Puneri Paltan vs Bengaluru Bulls : ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿದ ಬೆಂಗಳೂರು ಬುಲ್ಸ್

ಹೈದರಾಬಾದ್: (Puneri Paltan vs Bengaluru Bulls) ಸತತ ಗೆಲುವುಗಳ ಬೆನ್ನೇರಿ ಸವಾರಿ ಮಾಡುತ್ತಿದ್ದ ಬೆಂಗಳೂರು ಬಲ್ಸ್ (Bengaluru Bulls) ತಂಡ, ಪ್ರೊ ಕಬಡ್ಡಿ ಲೀಗ್ 9ನೇ (Pro Kabaddi League) ಆವೃತ್ತಿಯ ಟೂರ್ನಿಯ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿದಿದೆ.

ಕಳೆದ 4 ಪಂದ್ಯಗಳಲ್ಲಿ ಬುಲ್ಸ್ ಬಳಗ 3 ಪಂದ್ಯಗಳಲ್ಲಿ ಸೋಲು ಕಂಡಿದೆ. ಪುಣೇರಿ ಪಲ್ಟನ್ ವಿರುದ್ಧ 33-35ರಲ್ಲಿ ಮುಗ್ಗರಿಸಿದ್ದ ಬುಲ್ಸ್, ನಂತರ ಬೆಂಗಾಲ್ ವಾರಿಯರ್ಸ್ ವಿರುದ್ಧ 38-41ರಲ್ಲಿ ಸೋಲು ಕಂಡಿದೆ. ಮುಂದಿನ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಕೆ.ಸಿ ವಿರುದ್ಧ 52-49ರಲ್ಲಿ ಗೆದ್ದಿದ್ದ ಕೆಂಪು ಗೂಳಿ ಪಡೆ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 25-45ರ ಅಂತರದಲ್ಲಿ ಹೀನಾಯ ಸೋಲು ಕಂಡಿತ್ತು.

ಮತ್ತೊಂದೆಡೆ ಶುಕ್ರವಾರ ನಡೆದ ಪಂದ್ಯದಲ್ಲಿ ಯು ಮುಂಬಾ ತಂಡವನ್ನು 38-28ರಲ್ಲಿ ಮಟ್ಟ ಹಾಕಿದ ಯು.ಪಿ ಯೋಧಾ ಪಡೆ ಲೀಗ್’ನಲ್ಲಿ 11ನೇ ಗೆಲುವಿನೊಂದಿಗೆ ಒಟ್ಟು 65 ಅಂಕಗಳನ್ನು ಗಳಿಸಿ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಲಗ್ಗೆ ಹಾಕಿದೆ. 19 ಪಂದ್ಯಗಳಿಂದ 11 ಗೆಲುವುಗಳ ಸಹಿತ 63 ಅಂಕ ಗಳಿಸಿರುವ ಬೆಂಗಳೂರು ಬುಲ್ಸ್ 4ನೇ ಸ್ಥಾನಕ್ಕೆ ಕುಸಿದಿದೆ.

