8 centuries in 10 matches: 10 ಇನ್ನಿಂಗ್ಸ್, 8 ಶತಕ; ರುತುರಾಜ್ ಗಾಯಕ್ವಾಡ್’ಗೆ ಸಿಗುತ್ತಾ ವರ್ಲ್ಡ್ ಕಪ್ ಟಿಕೆಟ್?


ಬೆಂಗಳೂರು:( 8 centuries in 10 matches)ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದ 10 ಇನ್ನಿಂಗ್ಸ್’ಗಳಲ್ಲಿ 8 ಶತಕ. ಅದರಲ್ಲೊಂದು ದ್ವಿಶತಕ. ಇದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಓಪನರ್, ಮಹಾರಾಷ್ಟ್ರ ತಂಡದ ನಾಯಕ ರುತುರಾಜ್ ಗಾಯಕ್ವಾಡ್ (Ruturaj Gaikwad) ಅವರ ಸಾಧನೆ.

(8 centuries in 10 matches)ವೃತ್ತಿಜೀವನದ ಅಮೋಘ ಫಾರ್ಮ್’ನಲ್ಲಿರುವ 25 ವರ್ಷದ ರುತುರಾಜ್ ಗಾಯಕ್ವಾಡ್ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ರನ್ ಹೊಳೆಯನ್ನೇ ಹರಿಸಿದ್ದಾರೆ. ನಾಕೌಟ್ ಪಂದ್ಯಗಳಲ್ಲಿ ಸತತ ಮೂರು ಶತಕಗಳನ್ನು ದಾಖಲಿಸಿದ್ದಾರೆ.

ವಿಜಯ್ ಹಜಾರೆ ಟ್ರೋಫಿ-2022 (Vijay Hazare Trophy): ನಾಕೌಟ್ ಪಂದ್ಯಗಳಲ್ಲಿ ರುತುರಾಜ್ ಸಾಧನೆ
220* (159) Vs ಉತ್ತರ ಪ್ರದೇಶ; ಕ್ವಾರ್ಟರ್ ಫೈನಲ್
168 (126) Vs ಅಸ್ಸಾಂ; ಸೆಮಿಫೈನಲ್
108 (131) Vs ಸೌರಾಷ್ಟ್ರ; ಫೈನಲ್

ಉತ್ತರ ಪ್ರದೇಶ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೊಚ್ಚಲ ದ್ವಿಶತಕ ಬಾರಿಸಿದ್ದ ರುತುರಾಜ್ ಗಾಯಕ್ವಾಡ್, ಎಡಗೈ ಸ್ಪಿನ್ನರ್ ಶಿವ ಸಿಂಗ್ ಅವರ ಒಂದೇ ಓವರ್’ನಲ್ಲಿ 7 ಸಿಕ್ಸರ್ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದರು. ಲಿಸ್ಟ್ ‘ಎ’ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಓವರ್’ನಲ್ಲಿ 43 ರನ್ ಸಿಡಿಸಿದ ಜಗತ್ತಿನ ಮೊದಲ ಆಟಗಾರನೆಂಬ ಹಿರಿಮೆಗೆ ರುತುರಾಜ್ ಗಾಯಕ್ವಾಡ್ ಪಾತ್ರರಾಗಿದ್ದರು.

ವಿಜಯ್ ಹಜಾರೆ ಟ್ರೋಫಿ ಫೈನಲ್’ನಲ್ಲಿ ಸೌರಾಷ್ಟ್ರ ವಿರುದ್ಧ ಗಾಯಕ್ವಾಡ್ ಭರ್ಜರಿ ಶತಕ ಬಾರಿಸಿದರೂ, 5 ವಿಕೆಟ್’ಗಳಿಂದ ಸೋಲುಂಡ ಮಹಾರಾಷ್ಟ್ರ ರನ್ನರ್ಸ್ ಅಪ್ ಸ್ಥಾನಕ್ಕಷ್ಟೇ ತೃಪ್ತಿಪಟ್ಟುಕೊಂಡಿದೆ.ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಅಬ್ಬರಿಸಿರುವ ರುತುರಾಜ್ ಗಾಯಕ್ವಾಡ್ ಭಾರತ ಪರ ಈಗಾಗಲೇ ಒಂದು ಏಕದಿನ ಹಾಗೂ 9 ಟಿ20 ಪಂದ್ಯಗಳನ್ನಾಡಿದ್ದಾರೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಮಹಾರಾಷ್ಟ್ರ ಆಟಗಾರನಿಗೆ ಅಂತಹ ಯಶಸ್ಸು ಸಿಕ್ಕಿಲ್ಲ. ಆಡಿರುವ ಏಕೈಕ ಏಕದಿನ ಪಂದ್ಯದಲ್ಲಿ 19 ರನ್ ಗಳಿಸಿರುವ ಗಾಯಕ್ವಾಡ್, 9 ಟಿ20 ಪಂದ್ಯಗಳಿಂದ ಕೇವಲ 135 ರನ್’ಗಳನ್ನಷ್ಟೇ ಕಲೆ ಹಾಕಿದ್ದಾರೆ.

ಇದನ್ನೂ ಓದಿPuneri Paltan vs Bengaluru Bulls : ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿದ ಬೆಂಗಳೂರು ಬುಲ್ಸ್

ಇದನ್ನೂ ಓದಿ:Ranji Trophy Karnataka : ಕರ್ನಾಟಕಕ್ಕೆ ಸರ್ವಿಸಸ್ ಮೊದಲ ಎದುರಾಳಿ : ಮೊದಲೆರಡು ಪಂದ್ಯಗಳಿಗೆ ಬೆಂಗಳೂರು ಆತಿಥ್ಯ

ಇದೀಗ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಅಕ್ಷರಶಃ ಅಬ್ಬರಿಸಿರುವ ರುತುರಾಜ್ ಗಾಯಕ್ವಾಡ್ ಮತ್ತೆ ಭಾರತ ತಂಡದ ಬಾಗಿಲು ಬಡಿಯುತ್ತಿದ್ದಾರೆ. 2023ರಲ್ಲಿ ಭಾರತದಲ್ಲೇ ನಡೆಯುವ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ತಾವು ಪ್ರಬಲ ಸ್ಪರ್ಧಿ ಎಂಬುದನ್ನು ನಿರೂಪಿಸಿದ್ದಾರೆ.ಐಪಿಎಲ್’ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುವ ರುತುರಾಜ್ ಗಾಯಕ್ವಾಡ್ 2021ರ ಐಪಿಎಲ್ ಟೂರ್ನಿಯಲ್ಲಿ ಆರೆಂಜ್ ಕ್ಯಾಪ್ ಗಳಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರಲು ಕಾರಣರಾಗಿದ್ದರು.

10 innings, 8 centuries; Ruturaj Gaikwad getting a World Cup ticket?

Comments are closed.