Aishwarya Pise was eliminated :ಮೊದಲವಾರವೇ ಬಿಗ್​ಬಾಸ್​ ಮನೆಯಿಂದ ಹೊರಬಿದ್ದ ಲೇಡಿ ಬೈಕರ್​ ಐಶ್ವರ್ಯಾ ಪಿಸೆ

Aishwarya Pise was eliminated : ಬಿಗ್​ಬಾಸ್​ ಸೀಸನ್​ 9 ಹಲವಾರು ಕಾರಣಗಳಿಂದ ಸುದ್ದಿಯಾಗ್ತಿದೆ. ಇದೇ ಮೊದಲ ಬಾರಿಗೆ ಪ್ರವೀಣರು ಹಾಗೂ ನವೀನರು ಎಂಬ ಕಾಂಬಿನೇಷನ್​ನಲ್ಲಿ ಈ ಬಾರಿ ಸ್ಪರ್ಧಿಗಳು ಕಣದಲ್ಲಿದ್ದಾರೆ. ಬಿಗ್​ಬಾಸ್​​ ಮನೆಯಿಂದ ಈಗಾಗಲೇ ಮೊದಲನೇ ಎಲಿಮಿನೇಷನ್​ ಆಗಿದೆ. ಬಿಗ್​ಬಾಸ್​​ ಶೋ ಆರಂಭವಾಗಿ ಕೆಲವೇ ದಿನಗಳು ಆಗಿದೆ ಅನ್ನೋವಷ್ಟರಲ್ಲಿಯೇ ಮೊದಲನೇ ಸ್ಪರ್ಧಿ ಬಿಗ್​ಬಾಸ್​​​ ಮನೆಯಿಂದ ಹೊರ ಬಿದ್ದಿದ್ದಾರೆ. ಭಾರತದ ಏಕೈಕ ಮಹಿಳಾ ಬೈಕ್​ ರೇಸರ್​ ಐಶ್ವರ್ಯಾ ಪಿಸೆ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.


ಕಳೆದ ಸೀಸನ್​ನಲ್ಲಿ ಬೈಕರ್​ ಆಗಿ ಬಿಗ್​ಬಾಸ್​ ಮನೆ ಒಳಗೆ ಕಾಲಿಟ್ಟಿದ್ದ ಅರವಿಂದ್​ ಕೆಪಿ ರನ್ನರ್​ ಆಗಿ ಹೊರಹೊಮ್ಮಿದ್ದರು.ಹೀಗಾಗಿ ಐಶ್ವರ್ಯಾ ಪಿಸೆ ಮೇಲೆ ಕೂಡ ಪ್ರೇಕ್ಷಕರಿಗೆ ನಿರೀಕ್ಷೆಗಳು ಬೆಟ್ಟದಷ್ಟಿತ್ತು. ಆದರೆ ಐಶ್ವರ್ಯಾ ಪಿಸೆ ಮೊದಲೇ ವಾರವೇ ಶೋನಿಂದ ಹೊರ ಬಿದ್ದಿದ್ದಾರೆ. ಕೊನೆಯ ಸ್ಥಾನದಲ್ಲಿ ಮಾಡೆಲ್​ ಹಾಗೂ ಉದ್ಯಮಿ ದರ್ಶ್​ ಚಂದ್ರಪ್ಪ ಮತ್ತು ಐಶ್ವರ್ಯಾ ಪಿಸೆ ಇದ್ದರು. ಕೊನೆ ಕ್ಷಣದಲ್ಲಿ ನಟ ಸುದೀಪ್​ ದರ್ಶ್​ರನ್ನು ಸೇಫ್​ ಎಂದು ಘೋಷಿಸಿ ಐಶ್ವರ್ಯಾರನ್ನು ಮನೆಯಿಂದ ಹೊರಗೆ ಕರೆಸಿದ್ದಾರೆ.


