೆ. ರೈತಾಪಿ ವರ್ಗದವರಿಗೆ ಮತ್ತು ವ್ಯಾಪಾರಿಗಳಿಗೆ ಆರ್ಥಿಕ ಲಾಭದಾಯಕ ಸಮಯ.
ಮಿಶ್ರ ಹಾಗೂ ಜಾಗರೂಕತೆ ವಹಿಸಬೇಕಾದ ರಾಶಿಗಳು:
- ಕರ್ಕಾಟಕ: ಎಂಟನೇ ಮನೆಯಲ್ಲಿ ಸೂರ್ಯನ ಸಂಚಾರವಿರುವುದರಿಂದ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿ.
- ಸಿಂಹ: ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಮೂಡಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಜಾಗ್ರತೆ ಅಗತ್ಯ.
- ತುಲಾ: ಆರ್ಥಿಕವಾಗಿ ಲಾಭದಾಯಕವಾಗಿದ್ದರೂ, ಮಕ್ಕಳ ವಿಷಯದಲ್ಲಿ ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಯೋಚಿಸಿ.
- ವೃಶ್ಚಿಕ: ವಾಹನ ಚಾಲನೆ ಮತ್ತು ಆಸ್ತಿ ವಿಚಾರಗಳಲ್ಲಿ ಎಚ್ಚರಿಕೆಯಿರಲಿ. ತಂದೆ-ತಾಯಿಯ ಆರೋಗ್ಯದ ಕಡೆ ಗಮನವಿರಲಿ.
- ಕುಂಭ: ಸ್ವಂತ ರಾಶಿಯಲ್ಲೇ ಸೂರ್ಯನಿರುವುದರಿಂದ ವಿವಾಹ ಯೋಗವಿದೆ, ಆದರೆ ಅನಗತ್ಯ ಭಯ ಮತ್ತು ಆತ್ಮವಿಶ್ವಾಸದ ಕೊರತೆ ಕಾಡಬಹುದು.
- ಮೀನ: ವ್ಯಯಸ್ಥಾನದಲ್ಲಿ ಸೂರ್ಯನಿರುವುದರಿಂದ ಅನಗತ್ಯ ಖರ್ಚು ಮತ್ತು ಮಾನಸಿಕ ಒತ್ತಡದ ಸಾಧ್ಯತೆ ಇದೆ. ಕೆಟ್ಟ ಸಹವಾಸದಿಂದ ದೂರವಿರಿ.
ಜಿಲ್ಲಾ ವೈದ್ಯಾಧಿಕಾರಿಯನ್ನು ಅಬಕಾರಿ ಇಲಾಖೆಗೆ ವರ್ಗಾಯಿಸಿದ ರಾಜ್ಯ ಸರ್ಕಾರ : ಶಾಸಕ ವಿ.ಸುನೀಲ್ ಕುಮಾರ್ ಗರಂ
ಪರಿಹಾರವೇನು?
ಸೂರ್ಯನ ಈ ಸಂಚಾರದಿಂದ ಅಶುಭ ಫಲಗಳನ್ನು ಅನುಭವಿಸುತ್ತಿರುವವರು ಪ್ರತಿದಿನ ಬೆಳಗ್ಗೆ ಸೂರ್ಯನಿಗೆ ಅರ್ಘ್ಯ ಅರ್ಪಿಸುವುದು ಮತ್ತು ಆದಿತ್ಯ ಹೃದಯ ಸ್ತೋತ್ರ ಪಠಿಸುವುದು ಉತ್ತಮ ಎಂದು ಜ್ಯೋತಿಷ್ಯ ತಜ್ಞರು ಸಲಹೆ ನೀಡುತ್ತಾರೆ.
ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಯೋತಿಷ್ಯ ಶಾಸ್ತ್ರದ ಮೇಲೆ ಆಧಾರಿತವಾಗಿದ್ದು, ವೈಯಕ್ತಿಕ ಜಾತಕಕ್ಕೆ ಅನುಗುಣವಾಗಿ ಫಲಗಳು ಬದಲಾಗಬಹುದು.