ಆಡಿರುವ 19 ಪಂದ್ಯಗಳಿಂದ ತಲಾ 69 ಅಂಕಗಳನ್ನು ಗಳಿಸಿ ಅಗ್ರ ಎರಡು ಸ್ಥಾನಗಳಲ್ಲಿರುವ ಜೈಪುರ ಪಿಂಕ್ ಪ್ಯಾಂಥರ್ಸ್ ಮತ್ತು ಪುಣೇರಿ ಪಲ್ಟನ್ ತಂಡಗಳು ಈಗಾಗ್ಲೇ ಪ್ಲೇ ಆಫ್ ಹಂತಕ್ಕೆ ಅರ್ಹತೆ ಪಡೆದಿವೆ. ಉಳಿದ ನಾಲ್ಕು ಸ್ಥಾನಗಳಿಗಾಗಿ ಯು.ಪಿ ಯೋಧಾ (65 ಅಂಕ), ಬೆಂಗಳೂರು ಬುಲ್ಸ್ (63 ಅಂಕ), ತಮಿಳ್ ತಲೈವಾಸ್ (56 ಅಂಕ), ದಬಾಂಗ್ ಡೆಲ್ಲಿ (54 ಅಂಕ), ಹರ್ಯಾಣ ಸ್ಟೀಲರ್ಸ್ (51 ಅಂಕ), ಬೆಂಗಾಲ್ ವಾರಿಯರ್ಸ್ (50 ಅಂಕ), ಯು ಮುಂಬಾ (50 ಅಂಕ), ಪಾಟ್ನಾ ಪೈರೇಟ್ಸ್ (49 ಅಂಕ) ಮತ್ತು ಗುಜರಾತ್ ಜೈಂಟ್ಸ್ (46 ಅಂಕ) ತಂಡಗಳ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ.

ಶುಕ್ರವಾರ ನಡೆದ ಮತ್ತೊಂದು ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡವನ್ನು 32-26ರಲ್ಲಿ ಸೋಲಿಸಿದ ಹರ್ಯಾಣ ಸ್ಟೀಲರ್ಸ್ ಪ್ಲೇ ಆಫ್ ಕನಸನ್ನು ಜೀವಂತವಾಗಿಟ್ಟುಕೊಂಡ್ರೆ, ಪಾಟ್ನಾ ಪೈರೇಟ್ಸ್ ವಿರುದ್ಧ ಗುಜರಾತ್ ಜೈಂಟ್ಸ್ 40-34ರಲ್ಲಿ ಜಯಭೇರಿ ಬಾರಿಸಿತು.

ಇದನ್ನೂ ಓದಿ : Pro Kabaddi 2023 Playoff : ಟಾಪ್-2 ಟೀಮ್‌ಗೆ ಡೆರೆಕ್ಟ್ ಸೆಮಿಫೈನಲ್ ಎಂಟ್ರಿ, ಹೀಗಿರಲಿದೆ ಪ್ಲೇ ಆಫ್ ಫೈಟ್

ಇದನ್ನೂ ಓದಿ : Pro Kabaddi League: ದಕ್ಷಿಣ ಭಾರತ ಡರ್ಬಿಯಲ್ಲಿ ತಲೈವಾಸ್ ವಿರುದ್ಧ ಗೆದ್ದರೆ ಬೆಂಗಳೂರು ಬುಲ್ಸ್ ಟೇಬಲ್ ಟಾಪರ್

ಇದನ್ನೂ ಓದಿ : Pro Kabaddi League : ಬುಲ್ಸ್‌ಗೆ ಸ್ಟೀಲರ್ಸ್ ಸವಾಲ್, ಅಗ್ರಸ್ಥಾನದ ಮೇಲೆ ಕೆಂಪುಗೂಳಿಗಳ ಕಣ್ಣು

Puneri Paltan vs Bengaluru Bulls : ಪ್ರೊ ಕಬಡ್ಡಿ ಲೀಗ್-9: ಶನಿವಾರದ ಪಂದ್ಯಗಳು (Pro Kabaddi League) :

  1. ಪುಣೇರಿ ಪಲ್ಟನ್ Vs ದಬಾಂಗ್ ಡೆಲ್ಲಿ ಕೆ.ಸಿ
  2. ತೆಲುಗು ಟೈಟನ್ಸ್ Vs ತಮಿಲ್ ತಲೈವಾಸ್
  3. ಜೈಪುರ ಪಿಂಕ್ ಪ್ಯಾಂಥರ್ಸ್ Vs ಬೆಂಗಾಲ್ ವಾರಿಯರ್ಸ್
    ಸ್ಥಳ: ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣ, ಹೈದರಾಬಾದ್
    ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
    ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

Puneri Paltan vs Bengaluru Bulls: Bengaluru Bulls dropped to 4th place in the points table

Comments are closed.