ಮನೆಯಿಂದ ಎಲಿಮಿನೇಟ್​ ಆಗಿ ಹೊರಬಿದ್ದ ಐಶ್ವರ್ಯಾ ಪಿಸೆಗೆ ಬಿಗ್​ಬಾಸ್​ ವಿಶೇಷ ಅಧಿಕಾರವೊಂದನ್ನು ನೀಡಿದ್ದರು. ಅದೇನೆಂದರೆ ಮುಂದಿನ ವಾರಕ್ಕೆ ನೇರವಾಗಿ ಯಾರನ್ನಾದರೂ ನೋಮಿನೇಟ್​ ಮಾಡಿ ಎಂದು ಹೇಳಿದ್ದರು. ಕೂಡಲೇ ಐಶ್ವರ್ಯಾ ಪಿಸೆ ಆರ್ಯವರ್ಧನ್​ ಹೆಸರನ್ನು ತೆಗೆದುಕೊಂಡಿದ್ದಾರೆ. ಪ್ರತಿಯೊಂದಕ್ಕೂ ಗ್ರಹ -ಗತಿ ಎಂಬ ಕಾರಣವನ್ನು ನೀಡಿದ್ದು ನನಗೆ ಸರಿ ಎನಿಸಿಲ್ಲ ಎಂದು ಕಾರಣ ನೀಡಿ ಆರ್ಯವರ್ಧನ್​ರನ್ನು ನಾಮಿನೇಟ್​ ಮಾಡಿ ಮನೆಯಿಂದ ಹೊರ ಬಂದಿದ್ದಾರೆ ..


ಬಿಗ್​ಬಾಸ್​ ಮನೆಯಿಂದ ಐಶ್ವರ್ಯಾ ಪಿಸೆಯನ್ನು ಎಲಿಮಿನೇಟ್​ ಮಾಡಿದ್ದಕ್ಕೆ ಸಾಕಷ್ಟು ಮಂದಿ ಬಿಗ್​ಬಾಸ್​ ಪ್ರೇಕ್ಷಕರು ಅಸಮಾಧಾನ ಹೊರ ಹಾಕ್ತಿದ್ದಾರೆ. ವಿಶ್ವ ಮಟ್ಟದಲ್ಲಿ ಭಾರತದ ಕೀರ್ತಿಪತಾಕೆಯನ್ನು ಹಾರಿಸಿದ ಇಂತಹ ಮೇರು ಸ್ಪರ್ಧಿಯನ್ನು ಒಂದೇ ವಾರದಲ್ಲಿ ಬಿಗ್​ಬಾಸ್​ ಮನೆಯಿಂದ ಹೊರಹಾಕಬಾರದಿತ್ತು ಎಂದು ಬೇಸರ ಹೊರಹಾಕಿದ್ದಾರೆ. ಅಲ್ಲದೇ ವೈಲ್ಡ್​ಕಾರ್ಡ್ ಎಂಟ್ರಿ ಮೂಲಕ ಅವರನ್ನು ಮತ್ತೆ ಮನೆ ಒಳಗೆ ಕರೆಸಿಕೊಳ್ಳಿ ಎಂದು ಆಗ್ರಹಿಸಿದ್ದಾರೆ.

ಇದನ್ನು ಓದಿ :Kantara Movie sequence : ರಿಷಬ್ ಶೆಟ್ರ ಜೊತೆ ನಿಂತವರು ಪ್ರಗತಿ ಶೆಟ್ಟ್ರು: ಕಾಂತಾರ ಸಿಕ್ವೆನ್ಸ್ ಬಗ್ಗೆ ರಿಶಬ್ ಪತ್ನಿ ಪ್ರಗತಿ ಶೆಟ್ಟಿ ಹೇಳಿದ್ದೇನು ಗೊತ್ತಾ?

ಇದನ್ನೂ ಓದಿ : Road Safety World Series 2022: ಸಚಿನ್ ನಾಯಕತ್ವದಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಇಂಡಿಯಾ ಲೆಜೆಂಡ್ಸ್

Aishwarya Pise was eliminated from the Bigg Boss house in the first week

Comments are closed.